ಇಂದು ತ್ರಯೋದಶಿ ಶುಕ್ರವಾರ…ಯಾವ ದೇವರಿಗೆ ಪೂಜೆ ಮಾಡಿದರೆ ಒಳ್ಳೆಯದು ಗೊತ್ತಾ?

in ಜ್ಯೋತಿಷ್ಯ 144 views

ಶ್ರೀ ಶಾರ್ವರಿ ಸಂವತ್ಸರೆ, ಉತ್ತರಾಯಣೆ, ಗ್ರೀಷ್ಮ ಋತು,  ಜ್ಯೇಷ್ಠ ಮಾಸೆ, ಕೃಷ್ಣ ಪಕ್ಷದ ತ್ರಯೋದಶಿ, ಕೃತ್ತಿಕಾ ನಕ್ಷತ್ರ , ಧೃತಿ ಯೋಗ ವನಿಜ ಕರ್ಣ , ಜೂನ್ 19  ಶುಕ್ರವಾರದ ಪಂಚಾಂಗ ಫಲವನ್ನು ಶ್ರೀ ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ.  ಇಂದು ಅಮೃತ ಕಾಲ  ಬೆಳಗ್ಗೆ 7 ಗಂಟೆ,   5 ನಿಮಿಷದಿಂದ,  9 ಗಂಟೆ,  39 ನಿಮಿಷದವರೆಗೂ ಇದೆ.

Advertisement

ಬದಲಾವಣೆ ಜಗದ ನಿಯಮ: ಜಗತ್ತನ್ನು ಸರಿಪಡಿಸಲು ಹೋಗಬೇಡಿ ಅಂತಹ ತಪ್ಪನ್ನು ಎಲ್ಲರೂ ಮಾಡುತ್ತಿರುತ್ತೀರಿ. ನಿಮ್ಮ ಮನೆಯವರನ್ನೇ,  ಹತ್ತಿರದವರನ್ನೇ ಬದಲಾಯಿಸಲು ಆಗುವುದಿಲ್ಲ. ಸಂಗಾತಿಯನ್ನು ಮಾತ್ರ ಜೀವನ ಪರ್ಯಂತ  25% ಅಷ್ಟು ಮಾತ್ರ ಬದಲಾಯಿಸಬಹುದು. ಬೇವಿನ ಮರಕ್ಕೆ ಎಷ್ಟೇ ಸಿಹಿ ಉಣಿಸಿದರು ಕೂಡ ಅದರ ಕಹಿ ಗುಣವನ್ನು ಬದಲಾಯಿಸಲಾಗುವುದಿಲ್ಲ. ಹಾಗೆಯೇ ಜಗತ್ತನ್ನು ಕೂಡ ನಾವು ಒಬ್ಬರೇ ಬದಲಾಯಿಸಲಾಗುವುದಿಲ್ಲ. ಜಗತ್ತಿನಲ್ಲಿ ನಾವು ಒಬ್ಬರೇ ಇಲ್ಲ. ನಾವು ಒಬ್ಬರೇ ಸತ್ಯವಂತರು,  ನಾವು ಒಬ್ಬರೇ ಕಷ್ಟ ಪಡುತ್ತಾ ಇರುವವರು, ನಮ್ಮೊಬ್ಬರಿಗೆ ಟೆನ್ಷನ್ ಇರುವುದು ಎಂಬ ಭಾವವನ್ನು ಮೊದಲು ಬಿಡಬೇಕು.  ಎಲ್ಲರಿಗೂ ಸಮಸ್ಯೆಗಳಿವೆ ಆ ಸಮಸ್ಯೆಗಳ ಬಗ್ಗೆಯೇ ಯಾವಾಗಲೂ ಮಾತನಾಡುವುದು ಬೇಡ. ಅದು ಸರಿಯಿಲ್ಲ ಇದು ಸರಿಯಿಲ್ಲ,  ಅವರು ಸರಿ ಇಲ್ಲ,  ಇವರು ಸರಿ ಇಲ್ಲ,  ಹೀಗೆ ಇಲ್ಲ ಇಲ್ಲ ಎಂಬ ಪದದಿಂದ ನೆಗೆಟಿವ್ ಎನರ್ಜಿ ಉಂಟಾಗುತ್ತದೆ.  ಜಗತ್ತು ಸರಿಯಾಗಿದೆ, ನನ್ನನ್ನು ಪ್ರೀತಿಸುವವರಿದ್ದಾರೆ,  ನನ್ನ ಆರಾಧಿಸುವವರು ಇದ್ದಾರೆ,  ನನಗೋಸ್ಕರ ಏನನ್ನಾದರೂ ಮಾಡುವಂಥವರು ಇದ್ದಾರೆ,  ಎಂಬ ಭಾವವನ್ನು ಪ್ರತಿನಿತ್ಯ  ಮನದಲ್ಲಿ ತುಂಬಿಸಿಕೊಳ್ಳುವ ಪ್ರಯತ್ನವನ್ನು ಮಾಡಿ. ನೀವು ಎಂದೂ ಜಗತ್ತನ್ನು ಬದಲಾಯಿಸಲು ಹೋಗಬೇಡಿ ಅದರಿಂದ  ಸಮಸ್ಯೆಗಳು ಹೆಚ್ಚುತ್ತಾ ಹೋಗುತ್ತವೆ. ಬದಲಾವಣೆ ಜಗದ ನಿಯಮ ಅದು ಬದಲಾಯಿಸಿಕೊಳ್ಳುತ್ತದೆ ನೀವು ಬದಲಾಯಿಸಲು ಹೋಗಬೇಡಿ. ಇಲ್ಲ ಇಲ್ಲ ಎಂಬ ಪದವನ್ನು ಬಿಟ್ಟು ನೀವು ನಿರಂತರವಾಗಿ ಬದಲಾಗುತ್ತಾ ಇರಿ. ಎಂದು ಗುರೂಜಿ ರವರು ಹೇಳಿದ್ದಾರೆ.

Advertisement

 

Advertisement

Advertisement

 

ಈ ದಿನ ತ್ರಯೋದಶಿ ದಿನವಾದ ಶುಕ್ರವಾರ.  ತ್ರಯೋದಶಿ ದಿನವೆ ಶುಕ್ರವಾರ ಬಂದರೆ  ಅದು  ಶಿವ ಮತ್ತು ಲಕ್ಷ್ಮಿ ದೇವಿಗೆ ತುಂಬಾ ಇಷ್ಟವಾದ ದಿನ ಆದ್ದರಿಂದ ಲಕ್ಷ್ಮಿಮತ್ತು ಶಿವ  ಇಬ್ಬರಿಗೂ ಪೂಜೆ ಮಾಡಿಸುವುದು ಒಳ್ಳೆಯದು.

ನಿಮ್ಮ ರಾಶಿ ಫಲಾಫಲಗಳು ಹೀಗಿವೆ …

ಮೇಷ ರಾಶಿ: ಸ್ವಲ್ಪ  ಅಧಿಕಾರ ವಂತರಿಗೆ ವಿಶೇಷವಾದ ಪ್ರಗತಿಯನ್ನು ಕೊಡುವಂತಹ ದಿನ. ಅಧಿಕಾರಿಗಳಿಗೆ , ಸರ್ಕಾರಿ ಕಚೇರಿಯ ಅಧಿಕಾರಿಗಳಿಗೆ ಒಳ್ಳೆಯ ಬೆಳವಣಿಗೆಯಾಗುವ ದಿನ.

ವೃಷಭ ರಾಶಿ : ಏನೋ ತಳಮಳ,  ನಾನು ಅಂದುಕೊಂಡಿದ್ದು ಏನೂ ಆಗುತ್ತಿಲ್ಲ ಎಂದು ಹೇಳುವ ಬದಲು ನೀವು ಮೊದಲು ಮಾಡಿ , ಮಕ್ಕಳಿಗೆ ಟೀವಿ ನೋಡಬೇಡ ಎಂದು ಹೇಳುವ ಬದಲು ನೀವು ನೋಡುವುದನ್ನು ಕಡಿಮೆ ಮಾಡಿ,  ವಾಕ್ ಮಾಡುತ್ತಿಲ್ಲ ಎಂದು ಬೇರೆಯವರಿಗೆ ಹೇಳುವ ಬದಲು ನೀವೆ ವಾಕ್ ಮಾಡಲು ಶುರು ಮಾಡಿ , ಹೀಗೆ ನೀವು ಮೊದಲು ಚೇಂಜ್ ಆದರೆ ಎಲ್ಲವೂ ಕೂಡ ಬದಲಾಗುತ್ತದೆ .

 

ಮಿಥುನ ರಾಶಿ:  ಯೋಗ್ಯತೆಗೆ ತಕ್ಕಂತ ವರಮಾನ,  ಸಂಪಾದನೆ,  ಅನುಕೂಲ,  ಗೌರವ ದೊರೆಯುತ್ತದೆ.

ಕರ್ಕಾಟಕ ರಾಶಿ : ಧೈರ್ಯ ವೃದ್ಧಿ ,  ಧೈರ್ಯದಿಂದ ಯಾವ ಕೆಲಸವನ್ನು ಮಾಡಿದರೂ ಕೂಡ ವೃದ್ಧಿಯಾಗುತ್ತದೆ. ಆತ್ಮಬಲದಿಂದ ಧೈರ್ಯವಾಗಿ ಮುಂದೆ ಹೆಜ್ಜೆ ಇಡಿ ಗೆಲುವು ನಿಮ್ಮದೆ.

ಸಿಂಹ ರಾಶಿ : ಉದ್ಯೋಗಸ್ಥರಿಗೆ, ಸರ್ಕಾರಿ ಮಟ್ಟದ ಕೆಲಸ,  ವ್ಯವಹಾರ,  ಸ್ವಂತ ವ್ಯಾಪಾರ,  ವ್ಯವಹಾರದಲ್ಲಿರುವವರಿಗೆ ಇಂದು ಪ್ರಗತಿಯ ದಿನ.

ಕನ್ಯಾ ರಾಶಿ : ಭೂಮಿ,  ಮನೆಯ,  ಬಗ್ಗೆ ಯೋಚನೆ,  ಯೋಜನೆ ರೂಪಿಸುತ್ತಿದ್ದಿರಿ,  ಚಿಂತಿಸುತ್ತಿದ್ದೀರಿ ಎಂದಾದರೆ ಖಂಡಿತ  ಯಶಸ್ಸು  ನೊಡುತೀರಿ.

ತುಲಾ ರಾಶಿ :  ಇಂದು ಸ್ವಲ್ಪ ಜಾಗೃತೆ, ಎಲ್ಲೋ ಒಂದು ವ್ಯವಹಾರ ಎಳೆದಾಟ  ಆಗುತ್ತದೆ.  ಆದರೆ ಸ್ವಂತ ವ್ಯವಹಾರ ಸ್ವಂತ ಕೆಲಸವನ್ನು ಮಾಡುತ್ತಿದ್ದರೆ ಅನುಕೂಲವನ್ನು ನೋಡುವಂತಹ ಅದ್ಭುತವಾದ ದಿನ.

 

ವೃಶ್ಚಿಕ ರಾಶಿ : ವಿಶೇಷವಾದ ದಿನ,  ಏನು ಪಡೆಯಬೇಕು ಅದನ್ನ ತೆಗೆದುಕೊಳ್ಳಿ , ಇಂದು  ನೂರು ರೂಪಾಯಿಯಷ್ಟು ಕೆಲಸ ಮಾಡಿದರೆ ಸಾವಿರ ರೂಪಾಯಿಯನ್ನು ಪಡೆದುಕೊಳ್ಳುವಂತಹ ದಿನ.

ಧನಸ್ಸು ರಾಶಿ: ಭೂಮಿ,  ಮನೆ,  ಉದ್ಯೋಗ  ಬದಲಾವಣೆ,  ಉದ್ಯೋಗ ಚಿಂತನೆ,  ವ್ಯವಹಾರ ಚಿಂತನೆ,  ಇದ್ದರೆ ಯಶಸ್ಸು ಕಟ್ಟಿಟ್ಟ ಬುತ್ತಿ,  ಒಂದು ಶುಭ ಸುದ್ದಿ ಕಟ್ಟಿಟ್ಟ ಬುತ್ತಿ.

ಮಕರ ರಾಶಿ : ಯಾವುದೋ ಒಂದು ಟೆನ್ಷನ್ ತಲೆ ನೋವು ಬರುತ್ತದೆ,  ಭೂಮಿ ವ್ಯವಹಾರಕ್ಕೆ ಓಡಾಡುತ್ತ ಅದರಲ್ಲಿ ಸುತ್ತಿ ಬಳಸಿಯಾದರು  ಲಾಭ ದೊರೆಯುತ್ತದೆ,  ಮನೆ ಬದಲಾವಣೆ,  ಕಟ್ಟುವುದು,  ಈ ವಿಷಯದಲ್ಲಿ ದುಡುಕುವುದು ಬೇಡ .

ಕುಂಭ ರಾಶಿ  : ಸ್ವಲ್ಪ ಬಿಸಿ ಡೇ,   ಟ್ರೇಸ್ ಫುಲ್ ಡೇ,  ಎಚ್ಚರವಾಗಿರಿ,  ಮಿಕ್ಕಂತೆ ಯಾವುದೇ ತೊಂದರೆ ಇಲ್ಲ,  ರಿಲ್ಯಾಕ್ಸ್ ಆಗಿರಿ, ಮಯೂರ  ಮುದ್ರೆಯನ್ನು ಹಾಕಿ.

ಮೀನ ರಾಶಿ : ಯೋಗ ಕರವಾದ ದಿನ,  ಅನುಕೂಲ ಪಡೆಯುತ್ತೀರಿ,  ಉದ್ಯೋಗ,  ವ್ಯವಹಾರ,  ಕುಟುಂಬ,  ಎಲ್ಲದರಲ್ಲೂ ಚೆನ್ನಾಗಿದೆ ಸ್ವಲ್ಪ ಆತುರ,  ಕೋಪ,  ಸಮಾಧಾನವಾಗಿ ಇರಿ.

Advertisement
Share this on...