ಈ ಬಾರಿ ಸ್ಪರ್ಧಿಗಳಾಗಿ ದೊಡ್ಮನೆಗೆ ಯಾರೆಲ್ಲಾ ಕಾಲಿಡಲಿದ್ದಾರೆ ಎಂಬ ಕುತೂಹಲ ಇದೆ ಎಂದ ಚೈತ್ರಾ ವಾಸುದೇವನ್

in ಮನರಂಜನೆ 816 views

ಕಿರುತೆರೆ ವೀಕ್ಷಕರಿಗೆ ಈ ವಾರಾಂತ್ಯದಲ್ಲಿ ಹಬ್ಬವೋ ಹಬ್ಬ! ಅರೇ, ಯಾಕಂತೀರಾ, ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 8 ಇದೇ ಭಾನುವಾರ ಶುರುವಾಗಲಿದೆ. ಇಷ್ಟು ಸಮಯದಿಂದ ಚಾತಕಪಕ್ಷಿಯಂತೆ ಕಾಯುತ್ತಿರುವ ಕಿರುತೆರೆ ವೀಕ್ಷಕರಿಗೆ ಮುಂದಿನ ನೂರು ದಿನಗಳ ಕಾಲ ಮಜವೋ ಮಜಾ. ಅಂದ ಹಾಗೇ ಬಿಗ್ ಬಾಸ್ ನ ಹೊಸ ಸೀಸನ್ ಗೆ ಇನ್ನು ಕೇವಲ 4 ದಿನಗಳಷ್ಟೇ ಬಾಕಿಯಿದ್ದು ಅದ್ಯಾವಾ್ ಭಾನುವಾರ ಸಂಜೆ 6 ಗಂಟೆ ಆಗುತ್ತದೆ ಎಂದು ವೀಕ್ಷಕರು ಕಾಯುತ್ತಿದ್ದಾರೆ. ಎಲ್ಲದಕ್ಕಿಂತಲೂ ಮುಖ್ಯವಾದ ವಿಚಾರವೆಂದರೆ ಬಿಗ್ ಬಾಸ್ ಸೀಸನ್ 7 ರ ಸ್ಪರ್ಧಿ ಹಾಗೂ ನಿರೂಪಕಿ ಚೈತ್ರಾ ವಾಸುದೇವನ್ ಈ ಹೊಸ ಸೀಸನ್ ಬರುತ್ತಿರುವುದಕ್ಕೆ ತುಂಬಾನೇ ಉತ್ಸಾಹುಕರಾಗಿದ್ದಾರೆ. ಕೊರೋನಾ ವೈರಸ್ ಎಂಬ ಮಹಾಮಾರಿಯ ಹಾವಳಿಯಿಂದಾಗಿ ಲಾಕ್ ಡೌನ್ ಉಂಟಾಗಿತ್ತು. ಅದೇ ಲಾಕ್ ಡೌನ್, ಕ್ವಾರಂಟೈನ್ ಗಳ ಕಾರಣದಿಂದಾಗಿ ಕಳೆದ ವರ್ಷ ಬಿಗ್ ಬಾಸ್ ಸೀಸನ್ ಆರಂಭವಾಗಿರಲಿಲ್ಲ.

Advertisement

Advertisement

ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ಬಿಗ್ ಬಾಸ್ ಸೀಸನ್ 8 ರ ವಿನ್ನರ್ ಯಾರೆಂದು ತಿಳಿದಾಗುತ್ತಿತ್ತು. ಆದರೆ ಇದೀಗ ಸುದೀರ್ಘ ವಿರಾಮದ ನಂತರ ಬಿಗ್ ಬಾಸ್ ನ ಹೊಸ ಸೀಸನ್ ಆರಂಭವಾಗುತ್ತಿದೆ. ಈ ಹೊಸ ಸೀಸನ್ ನಲ್ಲಿ ಯಾರೆಲ್ಲಾ ಸ್ಪರ್ಧಿಗಳಾಗಿ ಭಾಗವಹಿಸುತ್ತಿದ್ದಾರೆ, ದೊಡ್ಮನೆಯೊಳಗೆ ಯಾರೆಲ್ಲಾ ಹೋಗುತ್ತಿದ್ದಾರೆ ಎಂಬುದನ್ನು ತಿಳಿಯಲು ಕುತೂಹಲಭರಿತರಾಗಿದ್ದಾರೆ ಚೈತ್ರಾ ವಾಸುದೇವನ್‌.

Advertisement

” ದೀರ್ಘ ಸಮಯದ ನಂತರ ಬಿಗ್ ಬಾಸ್ ನ ಹೊಸ ಸೀಸಮ್ ಆರಂಭವಾಗುತ್ತಿರುವುದಕ್ಕೆ ನನಗೆ ತುಂಬಾ ಸಂತೋಷವಾಗುತ್ತಿದೆ. ನನಗಾಗುತ್ತಿರುವ ಸಂತಸವನ್ನು ಕೇವಲ ಪದಗಳಲ್ಲಿ ವಿವರಿಸಲಂತೂ ಅಸಾಧ್ಯ. ಬಿಗ್ ಬಾಸ್ ನ ಮುಖ್ಯ ಕೇಂದ್ರ ಬಿಂದು ಕಿಚ್ಚ ಎಂದರೆ ತಪ್ಪಲ್ಲ. ಬಿಗ್ ಬಾಸ್ ನಲ್ಲಿ ಕಿಚ್ಚ ಸುದೀಪ್ ರ ನಿರೂಪಣೆ ನೋಡಿ ಕಣ್ತುಂಬಿಸಿಕೊಳ್ಳುವುದೇ ಒಂದು ರೀತಿಯ ಹಬ್ಬ” ಎಂದು ಹೇಳಿದ್ದಾರೆ ಚೈತ್ರಾ ವಾಸುದೇವನ್.

Advertisement

” ಎಲ್ಲದಕ್ಕಿಂತಲೂ ಮುಖ್ಯವಾದ ವಿಚಾರವೆಂದರೆ ಈ ಸೀಸನ್ ಸ್ಪರ್ಧಿಗಳ ಕುರಿತು ತಿಳಿಯಲು ನನಗೆ ಉತ್ಸಾಹ ಜಾಸ್ತಿ ಎಂದರೆ ತಪ್ಪಲ್ಲ. ಇನ್ನು ಕಳೆದ ಸೀಸನ್ ನಲ್ಲಿ ಇದ್ದಂತೆ ಈ ಸೀಸನ್ ನಲ್ಲಿಯೂ ನಿರೂಪಕರು ಇರಬಹುದು ಎಂದು ಹೇಳಿದ್ದಾರೆ. ಅದು ಯಾರು, ದೊಡ್ಮನೆಯೊಳಗೆ ಹೋಗುವ ಸುವರ್ಣಾವಕಾಶ ಪಡೆದ ಆ ಅದೃಷ್ಟವಂತ ಯಾರಿರಬಹುದೆಂದು ಎಂಬ ವಿಶೇಷ ಕುತೂಹಲ ನನಗೆ ಸಹಜವಾಗಿ ಇದೆ. ನಿರೂಪಕ ಕೋಟಾದಲ್ಲಿ ಗಾಜಿನ ಮನೆಗೆ ಯಾರು ತೆರಳಬಹುದು ಎಂದು ಕಾತರದಿಂದ ಕಾಯುತ್ತಿದ್ದೇನೆ” ಎಂದಿದ್ದಾರೆ ಚೈತ್ರಾ ವಾಸುದೇವನ್.

” ಇನ್ನು ಇದರ ಹೊರತಾಗಿ ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಗಳಿಸಿರುವ ಸ್ಪರ್ಧಿಯನ್ನು ಈ ಬಾರಿ ದೊಡ್ಮನೆಯಲ್ಲಿ ನಾನು ನಿರೀಕ್ಷೆ ಮಾಡುತ್ತಿದ್ದೇನೆ. ಹೌದು, ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಜನ ಪ್ರತಿಭಾವಂತರಿದ್ದಾರೆ. ಅವರು ಗುರುತಿಸಿಕೊಳ್ಳಲು ಅರ್ಹರಿದ್ದು ಅದಕ್ಕೆ ಮುಖ್ಯ ವೇದಿಕೆ ಬಿಗ್ ಬಾಸ್. ಅಂತವರಿಗೆ ಭಾಗವಹಿಸಲು ಅವಕಾಶ ಸಿಗಬೇಕು” ಎಂದು ಹೇಳಿದ್ದಾರೆ ಚೈತ್ರಾ ವಾಸುದೇವನ್.

Advertisement