ಟೈಗರ್ ಪ್ರಭಾಕರ್ ಅವರಿಗೆ ಮೂರು ಜನ ಹೆಂಡತಿಯರು.. ಅವರು ಯಾರು ಗೊತ್ತಾ..?

in ಸಿನಿಮಾ 207 views

ಸ್ಯಾಂಡಲ್ ವೂಡ್ ನಲ್ಲಿ ಟೈಗರ್ ಎಂದೇ ಕರೆಯುವ ಟೈಗರ್ ಪ್ರಭಾಕರ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಅವರ ಗತ್ತು, ಸ್ಟೈಲ್ ಮತ್ತು ಅವರ ಫೈಟಿಂಗ್ಸ್ ಅನ್ನು ಯಾರು ತಾನೇ ಮರೆಯಲು ಸಾಧ್ಯ. ಯಾವುದೇ ಬ್ಯಾಗ್ರೌಂಡ್ ಇಲ್ಲದೆ ಸ್ವಂತ ಪರಿಶ್ರಮದಿಂದ ಪ್ರಸಿದ್ಧಿ ಗಳಿಸಿದ ಶ್ರಮಜೀವಿ ಈ ಟೈಗರ್ ಪ್ರಭಾಕರ್. ತನ್ನ ಹದಿನಾಲ್ಕು ವರ್ಷದಲ್ಲೇ ಇಬ್ಬರು ಬಾಕ್ಸರ್ ಗಳನ್ನು ಟೈಗರ್ ಪ್ರಭಾಕರ್ ಸೋಲಿಸಿದ್ದರು. ಇವರು ಕನ್ನಡ ಚಿತ್ರರಂಗಕ್ಕೆ ಸ್ಟಂಟ್ ಮ್ಯಾನ್ ಆಗಿ ಎಂಟ್ರಿ ಕೊಟ್ಟರು. ನಂತರದಲ್ಲಿ ಸ್ಟಂಟ್ ಮಾಸ್ಟರ್ ಆಗಿ ಆಕ್ಷನ್ ಸೀನ್ ಗಳನ್ನ ನಿರ್ದೇಶಿಸುತ್ತಿದ್ದರು.

Advertisement

 

Advertisement

Advertisement

 

Advertisement

ಇವರ ಫೈಟ್ ಗಳನ್ನ ನೋಡುವುದಕ್ಕಾಗಿಯೇ ಜನರು ಹೀರೋ ಯಾರು ಅಂತಲೂ ತಿಳಿದುಕೊಳ್ಳದೆ ಸಿನಿಮಾ ಮಂದಿರಕ್ಕೆ ಹೋಗುತ್ತಿದ್ದರು. ಮೊದಲು ಟೈಗರ್ ಪ್ರಭಾಕರ್ ಚಿಕ್ಕಪುಟ್ಟ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದರು. ಅನಂತರ ಮುತ್ತೈದೆ ಭಾಗ್ಯ ಸಿನಿಮಾದ ಮೂಲಕ ಹಿರೋ ಆಗಿ ಅಭಿನಯಿಸಲು ಪ್ರಾರಂಭಿಸಿದರು. ಸುಮಾರು 450 ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ. ಟೈಗರ್ ಪ್ರಭಾಕರ್ ರವರು ಮೊದಲು ಮೇರಿ ಅಲ್ಫೋನ್ಸಾ ಅವರನ್ನು ಮದುವೆಯಾಗುತ್ತಾರೆ. ಇವರಿಗೆ ಇಬ್ಬರು ಹೆಣ್ಣು ಮಕ್ಕಳು ಒಬ್ಬ ಗಂಡು ಮಗು ಇತ್ತು. ಆ ಗಂಡು ಮಗುವೇ ವಿನೋದ್ ಪ್ರಭಾಕರ್. ಸ್ವಲ್ಪ ವರ್ಷಗಳ ನಂತರ ಮೇರಿ ಆಲ್ಫೋನ್ಸಾಗೆ ಟೈಗರ್ ಪ್ರಭಾಕರ್ ವಿಚ್ಛೇದನ ನೀಡುತ್ತಾರೆ.

 

 

 

 

ನಂತರದಲ್ಲಿ ಅವರ ಜೊತೆ ಹಲವಾರು ಸಿನಿಮಾಗಳಲ್ಲಿ ನಟಿಸಿ ಲವ್ಲಿ ಪೇರ್ ಎನಿಸಿಕೊಂಡಿದ್ದ ಜಯಮಾಲರವರನ್ನು ಮದುವೆಯಾಗುತ್ತಾರೆ. ಹಲವು ವರ್ಷಗಳು ಒಟ್ಟಿಗೆ ಜೀವನ ನಡೆಸಿ ಇವರು ದಾಂಪತ್ಯದಲ್ಲಿ ವೈಮನಸ್ಸು ಉಂಟಾಗಿ ಟೈಗರ್ ಪ್ರಭಾಕರ್ ರವರು ಜಯಮಾಲಾರವರಿಗೆ ವಿಚ್ಛೇದನ ನೀಡಿದ್ದರು. ಆ ಹೊತ್ತಿಗಾಗಲೇ ಟೈಗರ್ ಪ್ರಭಾಕರ್ ರವರು ಕನ್ನಡ, ತೆಲುಗು, ತಮಿಳು, ಮಲೆಯಾಳಂ ಚಿತ್ರರಂಗದಲ್ಲಿ ಸಕ್ಕತ್ ಫೇಮಸ್ ಆಗಿದ್ದರು. ಮಲೆಯಾಳಂನ ಖ್ಯಾತ ನಟಿ ಅಂಜೂರವರನ್ನು ಟೈಗರ್ ಪ್ರಭಾಕರ್ ಮೂರನೇ ಮದುವೆಯಾಗುತ್ತಾರೆ. ಆದರೆ ಕೇವಲ ಒಂದು ವರ್ಷಕ್ಕೆ ನಟಿ ಅಂಜುರವರಿಗೆ ವಿಚ್ಛೇದನ ನೀಡಿ ಟೈಗರ್ ಪ್ರಭಾಕರ್ ರವರು ಒಂಟಿ ಜೀವನ ನಡೆಸಲು ಶುರುಮಾಡುತ್ತಾರೆ.

 

 

 

1980ರಲ್ಲಿ ಟೈಗರ್ ಪ್ರಭಾಕರ್ ಬೈಕ್ ಅಪಘಾತಕ್ಕೆ ತುತ್ತಾಗಿ ನಂತರದಲ್ಲಿ ಚೇತರಿಸಿಕೊಂಡಿದ್ದರು. ಆದರೆ ವಯಸ್ಸಾಗುತ್ತಿದ್ದಂತೆಯೇ ಹಳೆ ಗಾಯಗಳು ನೋವು ಕೊಡುತ್ತಿದ್ದವು. ಇವರ ಜೀವನದ ಕೊನೆಯ ದಿನಗಳು ಜನರು ಊಹೇ ಮಾಡಿದಷ್ಟು ಸುಂದರವಾಗಿರಲಿಲ್ಲ. ಇವರು ದೈಹಿಕ ನೋವುಗಳಿಂದ ಬಳಲುತ್ತಿದ್ದರು ಎನ್ನುವುದು ಬೇಸರದ ಸಂಗತಿ. ಅತಿಯಾದ ಅನಾರೋಗ್ಯದಿಂದ ಕೈಯಲ್ಲಿದ್ದ ಹಣ ಕಾಲಿಯಾಗಿದ್ದು ಮರ್ಚ್ 25, 2001 ರಂದು ಬಹು ಅಂಗಾಂಗ ವೈಫಲ್ಯದಿಂದ ಟೈಗರ್ ಪ್ರಭಾಕರ್ ರವರು ಇಹಲೋಕವನ್ನು ತ್ಯಜಿಸುತ್ತಾರೆ.

 

ಯಾರೇ ಕಷ್ಟದಲ್ಲಿರುವವರು ಬಂದು ಸಹಾಯ ಕೇಳಿದರೂ ತಮ್ಮ ಕೈಯಲ್ಲಿದ್ದ ಎಲ್ಲಾ ಹಣವನ್ನೆಲ್ಲಾ ಕೊಟ್ಟುಬಿಡುತ್ತಿದ್ದರು ಟೈಗರ್ ಪ್ರಭಾಕರ್ ಅವರು ಮಾಡಿದ ಅದೆಷ್ಟು ದಾನ ಧರ್ಮಗಳು ಲೆಕ್ಕಕ್ಕಿಲ್ಲ ಹೀಗಾಗಿ ಇವರು ಹೆಚ್ಚು ಉಳಿತಾಯ ಮಾಡುತ್ತಿರಲಿಲ್ಲ. ಟೈಗರ್ ಪ್ರಭಾಕರ್ ರವರು ಚಿತ್ರರಂಗದಲ್ಲೇ ನಿಸ್ವಾರ್ಥ ಜೀವಿ ಹಾಗೂ ಹೃದಯವಂತ.

– ಸುಷ್ಮಿತಾ

Advertisement
Share this on...