ವಿಚ್ಛೇದನ ಪಡೆದುಕೊಂಡಿದ್ದ ಪುರುಷರನ್ನೇ ವಿವಾಹವಾದ ಟಾಪ್ ನಟಿಯರು !

in ಮನರಂಜನೆ 66 views

ಬಣ್ಣ ಲೋಕ ಎನ್ನುವುದೇ ಹಾಗೆ ,ತೆರೆಯ ಮೇಲೆ ಮುದ್ದು ಮುದ್ದಾಗಿ ಅಭಿನಯಿಸುವ ತಾರೆಯರು ಹಾಗೂ ಮಾದಕ ಮೈಮಾಟ ದಿಂದ ರಾರಾಜಿಸುವ ತಾರೆಯರ ನಿಜ ಜೀವನ ಬಹಳ ವಿಭಿನ್ನವಾಗಿರುತ್ತದೆ.ಅವರು ಯಾವಾಗ ಯಾರ ಜೊತೆ ವಿವಾಹವಾಗುತ್ತಾರೆ ಪ್ರೀತಿಯಲ್ಲಿ ಬೀಳುತ್ತಾರೆ ಎಂಬುದು ಸದಾ ಸುದ್ದಿಯಲ್ಲಿರುತ್ತದೆ. ಅಂತೆಯೇ ಬಿ ಟಂ ನಲ್ಲಿ ಅನೇಕ ಚಿತ್ರರಂಗದ ತಾರೆಯರು ಪ್ರೀತಿಯಲ್ಲಿ ಬಿದ್ದು ಎರಡನೇ ವಿವಾಹವನ್ನು ಮಾಡಿಕೊಟ್ಟಿದ್ದಾರೆ.ವಿಪರ್ಯಾಸವೇನೆಂದರೆ ಆ ನಟರಿಗೆ ಮೊದಲೇ ಮದುವೆಯಾಗಿದ್ದರೂ ಸಹ ತಮ್ಮ ಜೊತೆ ಅಭಿನಯಿಸಿದ್ದ ನಟಿಯರ ಮೇಲಿನ ಅಪಾರವಾದ ಪ್ರೀತಿಯಿಂದ ಮೊದಲನೇ ಸಂಗಾತಿಗೆ ವಿಚ್ಛೇದನವನ್ನು ನೀಡಿ, ಆಕೆಯನ್ನು ವಿವಾಹವಾಗುತ್ತಾರೆ ಅಂತಹದ್ದೇ ಕೆಲವು ಜೋಡಿಗಳನ್ನು ನೀವು ಈ ಲೇಖನಿಯಲ್ಲಿ ತಿಳಿದುಕೊಳ್ಳಬಹುದು.

Advertisement

 

Advertisement

Advertisement

 

Advertisement

* ಹೇಮಮಾಲಿನಿ-ದರ್ಮೇಂದ್ರ
ತಮಗೆಲ್ಲರಿಗೂ ತಿಳಿದಿರಬಹುದು ಇಪ್ಪತ್ತರ ದಶಕದಲ್ಲಿ ಬಾಲಿವುಡ್ ನಲ್ಲಿ ಬಹಳ ಹಿಟ್ ಆದ ಜೋಡಿ ಎಂದರೆ ಅದು ಹೇಮ ಮಾಲಿನಿ ಹಾಗೂ ಧರ್ಮೇಂದ್ರ.ಸುಂದರವಾದ ನಯನ ಮನೋಹರ ಕಂಗಳಿಂದ ಪಡ್ಡೆ ಹುಡುಗರ ಡ್ರೀಮ್ ಗರ್ಲ್ ಆಗಿದ್ದವರು ಹೇಮಾ ಮಾಲಿನಿ. ಈಕೆಯ ಮೇಲೆ ಅನೇಕ ಹೀರೋಗಳ ಕಣ್ಣುಗಳು ಕೂಡ ಬಿದ್ದಿತ್ತು .ಆ ಸಮಯದಲ್ಲಿ ಧರ್ಮೇಂದ್ರ ಅವರಿಗೆ ಪ್ರಕಾಶ್ ಕೌರ್ ಎಂಬ ಮಹಿಳೆಯ ಜೊತೆ ವಿವಾಹವಾಗಿತ್ತು ಹಾಗೆಯೇ ಇಬ್ಬರು ಗಂಡು ಮಕ್ಕಳು ಕೂಡ ಜನಿಸಿದ್ದರು. ಹೀಗೆ ವಿವಾಹವಾಗಿದ್ದರೂ ಹೇಮಾಮಾಲಿನಿ ಅವರ ಮೇಲೆ ಧರ್ಮೇಂದ್ರ ಅವರು ಪ್ರೀತಿಯಲ್ಲಿ ಬೀಳುತ್ತಾರೆ. ತೆರೆಯ ಮೇಲೆ ಸುಮಾರು ನಲವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಒಟ್ಟಾಗಿ ಅಭಿನಯಿಸಿದ್ದ ಈ ಜೋಡಿಗೆ ಅಪಾರ ಅಭಿಮಾನಿ ಬಳಗವೂ ಕೂಡ ಇತ್ತು . ಅಂತೆಯೇ ಹೇಮಾಮಾಲಿನಿ ಮೇಲಿನ ಅಪಾರವಾದ ಪ್ರೀತಿಯಿಂದ ೧೯೮೦ ರಲ್ಲಿ ಆಕೆಯನ್ನು ವಿವಾಹವಾಗಲು ಇಚ್ಛೆ ಪಡುತ್ತಾರೆ.ಆದರೆ ಈ ವಿವಾಹಕ್ಕೆ ಧರ್ಮೇಂದ್ರ ಅವರ ಮೊದಲ ಪತ್ನಿ ಒಪ್ಪುವುದಿಲ್ಲ ವಾಗ ಧರ್ಮೇಂದ್ರ ಹಾಗೂ ಹೇಮಾ ಮಾಲಿನಿ ಇಬ್ಬರು ಕೂಡ ತಮ್ಮ ಧರ್ಮವನ್ನು ಇಸ್ಲಾಂಗೆ ಮತಾಂತರಿಸಿಕೊಳ್ಳುತ್ತಾರೆ.ನಂತರ ವಿವಾಹವಾಗಿ ಬಿಡುತ್ತಾರೆ ಹಾಗೆ ಹೇಮಾ ಮಾಲಿನಿ ಅಯ್ಯಂಗಾರ್ ಸಂಪ್ರದಾಯವಾಗಿದ್ದರಿಂದ ಅವರ ಇಚ್ಛೆಯಂತೆ ವಿವಾಹ ಇಸ್ಲಾಂ ಹಾಗೂ ಅಯ್ಯಂಗಾರ್ ಶೈಲಿಯಲ್ಲಿ ನಡೆಯುತ್ತದೆ ಈ ಇಬ್ಬರು ದಂಪತಿಗಳು ಈಗ ಸುಖ ಜೀವನವನ್ನು ನಡೆಸುತ್ತಿದ್ದು ಒರ್ವ ಪುತ್ರಿಗೆ ಜನ್ಮವನ್ನು ನೀಡಿದ್ದಾರೆ.

 

 

*ಬೋನಿ ಕಪೂರ್ – ಶ್ರೀದೇವಿ
ಬೋನಿ ಕಪೂರ್ ಅವರು ಮೊದಲು ಮೋನ ಕಪೂರ್ ಎಂಬುವವರನ್ನು ವಿವಾಹವಾಗುತ್ತಾರೆ. ಈ ದಂಪತಿಗಳಿಗೆ ಇಬ್ಬರು ಮಕ್ಕಳು ಕೂಡ ಇರುತ್ತಾರೆ ಆದರೆ ಆಕೆಗೆ ವಿಚ್ಛೇದನವನ್ನು ನೀಡಿ ನಟಿ ಶ್ರೀದೇವಿ ಅವರನ್ನು ಪ್ರೀತಿಸಿ ವಿವಾಹವಾಗುತ್ತಾರೆ. ಆದರೆ ವಿವಾಹದ ಬಗ್ಗೆ ಬೋನಿ ಕಪೂರ್ ಅವರ ತಾಯಿ ಮೊದಲ ಹೆಂಡತಿಗೆ ಆಗಿರುವ ಅನ್ಯಾಯದ ಬಗ್ಗೆ ಬಹಳ ಬೇಸರವನ್ನೂ ವ್ಯಕ್ತಪಡಿಸುತ್ತಾರೆ.ಹಾಗೆ ಅದೊಂದು ದಿನ ಸ್ಟಾರ್ ಹೊಟೇಲ್ ಒಂದರ ಬಳಿ ಬಂದ ಅವರು ಮನೆ ಮುರುಕಿ ಎಂದು ಶ್ರೀ ದೇವಿಯ ಮುಂದೆ ಜೋರಾಗಿ ಅರಚುತ್ತಾ ಕೋಪದಿಂದ ಹೊಟ್ಟೆಗೆ ಗುದ್ದು ಬಿಟ್ಟಿದ್ದರು. ಇವೆಲ್ಲದರ ವಿರುದ್ಧ ಹೋರಾಡಿ ಸುಖ ಜೀವನವನ್ನು ನಡೆಸುತ್ತಿದ್ದ ಈ ದಂಪತಿಗಳಿಗೆ ಜಾನ್ವಿ ಹಾಗೂ ಖುಷಿ ಕಪೂರ್ ಎಂಬ ಹೆಣ್ಣು ಮಕ್ಕಳು ಇದ್ದಾರೆ.

 

 

*ರಾಜ್ ಕುಂದ್ರ – ಶಿಲ್ಪಾ ಶೆಟ್ಟಿ
ಬಾಲಿವುಡ್ ಚಿತ್ರರಂಗ ಕಂಡ ಎವರ್ ಗ್ರೀನ್ ಬ್ಯೂಟಿ ಎಂದರೆ ಅದು ಶಿಲ್ಪಾ ಶೆಟ್ಟಿ. ಇನ್ನು ಇವರು ಕೂಡ ಮೊದಲೆ ವಿವಾಹವಾಗಿ ವಿಚ್ಛೇದನವನ್ನು ಪಡೆದುಕೊಂಡಿದ್ದ ರಾಜ್ ಕುಂದ್ರಾ ಅವರನ್ನು ಮರು ವಿವಾಹವಾಗಿದ್ದಾರೆ. ಹೌದು ಈ ಹಿಂದೆ ಕವಿತಾ ಕುಂದ್ರಾ ಎಂಬ ಮಹಿಳೆಯನ್ನು ವಿವಾಹವಾಗಿದ್ದ ರಾಜ್ ಕುಂದ್ರಾ ಒಂದು ಹೆಣ್ಣು ಮಗುವಿಗೂ ಕೂಡ ಜನ್ಮ ನೀಡಿದ್ದರು. ಆದರೆ ಆ ಮಗುವಿಗೆ ಕೇವಲ ಎರಡು ತಿಂಗಳು ಇರುವಾಗಲೇ ಆಕೆಗೆ ವಿಚ್ಛೇದನವನ್ನು ನೀಡಿ ಶಿಲ್ಪಾ ಶೆಟ್ಟಿಯನ್ನು ವಿವಾಹವಾಗುತ್ತಾರೆ. ಇದೀಗ ಒಂದು ಗಂಡು ಮಗುವಿನ ಜೊತೆ ಸುಖ ಜೀವನವನ್ನು ಈ ದಂಪತಿಗಳು ನಡೆಸುತ್ತಿದ್ದಾರೆ.

 

 

*ರಾಣಿ ಮುಖರ್ಜಿ ಹಾಗೂ ಆದಿತ್ಯ ಚೋಪ್ರಾ
ತಮಗೆಲ್ಲರಿಗೂ ತಿಳಿದಿರುವ ಹಾಗೆ ಬಿಟೌನ್ನ ಖ್ಯಾತ ಸಿನಿಮಾದ ಪ್ರೊಡಕ್ಷನ್ ಹೌಸ್ ಎಂದರೆ ಯಶ್ ರಾಜ್ ಫಿಲ್ಮ್ಸ್. ಯಶ್ ಚೋಪ್ರಾ ಅವರ ಮೊದಲ ವಾರಸುದಾರರಾದ ಆದಿತ್ಯ ಚೋಪ್ರಾ ಅವರು ಕೂಡ ಡಿಸ್ಟ್ರಿಬ್ಯೂಟರ್ ಆಗಿದ್ದಾರೆ.ಯಶ್ ಚೋಪ್ರಾ ರಂತೆಯೇ ಆದಿತ್ಯ ಚೋಪ್ರಾ ಅವರು ಕೂಡ ಸಿನಿಮಾದಲ್ಲಿ ತಮ್ಮ ಸಂಪೂರ್ಣ ಜೀವನವನ್ನು ತೊಡಗಿಸಿಕೊಂಡಿದ್ದಾರೆ.ಇನ್ನು ಇವರು ಕೂಡ ಪಾಯಲ್ ಎಂಬುವವರನ್ನು ಮೊದಲೇ ವಿವಾಹವಾಗಿದ್ದರು ಆದರೆ ಆಕೆಗೆ ವಿಚ್ಛೇದನವನ್ನು ನೀಡಿ ನಟಿ ರಾಣಿ ಮುಖರ್ಜಿ ಅವರನ್ನು ಎರಡನೇ ವಿವಾಹವಾಗುತ್ತಾರೆ.ಈ ದಂಪತಿಗಳಿಗೆ ಇದೀಗ ಆ ಧೀರ ಎಂಬ ಹೆಣ್ಣು ಮಗು ಜನಿಸಿದ್ದು ಸುಖ ಜೀವನವನ್ನು ನಡೆಸುತ್ತಿದ್ದಾರೆ.

 

 

*ಸೈಫ್ ಅಲಿ ಖಾನ್ ಹಾಗೂ ಕರೀನಾ ಕಪೂರ್
ಬಿ ಟೌನ್ ಕಂಡ ಮಾದಕ ಮೈಮಾಟ ನಟಿ ಎಂದರೆ ಕರೀನಾ ಕಪೂರ್.ಇನ್ನು ನಟ ಸೈಫ್ ಅಲಿ ಖಾನ್ ಅವರು ತನಗಿಂತ ವಯಸ್ಸಿನಲ್ಲಿ ದೊಡ್ಡವರಾಗಿದ್ದ ಅಮೃತಾ ಸಿಂಗ್ ಅವರನ್ನು ವಿವಾಹವಾಗಿ ರುತ್ತಾರೆ ಆದರೆ ಕರೀನಾ ಕಪೂರ್ ಅವರ ಪೇಟೆಯಲ್ಲಿ ಬಿದ್ದ ಸೈಫ್ ಅಲಿ ಖಾನ್ ಮೊದಲನೇ ಪತ್ನಿಗೆ ವಿಚ್ಛೇದನವನ್ನು ನೀಡಿ ಎರಡನೇ ವಿವಾಹವಾಗುತ್ತಾರೆ

Advertisement
Share this on...