Namma Kannada News ಒಂದು ಕಾಲದಲ್ಲಿ ಟಾಪ್ ನಟಿಯರಾಗಿ ಮಿಂಚಿದವರು ನಂತರ ಭಿಕ್ಷುಕರಾದರು ! ಕಾರಣ ಇಲ್ಲಿದೆ ನೋಡಿ ..

in ಕನ್ನಡ ಮಾಹಿತಿ 37 views

ಅನೇಕ ತಾರೆಯರು ಒಂದು ಕಾಲದಲ್ಲಿ ಚಿತ್ರರಂಗದಲ್ಲಿ ಬಹಳ ಪ್ರಸಿದ್ಧರಾಗಿದ್ದರು. ಆದರೆ ಇದ್ದಕ್ಕಿದ್ದಂತೆ ಅವರ ಕನಸುಗಳೆಲ್ಲಾ ಚೂರು ಚೂರಾಯಿತು. ಆ ನಂತರ ಅವರು ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಗಳಿಸಲು ಪ್ರಯತ್ನಿಸಿದರೂ ಯಶಸ್ವಿಯಾಗಲು ಸಾಧ್ಯವಾಗಲಿಲ್ಲ. ಇಂದು ನಾವು ಅಂತಹ ಸಂಕಷ್ಟಕ್ಕೊಳಗಾದ, ಕೊನೆ ಕೊನೆಗೆ ಬೀದಿಗಳಲ್ಲಿ ಭಿಕ್ಷೆಯನ್ನೂ ಬೇಡಿದ 3 ನಟಿಯರ ಬಗ್ಗೆ ನಿಮಗೆ ಹೇಳಲಿದ್ದೇವೆ.

Advertisement

Advertisement

ನಿಶಾ ನೂರ್
ನಿಶಾ ನೂರ್ ಒಂದು ಕಾಲದಲ್ಲಿ ದಕ್ಷಿಣ ಚಿತ್ರರಂಗದ ಪ್ರಸಿದ್ಧ ನಟಿಯಾಗಿದ್ದರು. ತಮಿಳು, ತೆಲುಗು, ಮೆಲಯಾಳಂ ಮಾತ್ರವಲ್ಲದೆ, ಕನ್ನಡದಲ್ಲೂ ನಟಿಸಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಕಮಲ್ ಹಾಸನ್ ಅವರಂತಹ ನಟರೊಂದಿಗೆ ನಿಶಾ ಕೆಲಸ ಮಾಡಿದ್ದಾರೆ. ಆದರೆ ನಿರ್ಮಾಪಕರು ಆಕೆಯನ್ನು ವೇಶ್ಯೆಯನ್ನಾಗಿ ಮಾಡಿದರೆಂದು ಹೇಳಲಾಗುತ್ತದೆ. ಈ ಕಾರಣದಿಂದಾಗಿ, ಯಾವುದೇ ಕಲಾವಿದರು ಅವಳೊಂದಿಗೆ ಕೆಲಸ ಮಾಡಲು ಬಯಸಲಿಲ್ಲ. ಆದರೆ ನಂತರ, ನಿಶಾ ನೂರ್ ಉದ್ಯಮದಿಂದ ದೂರವಾದರು. ಕೊನೆ ದಿನಗಳಲ್ಲಿ ಆಕೆ ಬೀದಿಗಳಲ್ಲಿ ಭಿಕ್ಷೆ ಬೇಡುವ ಸಂದರ್ಭ ಎದುರಾಯಿತು. ಏಪ್ರಿಲ್ 23, 2007ರಂದು ತಮ್ಮ 44 ನೇ ವಯಸ್ಸಿನಲ್ಲೇ ನಿಶಾ ನೂರ್ ನಿಧನರಾದರು.

Advertisement

Advertisement

ಮಿಥಾಲಿ ಶರ್ಮಾ
ನಟಿ ಮಿಥಾಲಿ ಶರ್ಮಾ ಒಂದು ಕಾಲದ ಬಾಲಿವುಡ್ ಚಿತ್ರರಂಗದ ಪ್ರಸಿದ್ಧ ನಟಿ. ದೆಹಲಿ ನಿವಾಸಿ. ಖ್ಯಾತ ನಟಿಯಾಗಬೇಕೆಂಬ ಕನಸಿನಿಂದ ದೆಹಲಿಯಿಂದ ಮುಂಬೈಗೆ ಬಂದಿದ್ದರೂ, ಬಾಲಿವುಡ್ ಚಿತ್ರರಂಗದಲ್ಲಿ ಹೆಚ್ಚು ಸಮಯ ಕೆಲಸ ಮಾಡಲು ಸಾಧ್ಯವಾಗಲಿಲ್ಲ. ಭೋಜ್ಪುರಿ ಚಿತ್ರದಲ್ಲಿ ನಟಿಸಿದ ನಂತರ, ಮಿಥಾಲಿ ವೃತ್ತಿಜೀವನ ಅದೋಗತಿಗೆ ಹೋಯಿತು. ಪೋಷಕರು ಸಹ ತಮ್ಮ ಆಶಯಕ್ಕೆ ವಿರುದ್ಧವಾಗಿ ಹೋಗಿದ್ದರಿಂದ ಮಿಥಾಲಿಯನ್ನು ಮನೆಗೆ ಸೇರಿಸಲಿಲ್ಲ. ಈ ಕಾರಣಗಳಿಗಾಗಿ ಆಕೆ ತನ್ನ ಮನೆಗೆ ಹೋಗಲಿಲ್ಲ. ಖಿನ್ನತೆಗೆ ಒಳಗಾದ ಮಿಥಾಲಿಕೊನೆಗೆ ಭಿಕ್ಷಾಟನೆ ಮಾಡುತ್ತಾ, ಕದಿಯಲು ಪ್ರಾರಂಭಿಸಿದರು. ನಂತರ ಆಕೆಯನ್ನು ಮುಂಬೈ ಪೊಲೀಸರು ಬಂಧಿಸಿದರು.


ಗೀತಾಂಜಲಿ ನಾಗ್ ಪಾಲ್
ಒಂದು ಕಾಲದಲ್ಲಿ ಬಾಲಿವುಡ್’ನಲ್ಲಿ ಪ್ರಸಿದ್ಧರಾಗಿದ್ದ ಮಾಡೆಲ್ ಗೀತಾಂಜಲಿ ನಾಗ್ಪಾಲ್ ಮಾದಕ ವ್ಯಸನಿಯಾಗಿದ್ದರು ಮತ್ತು ಈ ಚಟದಿಂದಾಗಿ ಅವರ ವೃತ್ತಿಜೀವನ ಹಾಳಾಯಿತು. ಮಾದಕ ವ್ಯಸನದಿಂದಾಗಿ ಆಕೆಗೆ ತಿನ್ನಲು ಹಣ ಉಳಿಯಲಿಲ್ಲ. ನಂತರ ಗೀತಾಂಜಲಿ ಬೀದಿಗಳಲ್ಲಿ ಭಿಕ್ಷೆ ಬೇಡಲು ಆರಂಭಿಸಿದರು. ನಂತರ ಅವರನ್ನು ದೆಹಲಿ ಮಹಿಳಾ ಆಯೋಗ ರಕ್ಷಿಸಿ ಚಿಕಿತ್ಸೆ ಕೊಡಿಸಿತು.
Please read our articles and keep supporting us.
All Righhts reserved Namma Kannada Entertainment.

Advertisement
Share this on...