ಚರ್ಚೆಗೆ ಕಾರಣವಾದ ಪ್ರಶಾಂತ್ ಸಂಬರ್ಗಿ ಮತ್ತು ದಿವ್ಯಾ ಉರುಡುಗ ಬಾಂಧವ್ಯ, ವಾರದ ಕೊನೆಯಲ್ಲಿ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಗಲಿದೆಯಾ?

in ಮನರಂಜನೆ 3,678 views

ಬಿಗ್ ಬಾಸ್ ಸೀಸನ್ 8 ರ ಕುತೂಹಲಕ್ಕೆ ತೆರೆ ಬಿದ್ದಿದೆ. ಅದ್ದೂರಿಯಾಗಿ ಶುರುವಾದ ಈ ಬಾರಿ ಬಿಗ್ ಬಾಸ್ ಮನೆಯ ಅಸಲಿ ಆಟ ಈಗಾಗಲೇ ಪ್ರಾರಂಭವಾಗಿದೆ. ಇನ್ನು ಸ್ಪರ್ಧಿಗಳು 2ನೇ ದಿನದ ಆಟವನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಪ್ರಾರಂಭದಲ್ಲಿ ಸಖತ್ ಜೋಶ್ ನಲ್ಲಿ ಇರುವ ಬಿಗ್ ಸ್ಪರ್ಧಿಗಳು ಟಾಸ್ಕ್ ಗಳನ್ನು ಅಷ್ಟೇ ಹುರುಪಿನಿಂದ ಮಾಡುತ್ತಿದ್ದಾರೆ.ಮೊದಲ ದಿನ ಮನೆಯ ಕ್ಯಾಪ್ಟನ್ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಈ ಬಾರಿ ಬಿಗ್ ಬಾಸ್ ಮನೆಯ ಮೊದಲ ಕ್ಯಾಪ್ಟನ್ ಆಗಿ ಬ್ರೋ ಗೌಡ ಆಯ್ಕೆಯಾಗಿದ್ದಾರೆ. ಜೊತೆಗೆ ನಾಮಿನೇಷನ್ ಪ್ರಕ್ರಿಯೆ ಸಹ ಮುಗಿದಿದೆ. ಸ್ಪರ್ಧಿಗಳು ನೇರ ನೇರ ಸಹ ಸ್ಪರ್ಧಿಗಳನ್ನು ನಾಮಿನೇಟ್ ಮಾಡಿ, ಕೆಲವರ ಕೋಪಕ್ಕೆ ಕಾರಣರಾಗಿದ್ದಾರೆ. ಈ ವಾರದ ಕೊನೆಯಲ್ಲಿ ಯಾರು ಈ ಬಿಗ್ ಬಾಸ್ ಮನೆಗೆ ವಿದಾಯ ಹೇಳುತ್ತಾರೆ ಎನ್ನುವ ಕುತೂಹಲ ಎಲ್ಲರಲ್ಲೂ ಇದೆ. ಇದೆಲ್ಲದರ ನಡುವೆ ಸಂಬರ್ಗಿ ಮತ್ತು ದಿವ್ಯಾ ಕ್ಲೋಸ್ ನೆಸ್ ಬಗ್ಗೆಯೂ ಚರ್ಚೆಯಾಗುತ್ತಿದ್ದು, ಪ್ರೇಕ್ಷಕರಿಗೆ ಇವರಿಬ್ಬರ ನಡವಳಿಕೆ ಅಚ್ಚರಿ ತರಿಸಿದೆ. ಅಂದಹಾಗೆ, ನಗು ಅಳುವಿನ ಜೊತೆಗೆ ಮೊದಲ ದಿನದ ಟಾಸ್ಕ್, ನಾಮಿನೇಷನ್ ಪ್ರತಿಕ್ರಿಯೆ ಶೋನ ಹೈಲೆಟ್ ಆಗಿದ್ದರೂ ಸಹ ಕೆಲವು ವಿಚಾರಗಳು ಪ್ರೇಕ್ಷಕರ ಗಮನ ಸೆಳೆದಿದೆ.

Advertisement

Advertisement

ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರ್ಗಿ ಮತ್ತು ದಿವ್ಯಾ ಉರುಡುಗ ನಡುವಿನ ಬಾಂಧವ್ಯ ಚರ್ಚೆಗೆ ಕಾರಣವಾಗಿದೆ. ಈಗಾಗಲೇ ಇಬ್ಬರ ನಡುವೆ ಸಾಕಷ್ಟು ಟ್ರೋಲ್ ಗಳು ಹರಿದಾಡುತ್ತಿವೆ. ಈ ಮೊದಲೇ ಇವರಿಬ್ಬರಿಗೆ ಪರಿಚಯ ಇತ್ತ ಎನ್ನುವ ಅನುಮಾನಗಳು ಎಲ್ಲರಲ್ಲೂ ಮೂಡಿದೆ. ಜೊತೆಗೆ ಪ್ರಶಾಂತ್ ಮತ್ತು ದಿವ್ಯಾ ಇಬ್ಬರು ಕ್ಲೋಸ್ ಆಗಿರುವುದನ್ನು ನೋಡಿದ್ರೆ ಇಬ್ಬರು ಬಿಗ್ ಮನೆಯೊಳಗೆ ಬರುವ ಮೊದಲೇ ಸ್ನೇಹಿತರಾಗಿದ್ದರೇನೋ ಎನ್ನುವಷ್ಟರ ಮಟ್ಟಿಗೆ ಹತ್ತಿರವಾಗಿದ್ದಾರೆ.

Advertisement

ಮನೆಯೊಳಗೆ ಎಂಟ್ರಿ ಕೊಡುತ್ತಿದ್ದ ಹಾಗೆ ಪ್ರಶಾಂತ್ ಸಂಬರ್ಗಿ, ದಿವ್ಯಾ ಜೊತೆ ಕ್ಲೋಸ್ ಆಗಿ, ದಿವ್ಯಾ ಹಿಂದನೇ ಓಡಾಡುತ್ತಿದ್ದಾರೆ. ಇದರ ಜೊತೆಗೆ ಲಿವಿಂಗ್ ಏರಿಯಾದಲ್ಲಿ ದಿವ್ಯಾ ಉರುಡುಗರನ್ನು ಪಕ್ಕದಲ್ಲಿ ಕೂರಿಸಿಕೊಂಡು ಸಂಬರ್ಗಿ ದೇವರು ಮತ್ತು ದೆವ್ವದ ನಂಬಿಕೆ ಬಗ್ಗೆ ಪಾಠ ಮಾಡಿದ್ದಾರೆ. ದಿವ್ಯಾ ಕೈ ಹಿಡಿದು ಜ್ಯೋತಿಷ್ಯ ಹೇಳುವುದಾಗಿ ಬಿಲ್ಡಪ್ ಕೊಟ್ಟಿದ್ದಾರೆ. ದಿವ್ಯಾ ಇದೆಲ್ಲ ನಂಬಿಕೆ ಇಲ್ಲ ಎಂದು ಹೇಳುತ್ತಿದ್ದರು ಸಂಬರ್ಗಿ ಮಾತ್ರ ಜ್ಯೋತಿಷ್ಯ ಪಾಠವನ್ನು ನಿಲ್ಲಿಸಿಲ್ಲ.

Advertisement

ಅಂದಹಾಗೆ, ದಿವ್ಯಾರನ್ನು ಪಕ್ಕದಲ್ಲೇ ಕೂರಿಸಿಕಂಡು ಕಳೆದ ಜನ್ಮದಲ್ಲಿ 50-50 ಮಾಡಿದ್ದೀನಿ, ಈ ಜನ್ಮ 50-50 ಇದೆ, ಮನೆ ವಾಸ್ತು ಪ್ರಕಾರ ಅಡುಗೆ ಮನೆ ಈಗಿರುವ ಜಾಗಕ್ಕೆ ಇರಬಾರದಿತ್ತು, ಬೆಡ್ ರೂಮ್, ದೇವರ ಮನೆ ಎಲ್ಲಾ ಸರಿ ಇದೆ, ಬಿಗ್ ಬಾಸ್ ಮನೆ 90% ವಾಸ್ತು ಪ್ರಕಾರ ಇದೆ ಎಂದು ದಿವ್ಯಾ ಬಳಿ ಕಥೆ ಹೊಡೆದಿದ್ದಾರೆ. ಇನ್ನು ಟಾಸ್ಕ್ ವೇಳೆಯೂ ದಿವ್ಯಾರನ್ನು ದಿಢೀರ್ ಎತ್ತಿಕೊಂಡು 55 ಕೆಜಿ ಇದಿಯಾ ಹೇಳುತ್ತಾ ಮತ್ತೊಂದು ಜಾಗಕ್ಕೆ ಕರೆದುಕೊಂಡು ಹೋಗಿ ಕೂರಿಸಿದ್ದಾರೆ.

ಇಬ್ಬರ ಈ ಕ್ಲೋಸ್ ನೆಸ್ ಈಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ. ಬಿಗ್ ಬಾಸ್ ಮನೆಯಲ್ಲಿ ಸ್ನೇಹ, ಪ್ರೀತಿ, ಕಿತ್ತಾಟ ಹೊಸದೇನಲ್ಲ. ಆದರೆ ಈ ಬಾರಿ ಬಿಗ್ ಬಾಸ್ ನ ಮೊದಲ ದಿನವೇ ಸಂಬರ್ಗಿ ಮತ್ತು ದಿವ್ಯಾ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಜೊತೆಗೆ ಪ್ರೇಕ್ಷಕ ವರ್ಗದಲ್ಲಿ ಮೂಡಿದ ಎಲ್ಲಾ ಗೊಂದಲದ ಪ್ರಶ್ನೆಗಳಿಗೆ ವಾರದ ಕೊನೆಯಲ್ಲಿ ಉತ್ತರ ಸಿಗಲಿದೆ.

Advertisement