ಕೊರೊನಾ ಲಸಿಕೆ ತಯಾರಿಸುವಲ್ಲಿ ಮೊದಲ ಸ್ಥಾನದಲ್ಲಿದೆ ಈ ದೇಶ..!

in ಕನ್ನಡ ಆರೋಗ್ಯ/ಕನ್ನಡ ಮಾಹಿತಿ 392 views

ವಿಶ್ವದ ಅನೇಕ ದೇಶಗಳು ಕೊರೊನಾ ರೋಗಕ್ಕೆ ಲಸಿಕೆ ಕಂಡು ಹಿಡಿಯಲು ಶ್ರಮಿಸುತ್ತಿವೆ. ಕೊರೊನಾ ಇಡೀ ಜಗತ್ತಿಗೆ ಭೀತಿ ತದ್ದೊಡ್ಡಿ ವರ್ಷವಾಗುತ್ತಾ ಬಂದರು, ಅದಕ್ಕೆ ಸೂಕ್ತ ಲಸಿಕೆ ಲಭ್ಯವಾಗಿಲ್ಲ. ಜಗತ್ತಿನ ಅನೇಕ ವಿಶ್ವವಿದ್ಯಾಲಯಗಳು, ಸಂಶೋಧನ ಸಂಸ್ಥೆಗಳು ಲಸಿಕೆ ಕಂಡು ಹಿಡಿಯಲು ಹಗಲಿರುಳು ಪರಿಶ್ರಮ ಪಡುತ್ತಿವೆ. ಆದರೆ ನಿರೀಕ್ಷಿತ ಫಲಿತಾಂಶ ಮಾತ್ರ ಇದುವರೆಗೂ ಲಭ್ಯವಾಗಿಲ್ಲ. ಅನೇಕ ದೇಶಗಳಲ್ಲಿ ಎರಡು ಮತ್ತು ಮೂರನೇಯ ಹಂತದ ಪರೀಕ್ಷೆ ನಡೆಯುತ್ತಿದೆ. ಆದರೆ ಅಂತಿಮ ಹಂತಕ್ಕೆ ಯಾವುದೇ ಲಸಿಕೆ ಬಂದು ತಲುಪಿಲ್ಲ. ಇನ್ನು ರಷ್ಯಾದ ಲಸಿಕೆ ಹೊರತುಪಡಿಸಿ ಉಳಿದ ದೇಶಗಳ ಕೊರೊನಾ ಲಸಿಕೆ ಯಾವಾಗ ಬರುತ್ತೆ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ರಷ್ಯಾ ತಯಾರಿಸಿರುವ ಲಸಿಕೆಯನ್ನು ವಿಶ್ವ ಆರೋಗ್ಯ ಸಂಸ್ಥೆ ಮಾನ್ಯ ಮಾಡಿಲ್ಲ. ಈ ಲಸಿಕೆಯಿಂದ ಅನೇಕ ಅಡ್ಡ ಪರಿಣಾಮಗಳು ಉಂಟಾಗುತ್ತವೆ ಎನ್ನಲಾಗುತ್ತಿದೆ. ರಷ್ಯಾ ದೇಶವೂ ಕೂಡಾ ತನ್ನ ಲಸಿಕೆಯ ಕುರಿತು ಜಗತ್ತಿಗೆ ಸೂಕ್ತ ಮಾಹಿತಿಯನ್ನು ಒದಗಿಸಿಲ್ಲ. ಹೀಗಾಗಿಯೇ ಜಗತ್ತಿನ ಇತರ ರಾಷ್ಟ್ರಗಳು ರಷ್ಯಾ ತಯಾರಿಸಿರುವ ಲಸಿಕೆಯನ್ನು ಅನುಮಾನದಿಂದಲೇ ನೋಡುತ್ತಿವೆ. ಇಲ್ಲಿಯವರೆಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಅವರ ಎಲ್ಲಾ ಹಿರಿಯ ಅಧಿಕಾರಿಗಳು ಲಸಿಕೆ ಪಡೆದಿದ್ದಾರೆ ಎಂಬ ಮಾಹಿತಿ ಇದ್ದರು, ರಷ್ಯಾವನ್ನು ಇತರ ದೇಶಗಳು ನಂಬುತ್ತಿಲ್ಲ.

Advertisement

 

Advertisement

Advertisement

ಸದ್ಯ ಜಗತ್ತಿನಾದ್ಯಂತ ೧೫೪ ಲಸಿಕೆಗಳ ಮೇಲೆ ಕ್ಲಿನಿಕಲ್ ಪ್ರಯೋಗಗಳು ನಡೆಯುತ್ತಿವೆ. ಅಚ್ಚರಿ ಎಂದರೆ ಜಗತ್ತಿಗೆ ಕೊರೊನಾ ರೋಗವನ್ನು ಹಬ್ಬಿಸಿದೆ ಎಂಬ ಆರೋಪ ಹೊತ್ತಿರುವ ಚೀನಾ ಈ ಲಸಿಕೆ ಕಂಡು ಹಿಡಿಯುವ ಸ್ಪರ್ಧೆಯಲ್ಲೂ ಮುಂಚೂಣಿಯಲ್ಲಿದೆ. ಕೊರೊನಾ ಲಸಿಕೆ ಪ್ರಯೋಗ ಸ್ಪರ್ಧೆಯಲ್ಲಿ ಚೀನಾದ ಮೂರು ಕಂಪನಿಗಳು ಸದ್ಯ ಮುಂಚೂಣಿಯಲ್ಲಿವೆ. ಚೀನಾದ ಸಿನೋವಾಕ್ (ಶಾಂಘೈ) ಸಿನೋಫಾರ್ಮ್ (ವುಹಾನ್) ಮತ್ತು ಸಿನೋಫಾರ್ಮ್ (ಬೀಜಿಂಗ್) ಮೂರು ಕಂಪನಿಗಳು ಕೊರೊನಾ ಲಸಿಕೆ ಕಂಡು ಹಿಡಿಯುವಲ್ಲಿ ಸದ್ಯ ಮೂರನೇಯ ಹಂತದ ಪ್ರಯೋಗ ನಡೆಸುತ್ತಿವೆ. ಚೀನಾದ ಈ ಮೂರು ಕಂಪನಿಗಳ ಲಸಿಕೆಯ ಯಾವುದೇ ಪ್ರಮುಖ ಅಡ್ಡಪರಿಣಾಮಗಳು ಇಲ್ಲಿಯವರೆಗೆ ಬಹಿರಂಗಗೊಂಡಿಲ್ಲ.

Advertisement

ಇನ್ನು ಜಗತ್ತಿನಾದ್ಯಂತ ಚೀನಾದ ಲಸಿಕೆಯ ಜೊತೆಗೆ, ಜಾನ್ಸನ್ ಮತ್ತು ಜಾನ್ಸನ್ (ಯುಎಸ್) ಮತ್ತು ನೊವಾವಾಕ್ಸನ್ (ಯುಎಸ್) ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಅಸ್ಟ್ರಾಜೆನೆಕಾ (ಯುಕೆ), ಮಾಡರ್ನಾ (ಯುಎಸ್), ಕ್ಯಾನ್ಸಿನೊ ಬಯೋಲಾಜಿಕಲ್ (ಚೀನಾ), ಅಭಿವೃದ್ಧಿಪಡಿಸಿದ ಲಸಿಕೆ ಸಹ ಕ್ಲಿನಿಕಲ್ ಪ್ರಯೋಗದ ಹಂತದಲ್ಲಿದೆ. ಭಾರತದಲ್ಲಿಯೂ ಕೂಡಾ ಕೊರೊನಾ ರೋಗಕ್ಕೆ ಲಸಿಕೆ ಕಂಡು ಹಿಡಿಯಲು ಕೆಲ ಸಂಶೋಧನಾ ಸಂಸ್ಥೆಗಳು ಸಂಶೋಧನೆ ನಡೆಸುತ್ತಿವೆ. ಭಾರತದ ಲಸಿಕೆ ಪ್ರಯೋಗ ಕೂಡಾ ಮೂರನೇಯ ಹಂತ ತಲುಪಿದೆ. ವಿಜ್ಞಾನಿಗಳ ಪ್ರಕಾರ ಮುಂದಿನ ವರ್ಷದ ವೇಳೆಗೆ ಭಾರತ ತನ್ನದೇ ಆದ ಕೊರೊನಾ ಲಸಿಕೆ ತಯಾರಿಸಬಹುದು ಎನ್ನಲಾಗುತ್ತಿದೆ. ಈ ನಿಟ್ಟಿನಲ್ಲಿ ಲಸಿಕೆ ವಿತರಣೆಗೆ ಕೇಂದ್ರ ಸರ್ಕಾರ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ.

Advertisement