ಅಪ್ಪು ಕಾಶ್ಮೀರದ ಜನರನ್ನು ಮಾತನಾಡಿಸುತ್ತಿರುವ ಫೋಟೋ ಇದೀಗ ಸಖತ್ ವೈರಲ್

in ಸಿನಿಮಾ 481 views

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ‘ಯುವರತ್ನ’ ಸಿನಿಮಾದ ಬಿಡುಗಡೆಗಾಗಿ ಎದುರುನೋಡುತ್ತಿದ್ದಾರೆ. ಅಭಿಮಾನಿಗಳು ಸಹ ಕಾತರದಿಂದ ಕಾಯುತ್ತಿದ್ದಾರೆ. ಯುವರತ್ನ ಪ್ರಮೋಷನ್ ನಡುವೆಯೂ ಪವರ್ ಸ್ಟಾರ್ ಜೇಮ್ಸ್ ಸಿನಿಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಚೇತನ್ ಕುಮಾರ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಜೇಮ್ಸ್ ಸಿನಿಮಾದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದ್ದು, ಕಾಶ್ಮೀರದಲ್ಲಿ ಚಿತ್ರತಂಡ ಬೀಡುಬಿಟ್ಟಿದೆ. ಇತ್ತೀಚಿಗಷ್ಟೆ ಕಾಶ್ಮೀರ ಕಡೆ ಹೊರಟಿರುವ ಪವರ್ ಸ್ಟಾರ್ ಮತ್ತು ತಂಡ ಜೇಮ್ಸ್ ಸಿನಿಮಾದ ಪ್ರಮುಖ ದೃಶ್ಯಗಳನ್ನು ಸೆರೆಹಿಡಿಯುವಲ್ಲಿ ಬ್ಯುಸಿಯಾಗಿದ್ದಾರೆ. ಕೊರೆಯುವ ಚಳಿಯಲ್ಲಿ ಚಿತ್ರೀಕರಣ ಮಾಡುತ್ತಿರುವ ಸಿನಿಮಾತಂಡ ಒಂದಿಷ್ಟು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅನೇಕ ಸಿನಿಮಾಗಳ ಮೂಲಕ ಅಭಿಮಾನಿಗಳ ಪ್ರೀತಿ ಸಂಪಾದಿಸಿಕೊಂಡವರು.

Advertisement

Advertisement

ಪವರಸ್ಟಾರ್ ಪುನೀತ್ ರಾಜಕುಮಾರ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಾಯಕನಟರಲ್ಲಿ ಒಬ್ಬರು. ಅಭಿಮಾನಿಗಳಿಂದ ಅಪ್ಪು ಎಂದೇ ಕರೆಯಿಸಿಕೊಳ್ಳುವ ಪುನೀತ್ ರಾಜ್ ಕುಮಾರ್ ಬಾಲ ನಟನಾಗಿ ಹಾಗೂ ನಾಯಕನಾಗಿ ಅನೇಕ ಸಿನಿಮಾಗಳನ್ನು ಕನ್ನಡಚಿತ್ರರಂಗಕ್ಕೆ ನೀಡಿದ್ದಾರೆ. ಇನ್ನು ಅಭಿಮಾನಿಗಳು ಕಷ್ಟದಲ್ಲಿದ್ದಾರೆ ಎಂದರೆ ಸಾಕು ಇವರು ಸಹಾಯಕ್ಕೆ ನಿಂತು ಬಿಡುತ್ತಾರೆ. ಅಭಿಮಾನಿಗಳನ್ನು ದೇವರೆಂದು ಆರಾಧಿಸುತ್ತಾರೆ.

Advertisement

ಪುನೀತ್ ರಾಜಕುಮಾರ್ ಕೇವಲ ನಟ ಮಾತ್ರ ಅಲ್ಲ, ಇನ್ನು ಹಿನ್ನಲೆ ಗಾಯಕರಾಗಿ ನಿರ್ಮಾಪಕರಾಗಿ ಚಿತ್ರರಂಗದಲ್ಲಿದ್ದಾರೆ. ಸುಮಾರು ನಾಲ್ಕು ದಶಕಗಳ ಸಿನಿ ಜೀವನದಲ್ಲಿ ಇವರು ಬಾಲಕಲಾವಿದನಾಗಿ 14 ಸಿನಿಮಾಗಳಲ್ಲಿ ಹಾಗೂ ನಾಯಕನಾಗಿ 25 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.ಬಾಲ್ಯದಿಂದಲೇ ಚಿತ್ರದಲ್ಲಿ ನಟಿಸುತ್ತಿದ್ದ ಪುನೀತ್ ರಾಜ್ ಕುಮಾರ್ ಇದೀಗ ಬಹು ಬೇಡಿಕೆಯ ನಟ.

Advertisement

ಬಾಲ್ಯದಲ್ಲಿ ತನ್ನ ತಂದೆ ರಾಜಕುಮಾರ್ ಅಭಿನಯದ ಚಿತ್ರಗಳಲ್ಲಿ ಬಾಲ್ಯ ನಟನಾಗಿ ವಸಂತಗೀತ,ಭಾಗ್ಯದಾತ,ಚಲಿಸುವ ಮೋಡಗಳು, ಎರಡು ನಕ್ಷತ್ರಗಳು ಮತ್ತು ಬೆಟ್ಟದ ಹೂವು ಚಿತ್ರದಲ್ಲಿ ಕಾಣಿಸಿಕೊಂಡರು.ಅವರ ಬೆಟ್ಟದ ಹೂವು ಚಿತ್ರದ ರಾಮು ಪಾತ್ರದ ಬಾಲನಟನೆಗೆ ರಾಷ್ಟ್ರ ಚಲನಚಿತ್ರ ಪ್ರಶಸ್ತಿಗೆ ಪಾತ್ರರಾದರು. ಪುನೀತ್ ನಾಯಕ ನಟನಾಗಿ 2002′ ರಲ್ಲಿ ಅಪ್ಪು ಸಿನಿಮಾದಲ್ಲಿ ಅಭಿನಯಿಸಿದರು. ತದನಂತರ ಅಭಿ , ಆಕಾಶ್ , ಅರಸು, ಮಿಲನ,ಜಾಕೀ,ಹುಡುಗರು, ಅಣ್ಣಾ ಬಾಂಡ್ ಮತ್ತು ಪವರ್ ಸೇರಿದಂತೆ ಇತರ ಯಶಸ್ವಿ ಚಿತ್ರಗಳನ್ನು ನೀಡುವ ಮೂಲಕ ಪ್ರೇಕ್ಷಕರ ಮನಸ್ಸನ್ನು ಗೆದ್ದರು.

ಜೊತೆಗೆ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಕನ್ನಡದ ಕೋಟ್ಯಧಿಪತಿಯಲ್ಲಿ ನಿರೂಪಣೆ ಮಾಡಿದ್ದಾರೆ. ಇದೀಗ ಜೇಮ್ಸ್ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಚಿತ್ರೀಕರಣ ನಡುವೆಯೂ ಪವರ್ ಸ್ಟಾರ್ ಕಾಶ್ಮೀರದ ಜನರನ್ನು ಮಾತನಾಡಿಸುತ್ತಿರುವ ಫೋಟೋ ಇದೀಗ ಅಭಿಮಾನಿಗಳ ಗಮನಸೆಳೆಯುತ್ತಿದೆ.ಇನ್ನು ಪುಟ್ಟ ಮಗುವಿನ ಜೊತೆ ಅಪ್ಪು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿರುವ ಫೋಟೋ ಸಹ ಅಭಿಮಾನಿಗಳ ಮನಗೆದ್ದಿದೆ. ಪವರ್ ಸ್ಟಾರ್ ಜೊತೆ ರಂಗಾಯಣ ರಘು ಕೂಡ ಕ್ಯಾಮರಾಗೆ ಪೋಸ್ ನೀಡಿದ್ದಾರೆ.

ಕಾಶ್ಮೀರದ ರಮಣೀಯ ಸ್ಥಳದಲ್ಲಿ ಚಿತ್ರದ ಪ್ರಮುಖ ಹಾಡಿನ ಚಿತ್ರೀಕರಣ ಮಾಡಲಾಗುತ್ತಿದೆ. ಹಾಡಿನ ಜೊತೆಗೆ ಆಕ್ಷನ್ ದೃಶ್ಯ ಕೂಡ ಸೆರೆಹಿಡಿಯಲಾಗುತ್ತಿದೆ. ಹಾಡಿಗೆ ನಿರ್ದೇಶಕ ಎ ಹರ್ಷ ನೃತ್ಯ ನಿರ್ದೇಶನ ಮಾಡುತ್ತಿದ್ದಾರೆ. ಸಾಹಸ ದೃಶ್ಯಗಳು ವಿಜಯ್ ಅವರ ಸಾರಥ್ಯದಲ್ಲಿ ಮೂಡಿಬರುತ್ತಿದೆ.ಜೇಮ್ಸ್ ಸಿನಿಮಾದ ಬಹುತೇಕ ಚಿತ್ರೀಕರಣ ಉತ್ತರ ಕರ್ನಾಟಕ ಭಾಗದಲ್ಲಿ ನಡೆದಿದೆ. ಉತ್ತರ ಕರ್ನಾಟಕದ ಚಿತ್ರೀಕರಣ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಉತ್ತರ ಕರ್ನಾಟಕ ಚಿತ್ರೀಕರಣ ಬಳಿಕ ಕಾಶ್ಮೀರ ಕಡೆ ಪಯಣ ಬೆಳೆಸಿದ್ದಾರೆ.

Advertisement