ಪತ್ರಿಕೆ ಮಾರಾಟವನ್ನು ಉತ್ತೇಜಿಸಲು ಅರೆನಗ್ನವಾಗಿ ಪೋಸ್ ಕೊಟ್ಟ ಗಾಯಕಿ

in News 23 views

ಎಲ್ಲರಿಗೂ ತಿಳಿದಿರುವಂತೆ ಮುದ್ರಣ ಮಾಧ್ಯಮ ಮೂಲೆ ಗುಂಪಾಗಿದೆ. ಆದ್ದರಿಂದ ಇಂತಹ ಕಠಿಣ ಪರಿಸ್ಥಿತಿ ಎದುರಿಸಲು, ವೃತ್ತಪತ್ರಿಕೆ ಚಂದಾದಾರಿಕೆಯನ್ನು ಉತ್ತೇಜಿಸಲು ಹೈಮ್ (ಬ್ಯಾಂಡ್) ನ ಗಾಯಕಿ ಅರೆನಗ್ನವಾಗಿ ಪೋಸ್ ನೀಡಿದ್ದಾರೆ. ಜಗತ್ತಿನೆಲ್ಲೆಡೆ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಪೇಪರ್ ಮಾರಾಟ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಗಾಯಕಿ ತನ್ನ ದೇಹವನ್ನು ವೃತ್ತಪತ್ರಿಕೆಯ ಹಾಳೆಗಳಿಂದ ಮುಚ್ಚುವ ಮೂಲಕ ಯುಎಸ್ ನ ಪ್ರಮುಖ ದಿನಪತ್ರಿಕೆ ಎಲ್ ಎ ಟೈಮ್ಸ್ ಅನ್ನು ಬೆಂಬಲಿಸಲು ಬಯಸಿದ್ದಾರೆ.

Advertisement

 

Advertisement

 

Advertisement
View this post on Instagram

 

Advertisement

I Know Alone. 4/29

A post shared by HAIM (@haimtheband) on

 

“ನಿಮ್ಮ ಸ್ಥಳೀಯ ಪತ್ರಿಕೆಗೆ ಬೆಂಬಲ ನೀಡುವುದು ಪ್ರಾಮಾಣಿಕವಾಗಿ ಬಹಳ ಮುಖ್ಯ” ಎಂದು ಎಲ್ ಎ ಟೈಮ್ಸ್’ಗಾಗಿ ಕೆಲಸ ಮಾಡುವ ವರದಿಗಾರ ಹೇಳುತ್ತಾರೆ. ಇದೀಗ ಗಾಯಕಿಯ ಅನುಯಾಯಿಗಳು ಈ ಅರೆಬೆತ್ತಲೆ ಚಿತ್ರ ನೋಡಿ ವಿಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ.

 

 

ಪತ್ರಿಕೆಯನ್ನು ಬೆಂಬಲಿಸುವ ಕಾರಣಕ್ಕಾಗಿ ಗಾಯಕಿ ಈ ನಿರ್ಧಾರ ಕೈಗೆತ್ತಿಕೊಂಡಿದ್ದಕ್ಕಾಗಿ ಬಹಳಷ್ಟು ಬಳಕೆದಾರರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಎಲ್ಎ ಟೈಮ್ಸ್ ಅನ್ನು ಮನಮುಟ್ಟುವ ರೀತಿಯಲ್ಲಿ ಪ್ರಚಾರ ಮಾಡಿದ್ದಕ್ಕಾಗಿ ನಾನು ನಿಮಗೆ ಅಭಿನಂದಿಸುತ್ತೇನೆ. ಗಂಭೀರವಾಗಿ, ಹೆಣಗಾಡುತ್ತಿರುವ ಪತ್ರಿಕೋದ್ಯಮವನ್ನು ಉಳಿಸಲು ಇಂತಹ ಪ್ರಯತ್ನ ಕೈಗೊಂಡಿರುವುದಕ್ಕೆ ಧನ್ಯವಾದಗಳು” ಎಂದು ಅವರು ಬರೆದಿದ್ದಾರೆ.

 

 

‘ಹೈಮ್’ ಲಾಸ್ ಏಂಜಲೀಸ್ನ ಅಮೇರಿಕನ್ ಪಾಪ್ ರಾಕ್ ಬ್ಯಾಂಡ್. ಈ ಬ್ಯಾಂಡ್’ನಲ್ಲಿ ಮೂವರು ಸಹೋದರಿಯರಿದ್ದಾರೆ. ಎಸ್ಟೆ ಹೈಮ್, ಡೇನಿಯಲ್ ಹೈಮ್ ಮತ್ತು ಅಲಾನಾ ಹೈಮ್. ಇವರು ಸಂಗೀತ ಹಾಗೂ ಸಂಗೀತ ಉಪಕರಣಗಳನ್ನು ನುಡಿಸುವುದರಲ್ಲಿ ಪರಿಣಿತರಾಗಿದ್ದಾರೆ.

 

 

ಈ ಸಹೋದರಿಯರು ಸಂಗೀತ ಕುಟುಂಬದಲ್ಲಿ ಬೆಳೆದಿದ್ದು, ರಾಕಿನ್ಹೈಮ್ ಎಂಬ ಕವರ್ ಬ್ಯಾಂಡ್ನಲ್ಲಿ ಚಿಕ್ಕ ವಯಸ್ಸಿನಿಂದಲೇ ವಾದ್ಯಗಳನ್ನು ನುಡಿಸಲು ಪ್ರಾರಂಭಿಸಿದರು. ಮೂವರು ಸಹೋದರಿಯರು ಕ್ಯಾಲಿಫೋರ್ನಿಯಾದ ಸ್ಯಾನ್ ಫರ್ನಾಂಡೊ ಕಣಿವೆಯಲ್ಲಿ ಹುಟ್ಟಿ ಬೆಳೆದವರು ಮತ್ತು ಯಹೂದಿಗಳು. ಅವರ ಪೋಷಕರಾದ ಇಸ್ರೇಲಿ ಮೂಲದ ತಂದೆ ಮೊರ್ದೆಚೈ (ಮೋತಿ) ಮತ್ತು ಅವರ ತಾಯಿ ಡೊನ್ನಾ ಇಬ್ಬರೂ ಸಂಗೀತಗಾರರು.

 

 

View this post on Instagram

 

deli tour night 1 done thank u nyc and the best @sargesdeli ? any other delis u guys think we should come to?

A post shared by HAIM (@haimtheband) on

 

ಪ್ರೌ ಢ ಶಾಲೆಯಿಂದ ಪದವಿ ಪಡೆದ ನಂತರ, ಲಾರೆಲ್ ಕ್ಯಾನ್ಯನ್ನಲ್ಲಿ ನಡೆದ ಜಾಮ್ ಅಧಿವೇಶನದಲ್ಲಿ ಡೇನಿಯಲ್ ಅವರನ್ನು ಸಂಗೀತಗಾರ ಜೆನ್ನಿ ಲೂಯಿಸ್ ಗುರುತಿಸಿದರು. ಇದು ಡೇನಿಯಲ್ ಲೂಯಿಸ್ನ ಟೂರಿಂಗ್ ಬ್ಯಾಂಡ್ಗೆ ಸೇರಲು ಕಾರಣವಾಯಿತು. ಕೊನೆಗೆ ಡೇನಿಯಲ್ ತನ್ನ ಸಹೋದರಿಯರೊಂದಿಗೆ ತನ್ನದೇ ಆದ ಮ್ಯೂಸಿಕ್ ಬ್ಯಾಂಡ್ ಹುಟ್ಟುಹಾಕಬೇಕೆಂದು ನಿರ್ಧರಿಸಿದರು.

Advertisement
Share this on...