ಇದ್ದಕ್ಕಿದ್ದಂತೆ ವೈರಲ್ ಆದ ಶಾರೂಖ್-ಕಾಜಲ್ ಹಳೆಯ ವಿಡಿಯೋ …!

in ಸಿನಿಮಾ 50 views

ಜನವರಿಯಿಂದ ಇದುವರೆಗೆ ಇಡೀ ವಿಶ್ವವನ್ನೇ ಬೆದರಿಸುತ್ತಾ, ತನ್ನ ಕೆಟ್ಟ ಕೆಲಸವನ್ನು ಮುಂದುವರೆಸುತ್ತಲೇ ಇದೆ ಕೊರೊನಾ ವೈರಸ್. ಇದೇ ಕಾರಣಕ್ಕೆ ಲಾಕ್ಡೌನ್ ಅನ್ನು ಮೇ 3 ರವರೆಗೆ ವಿಸ್ತರಿಸಲಾಗಿದೆ. ಸಾಮಾನ್ಯ ಜನರಂತೆ, ಸೆಲೆಬ್ರಿಟಿಗಳೂ ಸಹ ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಅಷ್ಟೇ ಅಲ್ಲ, ಹೊರಗೆ ಓಡಾಡದೆ ಮನೆಯಲ್ಲಿ ಉಳಿಯುವಂತೆ ಸಹ ಅಭಿಮಾನಿಗಳಿಗೆ ಮನವಿ ಮಾಡುತ್ತಿದ್ದಾರೆ. ಇದೆಲ್ಲದರ ಮಧ್ಯೆ ಸೆಲೆಬ್ರಿಟಿಗಳು ಸಹ ಅನೇಕ ವಿಡಿಯೋಗಳು ಮತ್ತು ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಎಲ್ಲರೂ ಮನೆಯಲ್ಲೇ ಇರುವುದರಿಂದ ಯಾವುದೇ ಹೊಸ ವೀಡಿಯೊ ಹೊರಬರುತ್ತಿಲ್ಲವಾದರೂ, ಹಳೆಯ ವೀಡಿಯೊಗಳು ಇದ್ದಕ್ಕಿದ್ದಂತೆ ವೈರಲ್ ಆಗುತ್ತಿವೆ. ಹೌದು, ಇತ್ತೀಚೆಗೆ ಶಾರೂಖ್ ಖಾನ್ ಮತ್ತು ಕಾಜೋಲ್ ಅವರ ಹಳೆಯ ವಿಡಿಯೋ ವೈರಲ್ ಆಗಿದ್ದು, ಇದನ್ನು ವೀಕ್ಷಕರು ಈ ಕ್ಷಣಕ್ಕೂ ನೋಡುತ್ತಲೇ ಇದ್ದಾರೆ.

Advertisement

 

Advertisement

Advertisement

ಈ ವೀಡಿಯೊ 1998ನೇ ವರ್ಷದಲ್ಲಿ ಶೂಟ್ ಮಾಡಿದ್ದು, ಅದರಲ್ಲಿ ಶಾರೂಖ್ ಮತ್ತು ಕಾಜೋಲ್ ಭರ್ಜರಿಯಾಗಿ ಸ್ಟೆಪ್ಸ್ ಹಾಕುತ್ತಿರುವುದನ್ನು ನೀವು ಕಾಣಬಹುದು. ಅವರಿಬ್ಬರೂ ಹೆಜ್ಜೆ ಹಾಕುತ್ತಿರುವುದು ಸೂಪರ್ ಹಿಟ್ ಚಿತ್ರ ‘ದಿಲ್ವಾಲೆ ದುಲ್ಹನಿಯಾ ಲೆ ಜಾಯೆಂಗೆ’ ಹಾಡಿಗೆ. ಈ ವಿಡಿಯೋದಲ್ಲಿ ಶಾರೂಖ್ ಮತ್ತು ಕಾಜೋಲ್ ಇಬ್ಬರ ಕೆಮಿಸ್ಟ್ರಿ ಅದ್ಭುತವಾಗಿರುವುದನ್ನು ನೀವು ನೋಡಬಹುದು. ನೃತ್ಯದ ಜೊತೆಗೆ ಶಾರೂಖ್ ಹಾವಭಾವವೂ ಅಭಿಮಾನಿಗಳ ಕಣ್ಮನ ಸೆಳೆದರೆ ಆಶ್ಚರ್ಯವಿಲ್ಲ. ಶಾರೂಖ್ ತಮ್ಮ ವೃತ್ತಿಜೀವನದಲ್ಲಿ ಅನೇಕ ಹಿಟ್ ಚಿತ್ರಗಳನ್ನು ನೀಡಿದ್ದರೂ, ಅದೇಕೋ ಅವರ ಅಭಿಮಾನಿಗಳಿಗೆ ಇಂದಿಗೂ ‘ದಿಲ್ವಾಲೆ ದುಲ್ಹನಿಯಾ ಲೆ ಜಾಯೆಂಗೆ’ ಬಹಳ ಇಷ್ಟವಾಗಿದೆ.

Advertisement

 

 


ಶಾರೂಖ್ ಮತ್ತು ಕಾಜೋಲ್ ಜೋಡಿಯಾಗಿ ಬಾಜಿಗರ್, ಕರಣ್ ಅರ್ಜುನ್, ಕುಚ್ ಕುಚ್ ಹೋತಾ ಹೈ, ಕಭಿ ಖುಷಿ ಕಭಿ ಘಮ್, ಮೈ ನೇಮ್ ಈಸ್ ಖಾನ್ ಮತ್ತು ದಿಲ್ವಾಲೆ ದುಲ್ಹನಿಯಾ ಲೆ ಜಾಯೆಂಗೆ ಚಿತ್ರಗಳಲ್ಲಿಯೂ ಕೆಲಸ ಮಾಡಿದ್ದಾರೆ. ಪ್ರತಿಯೊಂದು ಚಿತ್ರವು ತನ್ನದೇ ಆದ ದಾಖಲೆಗಳನ್ನು ಮಾಡಿರುವುದು ನಿಮಗೂ ಗೊತ್ತಿರಲೇಬೇಕು. ಅಂದಹಾಗೆ ಶಾರೂಖ್ ನಿನ್ನೆಯಷ್ಟೇ ಟ್ವಿಟರ್ ಮೂಲಕ ಅಭಿಮಾನಿಗಳ ಜೊತೆ ಸಂವಾದ ನಡೆಸಿದ್ದು, ಅದರಲ್ಲಿ ಓರ್ವ ಅಭಿಮಾನಿ, “ ಈ ದಿನಗಳಲ್ಲಿ ನೀವು ಏನನ್ನು ಕಲಿತಿರಿ” ಎಂದು ಕೇಳಿದಾಗ “ನಾವೆಲ್ಲರೂ ತುಸು ನಿಧಾನವಾಗಿ ಸಾಗಬೇಕು ಎಂಬುದನ್ನು ಕಲಿತೆ” ಎಂದು ಉತ್ತರಿಸಿದ್ದಾರೆ.

Advertisement
Share this on...