ಮಂಗಳಮುಖಿಯರ ಶವವನ್ನು ಯಾಕೆ ರಹಸ್ಯವಾಗಿ ಮಧ್ಯರಾತ್ರಿಯಲ್ಲಿ ಮಣ್ಣು ಮಾಡುತ್ತಾರೆ ಗೊತ್ತಾ..?

in ಕನ್ನಡ ಮಾಹಿತಿ 166 views

ಮಂಗಳಮುಖಿಯರು ಸತ್ತಾಗ ಅವರ ಶವಯಾತ್ರೆಯನ್ನು ಯಾಕೆ ರಾತ್ರಿ ಹೊತ್ತಲ್ಲೇ ಮಾಡುತ್ತಾರೆ..? ಮತ್ತು ಮಂಗಳಮುಖಿಯರ ಶವದ ಮುಖವನ್ನು ಯಾಕೆ ಯಾರಿಗೂ ತೋರಿಸುವುದಿಲ್ಲ..? ನಿಮ್ಮ ಬೀದಿಯಲ್ಲಿ ಯಾರಾದರೂ ಸತ್ತರೆ ಕೆಲವೇ ನಿಮಿಷಗಳಲ್ಲಿ ನಿಮಗೆ ಗೊತ್ತಾಗುತ್ತದೆ. ನಿಮ್ಮ ಸ್ನೇಹಿತರೆ ಯಾರಾದರೂ ಫೋನ್ ಮಾಡಿ ಹೇಳಬಹುದು ಅಥವಾ ನಿಮ್ಮ ಅಕ್ಕ ಪಕ್ಕದ ಮನೆಯವರು ಹೇಳಬಹುದು ಹಾಗೂ ಇತ್ತೀಚಿನ ದಿನಗಳಲ್ಲಿ ಯಾರಾದರೂ ಸತ್ತರೆ ಬ್ಯಾನರ್ ಗಳನ್ನ ಕೂಡ ಹಾಕುತ್ತಾರೆ. ಈ ರೀತಿ ನಮ್ಮ ಬೀದಿಯಲ್ಲಿ ಯಾರಾದರೂ ಸತ್ತರೆ ಗೊತ್ತಾಗುತ್ತದೆ.
ಆದರೆ ಈ ಮಂಗಳಮುಖಿಯರು ಮಾತ್ರ ಯಾರಾದರೂ ಅವರ ಸಮುದಾಯದಲ್ಲಿ ತೀರಿಹೋದಾಗ ಆ ಒಂದು ಶವವನ್ನು ಮುಚ್ಚಿಡುತ್ತಾರೆ ಯಾರಿಗೂ ತೋರಿಸುವುದಿಲ್ಲ. ಏಕೆ ಎಂಬುದಕ್ಕೆ ಕಾರಣ ಗೊತ್ತಾ?

Advertisement

 

Advertisement

Advertisement

 

Advertisement

ಯಾರಾದರೂ ಒಬ್ಬರು ಮಂಗಳಮುಖಿ ತೀರಿಹೋದಾಗ ಆ ಒಂದು ಸಮುದಾಯದ ಮಂಗಳಮುಖಿಯರು ಮಾತ್ರ ಭಾಗವಹಿಸುತ್ತಾರೆ. ಬೇರೆ ಸಮುದಾಯದ ಮಂಗಳಮುಖಿಯರು ಬೇರೆ ಯಾರು ಭಾಗವಹಿಸುವುದಿಲ್ಲ. ಇದು ಕೂಡ ಅವರ ಒಂದು ಪದ್ಧತಿ. ಮತ್ತೆ ಅವರು ಶವಯಾತ್ರೆಯನ್ನ ಮಧ್ಯರಾತ್ರಿಯೇ ಯಾರು ಇಲ್ಲದೆ ಇರುವಂತಹ ಸಮಯದಲ್ಲೇ ಮಾಡುತ್ತಾರೆ ಏಕೆಂದರೆ ಮಂಗಳಮುಖಿಯರ ಶವವನ್ನ ಬೇರೆ ಸಮುದಾಯದವರಾಗಲಿ ಅಥವಾ ಗಂಡು, ಹೆಣ್ಣಾಗಲಿ ಯಾವುದೇ ಕಾರಣಕ್ಕೂ ಆ ಮಂಗಳಮುಖಿಯರ ಶವವನ್ನ ನೋಡಬಾರದೆಂಬುದು ಇದರ ಮುಖ್ಯ ಉದ್ದೇಶ.

 

 

ಆ ರೀತಿ ಮುಚ್ಚಿಡುವುದಕ್ಕೆ ಮುಖ್ಯ ಕಾರಣವೇನೆಂದರೆ ಯಾರಾದರೂ ಶವಯಾತ್ರೆಯಲ್ಲಿ ಗಂಡು ಅಥವಾ ಹೆಣ್ಣು ಮಂಗಳಮುಖಿಯರ ಶವವನ್ನ ನೋಡಿದಾಗ ಅವರು ಮತ್ತೆ ಮುಂದಿನ ಜನ್ಮದಲ್ಲೂ ಕೂಡ ಮಂಗಳಮುಖಿಯಾಗಿಯೇ ಹುಟ್ಟುತ್ತಾರೆ ಎಂಬುದು ಅವರ ಒಂದು ನಂಬಿಕೆ. ಆ ಒಂದು ಕಾರಣಕ್ಕೋಸ್ಕರ ಮಂಗಳಮುಖಿಯ ಶವಯಾತ್ರೆಯಲ್ಲಿ ಯಾರಿಗೂ ಮುಖವನ್ನ ತೋರಿಸುವುದಿಲ್ಲ. ಮತ್ತೆ ಮಂಗಳಮುಖಿಯರು ಯಾರಾದರೂ ಸತ್ತಾಗ ಅವರ ಸಮುದಾಯದಲ್ಲಿ ಯಾರೂ ಕೂಡ ಕಣ್ಣೀರು ಹಾಕುವುದಿಲ್ಲ. ಅವರು ಎಷ್ಟೇ ನೋವಿದ್ದರೂ ಕೂಡ ಅದನ್ನು ಹೊರಗೆ ತೋರಿಸುವುದಿಲ್ಲ. ಕೆಲವರು ಹಣ ಕೂಡ ಹಂಚುತ್ತಾರೆ.

 

 

ಅವರು ಯಾಕೆ ಈ ರೀತಿ ಮಾಡುತ್ತಾರೆ ಎಂದರೆ ಈ ಒಂದು ಕೆಟ್ಟ ಪ್ರಪಂಚದಿಂದ ಮುಕ್ತಿ ಸಿಕ್ತಲ್ಲಾ ಎಂಬುದೇ ಅವರಿಗೆ ಒಂದು ದೊಡ್ಡ ಖುಷಿ. ಏಕೆಂದರೆ ಅವರು ಬದುಕಿದ್ದಾಗ ಈ ಸಮಾಜದಲ್ಲಿ ಅನುಭವಿಸಿದ ನೋವುಗಳಾಗಿರಬಹುದು, ಅವಮಾನಗಳಾಗಿರಬಹುದು, ತಿರಸ್ಕಾರವಾಗಿರಬಹುದು ಇದೆಲ್ಲಾದರಿಂದ ಕೂಡ ಮುಕ್ತಿ ಪಡೆದೆವು ಎಂಬ ಖುಷಿ ಅವರಿಗೆ ಆ ಒಂದು ಸಮಯದಲ್ಲಿ ಸಿಗುತ್ತೆ. ಆ ಒಂದು ಕಾರಣಕ್ಕೋಸ್ಕರ ಅವರು ಯಾವುದೇ ಕಾರಣಕ್ಕೂನೂ ಮಂಗಳಮುಖಿಯರು ಸತ್ತಾಗ ಶವಯಾತ್ರೆಯಲ್ಲಾಗಲಿ ಅಥವಾ ಮಣ್ಣುಮಾಡಬೇಕಾದ ಸಂದರ್ಭದಲಾಗಲಿ ಅವರು ಅಳುವುದಿಲ್ಲ.

 

 

ಮತ್ತೆ ಹಿಂದೂ ಧರ್ಮದ ಮಂಗಳಮುಖಿಯರು ಶವಯಾತ್ರೆಯಲ್ಲಿ ಶವಕ್ಕೆ ಚಪ್ಪಲಿಯಲ್ಲಿ ಹೊಡೆಯುತ್ತಾರೆ. ಏಕೆಂದರೆ ಮತ್ತೆ ನೀನು ಯಾವುದೇ ಕಾರಣಕ್ಕೂ ಮಂಗಳಮುಖಿಯಾಗಿ ಮುಂದಿನ ಜನ್ಮದಲ್ಲಿ ಹುಟ್ಟಬೇಡ ಎಂದು ಹೇಳುತ್ತಾ ಚಪ್ಪಲಿಯಲ್ಲಿ ಹೊಡೆಯುವ ಒಂದು ಪದ್ಧತಿ ಕೂಡ ಅವರಲ್ಲಿದೆ.

 

 

ಈ ರೀತಿ ಮಾಡುವುದರಿಂದ ಈ ಜನ್ಮದಲ್ಲಿ ಮಾಡಿದ ಪಾಪಗಳೆಲ್ಲಾ ಕಳೆಯಲಿ ಎಂಬ ಒಂದು ಕಾರಣಕ್ಕೋಸ್ಕರ ಈ ರೀತಿ ಮಾಡುತ್ತಾರೆ. ಮತ್ತೆ ಮಂಗಳಮುಖಿಯರು ಸತ್ತಾಗ ಯಾವುದೇ ಕಾರಣಕ್ಕೂ ಅವರನ್ನ ಸುಡುವುದಿಲ್ಲ. ಮಣ್ಣನ್ನು ಮಾಡಿ ಸಮಾಧಿಯನ್ನ ಮಾಡುತ್ತಾರೆ. ಇದು ಕೂಡ ಅವರ ಪದ್ಧತಿಗಳಲ್ಲಿ ಬಹುಮುಖ್ಯವಾದದ್ದು.

– ಸುಷ್ಮಿತಾ

Advertisement
Share this on...