ಉಪೇಂದ್ರ ತೆಲುಗು ಚಿತ್ರಗಳಲ್ಲಿ ನಟಿಸದಿರುವುದಕ್ಕೆ ಇದೇ ಮುಖ್ಯ ಕಾರಣನಾ !

in ಸಿನಿಮಾ 78 views

ಸ್ಯಾಂಡಲ್ ವುಡ್’ನ ರಿಯಲ್ ಸ್ಟಾರ್ ಉಪೇಂದ್ರ ಅವರು ಟಾಲಿವುಡ್’ನಲ್ಲಿ ಅಲ್ಲು ಅರ್ಜುನ್ ಅವರ ಜೊತೆ ‘ಸನ್ ಆಫ್ ಸತ್ಯಮೂರ್ತಿ’ ಚಿತ್ರದಲ್ಲಿ ಕಾಣಿಸಿಕೊಂಡರು. ಆದರೆ ಆ ಚಿತ್ರದ ನಂತರ ಅವರು ಯಾವುದೇ ತೆಲುಗು ಚಿತ್ರಗಳಲ್ಲಿ ನಟಿಸಿಲ್ಲ. ಇತ್ತೀಚಿನ ಸಂದರ್ಶನದಲ್ಲಿ ಈ ಬಗ್ಗೆ ಕೇಳಿದಾಗ, ಯಾವುದೇ ತೆಲುಗು ಯೋಜನೆಗಳಿಗೆ ಸಹಿ ಮಾಡದಿರುವುದಕ್ಕೆ ಕಾರಣವನ್ನು ಉಪೇಂದ್ರ ಅವರು ಬಹಿರಂಗಪಡಿಸಿದ್ದಾರೆ. ಕಥೆಯಲ್ಲಿ ಉಪೇಂದ್ರ ಪಾತ್ರಕ್ಕೆ ಸಾಕಷ್ಟು ಪ್ರಾಮುಖ್ಯತೆ ಇದ್ದದರಿಂದ ‘ಸನ್ ಆಫ್ ಸತ್ಯಮೂರ್ತಿ’ ಚಿತ್ರದಲ್ಲಿ ನಟಿಸುವುದಕ್ಕೆ ತುಂಬಾ ಇಷ್ಟಪಟ್ಟೆ ಎಂದು ಉಪೇಂದ್ರ ಟಾಲಿವುಡ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆದ್ದರಿಂದ, ಕಥೆಯಲ್ಲಿ ಅವರ ಪಾತ್ರಕ್ಕೆ ಪ್ರಾಮುಖ್ಯತೆ ಇರುವ ಅದೇ ರೀತಿಯ ಸ್ಕ್ರಿಪ್ಟ್ಗಳಿಗಾಗಿ ಕಾಯುತ್ತಿದ್ದಾರಂತೆ. ಹಾಗಾಗಿ ಟಾಲಿವುಡ್’ಗೆ ಸರಿಯಾದ ಸ್ಕ್ರಿಪ್ಟ್ನೊಂದಿಗೆ ಪುನಃ ತೆರಳಲು ಉಪ್ಪಿ ಬಯಸಿದ್ದಾರಂತೆ.

Advertisement

 

Advertisement

Advertisement

ಖಳನಾಯಕನ ಪಾತ್ರಕ್ಕಾಗಿ ಅನೇಕ ಟಾಲಿವುಡ್ ನಿರ್ಮಾಪಕರು ತಮ್ಮನ್ನು ಸಂಪರ್ಕಿಸುತ್ತಿದ್ದಾರೆ ಎಂದು ಹೇಳಿರುವ ಉಪೇಂದ್ರ, ವರುಣ್ ತೇಜ್ ನಟನೆಯ ‘ಬಾಕ್ಸರ್’ ಚಿತ್ರದಲ್ಲಿ ಮುಖ್ಯ ಪಾತ್ರ ವಹಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ. ತೆಲುಗು ಚಿತ್ರಗಳಲ್ಲದೆ, ಉಪೇಂದ್ರ ಕೈಯಲ್ಲಿ ಹಲವಾರು ಕನ್ನಡದ ಪ್ರಾಜೆಕ್ಟ್’ಗಳು ಇವೆ. ಉಪೇಂದ್ರ ಮುಂದಿನ ಚಿತ್ರ, ‘ಹೋಂ ಮಿನಿಸ್ಟರ್’ ನಿರ್ಮಾಣದ ನಂತರದ ಹಂತದಲ್ಲಿದೆ. ಶ್ರೀ ಹರಿ ನಾನು ನಿರ್ದೇಶನದ ‘ಹೋಂ ಮಿನಿಸ್ಟರ್’ ಪೊಲಿಟಿಕಲ್ ಥ್ರಿಲ್ಲರ್ ಚಿತ್ರವಾಗಿದೆ. ಪೂರ್ಣ ನಾಯ್ಡು ಚಿತ್ರ ನಿರ್ಮಾಣ ಮಾಡುತ್ತಿದ್ದು, ಉಪೇಂದ್ರಗೆ ಜೋಡಿಯಾಗಿ ವೇದಿಕಾ ನಟಿಸುತ್ತಿದ್ದಾರೆ.

Advertisement

 

‘ರವಿಚಂದ್ರ’ ಎಂಬ ಮತ್ತೊಂದು ಚಿತ್ರದಲ್ಲಿಯೂ ಉಪೇಂದ್ರ ನಟಿಸುತ್ತಿದ್ದು, ಇದು ತೆಲುಗು ಚಿತ್ರ ‘ಬಲುಪು’ ರೀಮೇಕ್ ಆಗಿದೆ. ರೊಮ್ಯಾಂಟಿಕ್ ಆಕ್ಷನ್ ಎಂಟರ್ಟೈನರ್ ಆದ ಈ ಚಿತ್ರವನ್ನು ಓಂ ಪ್ರಕಾಶ್ ರಾವ್ ನಿರ್ದೇಶಿಸುತ್ತಿದ್ದು, ಕನಕಪುರ ಶ್ರೀನಿವಾಸ್ ನಿರ್ಮಿಸುತ್ತಿದ್ದಾರೆ. ಅರ್ಜುನ್ ಜನ್ಯಾ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಚಿತ್ರದಲ್ಲಿ ಉಪೇಂದ್ರ, ರವಿಚಂದ್ರನ್, ಶಾನ್ವಿ ಶ್ರೀವತ್ಸವ, ನಿಮಿಕಾ ರತ್ನಾಕರ್, ಪ್ರದೀಪ್ ರಾವತ್, ಸಾಧು ಕೋಕಿಲಾ, ರಂಗಾಯಣ ರಘು, ಸುಧಾ ಬೆಳವಾಡಿ ಸೇರಿದಂತೆ ದೊಡ್ಡ ತಾರಬಳಗವೇ ಇದೆ.

 

ಅಷ್ಟೇ ಅಲ್ಲ, ಮೌರ್ಯ ನಿರ್ದೇಶನದ ಬುದ್ಧಿವಂತ 2, ಆರ್ .ಚಂದ್ರು ನಿರ್ದೇಶನದ ಕಬ್ಜಾ ಚಿತ್ರದಲ್ಲಿ ಉಪೇಂದ್ರ ಅಭಿನಯಿಸುತ್ತಿದ್ದು , ಹೆಸರಿಡದ ಮತ್ತೊಂದು ಚಿತ್ರ ಶೂಟಿಂಗ್ ಹಂತದಲ್ಲಿದೆ. ಹಾಗಾಗಿ ಯಾವುದೇ ತೆಲುಗು ಯೋಜನೆಗಳಿಗೆ ಸಹಿ ಮಾಡಲಿಲ್ಲ ಎಂಬ ಕಾರಣವನ್ನೂ ಸಂದರ್ಶನದಲ್ಲಿ ತಿಳಿಸಿದ್ದಾರೆ ಉಪೇಂದ್ರ.

Advertisement
Share this on...