ಬೇಡಿಕೆಯ ಉತ್ತುಂಗದಲ್ಲಿರುವಾಗಲೇ ವಿದಾಯ ಹೇಳಿದ್ದು, ಈಗ ಸಾವಿರಾರು ಮಕ್ಕಳ ಆಶಾಕಿರಣ’ ನಟಿ ಕೋಮಲ್​…!

in ಮನರಂಜನೆ/ಸಿನಿಮಾ 501 views

1980-90 ರ ದಶಕದಲ್ಲಿ ಕನ್ನಡ ಚಿತ್ರರಂಗವನ್ನು ಆಳಿದ ಎಷ್ಟೋ ನಟಿಯರು ಇಂದು ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಕೆಲವರು ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಮತ್ತೆ ಕೆಲವರು ಚಿತ್ರರಂಗದಿಂದ ಶಾಶ್ವತವಾಗಿ ದೂರಾಗಿದ್ದಾರೆ. ಇಂತಹ ನಟಿಯರು ಈಗ ಎಲ್ಲಿದ್ದಾರೆ…? ಏನು ಮಾಡುತ್ತಿದ್ದಾರೆ ಎಂದು ತಿಳಿಯಲು ಸಿನಿಪ್ರಿಯರು ಸದಾ ಕಾತರದಿಂದ ಕಾಯುತ್ತಿರುತ್ತಾರೆ. ವಿಷ್ಣುವರ್ಧನ್, ಅಂಬರೀಶ್, ರವಿಚಂದ್ರನ್ ಜೊತೆ ನಟಿಸಿದ್ದ ರೂಪಿಣಿ ನಿಮಗೆ ನೆನಪಿರಬಹುದು. ವಿಷ್ಣುವರ್ಧನ್ ಜೊತೆ ಒಲವಿನ ಆಸರೆ, ನೀನು ನಕ್ಕರೆ ಹಾಲು ಸಕ್ಕರೆ, ಜಗದೇಕವೀರ, ದೇವ, ಮತ್ತೆ ಹಾಡಿತು ಕೋಗಿಲೆ, ರವಿವರ್ಮ, ರವಿಚಂದ್ರನ್ ಜೊತೆ ಗೋಪಿಕೃಷ್ಣ, ರೆಬಲ್ ಸ್ಟಾರ್ ಅಂಬರೀಶ್ ಜೊತೆ ಮಲ್ಲಿಗೆ ಹೂ ಎಂಬ ಚಿತ್ರದಲ್ಲಿ ರೂಪಿಣಿ ನಟಿಸಿದ್ದರು. ಆ ಸಮಯದಲ್ಲಿ ವಿಷ್ಣುವರ್ಧನ್ ಹಾಗೂ ರೂಪಿಣಿ ಕಾಂಬಿನೇಷನ್​ಗೆ ಒಳ್ಳೆ ಮೆಚ್ಚುಗೆ ವ್ಯಕ್ತವಾಗಿತ್ತು. ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಹಿಂದಿ, ಮಲಯಾಳಂ ಭಾಷೆಗಳ ಚಿತ್ರಗಳಲ್ಲಿ ಕೂಡಾ ರೂಪಿಣಿ ನಟಿಸಿದ್ದಾರೆ. ಚಿತ್ರರಂಗದಲ್ಲಿ ಬೇಡಿಕೆಯ ಉತ್ತುಂಗದಲ್ಲಿರುವಾಗಲೇ ರೂಪಿಣಿ ಚಿತ್ರರಂಗಕ್ಕೆ ವಿದಾಯ ಹೇಳಿದ್ದು ಅಭಿಮಾನಿಗಳಿಗೆ ಬೇಸರ ಮೂಡಿಸಿತ್ತು.

Advertisement

Advertisement

ರೂಪಿಣಿ ಮೂಲ ಹೆಸರು ಕೋಮಲ್ ಮಹುವಾಕರ್. ಅವರು ಮಹಾರಾಷ್ಟ್ರಕ್ಕೆ ಸೇರಿದವರು. ಬಾಲನಟಿಯಾಗಿ ಚಿತ್ರರಂಗಕ್ಕೆ ಬಂದ ರೂಪಿಣಿ ನಂತರ ಪೂರ್ಣ ಪ್ರಮಾಣದ ನಾಯಕಿಯಾಗಿ ನಟಿಸಿದರು. ಕೋಮಲ್ ಎಂಬ ಹೆಸರಿನಲ್ಲೇ ಕೆಲವೊಂದು ಹಿಂದಿ ಚಿತ್ರಗಳಲ್ಲಿ ನಟಿಸಿದ ರೂಪಿಣಿಗೆ ಅಂದುಕೊಂಡಂತೆ ಯಶಸ್ಸು ದೊರೆಯಲಿಲ್ಲ. ಆದರೆ ಹೆಸರು ಯಾವಾಗ ರೂಪಿಣಿ ಎಂದು ಬದಲಾಯಿತೋ ಆಗಿನಿಂದ ಅವರ ಲಕ್ ಖುಲಾಯಿಸಿತು. ಡಾ. ವಿಷ್ಣುವರ್ಧನ್, ರಜನಿಕಾಂತ್, ಅಂಬರೀಶ್, ಕಮಲ್​ ಹಾಸನ್, ಮೋಹನ್ ಲಾಲ್, ಮುಮ್ಮುಟಿ, ವೆಂಕಟೇಶ್, ಬಾಲಕೃಷ್ಣ, ವಿಜಯ್ ಕಾಂತ್ ಸೇರಿ ದೊಡ್ಡ ನಟರೊಂದಿಗೆ ರೂಪಿಣಿ ನಾಯಕಿಯಾಗಿ ನಟಿಸಿದ್ದಾರೆ.

Advertisement

ರೂಪಿಣಿ ಅವರ ತಂದೆ ವಕೀಲರು, ತಾಯಿ ಟಯಟಿಷಿಯನ್. ಮಗಳು ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದರೂ ಆಕೆ ಮದುವೆಯಾಗಿ ಸೆಟಲ್ ಆಗಬೇಕು ಎಂಬುದು ಅವರ ಆಸೆಯಾಗಿತ್ತು. ಅದರಂತೆ ರೂಪಿಣಿ ಚಿತ್ರರಂಗದಲ್ಲಿ ಸಾಧನೆ ಮಾಡುವಾಗಲೇ ಮದುವೆಯಾಗುವಂತೆ ಆಕೆಯನ್ನು ಒತ್ತಾಯಿಸಿದರು. ಇದು ರೂಪಿಣಿಗೆ ಇಷ್ಟವಿಲ್ಲದಿದ್ದರೂ ತಂದೆ-ತಾಯಿ ಬಲವಂತಕ್ಕೆ ತಾವು ಮೊದಲೇ ಒಪ್ಪಿಕೊಂಡಿದ್ದ ಚಿತ್ರಗಳನ್ನು ಮುಗಿಸಿ ಮನೆಯಲ್ಲಿ ನೋಡಿದ ಹುಡುಗನನ್ನು ಮದುವೆಯಾಗಿ ಚಿತ್ರರಂಗದಿಂದ ದೂರ ಉಳಿದರು.

Advertisement

ತಂದೆ ತಾಯಿ ಆಸೆಯಂತೆ ರೂಪಿಣಿ ಮದುವೆಯಾದ ನಂತರ ಮೆಡಿಕಲ್ ಪರೀಕ್ಷೆ ಬರೆದು ಇದೀಗ ವೈದ್ಯಕೀಯ ಸೇವೆಯಲ್ಲಿ ನಿರತರಾಗಿದ್ದಾರೆ. ರೂಪಿಣಿ ಪತಿ ಕೂಡಾ ಡಾಕ್ಟರ್. ವಿಶೇಷ ಚೇತನ ಮಕ್ಕಳಿಗಾಗಿ ರೂಪಿಣಿ ಸ್ಪರ್ಶ ಫೌಂಡೇಶನ್ ಎಂಬ ಸಂಸ್ಥೆ ತೆರೆದು ಆ ಮೂಲಕ ಮಕ್ಕಳ ಆರೋಗ್ಯ ಅಭಿವೃದ್ಧಿಯತ್ತ ಕೆಲಸ ಮಾಡುತ್ತಿದ್ದಾರೆ. ತಂದೆ ತಾಯಿ ಆಸೆಯಂತೆ ಪತಿಯೊಂದಿಗೆ ಸೇರಿ ಸಮಾಜ ಸೇವೆ ಮಾಡುತ್ತಿದ್ದಾರೆ ರೂಪಿಣಿ.

ರೂಪಿಣಿ ಚಿತ್ರರಂಗ ತೊರೆದ ನಂತರ , ಆಕೆ ಆರೋಗ್ಯ ಸರಿಯಿಲ್ಲ, ರೂಪಿಣಿ ಸಾ’ವನ್ನ’ಪ್ಪಿದ್ದರು ಎಂಬ ಸು’ಳ್ಳುಸುದ್ದಿ ಹರಿದಾಡಿತ್ತು. ಆ ಸಮಯದಲ್ಲಿ ಆಕೆ ಮುಂದೆ ಬಂದು ನಾನು ಆರೋಗ್ಯವಾಗಿದ್ದೇನೆ, ಇನ್ನೂ ಬದುಕಿದ್ದೇನೆ, ದಯವಿಟ್ಟು ಗಾಳಿಸುದ್ದಿಯನ್ನು ನಂಬಬೇಡಿ ಎಂದು ಮನವಿ ಮಾಡಿದ್ದರು. ಸಂತೋಷದ ವಿಚಾರವೆಂದರೆ ರೂಪಿಣಿ ಮತ್ತೆ ನಟಿಸಲು ರೆಡಿಯಿದ್ದಾರಂತೆ. ಒಳ್ಳೆ ಅವಕಾಶ ದೊರೆತರೆ ಮತ್ತೆ ಬೆಳ್ಳಿತೆರೆ ಮೇಲೆ ಕಾಣಿಸಿಕೊಳ್ಳುತ್ತೇನೆ ಎಂದು ರೂಪಿಣಿ ಹೇಳಿದ್ದಾರೆ.

Advertisement
Share this on...