ಬಿಡುಗಡೆಗೆ ಕಾದು ನಿಂತಿರುವ ಸ್ಟಾರ್ ನಟರ ಬಹುಕೋಟಿ ಬಜೆಟ್ ಚಿತ್ರಗಳು ಇವು…..!

in ಸಿನಿಮಾ 173 views

ಸದ್ಯಕ್ಕೆ ಸಿನಿಮಾಗೆ ಸಂಬಂಧಿಸಿದ ಯಾವುದೇ ಚಟುವಟಿಕೆಗಳು ನಡೆಯುತ್ತಿಲ್ಲ. ಸಿನಿಪ್ರಿಯರು ಟಿವಿಯಲ್ಲೇ ಸಿನಿಮಾಗಳನ್ನು ನೋಡುತ್ತಾ ಕಾಲ ಕಳೆಯುತ್ತಿದ್ದಾರೆ. ಕೆಲವರು ಮಾತ್ರ ತಮ್ಮ ಮೆಚ್ಚಿನ ನಟರ ಹೊಸ ಸಿನಿಮಾಗಳು ಯಾವಾಗ ಬಿಡುಗಡೆಯಾಗುತ್ತವೆ..? ಯಾವಾಗ ಲಾಕ್​​ಡೌನ್ ಮುಗಿಯುತ್ತದೆ..? ನಾವು ಯಾವಾಗ ಥಿಯೇಟರ್​​​​​ಗೆ ಹೋಗಿ ಸಿನಿಮಾ ನೋಡುತ್ತೇವೆಯೋ ಎಂದು ಕಾಯುತ್ತಾ ಕುಳಿತಿದ್ದಾರೆ. ಲಾಕ್​​ಡೌನ್​ ಇಲ್ಲದಿದ್ದರೆ ಇಷ್ಟೊತ್ತಿಗಾಗಲೇ ಸ್ಟಾರ್ ನಟರ ಬಹುಕೋಟಿ ನಿರ್ಮಾಣದ ಚಿತ್ರಗಳು ಬಿಡುಗಡೆಯಾಗಬೇಕಿತ್ತು. ಆದರೆ ಕೊರೊನಾ ತೊಂದರೆಯಿಂದ ಅದು ಸಾಧ್ಯವಾಗಿಲ್ಲ. ಈ ವರ್ಷ ಬಿಡುಗಡೆಗೆ ರೆಡಿಯಾಗಿರುವ ಹಾಗೂ ಶೂಟಿಂಗ್ ಹಂತದಲ್ಲಿರುವ ಸ್ಟಾರ್ ನಟರ ಹೈ ಬಜೆಟ್ ಸಿನಿಮಾಗಳು ಹೀಗಿವೆ.

Advertisement

 

Advertisement

Advertisement

 

Advertisement

ಉಮಾಪತಿ ನಿರ್ಮಾಣದಲ್ಲಿ ತರುಣ್ ಸುಧೀರ್ ನಿರ್ದೇಶನದ ‘ರಾಬರ್ಟ್’ ಚಿತ್ರ ಈಗಾಗಲೇ ಪೋಸ್ಟರ್​​ನಿಂದ ಸಖತ್ ಕ್ಯೂರಿಯಾಸಿಟಿ ಹುಟ್ಟಿಸಿದೆ. ದರ್ಶನ್ ಈ ಸಿನಿಮಾದಲ್ಲಿ ಉದ್ದ ಕೂದಲು ಬಿಟ್ಟು ಗ್ಯಾಂಗ್​​ಸ್ಟರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರಕ್ಕೆ 35 ಕೋಟಿ ರೂಪಾಯಿ ಖರ್ಚು ಮಾಡಲಾಗಿದ್ದು ವಿನೋದ್ ಪ್ರಭಾಕರ್ ಕೂಡಾ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಆಶಾ ಭಟ್ ದರ್ಶನ್​ ಜೊತೆ ಡ್ಯೂಯೆಟ್ ಹಾಡಲಿದ್ದಾರೆ. ಲಾಕ್​​ಡೌನ್​ ಇಲ್ಲದಿದ್ದರೆ ಈ ಸಿನಿಮಾ ಈಗಾಗಲೇ ಬಿಡುಗಡೆಯಾಗಬೇಕಿತ್ತು.

 

 

ಇನ್ನು ಈಗಾಗಲೇ ಶೂಟಿಂಗ್ ಆರಂಭವಾಗಿರುವ ‘ರಾಜವೀರಮದಕರಿ’ ನಾಯಕ ಚಿತ್ರವನ್ನು ಬಹಳ ವರ್ಷಗಳ ನಂತರ ರಾಜೇಂದ್ರ ಸಿಂಗ್ ಬಾಬು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರಕ್ಕಾಗಿ ರಾಕ್​​​ಲೈನ್ ವೆಂಕಟೇಶ್ ಬರೋಬ್ಬರಿ 75 ಕೋಟಿ ರೂಪಾಯಿ ಖರ್ಚು ಮಾಡುತ್ತಿದ್ದಾರಂತೆ. ಚಿತ್ರವನ್ನು ಕೇರಳ, ರಾಜಸ್ಥಾನ ಹಾಗೂ ಇನ್ನಿತರ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲು ಪ್ಲ್ಯಾನ್ ಮಾಡಲಾಗಿದೆ. ಕೊರೊನಾ ತೊಂದರೆ ಇಲ್ಲದಿದ್ದರೆ ಈಗಾಗಲೇ ಚಿತ್ರದ ಬಹುತೇಕ ಚಿತ್ರೀಕರಣ ಮುಗಿಯಬೇಕಿತ್ತು.

 

 

ಪವರ್​ ಸ್ಟಾರ್ ಪುನೀತ್ ರಾಜ್​ಕುಮಾರ್ ಅಭಿನಯದ ‘ಯುವರತ್ನ’ ಸಿನಿಮಾ ಇಷ್ಟೊತ್ತಿಗಾಗಲೇ ಬಿಡುಗಡೆಯಾಗಬೇಕಿತ್ತು. ಆದರೆ ಲಾಕ್​​​ಡೌನ್​​​ನಿಂದ ಚಿತ್ರ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ. ಚಿತ್ರದಲ್ಲಿ ಪುನೀತ್ ರಗ್ಬಿ ಆಟಗಾರನಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಟೀಸರ್ ಕೂಡಾ ಸಾಕಷ್ಟು ಕುತೂಹಲ ಹುಟ್ಟಿಸಿದೆ. ಸಂತೋಷ್ ಆನಂದ್​​ರಾಮ್ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಕೆಜಿಎಫ್ ಖ್ಯಾತಿಯ ವಿಜಯ್ ಕಿರಂಗದೂರು ಹೊಂಬಾಳೆ ಫಿಲ್ಮ್ ಬ್ಯಾನರ್ ಅಡಿ 30 ಕೋಟಿ ರೂಪಾಯಿ ಬಂಡವಾಳ ಹೂಡಿದ್ದಾರೆ. ಚಿತ್ರದಲ್ಲಿ ರಂಗಾಯಣ ರಘು, ಧನಂಜಯ್, ಸಯೇಷ ಸೈಗಲ್, ಪ್ರಕಾಶ್ ರೈ, ಸಾಯಿ ಕುಮಾರ್ ಹಾಗೂ ಇನ್ನಿತರರು ನಟಿಸಿದ್ದಾರೆ.

 

 

21 ಡಿಸೆಂಬರ್ 2018 ರಲ್ಲಿ ಬಿಡುಗಡೆಯಾದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್’ ಸಿನಿಮಾದ ಸೀಕ್ವೆಲ್ ತಯಾರಾಗುತ್ತಿದೆ. ಈ ಚಿತ್ರಕ್ಕೆ ವಿಜಯ್ ಕಿರಂಗದೂರು 75 ಕೋಟಿ ಸುರಿದಿದ್ದಾರಂತೆ. ಈ ಚಿತ್ರದಲ್ಲಿ ಬಾಲಿವುಡ್​ ಸ್ಟಾರ್​​​ಗಳಾದ ಸಂಜಯ್ ದತ್, ರವೀನಾ ಟಂಡನ್​​​​ ಹಾಗೂ ಇನ್ನಿತರ ದೊಡ್ಡ ನಟರ ದಂಡು ಇರುವುದರಿಂದ ಚಿತ್ರದ ಬಜೆಟ್ ಹೆಚ್ಚಾಗಿದೆಯಂತೆ. ಪ್ರಶಾಂತ್ ನೀಲ್ ನಿರ್ದೇಶನದ ಈ ಸಿನಿಮಾ ಈ ವರ್ಷ ಅಕ್ಟೋಬರ್ 23 ಕ್ಕೆ ಬಿಡುಗಡೆ ಎಂದು ಹೇಳಲಾಗಿತ್ತು. ಆದರೆ ಲಾಕ್​ಡೌನ್​ ಕಾರಣದಿಂದ ಬಿಡುಗಡೆ ದಿನಾಂಕ ಮುಂದಕ್ಕೆ ಹೋದರೂ ಹೋಗಬಹುದು ಎನ್ನಲಾಗುತ್ತಿದೆ.

 

 

ಕಿಚ್ಚ ಸುದೀಪ್ ಅಭಿನಯದ ‘ಕೋಟಿಗೊಬ್ಬ 3’ ಕೂಡಾ ಈಗಾಗಲೇ ಬಿಡುಗಡೆಯಾಗಬೇಕಿತ್ತು. ಆದರೆ ಚಿತ್ರದ ಕೆಲವೊಂದು ವಿವಾದಗಳ ಕಾರಣ ಬಿಡುಗಡೆ ಸ್ವಲ್ಪ ತಡವಾಗುತ್ತಿದೆ. ಚಿತ್ರದಲ್ಲಿ ಸುದೀಪ್ ಇಂಟರ್​​​​​ನ್ಯಾಷನಲ್ ಮಾಫಿಯಾ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದು ಚಿತ್ರದಲ್ಲಿ ಹಾಲಿವುಡ್ ಶೈಲಿಯ ಫೈಟ್ ಸೀನ್​​​​ಗಳನ್ನು ಅಳವಡಿಸಲಾಗಿದೆಯಂತೆ. ಈಗಾಗಲೇ ಬಿಡುಗಡೆಯಾಗಿರುವ ಟೀಸರ್ ನೋಡಿದರೆ ನಿಮಗೆ ಐಡಿಯಾ ಬರಬಹುದು. ಚಿತ್ರದ ಬಹುತೇಕ ಭಾಗ ವಿದೇಶದಲ್ಲಿ ಚಿತ್ರೀಕರಣವಾಗಿದೆ. ಚಿತ್ರಕ್ಕೆ ಸೂರಪ್ಪ ಬಾಬು 35 ಕೋಟಿ ರೂಪಾಯಿ ಖರ್ಚು ಮಾಡಿದ್ದು ಶಿವಕಾರ್ತಿಕ್ ನಿರ್ದೇಶನ ಮಾಡಿದ್ದಾರೆ.

 

 

ಇನ್ನು ಸುಮಾರು 2 ವರ್ಷಗಳ ಹಿಂದೆ ಚಿತ್ರೀಕರಣ ಆರಂಭವಾದ ಧ್ರುವಾ ಸರ್ಜಾ ಅಭಿನಯದ ‘ಪೊಗರು’ ಸಿನಿಮಾಗಾಗಿ ನಿರ್ಮಾಪಕ ಗಂಗಾಧರ್ 30 ಕೋಟಿ ರೂಪಾಯಿ ಖರ್ಚು ಮಾಡಿದ್ದಾರಂತೆ. ನಂದಕಿಶೋರ್ ಈ ಚಿತ್ರವನ್ನು ನಿರ್ದೇಶಿಸಿದ್ದು ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದಾರೆ. ಧ್ರುವಾ ಸರ್ಜಾ ಈ ಚಿತ್ರದಲ್ಲಿ 2 ಶೇಡ್​​ಗಳಲ್ಲಿ ನಟಿಸಿದ್ದಾರೆ. ಇದು ಆ್ಯಕ್ಷನ್ ಹಾಗೂ ಲವ್ ಸ್ಟೋರಿ ಹೊಂದಿರುವ ಸಿನಿಮಾ.

 

 

ಒಟ್ಟಿನಲ್ಲಿ ಕೊರೊನಾ ಭೀತಿಯಿಂದ ಚಿತ್ರೀಕರಣದ ಎಲ್ಲಾ ಕೆಲಸಗಳು ಬಂದ್ ಆಗಿದ್ದು ಎಲ್ಲಾ ಸಾಧಾರಣ ಸ್ಥಿತಿಗೆ ಬರಲು ಎಷ್ಟು ದಿನಗಳು ಕಾಯಬೇಕು ಗೊತ್ತಿಲ್ಲ. ಈ ಸಿನಿಮಾಗಳ ಜೊತೆಗೆ ಇನ್ನೂ ಸಾಕಷ್ಟು ಸಿನಿಮಾಗಳು ಬಿಡುಗಡೆಗೆ ಕಾಯುತ್ತಿವೆ. ಈ ಸಿನಿಮಾಗಳಲ್ಲಿ ಯಾವ ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಗಳಿಸಲಿವೆ ಯಾವ ಸಿನಿಮಾ 100 ಕೋಟಿ ಲಾಭ ಮಾಡಲಿವೆ ಎಂಬುದನ್ನು ತಿಳಿಯಲು ಲಾಕ್​​ಡೌನ್ ಮುಗಿಯುವವರೆಗೂ ಕಾಯಬೇಕು.

Advertisement
Share this on...