ಈ ರಾಶಿಯವರು ಈ ದೀಪವನ್ನು ಹಚ್ಚಿದರೆ ಎಂತಹ ದೋಷವಿದ್ದರೂ ತೆಗೆದುಹಾಕುತ್ತದೆ

in ಜ್ಯೋತಿಷ್ಯ 4,059 views

ಶ್ರೀ ಶಾರ್ವರಿ ನಾಮ ಸಂವತ್ಸರೆ, ದಕ್ಷಿಣಾಯಣೆ, ಶರತ್  ಋತು,  ಅಧಿಕ ಮಾಸೆ,  ಕೃಷ್ಣ  ಪಕ್ಷದ ಅಮಾವಾಸ್ಯೆ ತಿಥಿ,  ಹಸ್ತಾ ನಕ್ಷತ್ರ,   ಐಂದ್ರ ಯೋಗ,  ಚತುಷ್ಪಾದ ಕರಣ, ಅಕ್ಟೋಬರ್16  ಶುಕ್ರವಾರದ ಪಂಚಾಂಗ ಫಲವನ್ನು ಶ್ರೀ ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ. ಇಂದು ಅಮೃತ ಕಾಲ ಬೆಳ್ಳಗ್ಗೆ 9 ಗಂಟೆ 36 ನಿಮಿಷದಿಂದ 11 ಗಂಟೆ 7 ನಿಮಿಷದವರೆಗೂ ಇದೆ.

Advertisement

ಇಂದು ವಿಶ್ವ ಆಹಾರ ದಿನ. ಅನ್ನ ಬ್ರಹ್ಮ ಪರಬ್ರಹ್ಮ ಸ್ವರೂಪಂ. ಅನ್ನವಿಲ್ಲದೇ ನಾವಿಲ್ಲ,  ಅನ್ನಕ್ಕೆ ಗೌರವ ಕೊಡದೆ ಇರುವ ವ್ಯಕ್ತಿ ಎಂದೂ ಬದುಕುವುದಿಲ್ಲ.  ಎಂತಹ ಅರಸನಾದರೂ ಭಿಕ್ಷುಕನಾದರೂ ಮೊದಲು ಅನ್ನಕ್ಕೆ ಗೌರವವನ್ನು ಕೊಡಬೇಕು. ಪಾರ್ವತಿಯನ್ನು ದುರ್ಗೆಯನ್ನು ನಾವು ಶಕ್ತಿ ಎಂದು ಕರೆಯುತ್ತೇವೆ ಕಾರಣ ಆ ಶಕ್ತಿ ಬರುವುದು ಅನ್ನದಿಂದ ಆದ್ದರಿಂದಲೇ ದೇವಿಗೆ ಅನ್ನಪೂರ್ಣೇಶ್ವರಿ ಎಂದು ಕೂಡ ಕರೆಯುತ್ತೇವೆ. ಅನ್ನವಿಲ್ಲದೇ ಜ್ಞಾನ ಬುದ್ಧಿ ಏನು ಓಡುವುದಿಲ್ಲ,  ಅನ್ನಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ.

Advertisement

Advertisement

ನಿಮ್ಮ ರಾಶಿ ಫಲದ  ಬಗ್ಗೆ ಮಾಹಿತಿ ಹೀಗಿದೆ :

Advertisement

ಮೇಷ ರಾಶಿ : ಚಂದ್ರ ಚಂದ್ರ ನಕ್ಷತ್ರದಲ್ಲಿ ಇರುವುದರಿಂದ ಚೆನ್ನಾಗಿದೆ. ದೂರದ ಸ್ಥಳದಿಂದ ವ್ಯಾಪಾರ ವ್ಯವಹಾರಗಳ ಬಗ್ಗೆ ತಲೆ ಕೆಡಿಸಿಕೊಂಡಿದ್ದರೆ ಸರ್ಪ್ರೈಸ್ ಗುಡ್ ನ್ಯೂಸ್ ಇದೆ. ನಿಮ್ಮ ಆರೋಗ್ಯದ ಕಡೆ ಸ್ವಲ್ಪ ಗಮನ ಕೊಡಿ.

ವೃಷಭ ರಾಶಿ : ಅತ್ತೆ ಸೊಸೆ ಅತ್ತೆ ಮಾವ ಗಂಡ ಗುಂಡಿ ಇರುತ್ತದೆ ಅದನ್ನು ತುಂಬ ತಲೆ ಕೆಡಿಸಿಕೊಳ್ಳಬೇಡಿ.

ಮಿಥುನ ರಾಶಿ :  ಅಮವಾಸ್ಯೆ ಆಗಿರುವುದರಿಂದ ಸ್ವಲ್ಪ ದಿನದಲ್ಲೇ ಗುರು ಅಷ್ಟಮಕ್ಕೆ ಬರುತ್ತಾನೆ. ಆದ್ದರಿಂದ ಅಮ್ಮನವರಿಗೆ ಕುಂಕುಮಾರ್ಚನೆ ,ಅರಿಶಿನದ ಅರ್ಚನೆ,  ಅಭಿಷೇಕ ಈ ರೀತಿಯ ಸೇವೆಯನ್ನು ಮಾಡಿಸಿ ಒಳ್ಳೆಯದಾಗುತ್ತದೆ. ಒಳ್ಳೆಯ ಸುದ್ದಿಯನ್ನು ಕೇಳುತ್ತೀರಿ.

ಕರ್ಕಾಟಕ ರಾಶಿ : ಮನೋಸ್ಥೈರ್ಯದಿಂದ ಮಾಡುವ ಎಲ್ಲ ಕೆಲಸ ಕಾರ್ಯಗಳಲ್ಲಿ ಪ್ರಗತಿಯನ್ನು ಕಾಣುವಿರಿ.

ಸಿಂಹ ರಾಶಿ : ಕುಟುಂಬದ ವಿಚಾರದಲ್ಲಿ ಒಂದು ಸಣ್ಣ ಆತಂಕ ದುಗುಡ  ತಳಮಳ ಇರುತ್ತದೆ.  ಬೆಳಗ್ಗೆ ಮತ್ತು ಸಂಜೆಯ ಹೊತ್ತಿನಲ್ಲಿ ಹೊಸಿಲಿನ ಹೊರಗೆ ದೀಪವನ್ನು ಹಚ್ಚಿ ಇಲ್ಲವೆ ಅರಿಶಿಣದಿಂದ ದೀಪವನ್ನು ಮಾಡಿ ಅದಕ್ಕೆ ಕೊಬ್ಬರಿ ಎಣ್ಣೆ ಹಾಕಿ ಎರೆಡು ದೀಪವನ್ನು ಹಚ್ಚಿ ಒಳ್ಳೆಯದಾಗುತ್ತದೆ. ಇಂತಹ ದೋಷವಿದ್ದರೂ ಅದನ್ನು ತೆಗೆದು ಹಾಕುತ್ತದೆ.

ಕನ್ಯಾ ರಾಶಿ : ಅಮಾವಾಸ್ಯೆಯ ದಿನ ಚಂದ್ರ ನಿಮ್ಮ ಮನೆಯಲ್ಲೇ ಇರುವುದರಿಂದ ತಳಮಳವಿರುತ್ತದೆ. ನೀವು ಕೂಡ ಅರಿಶಿನದ ದೀಪವನ್ನು ಹಚ್ಚಿ ನಿಮ್ಮನ್ನು ತಡೆಯುವ ಶಕ್ತಿ ಯಾವುದು ಇರುವುದಿಲ್ಲ. ಇಂತಹ ದೋಷವಿದ್ದರೂ ಅದನ್ನು ತೆಗೆದು ಹಾಕುತ್ತದೆ.

ತುಲಾ ರಾಶಿ : ಪ್ರಯಾಣದಲ್ಲಿ ಬಳಲಿಕೆ ಅಮ್ಮನ ಆರೋಗ್ಯದ ವಿಚಾರದಲ್ಲಿ ಸ್ವಲ್ಪ ತಲ್ಲಣ. ಮನಸ್ಸಿಗೆ ಚೈತನ್ಯವನ್ನು ತುಂಬಿಸಿ ಅವರೊಂದಿಗೆ ಮಾತನಾಡಿ ಆರೋಗ್ಯ ಸುಧಾರಿಸುತ್ತದೆ.

ವೃಶ್ಚಿಕ ರಾಶಿ : ಅಮ್ಮನಿಂದ ಅತ್ತೆಯಿಂದ ಆಶೀರ್ವಾದ ಪಡೆದುಕೊಳ್ಳಿ. ವೃತ್ತಿಪರವಾಗಿಯೂ ಕೌಟುಂಬಿಕ ಪರವಾಗಿಯೂ ಯಾವುದೋ ಒಂದು ಸೌಭಾಗ್ಯದ ಸುದ್ದಿಯೊಂದನ್ನು ಪಡೆಯುತ್ತೀರಾ.

ಧನಸ್ಸು ರಾಶಿ : ವೃತ್ತಿಪರವಾಗಿ ಒಂದು ತೊಳಲಾಟವಿರುತ್ತದೆ.  ನಿಮಗೆ ಯಾರೋ ಹುಳಿ ಹಿಂಡಲು ಪ್ರಯತ್ನಿಸುತ್ತಾರೆ. ಶತ್ರು ಇದ್ದಾಗಲೇ ಕೆಟ್ಟವರಿದ್ದಾಗಲೇ ನಮ್ಮ ಒಳ್ಳೆಯತನ ನಮ್ಮ ಯೋಗ್ಯತೆ ನಮಗೆ ತಿಳಿಯುವುದು.

ಮಕರ ರಾಶಿ : ಚೆನ್ನಾಗಿದೆ ಕೊಡುವುದು ತೆಗೆದುಕೊಳ್ಳುವುದು, ಗುಡ್ನ್ಯೂಸ್ ಕೂಡ ಇದೆ. ಆಗದ ಕೆಲಸಗಳನ್ನು ಕೂಡ ಮಾಡಿಕೊಳ್ಳುವ ತಾಕತ್ತು ಇದೆ.

ಕುಂಭ ರಾಶಿ : ತುಂಬಾ ಹತ್ತಿರದಿಂದ ಸಣ್ಣ ಎಳೆದಾಟ, ಗಾಬರಿ. ಹಣೆಗೆ ಸಣ್ಣದಾಗಿ ಕುಂಕುಮದ ತಿಲಕವನ್ನಿಟ್ಟುಕೊಂಡು ಹೆಜ್ಜೆ ಇಡಿ ಇಲ್ಲವೆ ಅಕ್ಷತೆ ಕೊಟ್ಟು ಅಮ್ಮನಿಂದ ಆಶೀರ್ವಾದ ಪಡೆದುಕೊಂಡು ಹೋಗಿ ಒಳ್ಳೆಯದಾಗುತ್ತದೆ.

ಮೀನ ರಾಶಿ : ಅಸಾಧ್ಯವಾದುದನ್ನು ಕೂಡ ಸಾಧ್ಯವಾಗಿಸಿಕೊಳ್ಳುವಂತಹ ಶಕ್ತಿ ನಿಮಗಿದೆ ಹತ್ತಿರದ ಬಂಧುಗಳು ಸ್ನೇಹಿತರಿಂದ ಒಂದು ಸಣ್ಣ ಉಪಟಳವಿದೆ. ಬೆಳಗ್ಗೆ ಅರಿಶಿಣದ ದೀಪವನ್ನು ಮಾಡಿ ಇಡಿ ಅದು ಒಣಗಿದ ನಂತರ ಸಂಧ್ಯಾಕಾಲದಲ್ಲಿ ದೀಪವನ್ನು ಹಚ್ಚಿ . ನೀವು ಧರ್ಮಮಾರ್ಗದಲ್ಲಿ ನಡೆದಿದ್ದೇ ಆದಲ್ಲಿ ಅಧರ್ಮ ಮಾರ್ಗದಲ್ಲಿ ನಡೆದವರ ಸರ್ವನಾಶವಾಗುತ್ತದೆ.

All Rights reserved Namma  Kannada Entertainment.

Advertisement
Share this on...