ಸ್ವಲ್ಪ ಭಾಗ ಚಿತ್ರೀಕರಣವಾಗಿದ್ದ ಸೌಂದರ್ಯ ಅಭಿನಯದ ಕೊನೆಯ ಸಿನಿಮಾ ವಿಡಿಯೋ ಸಿನಿಪ್ರಿಯರಿಗೆ ಲಭ್ಯ

in ಮನರಂಜನೆ/ಸಿನಿಮಾ 1,368 views

ಹೆಸರಿಗೆ ತಕ್ಕಂತೆ ಸಹಜ ಸುಂದರಿಯಾಗಿದ್ದ ಸೌಂದರ್ಯ ಅವರನ್ನು ಸಿನಿಪ್ರಿಯರು ಮರೆಯಲು ಸಾಧ್ಯವೇ ಇಲ್ಲ. ಶಶಿಕುಮಾರ್ ಅಭಿನಯದ ಗಂಧರ್ವ ಚಿತ್ರದಲ್ಲಿ ಶಶಿಕುಮಾರ್ ತಂಗಿ ಪಾತ್ರದಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದ ಸೌಂದರ್ಯ ನಂತರ ಸ್ಟಾರ್ ನಟಿಯಾಗಿ ಹೆಸರು ಮಾಡಿದರು. ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಗಳಲ್ಲಿ ಸೌಂದರ್ಯ ಹೆಸರು ಮಾಡಿದರು. ಹುಟ್ಟಿ, ಬೆಳೆದದ್ದು ಕರ್ನಾಟಕ ಆದರೂ ಅವರು ದೊಡ್ಡ ನಟಿಯಾಗಿ ಹೆಸರು ಮಾಡಿದ್ದು ತೆಲುಗಿನಲ್ಲಿ. ಸ್ಟಾರ್ ನಟರಿಗೆ ಸರಿ ಸಮಾನವಾಗಿ ಸಂಭಾವನೆ ಪಡೆಯುತ್ತಿದ್ದ ದಕ್ಷಿಣ ಭಾರತದ ಏಕೈಕ ನಟಿ ಎಂದರೆ ಸೌಂದರ್ಯ. ಬಾಲಿವುಡ್ ನಟ ಅಮಿತಾಬ್ ಬಚ್ಚನ್​ ಸೇರಿದಂತೆ ದಕ್ಷಿಣ ಭಾರತದ ಬಹುತೇಕ ಎಲ್ಲಾ ನಟರೊಂದಿಗೆ ನಟಿಸಿರುವ ಸೌಂದರ್ಯ ಇಂದು ನಮ್ಮೊಂದಿಗೆ ಇಲ್ಲ. ಆದರೆ ಅವರು ನೆನಪು ಸದಾ ಹಸಿರಾಗಿದೆ. ಅವರು ನಟಿಸಿರುವ ಸಿನಿಮಾಗಳನ್ನು ನೋಡಿದರೆ ಸೌಂದರ್ಯ ಇನ್ನೂ ನಮ್ಮೊಂದಿಗೆ ಇರಬಾರದಿತ್ತಾ ಎನ್ನಿಸುವುದು ಗ್ಯಾರಂಟಿ. ಅವರು ಇಂದು ನಮ್ಮೊಂದಿಗೆ ಇದ್ದಿದ್ದರೆ ಅದೆಷ್ಟು ಸಿನಿಮಾಗಳಲ್ಲಿ ನಟಿಸುತ್ತಿದ್ದರೇನೋ.

Advertisement

Advertisement

ಸೌಂದರ್ಯ ಅಭಿನಯದ ಕಡೆಯ ಸಿನಿಮಾ ಆಪ್ತಮಿತ್ರ ಎನ್ನಲಾಗಿತ್ತು. ಆದರೆ ಅವರು ನರ್ತನಶಾಲಾ ಎಂಬ ತೆಲುಗು ಸಿನಿಮಾದಲ್ಲಿ ಕೊನೆಯ ಬಾರಿಗೆ ನಟಿಸಿದ್ದರು. ಸೌಂದರ್ಯ ಭಾಗದ ಚಿತ್ರೀಕರಣ ಸ್ವಲ್ಪ ನಡೆದಿತ್ತು. ನಂತರ ಸೌಂದರ್ಯ ಎಲೆಕ್ಷನ್ ಕ್ಯಾಂಪೇನ್​ನಲ್ಲಿ ಬ್ಯುಸಿ ಆಗಿದ್ದರಿಂದ ಚುನಾವಣೆ ಮುಗಿದ ನಂತರ ಚಿತ್ರೀಕರಣದಲ್ಲಿ ಭಾಗವಹಿಸುವುದು ಎನ್ನಲಾಗಿತ್ತು. ಆದರೆ 2004 ರಲ್ಲಿ ಏಪ್ರಿಲ್ 18 ರಂದು ಕರೀಂನಗರ್​​​ಗೆ ಬಿಜೆಪಿ ಪರ ಚುನಾವಣಾ ಪ್ರಚಾರಕ್ಕಾಗಿ ತಮ್ಮ ಅಣ್ಣ ಅಮರ್​​ನಾಥ್​​​ ಅವರೊಂದಿಗೆ ವಿಶೇಷ ಹೆಲಿಕಾಪ್ಟರ್​​​ನಲ್ಲಿ ತೆರಳುವಾಗ ಹೆಲಿಕಾಪ್ಟರ್ ದು’ರಂತದಲ್ಲಿ ಅವರು ನಿ’ಧ’ನರಾದರು.

Advertisement

1963 ರಲ್ಲಿ ಎನ್​​​.ಟಿ. ರಾಮ್​​​ರಾವ್, ಎಸ್.ವಿ. ರಂಗನಾಥ್​​, ಸಾವಿತ್ರಿ ಹಾಗೂ ಇನ್ನಿತರರು ನಟಿಸಿದ್ದ ನರ್ತನಶಾಲಾ ಚಿತ್ರವನ್ನು ಮತ್ತೊಮ್ಮೆ ತೆರೆ ಮೇಲೆ ತರಬೇಕು ಎಂದು ಎನ್​​.ಟಿ. ರಾಮರಾವ್ ಪುತ್ರ ಬಾಲಕೃಷ್ಣ ಆಸೆ ಪಟ್ಟಿದ್ದರು. ಇದು ಅವರ ಕನಸಿನ ಕೂಸಾಗಿತ್ತು. ಮಹಾಭಾರತದ ವಿರಾಟಪರ್ವ ಅಧ್ಯಾಯವನ್ನು ಆಧರಿಸಿ ತಯಾರಾದ ನರ್ತನಶಾಲಾ ಚಿತ್ರವನ್ನು ಸುಮಾರು 17 ನಿಮಿಷ ಅವಧಿ ಚಿತ್ರೀಕರಿಸಲಾಗಿತ್ತು. ಸೌಂದರ್ಯ ನಿ’ಧನರಾದ ಕಾರಣ ಸಿನಿಮಾ ಪೂರ್ಣಗೊಳ್ಳಲಿಲ್ಲ. ಇದು ಚಿತ್ರತಂಡಕ್ಕೆ ಬಹಳ ನಷ್ಟವುಂಟಾಯಿತು. ಈ ಚಿತ್ರದ ದ್ರೌಪದಿ ಪಾತ್ರಕ್ಕೆ ಸೌಂದರ್ಯ ಅವರನ್ನು ಬಿಟ್ಟರೆ ಬೇರ್ಯಾವ ನಟಿ ಕೂಡಾ ಹೊಂದುವುದಿಲ್ಲ ಎಂಬುದು ಬಾಲಕೃಷ್ಣ ಅವರ ವಾದವಾಗಿತ್ತು. ಆದ್ದರಿಂದ ಸೌಂದರ್ಯ ನಿ’ಧನರಾದ ನಂತರ ಮತ್ತೆ ಬೇರೆ ನಟಿಯನ್ನು ಆ ಚಿತ್ರಕ್ಕೆ ಕರೆತಂದು ಸಿನಿಮಾ ಮಾಡುವ ಪ್ರಯತ್ನ ಮಾಡಲಿಲ್ಲ.

Advertisement

ಚಿತ್ರೀಕರಣವಾದ 17 ನಿಮಿಷ ಅವಧಿಯ ವಿಡಿಯೋ ಇದೀಗ ಸಿನಿಪ್ರಿಯರು ಹಾಗೂ ಸೌಂದರ್ಯ ಅಭಿಮಾನಿಗಳಿಗೆ ನೋಡಲು ಲಭ್ಯವಾಗುತ್ತಿದೆ. ದಸರಾ ವಿಶೇಷವಾಗಿ ಬಾಲಕೃಷ್ಣ ಈ ಚಿತ್ರದ ತುಣುಕನ್ನು ಪ್ರೇಕ್ಷಕರಿಗೆ ದೊರೆಯುವಂತೆ ಮಾಡುತ್ತಿದ್ದಾರೆ. ಅಕ್ಟೋಬರ್ 24 ರಂದು ಬೆಳಗ್ಗೆ 11.49ಕ್ಕೆ ಈ ತುಣುಕನ್ನು ಶ್ರೇಯಸ್ ಇಟಿಯಲ್ಲಿ ಬಿಡುಗಡೆ ಮಾಡಲಾಗುವುದು. ಸೌಂದರ್ಯ ಅಭಿಮಾನಿಗಳು ಈ ಚಿತ್ರದ ತುಣುಕನ್ನು ನೋಡಲು ಕಾತರದಿಂದ ಕಾಯುತ್ತಿದ್ದಾರೆ.

Advertisement
Share this on...