ಶಾರ್ವರಿ ನಾಮ ಸಂವತ್ಸರೆ, ಉತ್ತರಾಯಣೆ, ಶಿಶಿರ ಋತು, ಮಾಘ ಮಾಸೆ, ಶುಕ್ಲ ಪಕ್ಷದ ಚತುರ್ದಶಿ ತಿಥಿ, ಆಶ್ಲೇಷಾ ನಕ್ಷತ್ರ, ಅತಿ ಗಂಡ ಯೋಗ, ಗರಜ ಕರಣ, 26ನೇ ತಾರೀಕು ಫೆಬ್ರವರಿ 2021 ಶುಕ್ರವಾರದ ಪಂಚಾಂಗ ಫಲವನ್ನು ಸಂಖ್ಯೆಗಳಿಗನುಗುಣವಾಗಿ ಅಥವಾ ಹುಟ್ಟಿದ ದಿನಾಂಕಕ್ಕೆ ಅನುಗುಣವಾಗಿ ದಿನಭವಿಷ್ಯವನ್ನು ಶ್ರೀ ರವಿಶಂಕರ್ ಗುರೂಜಿರವರು ನೀಡಿದ್ದಾರೆ.
ಸ್ತ್ರೀಯರ ಸೆರಗಿನ ಅಂಚಿನಲ್ಲಿ ಲಕ್ಷ್ಮಿ ನೆಲೆಸಿರುತ್ತಾಳೆ ಆದ್ದರಿಂದ ಸ್ತ್ರೀಯರು ದೇವಸ್ಥಾನದಲ್ಲಿ ಹೂವು ಮತ್ತು ಅಕ್ಷತೆಯನ್ನು ಕೊಟ್ಟಾಗ ಸೀರೆಯ ಸೆರಗಿನಲ್ಲಿ ತೆಗೆದುಕೊಂಡು ಅದರಲ್ಲಿ ಕಟ್ಟಿಕೊಳ್ಳುತ್ತಾರೆ. ಸೀರೆಯ ಸೆರಗು ಲಕ್ಷ್ಮಿ ಪ್ರತೀಕವಾಗಿರುವುದರಿಂದ ಸ್ತ್ರೀಯರು ಸೆರಗನ್ನು ಹೊದ್ದಿಸಿ ಕೊಂಡಿರುತ್ತಾರೆ. ದೇವಸ್ಥಾನಗಳಲ್ಲಿ ಪ್ರಸಾದವನ್ನು ತೆಗೆದುಕೊಳ್ಳುವಾಗ ಸ್ತ್ರೀಯರು ಸೆರಗಿನಲ್ಲಿ ತೆಗೆದುಕೊಳ್ಳಬೇಕು. ಪುರುಷರು ಶಲ್ಯದಲ್ಲಿ ತೆಗೆದುಕೊಳ್ಳಬೇಕು ಈ ರೀತಿ ತೆಗೆದುಕೊಂಡರೆ ಲಕ್ಷ್ಮಿ ಪ್ರಸನ್ನಳಾಗ್ತಾಳೆ. ಅಕ್ಷತೆಯನ್ನು ಸೆರಗಿನಲ್ಲಿ ಸಾಮಾನ್ಯವಾಗಿ ಸ್ತ್ರೀಯರು ಕಟ್ಟಿಕೊಂಡಿರುತ್ತಾರೆ ಇದು ಪರಿಪೂರ್ಣ ಲಕ್ಷ್ಮಿಯ ಸಂಕೇತ ಮತ್ತು ಪರಿಪೂರ್ಣ ಮುತ್ತೈದೆಯ ಸಂಕೇತ. ಪರಿಪೂರ್ಣ ತ್ರಿಶಕ್ತಿಯ ತ್ರಿಮೂರ್ತಿಯ ಸಂಕೇತ. ಯಾವ ಸ್ತ್ರೀಯರು ಸೆರಗಿನಲ್ಲಿ ಅಕ್ಷತೆಯನ್ನು ಇಟ್ಟುಕೊಂಡಿರುತ್ತಾರೋ ಅವರಿಗೆ ಯಾವುದೇ ಅಪಚಾರ ಅಭಿಚಾರ ಅಪವಾದ ಅವಮಾನಗಳು ತಾಕುವುದಿಲ್ಲ. ಲಕ್ಷ್ಮಿ ಮನೆಯಲ್ಲಿ ಸದಾ ನೆಲೆಸಿರಬೇಕು ಪ್ರಸನ್ನಳಾಗಿರಬೇಕು ಎಂದರೆ ಮತ್ತು ಸ್ತ್ರೀಯರಿಗೆ ಗೌರವ ಮರ್ಯಾದೆ ಸನ್ಮಾನಗಳು ಸಿಗಬೇಕೆಂದರೆ ಲಕ್ಷ್ಮೀ ಸ್ವರೂಪವಾದ ಸೆರಗಿನ ಅಂಚಿನಲ್ಲಿ ಅಕ್ಷತೆಯನ್ನು ಜೊತೆಗೆ ಚಿಲ್ಲರೆ ಕಾಸನ್ನು ಕಟ್ಟಿಕೊಂಡಿರಬೇಕು. ಇದರಿಂದ ಗೌರಿಯ ರಕ್ಷೆ ನಿಮಗೆ ಸಿಗುತ್ತದೆ.
1,10, 19, 28, ನೇ ತಾರೀಕಿನಲ್ಲಿ ಹುಟ್ಟಿದವರಿಗೆ ಅದ್ಬುತವಾಗಿದೆ ಚೆನ್ನಾಗಿದೆ ನಿಮ್ಮ ಬುದ್ಧಿಶಕ್ತಿ ಮೇಧಾಶಕ್ತಿಯನ್ನು ಉಪಯೋಗಿಸಿ ಮಾಡುವಂಥ ಎಲ್ಲಾ ಕೆಲಸ ಕಾರ್ಯಗಳಲ್ಲೂ ಯಶಸ್ಸು ಸಿಗುತ್ತದೆ.
2, 11, 20, 29 ನೇ ತಾರೀಕಿನಲ್ಲಿ ಹುಟ್ಟಿದವರಿಗೆ ತುಂಬ ಚುರುಕಾಗಿರು ತೀರ, ಎಲ್ಲಾ ಕೆಲಸಗಳನ್ನು ಮಾಡುವಂತಹ ಸಾಮರ್ಥ್ಯ ನಮಗಿರುತ್ತದೆ. ಒಂದು ಕೆಲಸ ಮುಗಿದ ಮೇಲೆ ನಂತರ ಇನ್ನೊಂದು ಕೆಲಸವನ್ನು ಕೈಗೆತ್ತಿಕೊಳ್ಳಿ ಒಟ್ಟಿಗೆ ಮೂರು ನಾಲ್ಕು ಕೆಲಸಗಳನ್ನು ಮಾಡಲು ಹೋಗಬೇಡಿ.
3, 12, 21, 30 ನೇ ತಾರೀಖಿನಂದು ಹುಟ್ಟಿದವರಿಗೆ 3ನೇ ತಾರೀಖಿನಂದು ಹುಟ್ಟಿದವರು ಜಡ್ಜ ಗಳು ಅಡ್ವೈಸರ್ ಟೀಚರಾಗಿದ್ದರೆ ಅದ್ಭುತವಾದಿನ ಏನನ್ನಾದರೂ ಗೆದ್ದುಕೊಂಡು ಬರುತ್ತೀರಾ, ಯಾರನ್ನಾದರೂ ಕನ್ವಿನ್ಸ್ ಮಾಡುವ ಶಕ್ತಿ ಇರುತ್ತದೆ.
4, 13, 22, 31 ನೇ ತಾರೀಖಿನಂದು ಹುಟ್ಟಿದವರಿಗೆ ಅಸಾಧ್ಯವಾದುದನ್ನು ಕೂಡ ಬೇಧಿಸಿಕೊಂಡು ಬರುವಂತಹ ಕ್ರಿಯೇಟಿವಿಟಿ ನಿಮ್ಮಲ್ಲಿ ಇಂದು ಇರುತ್ತದೆ. ಕ್ರಿಯೇಟಿವಿಟಿ ರಂಗದಲ್ಲಿ ಇದ್ದರೆ ಅದ್ಭುತವಾದ ಪ್ರಗತಿಯನ್ನು ಕಾಣುತ್ತೀರ.
5, 14, 23, ನೇ ತಾರೀಖಿನಂದು ಹುಟ್ಟಿದವರಿಗೆ ಅತಿಯಾದ ಲೆಕ್ಕಾಚಾರದಿಂದ ನಿಮಗೆ ಏರುಪೇರನ್ನು ತಂದಿಡುತ್ತದೆ.
6, 15, 24, ನೇ ತಾರೀಖಿನಂದು ಹುಟ್ಟಿದವರಿಗೆ ಅನುಕೂಲಕರ ದಿನ ಪೇಂಟಿಂಗ್ ಚಿತ್ರಕಲೆ ಕಸೂತಿ, ತುಂಬ ಮೈಭಾರ ಅಲ್ಲದ , ತುಂಬ ಬುದ್ಧಿ ಉಪಯೋಗಿಸಿ ಮಾಡುವ ಕೆಲಸ ವಲ್ಲದ, ಕ್ರಿಯೇಟಿವಿಟಿ ಇರುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ ಅದ್ಭುತವಾದ ಗೆಲುವು.
7, 16, 25 ನೇ ತಾರೀಖಿನಂದು ಹುಟ್ಟಿದವರಿಗೆ ವ್ಯವಹಾರ ಬದ್ಧವಾಗಿ ನಡೆದುಕೊಂಡು ಹೋಗುವುದು ಸರಿಯೇ ಅಥವಾ ಧರ್ಮ ಬದ್ಧವಾಗಿ ನಡೆದುಕೊಳ್ಳುವುದು ಸರಿಯೇ ಎಂಬ ಗೊಂದಲಕ್ಕೆ ಒಳಗಾಗುತ್ತೀರ. ವ್ಯವಹಾರ ಮಾಡುವಾಗ ಲೆಕ್ಕಾಚಾರವೇ ಮುಖ್ಯ.
8, 17, 26 ನೇ ತಾರೀಖಿನಂದು ಹುಟ್ಟಿದವರ ಕಮಿಷನ್ ಗೆ ಸಂಬಂಧಿಸಿದಂತೆ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ ಅದ್ಭುತ ವಾದ ದಿನ. ಅಡ್ವೈಸರ್ ಸೂಪರ್ ವೈಸರ್ ಚೀಟಿ ಲೇವಾದೇವಿ ಈ ಕೆಲಸ ಕಾರ್ಯಗಳಲ್ಲಿ ಇದ್ದರೆ ಅನುಕೂಲ ನೋಡುವಂಥ ದಿನ.
9, 18, 27ನೇ ತಾರೀಖಿನಂದು ಹುಟ್ಟಿದವರಿಗೆ ಸ್ವಲ್ಪ ತಲ್ಲಣದ ದಿನ. ಶಕ್ತಿ ಮತ್ತು ಬುದ್ಧಿಯನ್ನ ವಿಪರೀತವಾಗಿ ಉಪಯೋಗಿಸಲು ಹೋಗಿ ಗೊಂದಲಕ್ಕೊಳಗಾಗುತ್ತಿದ್ದೆ ಆದ್ದರಿಂದ ಬಾಲಾಜಿ ದೇವಸ್ಥಾನಕ್ಕೆ ಹೋಗಿ ದರ್ಶನ ಮಾಡಿ ಮಂಗಳಮುಖಿಯರು ಇಲ್ಲವೇ ಮಂಗಳ ಮುಖಿಯರಿಂದ ಅಕ್ಷತೆ ಆಕಿಸಿ ಕೊಂಡು ಆಶೀರ್ವಾದ ಪಡೆದುಕೊಳ್ಳಿ. ಬರುವಂತಹ ಎಲ್ಲಾ ಅಡ್ಡಿ ಆತಂಕಗಳು ದೂರವಾಗಿ ನೆಮ್ಮದಿಯಾಗಿರುತ್ತೀರಿ.
All Rights reserved Namma Kannada Entertainment.