ನವರಾತ್ರಿಯ ಒಂಬತ್ತನೆಯ ದಿನ : ಸಿದ್ಧಿದಾತ್ರಿಯ ಸ್ವರೂಪದಲ್ಲಿ ಪೂಜೆ ಮಾಡುವ ದಿನ

in ಜ್ಯೋತಿಷ್ಯ 614 views

ಶ್ರೀ ಶಾರ್ವರಿ ನಾಮ ಸಂವತ್ಸರೆ, ದಕ್ಷಿಣಾಯಣೆ, ಶರತ್ ಋತು, ಆಶ್ವಯುಜ ಮಾಸೆ, ಶುಕ್ಲ  ಪಕ್ಷದ ನವಮಿ ತಿಥಿ,  ಶ್ರವಣ ನಕ್ಷತ್ರ,  ಗಂಡ ಯೋಗ,   ಕೌಲವ ಕರಣ, ಅಕ್ಟೋಬರ್ 25 ಭಾನುವಾರದ ಪಂಚಾಂಗ ಫಲವನ್ನು ಶ್ರೀ ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ.

Advertisement

ಇಂದು ಬಹು ವಿಶೇಷವಾಗಿ ಮಹಾನವಮಿ. ಇಂದು ಒಂಭತ್ತನೇಯ ದಿನ. ಸಿದ್ಧಿದಾತ್ರಿಯ ಸ್ವರೂಪದಲ್ಲಿ ಜಗನ್ಮಾತೆಯನ್ನು ಪೂಜೆ ಮಾಡುವ ದಿನ . ನಾವು ಏನೇ ಮಾಡಬೇಕು ಎಂದರು ಸಿದ್ಧಿ ಇಲ್ಲದೆ ಸಾಧನೆಯಿಲ್ಲ. ಸಿದ್ಧಿದಾತ್ರಿ ದೇವಿಯನ್ನು ಪೂಜೆ ಮಾಡುವುದರಿಂದ ನಿಮಗೆ ಗೊತ್ತೋ ಗೊತ್ತಿಲ್ಲದೆಯೋ ನಮ್ಮಲ್ಲಿರುವ ಅಜ್ಞಾನವನ್ನು ತೆಗೆದು ಜ್ಞಾನವನ್ನು ತುಂಬುವ ಸಲುವಾಗಿ ಮಾಡುವುದೇ ಸಿದ್ಧಿದಾತ್ರಿ ಪೂಜೆ. ಜಗನ್ಮಾತೆಯು ಸಿದ್ಧಿ ಸ್ವರೂಪದಲ್ಲಿ ಕುಳಿತಿದ್ದಾಗ ಯಕ್ಷ ಕಿನ್ನರ ಗಂಧರ್ವರು ಮಹರ್ಷಿಗಳು ತಪಸ್ವಿಗಳು ಅವಧೂತರು ಎಲ್ಲರೂ ಬಂದು ಸುದ್ದಿಗೋಸ್ಕರ ಎಲ್ಲರೂ ಬಂದು ಉಪಾಸನೆ ಮಾಡುವಂತಹ ಅದ್ಭುತವಾದ ದಿನ. ಸಿದ್ದಿಯೆಂದರೆ ಸಾಧನೆ. ಜೀವನದಲ್ಲಿ ಏನಾದರೂ ಸಾಧಿಸ ಬೇಕು ಎಂದಾದರೆ ಸಿದ್ಧಿಧಾತ್ರಿಯ ಪೂಜೆಯನ್ನು ಮಾಡಬೇಕು . ಸಿದ್ಧಿ ಪಡೆಯಲು  ಒಂದೇ ಕಡೆ ಏಕಾಗ್ರತೆ ಮುಖ್ಯ.  ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳಲು ಸಿದ್ಧಿದಾತ್ರಿ ದೇವಿಯನ್ನು ಪೂಜಿಸಿ.  ನಿಮ್ಮ ಶಕ್ತಿ ಸಾಮರ್ಥ್ಯಗಳನ್ನು ಸರಿಯಾದ ರೀತಿಯಲ್ಲಿ ಸರಿಯಾದ ಜಾಗದಲ್ಲಿ ಸರಿಯಾದ ಸಮಯದಲ್ಲಿ ಎಬ್ಬಿಸಿ ನಿಲ್ಲಿಸಿ ಕೊಳ್ಳುವಂತಹುದೇ ಸಿದ್ಧತೆ.  ಅಭ್ಯಾಸ ಪ್ರಯತ್ನದಿಂದ ಏನಾದರೂ ಸಾಧಿಸಿಕೊಳ್ಳುವಂತಹ ಸಿದ್ಧಿದಾತ್ರಿಯ ದಿನ. ಕನಸೇನಾದರು  ಇದ್ದರೆ ಅದಕ್ಕೊಂದು ರೂಪ ಹಾಕಿ,  ರಕ್ಷಣೆ ಮಾಡಿ, ಸಿದ್ಧತೆ ಮಾಡಿಕೊಂಡು ಅನಂತರ ಸಿದ್ಧಿಧಾತ್ರಿಯ ಪೂಜೆ ಮಾಡಿ. ನೀನು ಸಿದ್ಧತೆ ಇಲ್ಲದೆ ಪೂಜೆ ಮಾಡುವುದರಿಂದ ಏನು ಫಲ ದೊರೆಯುವುದಿಲ್ಲ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ನೋಡಿ.

Advertisement

Advertisement

ನಿಮ್ಮ ರಾಶಿ ಫಲದ  ಬಗ್ಗೆ ಮಾಹಿತಿ ಹೀಗಿದೆ :

Advertisement

ಮೇಷ ರಾಶಿ : ಖರ್ಚು ವೆಚ್ಚಗಳ ದಿನ, ಪೂಜೆ, ಪುನಸ್ಕಾರ, ಓಡಾಟ ಸುತ್ತಾಟ ಇರುತ್ತದೆ. ವೃತ್ತಿಪರವಾಗಿ ಶುಭ ಸುದ್ದಿಯೊಂದನ್ನು ಕೇಳುತ್ತೀರಾ.

ವೃಷಭ ರಾಶಿ : ತಂದೆಯ ಆರೋಗ್ಯದ ಕಡೆ ಗಮನಕೊಡಿ, ಚಂದ್ರನಿಗೆ ಮೂಲ ತ್ರಿಕೋನದಲ್ಲಿ ರಾಹು ಇರುವುದರಿಂದ  ಜಾಗ್ರತೆ. ಶಂಕರಾಮೃತವನ್ನು ಸೇವಿಸಿ.

ಮಿಥುನ ರಾಶಿ : ಚೆನ್ನಾಗಿದೆ ಆದರೆ ಬೇರೆಯವರ ಮಾತನ್ನು ಕೇಳಿ ತುಂಬಾ ತಲೆಕೆಡಿಸಿಕೊಳ್ಳುತ್ತೀರ.  ಇಗ್ನೋರ್  ಮಾಡಿ ತಲೆ ಕೆಡಿಸಿಕೊಳ್ಳಬೇಡಿ.

ಕರ್ಕಾಟಕ ರಾಶಿ : ಕೆಲಸ ಕಾರ್ಯಗಳಲ್ಲಿ ಪ್ರಗತಿ ಆದರೆ ಧೈರ್ಯದಲ್ಲಿ ಸಣ್ಣ ಕದಲಿಕೆಯಾಗುತ್ತದೆ. ರಾಹು ಹನ್ನೊಂದನೇ ಮನೆಯಲ್ಲಿ ಇರುವುದರಿಂದ ಏನೂ ಆಗೋದಿಲ್ಲ ಧೈರ್ಯವಾಗಿ ಮುಂದಕ್ಕೆ ಹೆಜ್ಜೆ ಇಡಿ.

ಸಿಂಹ ರಾಶಿ : ತಂದೆಯ ಕಡೆ ಗಮನಕೊಡಿ, ಅಕ್ಕ, ತಂಗಿ, ಹೆಂಡತಿಯ ಸೋದರಿಯ ವಿಚಾರದಲ್ಲಿ ಸಣ್ಣ ಎಳೆದಾಟ ಅವರ ಆರೋಗ್ಯದ ಕಡೆ ಗಮನ ಕೊಡಿ. ವಿಪರೀತ ಸೊಂಟ ನೋವಿನಿಂದ ಬಳಲುತ್ತಾರೆ. ವೀಡಿಯೊದಲ್ಲಿ ತೋರಿಸಿರುವ ಮುದ್ರೆಯನ್ನು ಮಾಡಿ ನೋವು ಕಡಿಮೆಯಾಗುತ್ತದೆ.

ಕನ್ಯಾ ರಾಶಿ :  ಶುಕ್ರ ಭಾಗ್ಯ ಕಾರಕ ನಿಮಗೆ ನೀಚ, ಚಂದ್ರ ಪ್ರಬಲವಾಗಿರುವುದರಿಂದ ಎಚ್ಚರಿಕೆ.ತುಂಬಾ ಬೆಲೆಬಾಳುವ ವಸ್ತುಗಳನ್ನು ಎಚ್ಚರಿಕೆಯಿಂದ ಇಡಿ. ಯಾರೊ ಸ್ತ್ರೀ ಓರ್ವರ  ವಿಚಾರದಲ್ಲಿ ಸಣ್ಣ ಕಂಪನ ತೊಳಲಾಟ ಆದರೂ ಖುಷಿಯ ವಿಚಾರವನ್ನ ಕೇಳುತ್ತೀರಾ.

ತುಲಾ ರಾಶಿ : ರಾಶಿಯಾಧಿಪತಿಯೆ ನೀಚನಾಗಿರುವುದರಿಂದ, ಎಲ್ಲವೂ ಇದೆ ಆದರೆ ಅನುಭವಿಸಲಾಗದ ತೊಳಲಾಟ. ಇಂದು 9 ವರ್ಷದ 9 ಹೆಣ್ಣು  ಮಕ್ಕಳಿಗೆ ಪೂಜೆ, ಪ್ರಸಾದ ,  ಅಲಂಕಾರ ಒಪ್ಪ ಓರಣ , ಇವುಗಳಲ್ಲಿ ಯಾವುದಾದರೂ ಒಂದನ್ನಾದರೂ ಮಾಡಿ ಇರುವ  ತೊಂದರೆಯಿಂದ ಹೊರಗಡೆ ಬರುತ್ತೀರ.

ವೃಶ್ಚಿಕ ರಾಶಿ : ಚೆನ್ನಾಗಿದೆ ಹೆಂಡತಿಯ ಮುಖೇನ, ಅಕ್ಕ ತಂಗಿಯರ ಮುಖೇನ, ಹೆಂಡತಿ ಅಕ್ಕ ತಂಗಿಯರ ಮುಖೇನ ಸ್ವಲ್ಪ ಖರ್ಚು ವೆಚ್ಚದ ಎಳೆದಾಟ ಒದ್ದಾಟವಿರುತ್ತದೆ. ತೊಂದರೆಗಳೇನು  ನಿಭಾಯಿಸಿಕೊಳ್ಳುತ್ತೀರಾ.

ಧನಸ್ಸು ರಾಶಿ : ಚಂದ್ರನಿಗೆ ಶುಕ್ರ ಮೂಲತ್ರಿಕೋಣ ದಲ್ಲಿದ್ದು ಶುಕ್ರನಿಗೆ ಆ ಮೂಲ ತ್ರಿಕೋನದಲ್ಲಿ ರಾಹು ಇರುವುದರಿಂದ ಕಲಾವಿದರು ಸ್ವಲ್ಪ ಎಚ್ಚರಿಕೆಯಿಂದಿರಬೇಕು. ಕಲಾವಿದರಿಗೆ ಅವಮಾನ ಅಪವಾದಗಳು ಹುಡುಕಿಕೊಂಡು ಬರುತ್ತವೆ ಎಚ್ಚರಿಕೆಯಿಂದಿರಿ.

ಮಕರ ರಾಶಿ : ಹೂವು ಹಣ್ಣು ತರಕಾರಿ ಜ್ಯೂಸ್ ಅಂಗಡಿ ಬೇಕರಿ, ಸ್ವೀಟ್ ಅಂಗಡಿ ಇಟ್ಟುಕೊಂಡಿರುವವರಿಗೆ ಪರಿಶ್ರಮದಿಂದ ಸ್ವಲ್ಪ ಲಾಭ. ಹಾಲು ಬೆಣ್ಣೆ ತುಪ್ಪ ಮೊಸರು ಸ್ವಲ್ಪ ಹುಳಿಯಾಗಬಹುದು ಎಚ್ಚರಿಕೆ.

ಕುಂಭ ರಾಶಿ : ಭಾಗ್ಯಾಧಿಪತಿ ಅಷ್ಟಮದಲ್ಲಿದ್ದು, ಅಷ್ಟಮಾಧಿಪತಿಗೆ  ಮೂಲ ತ್ರಿಕೋನದಲ್ಲಿ ಚಂದ್ರ ಇರುವುದರಿಂದ ಪ್ರಯಾಣ ಪೂಜೆ ಸಂಕಲ್ಪ,  ಒಪ್ಪ ಓರಣ, ಅಲಂಕಾರ, ದಾನ ಧರ್ಮ ಧರ್ಮದ ಸೇವೆಯನ್ನ ಕೊಡುತ್ತಾನೆ.  ಆದರೆ ಸ್ವಲ್ಪ ಖರ್ಚು ವೆಚ್ಚದ ವೆಚ್ಚದ ದಿನ.

ಮೀನ ರಾಶಿ : ಚೆನ್ನಾಗಿದೆ ಆರೋಗ್ಯದ ಕಡೆ ಗಮನ ಕೊಡಿ.  ಯಾರೋ ಸ್ತ್ರೀಯೋರ್ವರ ವಿಚಾರದಲ್ಲಿ ಮಾನಸಿಕ ತೊಳಲಾಟ ಪಡುತ್ತೀರಾ

All Rights reserved Namma  Kannada Entertain

Advertisement
Share this on...