ಕನ್ನಡದ ಈ ಪ್ರತಿಷ್ಠಿತ ಚಾನೆಲ್ ಸಂಪೂರ್ಣವಾಗಿ ಮುಚ್ಚಲಾಗುತ್ತಿದೆ… ! ಯಾವುದು ಗೊತ್ತಾ?

in Uncategorized 87 views

ಕರೋನಾ ಎಂಬ ಮಹಾಮಾರಿ ವೈರೆಸ್ ಭಾರತದಾದ್ಯಂತ ಎಲ್ಲ ಕಡೆ ಹರಡಲು ಪ್ರಾರಂಭಿಸಿದಂತೆ ಎಲ್ಲ ರಾಜ್ಯಗಳ  ಸರ್ಕಾರವು ಲಾಕ್ ಡೌನ್  ಮಾಡಿತ್ತು . ಇದರಿಂದಾಗಿ ಬಡವರು ಹಸಿವಿನಿಂದ ಬಳಲುವಂತಾಯಿತು. ಮಧ್ಯಮ ವರ್ಗದವರು ಜೀವನವನ್ನು ಕಟ್ಟಿಕೊಳ್ಳಲು ಹೆಣಗಾಡಬೇಕಾಯಿತು. ಸಣ್ಣ ಪುಟ್ಟ ಉದ್ಯಮ ಸಂಸ್ಥೆಗಳು ಮುಚ್ಚುವಂತಹ ಪರಿಸ್ಥಿತಿ ಉಂಟಾಯಿತು.  ದೊಡ್ಡ ದೊಡ್ಡ ಉದ್ಯಮಗಳಿಗೆ ದೊಡ್ಡ ದೊಡ್ಡ ಪೆಟ್ಟು ಬಿದ್ದಿತ್ತು.

Advertisement

Advertisement

ಇನ್ನು ಮನರಂಜನಾ ಕ್ಷೇತ್ರಕ್ಕೆ ಬಂದರೆ ಹೇಳಲಾಗದಷ್ಟು ನಷ್ಟ ಉಂಟಾಗಿದೆ . ಲಾಕ್ ಡೌನ್ ಮುಗಿದ ಮೇಲೂ ಸಿನಿಮಾಗಳ ಚಿತ್ರೀಕರಣ ನಡೆಯುತ್ತಿಲ್ಲ . ಕಾರಣ ಲಾಕ್ ಡೌನ್  ಮುಗಿದಿದ್ದರೂ ಕರೋನಾ ವೈರಸ್ ಹರಡುವುದು  ಕಡಿಮೆಯಾಗಿಲ್ಲ. ಈ ಎಲ್ಲದರ ನಡುವೆಯೂ ಟಿವಿ ಉದ್ಯಮ ಸ್ವಲ್ಪ ಚೇತರಿಕೆಯನ್ನು ಕಾಣುತ್ತಾ ಇದೆ.  ಸರ್ಕಾರ ಕಿರುತೆರೆಯ  ಧಾರಾವಾಹಿಗಳ ಚಿತ್ರೀಕರಣಕ್ಕೆ ಅವಕಾಶವನ್ನು ನೀಡಿದ್ದರೂ ಕೂಡ ಸಾರ್ವಜನಿಕ ಸ್ಥಳಗಳಲ್ಲಿ ಶೂಟಿಂಗ್ ಮಾಡುವಂತಿಲ್ಲ ಎಂದು ಷರತ್ತನ್ನು ವಿಧಿಸಿದೆ . ನಿನ್ನೆಯಿಂದ ಈ ಧಾರಾವಾಹಿಗಳ  ಚಿತ್ರೀಕರಣ ಆರಂಭವಾಗಿದ್ದು ಇನ್ನು ಎಲ್ಲವೂ ಮೊದಲಿನಂತೆ ಆಗಲು ಸುಮಾರು ವರ್ಷವೇ ಆಗುತ್ತದೆ .

Advertisement

 

Advertisement


ಇನ್ನು ಈ ಸಮಯದಲ್ಲಿ ಕನ್ನಡದ ಒಂದು ಪ್ರಖ್ಯಾತ ಚಾನೆಲನ್ನು ಮುಚ್ಚಲಾಗುತ್ತಿದೆ . ಈ ಚಾನೆಲ್ ಎರಡು ವರ್ಷಗಳ ಹಿಂದಷ್ಟೇ ಓಪನ್ ಆಗಿತ್ತು.  ಈ ಚಾನೆಲ್ ಅನ್ನು ರಾಕಿಂಗ್ ಸ್ಟಾರ್ ಯಶ್ ರವರು ಓಪನ್ ಮಾಡಿದ್ದರು .  ಕಲರ್ಸ್ ಕನ್ನಡ ಚಾನೆಲ್ ನ ಸೋದರ ಚಾನೆಲ್ ಆದ ಕಲರ್ಸ್ ಸೂಪರ್ ಚಾನೆಲ್  ಅನ್ನು ಇದೀಗ ಬಂದ್ ಮಾಡಲಾಗುತ್ತಿದೆ . ಕಾರಣವೇನೆಂದರೆ ಈ ಎರಡು ಚಾನೆಲ್ ಗಳಿಗೆ ಕಾರ್ಯಕ್ರಮವನ್ನು ಒದಗಿಸಲು ತೀರಾ ಅಸಾಧ್ಯವಾಗಿದ್ದರಿಂದ ಈ ನಿರ್ಣಯವನ್ನು ಕೈಗೊಳ್ಳಲಾಗಿದೆ.  ಕಲರ್ಸ್ ಸೂಪರ್ ವಾಹಿನಿಯಲ್ಲಿ  ಸಿಲ್ಲಿ ಲಲ್ಲಿ,  ಪಾಪ ಪಾಂಡು,  ಮಗಳು ಜಾನಕಿ , ಇನ್ನು ಮುಂತಾದ ಹಲವಾರು ಧಾರಾವಾಹಿಗಳು ಮತ್ತು ವೀಕೆಂಡ್ ನಲ್ಲಿ ಪ್ರಸಾರವಾಗುತ್ತಿದ್ದ ರಿಯಾಲಿಟಿ ಶೋಗಳಾದ ಮಜಾ ಭಾರತ , ಕನ್ನಡ ಕೋಗಿಲೆ , ಹಾಡು ಕರ್ನಾಟಕ ,  ಮುಂತಾದ ಕಾರ್ಯಕ್ರಮಗಳು ಪ್ರಸಾರವಾಗುತ್ತಿದ್ದವು.

 

ಆದರೆ ಈಗ ಈ ಚಾನೆಲ್ ನ್ನು ಅನಿವಾರ್ಯ ಪರಿಸ್ಥಿತಿಗಳಿಂದ ಬಂದ್ ಮಾಡಿದ್ದರಿಂದ ಈ ಚಾನೆಲ್ ನೋಡುತ್ತಿದ್ದ ಪ್ರೇಕ್ಷಕರು ಬೇಸರ ವ್ಯಕ್ತಪಡಿಸೊದಂತು ಖಂಡಿತ.
ಕೆಲವು ಮೂಲಗಳ ಪ್ರಕಾರ ಕೆಲವು ತಿಂಗಳುಗಳ ನಂತರ ಒಂದು ಹೊಸ ಚಾನೆಲ್ ಒಂದು ವಿಶಿಷ್ಟ ಕಾರ್ಯಕ್ರಮಗಳೊಂದಿಗೆ ತೆರೆಯಲಾಗುತ್ತದೆ ಎನ್ನಲಾಗುತ್ತಿದೆ.  ಇನ್ನು ಕನ್ನಡ ಕಿರುತೆರೆಯ ನಂಬರ್ ಒನ್ ಚಾನೆಲ್ ಆಗಿರುವ ಜೀ ವಾಹಿನಿಯು  ತನ್ನ ಪಾರುಪತ್ಯವನ್ನು ಹೀಗೆ ಮುಂದುವರಿಸಿಕೊಂಡು ಹೋಗುತ್ತದೆಯೋ ಅಥವಾ ಕಲರ್ಸ್ ಕನ್ನಡ ಚಾನೆಲ್ ಒಂದೇ ಆಗಿ ಇರುವುದು ಅಥವಾ ಕಲರ್ಸ್ ಸೂಪರ್ ಚಾನೆಲ್ ಕಂಬ್ಯಾಕ್ ಆಗುವುದ  ಕಾದು ನೋಡಬೇಕು ಅಷ್ಟೇ.

Advertisement
Share this on...