ನಾನು ಮದುವೆಯಾಗಲು ಇವರೇ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ: ಪ್ರಭಾಸ್

in ಮನರಂಜನೆ 16 views

ಪ್ರಭಾಸ್ ಅವರ ಮದುವೆ ವದಂತಿಗಳು ಕೇಳಿ ಬರುತ್ತಿರುವುದು ಇಂದು, ನಿನ್ನೆಯಿಂದಲ್ಲ. ಯಾವಾಗ ಪ್ರಭಾಸ್ ‘ಬಾಹುಬಲಿ’ ಚಿತ್ರದಲ್ಲಿ ನಟಿಸಿ ವಿಶ್ವದ ಗಮನಸೆಳೆದರೋ, ಅಂದಿನಿಂದ ನಟಿ ಅನುಷ್ಕಾ ಶೆಟ್ಟಿಯೊಂದಿಗೆ ಇವರ ಹೆಸರು ಕೇಳಬರತೊಡಗಿತು. ಈ ಬಗ್ಗೆ ಅನುಷ್ಕಾ ಮತ್ತು ಪ್ರಭಾಸ್ ಅವರಿಗೆ ಕೇಳಿದಾಗ ಇದೆಲ್ಲಾ ಸುಳ್ಳು, ನಾವಿಬ್ಬರೂ ಒಳ್ಳೆಯ ಸ್ನೇಹಿತರು ಎಂದು ವದಂತಿಗಳಿಗೆ ತೆರೆ ಎಳೆದರು. ಆದರೆ ಇದಾಗಿ ಕೆಲವು ದಿನಗಳು ಕಳೆಯುವುದರೊಳಗೆ ಮತ್ತೋರ್ವ ತೆಲುಗು ನಟಿ, ಮೆಗಾಸ್ಟಾರ್ ಚಿರಂಜೀವಿ ಸಹೋದರ ನಾಗಬಾಬು ಪುತ್ರಿ ನಿಹಾರಿಕಾ ಜೊತೆ ಪ್ರಭಾಸ್ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.

Advertisement

 

Advertisement

Advertisement

 

Advertisement

ಶೀಘ್ರದಲ್ಲೇ ನಿಹಾರಿಕಾ ಅವರೊಂದಿಗೆ ಪ್ರಭಾಸ್ ಮದುವೆಯಾಗಲಿದ್ದಾರೆ ಎಂಬ ಉಹಾಪೋಹಗಳು ಹರಿದಾಡುತ್ತಿದ್ದು, ಆದರೆ ಇದೀಗ ನಿಹಾರಿಕಾ ಸಹ ವಿವಾಹದ ವದಂತಿಯನ್ನು ನಿರಾಕರಿಸಿದ್ದಾರೆ. ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಬಹುತೇಕ ನಟ-ನಟಿಯರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದು, ನಿಹಾರಿಕಾ ಸಹ ಅಭಿಮಾನಿಗಳ ಜೊತೆ ಸಾಮಾಜಿಕ ಮಾಧ್ಯಮಗಳಲ್ಲಿ ಸಂವಹನ ನಡೆಸುವಾಗ ಅಭಿಮಾನಿಯೊಬ್ಬ ನೀವು ಪ್ರಭಾಸ್ ರನ್ನು ಮದುವೆಯಾಗುತ್ತಿದ್ದೀರಾ ಎಂದು ಕೇಳಿದ್ದಕ್ಕೆ ನಿಹಾರಿಕಾ ಇದೆಲ್ಲ ಸುಳ್ಳು ಸುದ್ದಿ ಎಂದು ಹೇಳಿದ್ದರು.

 

 

ಈ ಮೊದಲು ಪ್ರಭಾಸ್ ಅವರ ಚಿಕ್ಕಪ್ಪ ಕೃಷ್ಣಂ ರಾಜು ಅವರು ಪ್ರಭಾಸ್ ಸದ್ಯದಲ್ಲೇ ಮದುವೆಯಾಗಲಿದ್ದಾರೆ ಎಂಬ ಹೇಳಿಕೆ ನೀಡಿದ್ದರು. ಇಷ್ಟೆಲ್ಲಾ ಆದ ಮೇಲೆ ಪ್ರಭಾಸ್ ಸುಮ್ಮನಿರುತ್ತಾರೆಯೇ?, ಅವರೀಗ ಮದುವೆಯ ಬಗ್ಗೆ ಮಾತನಾಡಿದ್ದಾರೆ.

 

 

“ನಾನು ಮದುವೆಯ ವಿಚಾರ ಮಾತನಾಡುವುದಕ್ಕೆ ಹಿಂಜರಿಯುವುದಿಲ್ಲ. ಆದರೆ ನನ್ನ ಮದುವೆ ಯಾವಾಗ ಎಂಬುದು ನನಗೇ ಗೊತ್ತಿಲ್ಲ. ಆದರೆ ನಾನು ಅನುಷ್ಕಾ ಶೆಟ್ಟಿ ಅಥವಾ ನಿಹಾರಿಕಾ ಕೊನಿಡೆಲಾ ಜೊತೆ ಮದುವೆಯಾಗುತ್ತಿದ್ದೇನೆ ಎಂಬ ವರದಿಗಳು ಕೇಳಿಬರುತ್ತಲೇ ಇವೆ” ಎಂದು ನಕ್ಕರು. “ನನ್ನ ಕುಟುಂಬ ಸದಸ್ಯರಿಗಿಂತ ಹೆಚ್ಚಾಗಿ, ನಾನು ಮದುವೆಯಾಗಲು ಮಾಧ್ಯಮಗಳು ಆಸಕ್ತಿ ತೋರಿಸುತ್ತಿವೆ” ಎಂದು ಪ್ರಭಾಸ್ ಹೇಳಿದರು.

 

 

ಕಳೆದ ವರ್ಷ ಆಕ್ಷನ್ ಥ್ರಿಲ್ಲರ್ ‘ಸಾಹೋ’ದಲ್ಲಿ ಬಾಲಿವುಡ್ ಬೆಡಗಿ ಶ್ರದ್ಧಾ ಕಪೂರ್ ಜೊತೆ ಪರದೆ ಹಂಚಿಕೊಂಡಿದ್ದ ಪ್ರಭಾಸ್, ಪ್ರಸ್ತುತ ಪೂಜಾ ಹೆಗ್ಡೆ ಜೊತೆ ‘ಒ ಡಿಯರ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ರಾಧಾ ಕೃಷ್ಣ ಕುಮಾರ್ ನಿರ್ದೇಶಿಸುತ್ತಿದ್ದಾರೆ.

Advertisement
Share this on...