News : ಏನಾದರೂ ವಿಭಿನ್ನವಾಗಿ ವೀಡಿಯೋ ಮಾಡಬೇಕೆಂದು ಹೊರಟವರು ಏನಾದರು ನೋಡಿ !.

in ಮನರಂಜನೆ 29 views

ಇತ್ತೀಚಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವುದು ಟಿಕ್ ಟಾಕ್.!  ಹೆಸರು ಕೇಳಿದ ಕೂಡಲೇ ಹಲವರಿಗೆ ತಿಳಿಯುತ್ತದೆ ಇದು ಕೆಲ ಪ್ರತಿಭೆಗಳಿಗೆ ಉತ್ತಮ ವೇದಿಕೆಯಾಗಿದೆ ಹಾಗೂ ಹೆಚ್ಚು ಜನರು ಈ ಆಪ್ ಮೂಲಕ ತಮ್ಮ ನಟನಾ ಕೌಶಲ್ಯಗಳನ್ನು ಅನಾವರಣ ಮಾಡಲು ಸೂಕ್ತವಾಗಿ ಬಳಸಿಕೊಳ್ಳುತ್ತಾರೆ. ಈ ಆ್ಯಪ್ ಮುಖೇನ ಹಲವರು ತಮ್ಮ ವಿವಿಧ ಶೈಲಿಯ ಪ್ರತಿಭೆಗಳನ್ನು ಪ್ರದರ್ಶಿಸುತ್ತಾರೆ..ಇನ್ನೂ ಕೆಲವರು ಈ ಆ್ಯಪ್ ಮೂಲಕ ಸಮಾಜಕ್ಕೆ ಸದಾ ಕೆಟ್ಟ ಸಂದೇಶಗಳನ್ನು ರವಾನೆ ಮಾಡಲು ಸಿದ್ಧರಾಗಿ ದುರ್ಬಳಕೆ ಮಾಡುತ್ತಾರೆ.!

Advertisement

Advertisement

ಇದೇ ರೀತಿಯಲ್ಲಿ ಇಲ್ಲೊಂದು ಅಮಾನವೀಯ ಘಟನೆಯೊಂದು ನಡೆದು ಹೋಗಿದೆ..ಹೌದು, ಮಧ್ಯಪ್ರದೇಶದ ಭೋಪಾಲ್ ರಾಜ್ಯದ ಇಬ್ಬರು ಯುವಕರು ಟಿಕ್ ಟಾಕ್ ವೀಡಿಯೋ ಮಾಡುವ ಮೂಲಕ ನಾವು ಏನಾದರೂ ವಿಭಿನ್ನವಾಗಿ ವೀಡಿಯೋ ಮಾಡಬೇಕೆಂಬ ನಿಟ್ಟಿನಲ್ಲಿ ಮೂಕ ಪ್ರಾಣಿಯನ್ನು ಹಿಂಸಾತ್ಮಕವಾಗಿ ನರಳಾಡಿಸಿದ್ದಾರೆ.! ನಾಯಿಯ ಕೈ-ಕಾಲು ಕಟ್ಟಿ ನೀರಿನ ಕೊಳಕ್ಕೆ ಎಸೆದು ಅದರ ನರಳಾಟವನ್ನು ಟಿಕ್ ಟಾಕ್ ವೀಡಿಯೋ ಮಾಡಿ ಶೇರ್ ಮಾಡಿದ್ದರು..ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಗೊಂಡಿತು..

Advertisement

Advertisement

ಇದನ್ನು ವೀಕ್ಷಿಸಿದ ಪ್ರಾಣಿ ಪ್ರಿಯರು ಇದರ ವಿರುದ್ಧ ಧ್ವನಿ ಏರಿಸಿ, ಈ ಕೂಡಲೇ ಪ್ರಾಣಿ ಹಿಂಸೆ ಮಾಡಿದ ದುಷ್ಕರ್ಮಿಗಳನ್ನು ಬಂಧಿಸಬೇಕು ಹಾಗೂ ಅವರಿಗೆ ಕಠಿಣ ಶಿಕ್ಷೆಯನ್ನು ವಿಧಿಸಬೇಕು ಎಂದು PETA( ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ ) ಸಂಸ್ಥೆಗೆ ವರದಿ ತಲುಪಿಸಿ, ಪೊಲೀಸರ ಸಹಾಯದಿಂದ ಆರೋಪಿಗಳನ್ನು ಬಂಧಿಸಲು ಮನವಿ ಸಲ್ಲಿಸಿತ್ತು. ಈ ಕುರಿತು ಬೋಪಾಲ್ ಪೊಲೀಸರು ದೀರ್ಘ ತನಿಖೆ ಆರಂಭಿಸಿ, ಕಡಿಮೆ ಸಮಯದಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ..

ಪೊಲೀಸರ ಕಣ್ತಪ್ಪಿಸಿ ಓಡಾಡುತ್ತಿದ್ದ ದುಷ್ಕರ್ಮಿಗಳು ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಸಿಕ್ಕಿಬಿದ್ದಿದ್ದಾರೆ.! ಈ ಕುರಿತು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ PETA ಸಂಸ್ಥೆ, ಅಲ್ಪ ಅವಧಿಯಲ್ಲಿ ಪೊಲೀಸ್ ಅಧಿಕಾರಿಗಳು ಆರೋಪಿಗಳನ್ನು ಹುಡುಕಿ ಬಂಧಿಸಿದಕ್ಕೆ ನಮ್ಮ ಅನಂತ ಕೃತಜ್ಞತೆಗಳು ಹಾಗೂ ಅವರ ನಿರಂತರ ಸೇವೆಗೆ ನಮ್ಮ ಶ್ಲಾಘನೆ ಇದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
All rights reserved Namma Kannada.

Advertisement
Share this on...