ನೆಮ್ಮದಿಯ ದಾಂಪತ್ಯ ಜೀವನದ ರಹಸ್ಯ…

in ಕನ್ನಡ ಮಾಹಿತಿ/ಜ್ಯೋತಿಷ್ಯ 9,094 views

ಶಾರ್ವರಿ  ನಾಮ ಸಂವತ್ಸರೆ, ಉತ್ತರಾಯಣೆ, ಶಿಶಿರ ಋತು, ಮಾಘ ಮಾಸೆ, ಕೃಷ್ಣ  ಪಕ್ಷದ ಚತುರ್ಥಿ  ತಿಥಿ, ಚಿತ್ತಾ ನಕ್ಷತ್ರ, ವೃದ್ದಿ ಯೋಗ, ಬಾಲವ ಕರಣ,  3ನೇ ತಾರೀಕು ಮಾರ್ಚ್ 2021 ಮಂಗಳವಾರದ ಪಂಚಾಂಗ ಫಲವನ್ನು ರಾಶಿಗನುಗುಣವಾಗಿ ದಿನಭವಿಷ್ಯವನ್ನು ಶ್ರೀ ರವಿಶಂಕರ್ ಗುರೂಜಿರವರು ನೀಡಿದ್ದಾರೆ.

Advertisement

ನೆಮ್ಮದಿಯ ದಾಂಪತ್ಯ ಜೀವನದ ರಹಸ್ಯ ವೆಂದರೆ  ಗಂಡ ಹೆಂಡತಿಯನ್ನ ಸತ್ಯಭಾಮೆಯ ರೀತಿಯಲ್ಲಿ ಪ್ರೀತಿಸಬೇಕು. ಹೆಂಡತಿ ಗಂಡನನ್ನು ಕೃಷ್ಣನ ಹಾಗೆ ಪ್ರೀತಿಸಬೇಕು.  ಗಂಡನ ಒಂದು ಭಾಗವೇ  ಹೆಂಡತಿಯಾಗಿರುತ್ತಾಳೆ.  ಲೆಕ್ಕಾಚಾರದಲ್ಲಿ ಬದುಕಲು ಹೋಗಬೇಡಿ, ಪ್ರೀತಿಯಿಂದ, ಬದುಕು ನೆಮ್ಮದಿಯಾಗಿರುತ್ತದೆ ಕೊನೆಗೆ ಉಳಿಯುವುದು ಪ್ರೀತಿ ಒಂದೇ. ಸಂಗಾತಿಗೆ ಮೆಚ್ಚುಗೆ ಆಗುವ ರೀತಿಯಲ್ಲಿ ಮಾತನಾಡಿ ನಡೆದುಕೊಳ್ಳಿ ಆಗ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ.

Advertisement

Advertisement

ನಿಮ್ಮ ರಾಶಿ ಫಲದ  ಬಗ್ಗೆ ಮಾಹಿತಿ ಹೀಗಿದೆ :

Advertisement

ಮೇಷರಾಶಿ : ಸ್ವಲ್ಪ ಎಚ್ಚರಿಕೆಯಿಂದಿರಿ ಸ್ವಲ್ಪ ಕದಲಿಕೆ ವಾಹನದಿಂದ ಪೆಟ್ಟು ಎಳೆದಾಟ ವೇಗವಾಗಿ ಗಾಡಿಯನ್ನು ಓಡಿಸುವವರು ಸ್ವಲ್ಪ ಎಚ್ಚರಿಕೆಯಿಂದಿರಿ. ಯಾರಾದರೂ ಜೊತೆ ಜಗಳಕ್ಕೆ ಹೋಗುತ್ತೀರ,  ಸ್ಕಂದ ಕವಚ ಓದಿ.

ವೃಷಭ ರಾಶಿ : ಭೂಮಿ ಪಾತ್ರವು ಗರ್ಭಿಣಿ ಸ್ತ್ರೀಯರು ಅಣ್ಣ ತಮ್ಮಂದಿರ ಜಗಳದ ವಿಷಯದಲ್ಲಿ ಭೂಮಿ ವಿಚಾರದಲ್ಲಿ ಗರ್ಭಿಣಿ ಸ್ತ್ರೀಯರು ಮನೆಯಲ್ಲಿದ್ದರೆ ತುಂಬ ಎಚ್ಚರಿಕೆಯಿಂದ ಗಮನ ವಹಿಸಿ. ಮನೆಯಲ್ಲಿ ದೇವರ ದೀಪಕ್ಕೆ ಒಂದು ಹನಿಯಾದರೂ  ಹೊಂಗೆ ಎಣ್ಣೆಯನ್ನು ಹಾಕಿ ದೀಪ ಹಚ್ಚಿ ಒಳ್ಳೆಯದಾಗುತ್ತದೆ.

ಮಿಥುನ ರಾಶಿ : ಇಂದು ಯಾರ ಜತೆ ಜಗಳಕ್ಕೆ ಹೋಗದೆ ಸಮಾಧಾನವಾಗಿರಿ.  ನಿಮ್ಮ ಬುದ್ಧಿಶಕ್ತಿಯನ್ನು ಸದುಪಯೋಗಪಡಿಸಿಕೊಂಡು ಕೆಲಸವನ್ನ ಮಾಡಿಕೊಳ್ಳಿ ರಾಹು ರಕ್ಷಾಕವಚವನ್ನು ಬಲಗೈಗೆ ಹಾಕಿಕೊಳ್ಳಿ.

ಕರ್ಕಾಟಕ ರಾಶಿ : ಭೂಮಿ ವ್ಯವಹಾರ ಮನೆ ಹಣಕಾಸು  ಅಭಿವೃದ್ಧಿಯ ಸಂಕೇತ.

ಸಿಂಹ ರಾಶಿ : ಕನ್ ಸ್ಟ್ರಕ್ಷನ್ ಸಿವಿಲ್ ಇಂಜಿನಿಯರ್ ವಿಭಾಗದಲ್ಲಿರುವವರಿಗೆ ಅನುಕೂಲಕರ ದಿನ.

ಕನ್ಯಾ ರಾಶಿ : ಇಂದು ಸ್ವಲ್ಪ ಕೋಪಿಷ್ಟರಾಗಿರುತ್ತೀರ,   ಕೋಪದ ಕೈಗೆ ಬುದ್ಧಿಯನ್ನು ಕೊಡಬೇಡಿ ಸಮಾಧಾನವಾಗಿರಿ.

ತುಲಾ ರಾಶಿ : ಪ್ರಯಾಣದಲ್ಲಿ ಎಚ್ಚರಿಕೆ ಕುಟುಂಬದಲ್ಲಿ ಸ್ವಲ್ಪ ಕಿರಿಕಿರಿ ಆರೋಗ್ಯದ ಕಡೆ ಹೆಚ್ಚು ಗಮನ ಕೊಡಿ ಮೂಳೆಯ ಸೆಳೆತದ ತೊಂದರೆಗಳಿರುತ್ತವೆ ತುಪ್ಪವನ್ನು ಸೇವಿಸಿ.

ವೃಶ್ಚಿಕ ರಾಶಿ : ಸ್ವಲ್ಪ ಪರಿಶ್ರಮವಿರುತ್ತದೆ ಆದರೆ ಅವರ ಶ್ರಮಕ್ಕೆ ಮೀರಿದ ಫಲ ದೊರೆಯುತ್ತದೆ. ಎಲೆಕ್ಟ್ರಿಕ್ ವಸ್ತುಗಳ ರಿಪೇರಿ ಇರುತ್ತದೆ ಎಚ್ಚರಿಕೆ.

ಧನಸ್ಸು ರಾಶಿ : ಮನೆಯಲ್ಲಿ ತುಂಟು ಮಕ್ಕಳಿದ್ದರೆ ಸ್ವಲ್ಪ ಎಚ್ಚರಿಕೆಯಿಂದ ನೋಡಿಕೊಳ್ಳಿ. ಮಕ್ಕಳನ್ನು  ಯಾರ ಮುಂದೆಯೂ ತೆಗಳಬೇಡಿ ನಿಂದಿಸಬೇಡಿ. ಮಕ್ಕಳ ಬಗ್ಗೆ ಲೆಕ್ಕಾಚಾರ ಹಾಕಲು ಹೋಗಬೇಡಿ.

ಮಕರ ರಾಶಿ : ಎಣ್ಣೆ ಸ್ನಾನ ಮಾಡಿ ಕೋಳಿ ಕೀಲುಗಳಿಗೆ ಶಕ್ತಿ ಸಿಗುತ್ತದೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಉದ್ಭವಿಸುತ್ತವೆ.  ಸ್ವಲ್ಪ ಎಚ್ಚರಿಕೆಯಿಂದ ಶುದ್ಧವಾದ ಆಹಾರವನ್ನು ಸೇವಿಸಿ.

ಕುಂಭ ರಾಶಿ : ಅಸಾಧ್ಯವಾದ ಬಲ,  ತುಂಬಾ ಶಕ್ತಿ ಇರುತ್ತದೆ,  ಏನು ಬೇಕಾದರೂ ಸಾಧಿಸುವ ಶಕ್ತಿ ಇರುತ್ತದೆ. ನಿಮಗಿರುವ ಶಕ್ತಿಯನ್ನು ಸದುಪಯೋಗಪಡಿಸಿಕೊಳ್ಳಿ ದುರುಪಯೋಗ ಪಡಿಸಿಕೊಳ್ಳಬೇಡಿ.

ಮೀನ ರಾಶಿ : ಆತುರದ ನಿರ್ಧಾರಗಳಿಂದ ಪೆಟ್ಟು ತಿನ್ನುತ್ತಿರುವ ಎಕ್ಸ್ ಪರ್ಟ್ ಗಳನ್ನು ಕೇಳಿ ಆನಂತರ ಮುಂದಕ್ಕೆ ಹೆಜ್ಜೆ ಇಡಿ ನಿಧಾನವೇ ಪ್ರಧಾನ ಎಂಬಂತೆ ನಿಧಾನಿಸಿ.

All Rights reserved Namma  Kannada Entertainment.

Advertisement