ಯಾವ ಫಾರಿನ್ ಸ್ಥಳಗಳಿಗೂ ಕಡಿಮೆ ಇಲ್ಲ ಭಾರತದಲ್ಲಿರುವ ಈ ಸ್ಥಳಗಳು !

in ಮನರಂಜನೆ 26 views

ನಮ್ಮಲ್ಲಿ ಬಹಳಷ್ಟು ಜನರಿಗೆ ಒಮ್ಮೆ ಫಾರಿನ್ ಟೂರ್ ಮಾಡಬೇಕೆಂಬ ಆಸೆ ಇರುತ್ತದೆ. ಆದರೆ ಅವರಿಗೆ ವಿದೇಶಗಳಿಗೆ ಪ್ರವಾಸ ಕೈಗೊಳ್ಳುವಷ್ಟು ಹಣವಿರುವುದಿಲ್ಲ. ಆದರೆ ಈ ಬಗ್ಗೆ ನೀವೀಗ ಹೆಚ್ಚು ಯೋಚನೆ ಮಾಡುವ ಅಗತ್ಯವಿಲ್ಲ ಎಂದೆನಿಸುತ್ತದೆ. ನಿಮ್ಮ ಬಜೆಟ್ ಕಡಿಮೆಯಾಗಿದ್ದರೆ ನಿರಾಶೆಗೊಳ್ಳುವ ಅಗತ್ಯವೂ ಇಲ್ಲ. ಯಾಕೆಂದರೆ ಇಂದು ನಾವು ಭಾರತದಲ್ಲಿ ವಿದೇಶಗಳಂತೆ ಇರುವ ಕೆಲವು ಸುಂದರವಾದ ಸ್ಥಳಗಳ ಬಗ್ಗೆ ನಿಮಗೆ ಮಾಹಿತಿ ನೀಡಲಿದ್ದೇವೆ. ಅವುಗಳು ಸ್ವಿಟ್ಜರ್ಲೆಂಡ್ ಅಥವಾ ಪ್ಯಾರಿಸ್ ನಂತಹ ವಿದೇಶದ ಸ್ಥಳಗಳಿಗೆ ಸಮನಾಗಿವೆ.

Advertisement

 

Advertisement


ಹಿಮಾಚಲ ಪ್ರದೇಶದ ಮಂಡಿಗೆ ಭೇಟಿ ನೀಡಿದರೆ ಅಲ್ಲಿ ನೀವು ಸ್ಕಾಟ್ಲೆಂಡ್ ತರಹವಿರುವ ಹಸಿರು ಬೆಟ್ಟಗಳನ್ನು ನೋಡಬಹುದು. ಇಲ್ಲಿನ ಪ್ರಾಕೃತಿಕ ಸೌಂದರ್ಯವನ್ನು ನೋಡಿದರೆ ನೀವು ಫ್ರೆಶ್ ಆಗುವುದಲ್ಲದೆ, ನಿಮಗೆ ವಿಶೇಷವಾದ ಎನರ್ಜಿ ಬರುತ್ತದೆ. ಹಾಗೆಯೇ ಜನರು ಸಾಮಾನ್ಯವಾಗಿ ರಜಾದಿನಗಳಿಗಾಗಿ ಸ್ವಚ್ಛ ಮತ್ತು ಸುಂದರವಾದ ದ್ವೀಪಕ್ಕೆ ಭೇಟಿ ನೀಡಲು ಇಷ್ಟಪಡುತ್ತಾರೆ. ಅದರಲ್ಲೂಜನರ ಮೊದಲ ಆಯ್ಕೆ ಥೈಲ್ಯಾಂಡ್ನ ಫಿ ಫಿ ದ್ವೀಪ. ಆದರೆ ಥೈಲ್ಯಾಂಡ್ಗೆ ಹೋಗಲು ನಿಮ್ಮ ಬಳಿ ಬಜೆಟ್ ಇಲ್ಲದಿದ್ದರೆ, ನೀವು ಭಾರತದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಕ್ಕೂ ಹೋಗಬಹುದು. ಇಲ್ಲಿನ ಪ್ರವಾಸಿ ಸ್ಥಳಗಳು ಮತ್ತು ಜಲ ಕ್ರೀಡೆಗಳು ಖಂಡಿತವಾಗಿಯೂ ನಿಮ್ಮ ಮನಸ್ಸನ್ನು ಗೆಲ್ಲುತ್ತವೆ.

Advertisement

 

Advertisement


ಅಂತೆಯೇ ಐಸ್ಲ್ಯಾಂಡ್’ನ ಜೋಕುಲ್ಸರ್ಲಾನ್ ಸರೋವರವಕ್ಕೆ ಅನೇಕ ಜನರು ಭೇಟಿ ನೀಡುತ್ತಾರೆ, ಆದರೆ ಭಾರತದ ಸಿಕ್ಕಿಂನಲ್ಲಿರುವ ಗುರುಡೋಂಗ್ಮಾರ್ ಸರೋವರವು 17,100 ಅಡಿ ಎತ್ತರದಲ್ಲಿದ್ದು, ವಿಶ್ವದ ಅತಿ ಎತ್ತರದ ಸರೋವರಗಳಲ್ಲಿ ಒಂದಾಗಿದೆ ಎಂಬುದು ಬಹುಶಃ ಅನೇಕರಿಗೆ ತಿಳಿದಿಲ್ಲ. ಈ ಸ್ಥಳದ ಪ್ರಾಕೃತಿಕ ಸೌಂದರ್ಯವನ್ನು ನೋಡಲು ಜನರು ವಿದೇಶದಿಂದ ಬಂದು ಸಾಕಷ್ಟು ಹೊಗಳುತ್ತಾರೆ.

 

ಇನ್ನು ಕೇರಳದ ಮುನ್ನಾರ್’ನ ಸೌಂದರ್ಯದ ಬಗ್ಗೆ ಮಾತನಾಡುವುದಾದರೆ, ಒಮ್ಮೆ ನೀವು ಮುನ್ನಾರ್ ನೋಡಿದರೆ ಮತ್ತೆ ಮತ್ತೆ ಅಲ್ಲಿಗೆ ಹೋಗಲು ಬಯಸುತ್ತೀರಿ. ಮಲೇಷ್ಯಾದ ಉದ್ಯಾನಗಳಿಗಿಂತ ಹೆಚ್ಚು ಸುಂದರವಾದ ಅನೇಕ ಆಕರ್ಷಕ ಚಹಾ ತೋಟಗಳು ಮುನ್ನಾರ್’ನಲ್ಲಿವೆ. ಚಹಾ ತೋಟಗಳನ್ನು ನೋಡಲು ನೀವು ಮಲೇಷ್ಯಾಕ್ಕೆ ಹೋಗಬೇಕೆಂದು ಕನಸು ಕಾಣುತ್ತಿದ್ದರೆ, ನೀವು ಇದನ್ನು ಕೇರಳದಲ್ಲಿಯೇ ನೋಡಬಹುದು. ನೀವು ಆಸ್ಟ್ರೇಲಿಯಾದಲ್ಲಿರುವ ಪ್ರಾಕೃತಿಕ ಸೌಂದರ್ಯವನ್ನು ನೋಡಲು ಬಯಸಿದರೆ ಮತ್ತು ನಿಮ್ಮ ಬಜೆಟ್ ಕಡಿಮೆ ಇದ್ದರೆ, ಅದೇ ತರಹವಿರುವ ಭಾರತದಲ್ಲಿರುವ ಅನೇಕ ಸ್ಥಳಗಳ ಬಗ್ಗೆ ನಾವಿಲ್ಲಿ ಈಗಾಗಲೇ ಹೇಳಿದ್ದೇವೆ.

Advertisement
Share this on...