54ನೇ ವಯಸ್ಸಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ..ಖುಷಿಯಲ್ಲೂ ನೋವಿನ ಸಂಗತಿಯೊಂದಿದೆ, ಏನದು..?

in ಕನ್ನಡ ಮಾಹಿತಿ 30 views

ಮದುವೆ ನಂತರ ಸರಿಯಾದ ಸಮಯಕ್ಕೆ ಮಕ್ಕಳಾಗದಿದ್ದಲ್ಲಿ ಆ ದಂಪತಿಗೆ ನಿಜಕ್ಕೂ ಅದಕ್ಕಿಂತ ದೊಡ್ಡ ನೋವಿನ ಸಂಗತಿ ಇಲ್ಲ. ಮನೆಯಲ್ಲಿ ಮಕ್ಕಳ ನಗು, ಅಳು, ತುಂಟಾಟ, ಪಾಠವನ್ನು ನೋಡಲು ಎಲ್ಲರೂ ಕಾಯುತ್ತಿರುತ್ತಾರೆ. ಇನ್ನು ಮದುವೆಯಾಗಿ ಬಹಳ ವರ್ಷಗಳ ನಂತರ ಮಕ್ಕಳನ್ನು ಪಡೆದರೆ ನಿಜಕ್ಕೂ ಅದಕ್ಕಿಂತ ಖುಷಿ ಮತ್ತೊಂದಿಲ್ಲ.ಕೇರಳದ ಆ ಮಹಿಳೆಗೆ 54 ವರ್ಷ, ಪತಿಗೆ 64 ವರ್ಷ ಈ ದಂಪತಿಗೆ ಈಗ ಅವಳಿ ಮಕ್ಕಳು ಜನಿಸಿವೆ. ಇದೇನಪ್ಪಾ ಈ ವಯಸ್ಸಿನಲ್ಲಿ ಮಕ್ಕಳಾ ಎಂದು ಹುಬ್ಬೇರಿಸಬೇಡಿ. ಈಗ ಕಾಲ ಬದಲಾಗಿದೆ. ವೈದ್ಯಕೀಯ ಕ್ಷೇತ್ರ ಬಹಳ ಮುಂದುವರೆದಿದೆ. ಅದರಲ್ಲೂ ಈ ದಂಪತಿ ವಿಚಾರವೇ ಬೇರೆ.

Advertisement

 

Advertisement

Advertisement

ಈ ದಂಪತಿ ಮದುವೆಯಾದ 5 ವರ್ಷಗಳ ಬಳಿಕ ಗಂಡುಮಗುವೊಂದು ಜನಿಸಿದೆ. ಬಹಳ ವರ್ಷಗಳ ಕಾಲ ಏನೂ ತೊಂದರೆ ಇಲ್ಲದೆ ಜೀವನ ನಡೆಸುತ್ತಿದ್ದ ಈ ದಂಪತಿಗೆ ಒಂದು ದಿನ ಆಘಾತ ಕಾದಿತ್ತು. 23ನೇ ವಯಸ್ಸಿನಲ್ಲಿ ಈ ದಂಪತಿ ಪುತ್ರ ನಿಧನರಾದರು. ಸ್ನೇಹಿತರು ಈ ದಂಪತಿಗೆ ಸಮಾಧಾನ ಹೇಳಿದರೂ ‘ಪುತ್ರ ಶೋಕಂ ನಿರಂತರಂ’ ಎಂಬಂತೆ ಈ ದಂಪತಿಗೆ ಮಗ ಅಗಲಿದ ದು:ಖ ಕಾಡುತ್ತಲೇ ಇತ್ತು.ಒಮ್ಮೆ ಹತ್ತಿರದ ಸ್ನೇಹಿತರೊಬ್ಬರು ಈಗಲೂ ನೀವು ಮಕ್ಕಳನ್ನು ಪಡೆಯಬಹುದು ಎಂದು ಹೇಳಿದ್ದು ಇವರ ಮನಸ್ಸಲ್ಲಿ ಮತ್ತೆ ಆಸೆ ಚಿಗುರಿತು. ಈ ಬಗ್ಗೆ ತಿಳಿಯಲು ವೈದ್ಯರ ಬಳಿ ಹೋದಾಗ ಅಲ್ಲೂ ಕೂಡಾ ನೀವು ಮತ್ತೆ ಮಕ್ಕಳನ್ನು ಪಡೆಯಬಹುದು ಎಂದು ಡಾಕ್ಟರ್​​​​ ಹೇಳಿದ್ದಾರೆ.

Advertisement

ಕೆಲವೊಂದು ಪರೀಕ್ಷೆ, ಚಿಕಿತ್ಸೆ ನಂತರ ಈ ಮಹಿಳೆ ಮತ್ತೆ ಗರ್ಭಿಣಿಯಾಗಿದ್ದಾರೆ. ವೈದ್ಯರು ತಿಳಿಸಿದ ಸೂಚನೆಯನ್ನು ಚಾಚೂ ತಪ್ಪದೆ ಪಾಲಿಸಿದ್ದಾರೆ. ಖುಷಿಯ ವಿಚಾರ ಎಂದರೆ ಈ ದಂಪತಿಗೆ ಈಗ ಅವಳಿ ಮಕ್ಕಳು ಜನಿಸಿವೆ. ಅದರಲ್ಲಿ ಒಂದು ಗಂಡು, ಒಂದು ಹೆಣ್ಣು. ಒಟ್ಟಿನಲ್ಲಿ ವಿಧಿ ಈ ದಂಪತಿಯಿಂದ ಒಬ್ಬ ಮಗನನ್ನು ಕಸಿದುಕೊಂಡು ಮತ್ತೆ ಇಬ್ಬರು ಮಕ್ಕಳನ್ನು ನೀಡಿದೆ. ಈ ಮಕ್ಕಳು ಆರೋಗ್ಯವಂತರಾಗಿ, ಒಳ್ಳೆ ಆಯುಷ್ಯವಂತರಾಗಿ ಸಂತೋಷದಿಂದ ಬಾಳಲಿ ಎಂಬುದೇ ನಮ್ಮ ಆಶಯ.

Advertisement
Share this on...