1500 ಕೆಜಿ ಶುದ್ಧ ಚಿನ್ನದಿಂದ ನಿರ್ಮಿಸಿರುವ ಈ ದೇವಾಲಯ ಹೇಗಿದೆ ಗೊತ್ತಾ ? ನಿರ್ಮಾಣಕ್ಕೆ ಎಷ್ಟು ಖರ್ಚಾಗಿದೆ ಗೊತ್ತಾ ?

in ಕನ್ನಡ ಮಾಹಿತಿ 27 views

ಭಾರತದಲ್ಲಿ ಅನೇಕ ಅದ್ಭುತ ದೇವಾಲಯಗಳಿವೆ. ಅನೇಕ ಕಾರಣಗಳಿಗೆ ಇವುಗಳು ಹೆಸರು ಮಾಡಿವೆ. ಇದೀಗ ನಾವು ಹೇಳುತ್ತಿರುವ ದೇವಾಲಯವು ಬೇರೆ ದೇವಾಲಯಗಳಿಗಿಂತ ಸ್ವಲ್ಪ ವಿಭಿನ್ನವಾಗಿದೆ. ಏಕೆಂದು ಮುಂದೆ ನೋಡೋಣ. ಅಂದಹಾಗೆ ಈ ದೇವಾಲಯವು ತಮಿಳುನಾಡಿನ ವೆಲ್ಲೂರಿನಿಂದ ಏಳು ಕಿಲೋಮೀಟರ್ ದೂರದಲ್ಲಿರುವ ತಿರುಮಲೈ ಕೋಡಿಯಲ್ಲಿದೆ. ಇದನ್ನು ಶ್ರೀ ಲಕ್ಷ್ಮಿ ನಾರಾಯಣಿ ದೇವಸ್ಥಾನ ಎಂದು ಕರೆಯಲಾಗುತ್ತದೆ. ಈ ದೇವಾಲಯದ ಬಗ್ಗೆ ಕೆಲವು ಆಸಕ್ತಿದಾಯಕ ಸಂಗತಿಗಳನ್ನು ಇಂದು ನಾವು ನಿಮಗೆ ಹೇಳಲಿದ್ದೇವೆ. ಈ ದೇವಾಲಯವು 1500 ಕೆಜಿ ಶುದ್ಧ ಚಿನ್ನದಿಂದ ಮಾಡಲ್ಪಟ್ಟಿದೆ ಎಂಬುದು ಬಹುತೇಕರಿಗೆ ತಿಳಿದಿಲ್ಲ. ಈ ಕಾರಣಕ್ಕಾಗಿ ಇದನ್ನು ದಕ್ಷಿಣ ಭಾರತದ ‘ಸುವರ್ಣ ದೇವಾಲಯ’ ಎಂದು ಕರೆಯಲಾಗುತ್ತದೆ. ಈ ದೇವಾಲಯವನ್ನು ಸುಮಾರು 100 ಎಕರೆ ಭೂಮಿಯಲ್ಲಿ ನಿರ್ಮಿಸಲಾಗಿದೆ. ಈ ದೇವಾಲಯವನ್ನು ನಿರ್ಮಿಸಲು ಸುಮಾರು ಏಳು ವರ್ಷಗಳು ಬೇಕಾಯ್ತು. ಇದರ ನಿರ್ಮಾಣಕ್ಕೆ ಸುಮಾರು 300 ಕೋಟಿ ರೂಪಾಯಿಗಳು ಖರ್ಚಾಗಿದೆ.

Advertisement

 

Advertisement

Advertisement

ಈ ದೇವಾಲಯವು ಹಗಲಿನ ಸಮಯದಲ್ಲಿ ಸೂರ್ಯನ ಬೆಳಕಿನಲ್ಲಿ ಸಾಕಷ್ಟು ಹೊಳೆಯುತ್ತದೆ. ವಿಶೇಷವಾಗಿ ರಾತ್ರಿಯ ಸಮಯದಲ್ಲಿ ದೀಪದ ಬೆಳಕಿನಲ್ಲಿ ದೇವಾಲಯದ ಚಿನ್ನದ ಹೊಳಪನ್ನು ನೋಡಲು ಅದ್ಭುತವಾಗಿರುತ್ತದೆ. ಅಷ್ಟೇ ಅಲ್ಲ, ದೇವಾಲಯದ ಆವರಣದಲ್ಲಿ ಸುಮಾರು 27 ಅಡಿ ಎತ್ತರದ ದೀಪದ ಸ್ತಂಭ ಕೂಡ ಇದೆ. ದೀಪದ ಸ್ತಂಭದಲ್ಲಿ ದೀಪ ಉರಿಯುವಾಗ ಚಿನ್ನದಿಂದ ಮಾಡಿದ ಈ ದೇವಾಲಯವು ತುಂಬಾ ಪ್ರಕಾಶಮಾನವಾಗಿ ಕಾಣಿಸುತ್ತದೆ. ದೇವಾಲಯದ ನಿರ್ಮಾಣಕ್ಕೆ ಹೆಚ್ಚು ಚಿನ್ನ ಖರ್ಚು ಮಾಡಿರುವುದರಿಂದ ದೇವಾಲಯದ ರಕ್ಷಣೆಗಾಗಿ 24 ಗಂಟೆಗಳ ಕಾಲ ಪೊಲೀಸ್ ಸಿಬ್ಬಂದಿ ಮತ್ತು ಕಾವಲುಗಾರರನ್ನು ನಿಯೋಜಿಸಲಾಗಿದೆ.

Advertisement

 


ಈ ಸುವರ್ಣ ದೇವಾಲಯವನ್ನು ವೆಲ್ಲೂರು ಮೂಲದ ಚಾರಿಟೇಬಲ್ ಟ್ರಸ್ಟ್ ಶ್ರೀ ನಾರಾಯಣಿ ಪೀಡಮ್ ನಿರ್ಮಿಸಿದೆ. ಇವರು ಶ್ರೀ ಶಕ್ತಿ ಅಮ್ಮ ಅವರನ್ನು ನಾರಾಯಣಿ ಅಮ್ಮ ಎಂದೂ ಕರೆಯುತ್ತಾರೆ. ಈ ದೇವಾಲಯದ ಬಳಿ ಶ್ರೀ ನಾರಾಯಣಿ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವೂ ಇದೆ. ಇದನ್ನು ‘ಶ್ರೀ ನಾರಾಯಣಿ ಪೀಡಂ’ ಚಾರಿಟೇಬಲ್ ಟ್ರಸ್ಟ್ ಸ್ವತಃ ನಡೆಸುತ್ತಿದೆ. ಆಗಸ್ಟ್ 24, 2007 ರಂದು, ಮೊದಲ ಬಾರಿಗೆ ಈ ದೇವಾಲಯವನ್ನು ದರ್ಶನಕ್ಕಾಗಿ ತೆರೆಯಲಾಯಿತು.

Advertisement
Share this on...