ಸಿನಿರಂಗದಲ್ಲಿ ಛಾಪು ಮೂಡಿಸುತ್ತಿರುವ ಈ ಹುಡುಗನ ಬಣ್ಣದ ಬದುಕು ಆರಂಭವಾದುದು ರಂಗಭೂಮಿಯಿಂದ!

in ಸಿನಿಮಾ 338 views

ರಕ್ಷಿತ್ ಶೆಟ್ಟಿ ನಿರ್ದೇಶನದ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ಚಂದನ್ ಆಚಾರ್ ಸಿನಿ ಪ್ರಿಯರಿಗೆ, ವೀಕ್ಷಕರಿಗೆ ಮಗದಷ್ಟು ಹತ್ತಿರವಾದುದು ರಿಯಾಲಿಟಿ ಶೋ ಮೂಲಕ. ಹೌದು, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತದ್ದ ಬಿಗ್ ಬಾಸ್ ಸೀಸನ್ 7 ರ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ಚಂದನ್ ಆಚಾರ್ ಇಂದು ಕರ್ನಾಟಕದಾದ್ಯಂತ ಮನೆ ಮಾತಾಗಿದ್ದಾರೆ ಎಂದರೆ ತಪ್ಪಲ್ಲ. ಬಿಗ್ ಬಾಸ್ ನಿಂದ ಬಂದ ಬಳಿಕ ನಿರೂಪಕರಾಗಿಯೂ ಚಂದನ್ ಕಾಣಿಸಿಕೊಂಡರು. ಕಲರ್ಸ್ ಸೂಪರ್ ಪ್ರಸಾರವಾಗುತ್ತಿದ್ದ ನೈಜಘಟನೆಗಳನ್ನು ವೀಕ್ಷಕರ ಮುಂದೆ ಎಳೆಎಳೆಯಾಗಿ ತರುವ ಶಾಂತಂ ಪಾಪಂ ಕಾರ್ಯಕ್ರಮದ ನಿರೂಪಣೆ ಮಾಡಿ ಸೈ ಎನಿಸಿಕೊಂಡರು. ತದ ನಂತರ ಸಿನಿಮಾದತ್ತ ಮುಖ ಮಾಡಿದ್ದ ಚಂದನ್ ಆಚಾರ್ ಯುವಿನ್‌ ನಿರ್ದೇಶನದ ‘ಮಂಗಳವಾರ ರಜಾದಿನ’ ಚಿತ್ರದಲ್ಲಿ ಕ್ಷೌರಿಕನಾಗಿ ವೀಕ್ಷಕರಿಗೆ ಮನರಂಜನೆ ನೀಡಿದ್ದಾರೆ.

Advertisement

Advertisement

“ಮಂಗಳವಾರ ರಜಾದಿನ ಸಿನಿಮದಲ್ಲಿ ನಾನು ಕ್ಷೌರಿಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಮುಖ್ಯವಾದ ವಿಚಾರವೆಂದರೆ ಈ ಪಾತ್ರಕ್ಕಾಗಿ ನಾನು ಬರೋಬ್ಬರಿ ಒಂದು ತಿಂಗಳು ತಯಾರಿ ಮಾಡಿಕೊಂಡಿದ್ದೇನೆ. ಎಲ್ಲದಕ್ಕಿಂತಲೂ ಮುಖ್ಯವಾಗಿ ಕ್ಷೌರಿಕರಂತೆಯೇ ಹೇರ್‌ ಕಟ್‌ ಮಾಡುವುದನ್ನು ಕೂಡಾ ಕರಗತ ಮಾಡಿಕೊಂಡಿದ್ದೇನೆ” ಎಂದು ನಗುನಗುತ್ತಾ ಹೇಳುತ್ತಾರೆ ಚಂದನ್ ಆಚಾರ್

Advertisement

“ನಿಜವಾಗಿಯೂ ಹೇರ್‌ ಕಟ್‌ ಮಾಡುವುದು ಒಂದು ಅದ್ಭುತವಾದ ಕಲೆ. ಯಾಕೆಂದರೆ ಯಾರು ಬೇಕಾದರೂ ಹೇರ್ ಕಟ್ ಮಾಡಬಹುದು ಎಂಬ ಕಲ್ಪನೆ ನಮ್ಮಲ್ಲಿರುತ್ತದೆ. ಆದರೆ ವಾಸ್ತವದ ವಿಚಾರವೆಂದರೆ ಎಲ್ಲರಿಗೂ ಹೇರ್‌ ಕಟ್‌ ಮಾಡಲು ಬರುವುದಿಲ್ಲ. ಎಲ್ಲರಿಗೂ ಒಂದೇ ರೀತಿಯ ಸ್ಟೈಲ್ ಇಷ್ಟವಾಗುವುದಿಲ್ಲ. ವ್ಯಕ್ತಿಯಿಂದ ವ್ಯಕ್ತಿಗೆ ಸ್ಟೈಲ್ ಗಳು ಭಿನ್ನವಿರುತ್ತದೆ. ಅದನ್ನು ಸರಿಯಾಗಿ ಮಾಡಲು ನುರಿತ ಕ್ಷೌರಿಕನಿಗೆ ಮಾತ್ರ ಸಾಧ್ಯ. ಒಟ್ಟಾರೆಯಾಗಿ ಕ್ಷೌರಿಕ ಕೂಡಾ ತನ್ನ ಕೆಲಸವನ್ನು ಬಹಳ ಪ್ರೀತಿಯಿಂದ ಅಚ್ಚುಕಟ್ಟಾಗಿ ಮಾಡುತ್ತಾನೆ” ಎನ್ನುತ್ತಾರೆ ಚಂದನ್.

Advertisement

“ಇನ್ನು ಜನರಿಗೂ ಅಷ್ಟೇ. ತುಂಬಾ ಚೆನ್ನಾಗಿ ಯಾರು ಕಟ್ಟಿಂಗ್ ಮಾಡುತ್ತಾರೆ ಅವರನ್ನು ಜನ ಜಾಸ್ತಿ ಇಷ್ಟಪಡುತ್ತಾರೆ. ನಾನು ಸೆಲೂನ್ ನಲ್ಲಿ ಯಾವ ರೀತಿ ಹೇರ್ ಕಟ್ ಮಾಡುತ್ತಾರೆ ಎಂಬುದನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸಿದೆ. ಯಾಕೆಂದರೆ ಕತ್ತರಿ ಹಿಡಿಯುವ ಸ್ಟೈಲ್‌, ಹೇರ್‌ ಕಟ್‌ ಮಾಡುವ ರೀತಿ ಎಲ್ಲವೂ ಸಹಜವಾಗಿರಬೇಕಿತ್ತು. ಅದೇ ಕಾರಣದಿಂದ ಎಲ್ಲವನ್ನು ಕಲಿತೆ. ಇದೀಗ ನನಗೂ ಹೇರ್ ಕಟ್ ಮಾಡಲು ಬರುತ್ತದೆ” ಎಂದು ಹೇಳುತ್ತಾರೆ ಚಂದನ್‌.

ಎಳವೆಯಿಂದಲೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮುಂದಿದ್ದ ಚಂದನ್ ಆಚಾರ್ ನಾಟಕ ಮತ್ತು ನೃತ್ಯದಲ್ಲಿ ಸದಾ ಮುಂದಿದ್ದರು.
ಮಂಡ್ಯ ರಮೇಶ್ ನಿರ್ದೇಶನದ ಆಲಿಬಾಬ ಮತ್ತು ನಲವತ್ತು ಮಂದಿ ಕಳ್ಳರು ನಾಟಕ ನೋಡಿದ ಚಂದನ್​​​ ಕೇವಲ ನಾಟಕಕ್ಕೆ ಮಾತ್ರ ಮಾರು ಹೋಗದೇ ಬೆಳಕು, ವೇದಿಕೆ ಜೊತೆಗೆ ವಸ್ತ್ರವಿನ್ಯಾಸ ಕಂಡು ಮಾರು ಹೋದರು. ಮಾತ್ರವಲ್ಲ ನಾನು ಕೂಡಾ ಅಭಿನಯಿಸಬೇಕು ಎಂಬ ನಿರ್ಧಾರವನ್ನು ಕೂಡಾ ಚಂದನ್ ಮಾಡಿದ್ದು ಅಂದೆಯೇ!

ಎಸ್ ಎಸ್ ಎಲ್ ಸಿ ಮುಗಿದು ಕಾಲೇಜಿಗೆ ಸೇರಿದ ಚಂದನ್ ಹಿಂದೆ ಮುಂದೆ ನೋಡದೇ ನಟನಾ ರಂಗ ಸೇರಿಯೇ ಬಿಟ್ಟರು. ಓದಿನ ಜೊತೆಗೆ ನಟನೆಯನ್ನು ಸರಿದೂಗಿಸಿಕೊಂಡು ಹೋಗುತ್ತಿದ್ದ ಚಂದನ್ ನಟನಾ ರಂಗದಲ್ಲಿ ಪಳಗಿದರು. ರಂಗಭೂಮಿಯ ಆಗು ಹೋಗುಗಳನ್ನು ತಿಳಿದುಕೊಂಡರು. ರಂಗತಯಾರಿ, ಬರವಣಿಗೆ, ರಂಗಸಂಗೀತ ಗೀತೆ ರಂಗಭೂಮಿಯ ವಿವಿಧ ಪ್ರಕಾರಗಳಲ್ಲಿ ಪರಿಣಿತಿ ಪಡೆದ ಚಂದನ್ ಮೊದಲ ಬಾರಿ ಬಣ್ಣ ಹಚ್ಚಿದ ಧಾರಾವಾಹಿ ಸಂಕ್ರಾತಿ.

ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಹಿರಿತೆರೆಗೆ ಕಾಲಿಟ್ಟ ಚಂದನ್ ಮುಂದೆ ಮುಗುಳು ನಗೆ ಸಿನಿಮಾದಲ್ಲಿ ಬಣ್ಣ ಹಚ್ಚಿದರು. ಮುಂದೆ ಕೆಮೆಸ್ಟ್ರಿ ಆಫ್ ಕರಿಯಪ್ಪ ಸಿನಿಮಾದಲ್ಲಿ ನಾಯಕರಾಗಿ ನಟಿಸಿ ಸಿನಿ ಪ್ರಿಯರ ರಂಜಿಸಿರುವ ಚಂದನ್ ಇದೀಗ ಮಂಗಳವಾರ ರಜಾದಿನ ಸಿನಿಮಾದ ಮೂಲಕ ಕಿರುತೆರೆಯಲ್ಲಿ ಹೊಸ ಹವಾ ಸೃಷ್ಟಿ ಮಾಡಿದ್ದಾರೆ.
– ಅಹಲ್ಯಾ

Advertisement