ಮೇಷ, ಮೀನಾ ರಾಶಿಯವರಿಗೆ ಇಂದು ಅದ್ಭುತ ದಿನ .., ಮತ್ತೇನೆಲ್ಲಾ ಲಾಭ ಇದೆ ಗೊತ್ತಾ?

in ಜ್ಯೋತಿಷ್ಯ 20 views

ಶ್ರೀ ಶಾರ್ವರಿ ನಾಮ ಸಂವತ್ಸರೆ, ಉತ್ತರಾಯಣೆ, ಗೀಷ್ಮ ಋತು, ಜ್ಯೇಷ್ಠ ಮಾಸೆ, ಕೃಷ್ಣ ಪಕ್ಷ, ತೃತೀಯ ತಿಥಿ, ಪೂರ್ವ ಆಶಾಢ ನಕ್ಷತ್ರ, ಶುಕ್ಲ ಯೋಗ, ವಾಣಿಜ ಕರಣ, ಜೂನ್ 8 ರ ಪಂಚಾಂಗ ಫಲದ ಮಾಹಿತಿಯನ್ನು ಶ್ರೀ. ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ.
ಮೇಷ: ಮೇಷ ರಾಶಿಯವರಿಗೆ ಇಂದು ದಿನ ಚೆನ್ನಾಗಿದೆ, ಸಂಗಾತಿ ವಿಚಾರದಲ್ಲಿ ಸ್ವಲ್ಪ ವಾಗ್ಬಾಣ ಇರುತ್ತದೆ.
ವೃಷಭ: ಕಲಾವಿದರು ಜಾಗ್ರತೆಯಿಂದ ಇರಬೇಕು, ಯಾಕೆಂದರೆ ಸಿನಿಮಾ ಇಂಡಸ್ಟ್ರಿಯವರಿಗಂತೂ ಇಂದು ಬರಸಿಡಿಲು. ಆದ್ದರಿಂದ ಈ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲರೂ ಜಾಗ್ರತೆಯಿಂದ ಇರಬೇಕು. ಚಿಕ್ಕ ಬಜೆಟ್’ನಲ್ಲಿ ಏನಾದರೂ ಮಾಡಲು ಪ್ರಯತ್ನಿಸಿ. ಸುಮ್ಮನೆ ರಿಸ್ಕ್ ತಗೊಂಡ್ರೆ, ಬೀದಿಗೆ ಬರುವ ಸಾಧ್ಯತೆ ಇರುತ್ತದೆ.
ಮಿಥುನ: ಅಜ್ಜಿಗೆ ಅರಿವೆ ಚಿಂತೆ, ಮಗಳಿಗೆ ಮದುವೆ ಚಿಂತೆ ಎಂಬಂತೆ, ಯಾರದೂ ಏನೇ ಆದರೂ, ನನ್ನದೊಂದು ದಾರಿ ಅನ್ನುವ ಹಾಗೆ ಇರುತ್ತೀರಿ. ಆ ರೀತಿಯ ಚಿಂತನೆ ನಿಮ್ಮನ್ನು ಬದಲಾಯಿಸಲು ಪ್ರಯತ್ನಿಸುತ್ತದೆ. ಆದ್ದರಿಂದ ದುಡುಕಬೇಡಿ. ವಿಚಾರಿ, ಚಿಂತಿಸಿ, ಮಂಥನ ತಗೆದುಕೊಂಡು ಮುಂದೆ ಹೋಗಿ.
ಕರ್ಕಾಟಕ: ಸ್ತ್ರೀಯರಿಂದ ನೋವು ಸಂಭವಿಸುವ ಸಾಧ್ಯತೆ ಹೆಚ್ಚು. ಉದಾಹರಣೆಗೆ ತಾಯಿ, ಅತ್ತಿಗೆ, ನಾದಿನಿ, ಸೊಸೆ, ಸ್ನೇಹಿತೆ ಇವರಿಂದ. ಆದ್ದರಿಂದ ಎಚ್ಚರಿಕೆಯಿಂದ ಇರಿ. ಬೆನ್ನು ನೋವಿನಿಂದ ಬಳಲುತ್ತೀರಿ. ಕುತ್ತಿಗೆ ಸಮಸ್ಯೆ ವಿಪರೀತ ಕಾಪಾಡುತ್ತದೆ.

Advertisement

 

Advertisement


ಸಿಂಹ: ಕಲಾವಿದರಿಗೆ ಇಂದು ದಿನ ಚೆನ್ನಾಗಿದೆ. ಮಾಧ್ಯಮ, ಜಾಹೀರಾತು ವಿಭಾಗಗಳಲ್ಲಿ ಕೆಲಸ ಮಾಡುವವರಿಗೆ ಅನುಕೂಲಕರ. ಬಂಗಾರದ ವ್ಯಾಪಾರಕ್ಕೆ ಪೆಟ್ಟು.
ಕನ್ಯಾ: ಸಿಕ್ಕಾಪಟ್ಟೆ ಬ್ಯಾಕ್ ಪೇನ್, ಒತ್ತಡ ಇರುತ್ತದೆ. ಸ್ಕಿನ್, ಬ್ಯಾಕ್, ಯೂರಿನರಿ ಇನ್ ಫೆಕ್ಷನ್, ಡಯಾಬಿಟಿಸ್ ಏರುಪೇರಾಗುವುದು ಆಗುತ್ತದೆ. ಆದರೆ ಇದಕ್ಕೊಂದು ಪರಿಹಾರವಿದೆ. ಬಟಾಣಿಕಾಳನ್ನು ನೆನೆಸಿ, ಮೊಳಕೆ ಬರುವ ತನಕ ಬಿಡಿ. ನಂತರ ಇದಕ್ಕೆ ನಿಂಬೆಹುಳಿ ಹಿಂಡಿ, ಹಸಿ ಈರುಳ್ಳಿ ಕಟ್ ಮಾಡಿ ಹಾಕಿ, ಒಂದು ಸ್ವಲ್ಪ ಉಪ್ಪು, ಕಾರ, ಕೊತ್ತಂಬರಿಸೊಪ್ಪು, ಬೆಳ್ಳುಳ್ಳಿ ಜಜ್ಜಿ ರಸ ಹಿಂಡಿ ಮಿಶ್ರಣ ಮಾಡಿ. ಈ ಸಲಾಡ್ ಅನ್ನು ಬೆಳಗ್ಗೆ ತಿಂಡಿ, ಮಧ್ಯಾಹ್ನ ಊಟದ ಜೊತೆ ಸೇವಿಸಿ. ರಾತ್ರಿ ಸೇವಿಸಬೇಡಿ , ಗ್ಯಾಸ್ ಇರುತ್ತದೆ. ಆದರೆ ಇದರಲ್ಲಿ ಕಾರ್ಬೋಹೈಡ್ರೇಟ್ ಹೆಚ್ಚು ಇರುತ್ತದೆ. ಜೊತೆಗೆ ಶಂಕರಾಮೃತ ಸೇವಿಸಿ, ಪ್ರಾಣಮಾಯಮ ಮಾಡಿ.

Advertisement

 

Advertisement


ತುಲಾ: ಈ ರಾಶಿಯವರು ಇಂದು ಜಾಗರೂಕರಾಗಿರಬೇಕು. ಆದರೆ ಇವರ ಸ್ಥಿತಿ ಪೂರ್ತಿ ಕೆಲಸ ಕಡಿಮೆ ಆದಾಯ.
ವೃಶ್ಚಿಕ: ಏನಾದರೂ ತೊಂದರೆ ಇರುತ್ತದೆ. ಪಿಸಿಒಡಿ ಸಮಸ್ಯೆಯಿಂದ ಬಳಲುತ್ತಿರುವವರು ಬಹಳ ಜಾಗರೂಕರಾಗಿರಬೇಕು. ಈ ಸಮಸ್ಯೆ ಇರುವವರು ಹರಳೆಣ್ಣೆಯನ್ನು ಒಂದು ಬಟ್ಟೆಯಲ್ಲಿ ತೇವ ಮಾಡಿಟ್ಟುಕೊಂಡು ರಾತ್ರಿ ಹೊತ್ತು ಸಮಸ್ಯೆ ಇರುವ ಜಾಗದಲ್ಲಿ , ಕನಿಷ್ಟ 7 ದಿನ ಕಚ್ಚೆ ತರಹ ಹಾಕಿಕೊಂಡು ಮಲಗುವ ಅಭ್ಯಾಸ ಮಾಡಿಕೊಳ್ಳಿ. ಬೆಳಗ್ಗೆ ಎದ್ದು ಶುದ್ಧಿ ಮಾಡಿಕೊಳ್ಳಿ.
ಧನಸ್ಸು: ಮನೆಯಲ್ಲಿ ರಸಗವಳ ಇದ್ದರೂ ಗಂಜಿಯನ್ನು ಬಯಸುವ ವಕ್ರ ಬುದ್ಧಿ ಇಂದು ಇರುತ್ತದೆ. ಅಷ್ಟೇ ಅಲ್ಲ ಹೆಚ್ಚು ಪೆಟ್ಟುಗಳು ಬೀಳುವುದರಿಂದ ಬಹಳ ಜಾಗರೂಕತೆಯಿಂದ ಜೀವನ ನಡೆಸಿ.

ಮಕರ: ಆಟಕ್ಕೂ ಇದ್ದೀರಿ, ಲೆಕ್ಕಕ್ಕೂ ಇದ್ದೀರಿ. ಆದರೆ ಪೂರ್ಣ ಫಲ ಅನುಭವಿಸಲು ಆಗದು. ದುಡ್ಡು ಬಂದರೂ ವಿಪರೀತ ಖರ್ಚು. ಹೆಂಡತಿ, ಹೆಂಡತಿ ಅಕ್ಕ ತಂಗಿ, ಗಂಡನ ಅಕ್ಕ ತಂಗಿಯ ಆರೋಗ್ಯ ಸ್ಥಿತಿಯ ಕಡೆ ಗಮನ ಕೊಡಬೇಕು.
ಕುಂಭ: ಸ್ವಲ್ಪ ಬ್ಯಾಕ್ ಪೇನ್ ಬಾಧಿಸುತ್ತದೆ. ಸಕ್ಕರೆ ರೋಗಿಗಿಳು ಸಹ ಹುಷಾರಾಗಿರಬೇಕು.ಕಲಾ ಪ್ರಪಂಚದಲ್ಲಿರುವವರು ಸ್ವಲ್ಪ ಜಾಗರೂಕರಾಗಿರಿ.
ಮೀನಾ: ಆಮದು-ರಫ್ತುಸೇರಿದಂತೆ ಕೆಲವೊಂದು ವ್ಯವಹಾರ ಚೆನ್ನಾಗಿ ನಡೆಯುತ್ತದೆ. ಕಷ್ಟಪಟ್ಟಿದ್ದಕ್ಕೂ ಒಂದು ಅದ್ಭುತ ದಿನ ನೋಡುತ್ತೀರಿ.

Advertisement
Share this on...