ಮಹಾಭಾರತ ಕಾಲದಿಂದಲೂ ಉಡುಪಿ ಊಟಕ್ಕೆ ವಿಶೇಷ ಸ್ಥಾನಮಾನ…ಈ ಕಥೆ ನಿಜಕ್ಕೂ ಕುತೂಹಲಭರಿತ..!

in ಕನ್ನಡ ಮಾಹಿತಿ 671 views

ನೀವು ದೇವಸ್ಥಾನದಲ್ಲಿ ತಿನ್ನುವ ಊಟಕ್ಕೂ ಮನೆಯಲ್ಲಿ ನಾವು ಮಾಡಿ ತಿನ್ನುವ ಊಟಕ್ಕೂ ರುಚಿಯಲ್ಲಿ ಬಹಳಷ್ಟು ವ್ಯತ್ಯಾಸ ಇರುವುದನ್ನು ನೀವು ಗಮನಿಸಿರಬಹುದು. ನಾವು ಎಷ್ಟೇ ಆಸಕ್ತಿ ವಹಿಸಿ ಮನೆಯಲ್ಲಿ ಎಲ್ಲಾ ಹದ ಹಾಕಿ ಮಾಡಿದ ಅಡುಗೆಗಿಂತ ದೇವಸ್ಥಾನದ ಊಟ ಬಹಳ ರುಚಿಯಿರುತ್ತದೆ. ಅಲ್ಲದೆ ಕೆಲವೊಮ್ಮೆ ಊಟ ಹೆಚ್ಚಾಗಿ ಹೊರಗೆ ಸುರಿಯುದೂ ಉಂಟು. ಆದರೆ ದೇವಸ್ಥಾನದಲ್ಲಿ ಸಾವಿರಾರು ಮಂದಿಗೆ ಅಡುಗೆ ತಯಾರಿಸಲಾಗುತ್ತದೆ. ಆದರೆ ರುಚಿಯಲ್ಲಿ ಸ್ವಲ್ಪವೂ ವ್ಯತ್ಯಾಸವಾಗುವುದಿಲ್ಲ, ಜೊತೆಗೆ ಸ್ವಲ್ಪವೂ ಮಿಗುವುದಿಲ್ಲ. ಈ ಪುಣ್ಯಕ್ಷೇತ್ರಗಳ ಪವಾಡವೇ ಹಾಗೆ.ನಮ್ಮ ರಾಜ್ಯದಲ್ಲೂ ಬಹುತೇಕ ಎಲ್ಲಾ ದೊಡ್ಡ ದೇವಸ್ಥಾನಗಳಲ್ಲೂ ಭಕ್ತಾಧಿಗಳಿಗೆ ಊಟದ ವ್ಯವಸ್ಥೆ ಇರುತ್ತದೆ. ಎಷ್ಟೇ ತಡವಾದರೂ ಭಕ್ತರು ಮಾತ್ರ ಒಂದು ತುತ್ತು ಅನ್ನ ದೊರೆತರೆ ಸಾಕು ಎಂದು ಕಾದು ಕುಳಿತು ಊಟ ಮಾಡಿ ಬರುತ್ತಾರೆ. ಇನ್ನು ಒಂದೊಂದು ಪುಣ್ಯಕ್ಷೇತ್ರಕ್ಕೂ ಅದರದ್ದೇ ಆದ ಹಿನ್ನೆಲೆ ಇದೆ. ಅದೇ ರೀತಿ ಉಡುಪಿಯ ಶ್ರೀಕೃಷ್ಣ ಮಠದ ಊಟಕ್ಕೂ ಒಂದು ಹಿನ್ನೆಲೆ, ಕಥೆ ಇದೆ. ಇಲ್ಲಿನ ದೇವಸ್ಥಾನದಲ್ಲಿ ತಯಾರಾಗುವ ಊಟಕ್ಕೆ ಮಹಾಭಾರತದ ಕಾಲದಿಂದಲೂ ಬಹಳ ವಿಶೇಷ ಸ್ಥಾನಮಾನವಿದೆ.

Advertisement

 

Advertisement

Advertisement

ಮಹಾಭಾರತ ಯುದ್ಧ ವಿಶ್ವದ ಮೊದಲ ಯುದ್ಧ ಎನ್ನಲಾಗಿದೆ. ಪಾಂಡವರು ಮತ್ತು ಕೌರವರು ಯುದ್ಧ ಮಾಡುವಾಗ ಇದರ ಪ್ರಾಂತ್ಯದ ರಾಜರೆಲ್ಲಾ ತಮಗೆ ಬೇಕಾದ ಕಡೆಗೆ ಸಹಾಯ ಮಾಡುವ ಮೂಲಕ ಯುದ್ಧದಲ್ಲಿ ಭಾಗಿಯಾಗುತ್ತಿದ್ದರಂತೆ. ಆದರೆ ಉಡುಪಿಯ ನರೇಶ ಮಹಾರಾಜ ಮಾತ್ರ ಯಾರ ಕಡೆಗೂ ಸೇರದೆ ತಟಸ್ಥರಾಗಿದ್ದರಂತೆ. ಆದರೆ ಅವರಿಗೆ ಯುದ್ಧದಲ್ಲಿ ಭಾಗಿಯಾಗುವ ಸೈನಿಕರ ಊಟದ ವ್ಯವಸ್ಥೆ ಬಗ್ಗೆ ಚಿಂತೆ ಕಾಡತೊಡಗಿದೆ. ಆ ಕಾರಣದಿಂದ ಶ್ರೀಕೃಷ್ಣನ ಬಳಿ ತೆರಳಿ ಯಾರೊಬ್ಬರೂ ಸೈನಿಕರ ಊಟದ ಬಗ್ಗೆ ಯೋಚಿಸುತ್ತಿಲ್ಲ. ನೀವು ಅನುಮತಿ ನೀಡುವುದಾದರೆ ನಾನು ಎರಡೂ ಕಡೆಯ ಸೈನಿಕರಿಗೆ ಊಟದ ವ್ಯವಸ್ಥೆ ಮಾಡುತ್ತೇನೆ ಎಂದು ಕೃಷ್ಣನ ಬಳಿ ಸಲಹೆ ಕೇಳಿದ್ದಾರೆ.

Advertisement

 

ನರೇಶ ಮಹಾರಾಜನ ಈ ಮಾತಿಗೆ ಶ್ರೀಕೃಷ್ಣ ಒಪ್ಪಿಗೆ ನೀಡಿ, ಯುದ್ಧದಲ್ಲಿ ಪ್ರತಿದಿನ 50 ಲಕ್ಷಕ್ಕೂ ಹೆಚ್ಚು ಸೈನಿಕರು ಭಾಗವಹಿಸುತ್ತಾರೆ. ಒಬ್ಬ ಸೈನಿಕನಿಗೂ ಕಿಂಚಿತ್ತೂ ಊಟಕ್ಕೆ ತೊಂದರೆಯಾಗದಂತೆ ಊಟದ ವ್ಯವಸ್ಥೆ ಮಾಡಲು ಸೂಚಿಸಿದ್ದಾರೆ. ಅಂದಿನಿಂದ ಉಡುಪಿ ರಾಜ ಎಲ್ಲಾ ಸೈನಿಕರಿಗೆ ಊಟದ ವ್ಯವಸ್ಥೆ ಮಾಡಲಾರಂಭಿಸಿದ್ದಾರೆ. ದಿನಕಳೆದಂತೆ ಸೈನಿಕರ ಸಂಖ್ಯೆ ಕಡಿಮೆಯಾಗುತ್ತಾ ಬಂತು. ಆದರೆ ಉಡುಪಿ ರಾಜ ಮಾಡುತ್ತಿದ್ದ ಊಟದ ವ್ಯವಸ್ಥೆಯಲ್ಲಿ ಸ್ವಲ್ಪವೂ ವ್ಯತ್ಯಾಸ ಕಾಣಲಿಲ್ಲ. ಇದನ್ನು ಕಂಡು ಸ್ವತ: ಕೌರವರು ಹಾಗೂ ಪಾಂಡವರು ಕೂಡಾ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಕೊನೆಗೂ ಮಹಾಭಾರತದ ಯುದ್ಧ ಮುಗಿದು 18ನೇ ದಿನಕ್ಕೆ ಪಾಂಡವರ ಪಟ್ಟಾಭಿಷೇಕಕ್ಕೆ ಎಲ್ಲಾ ತಯಾರಿ ಆರಂಭವಾಗಿದೆ. ಆ ವೇಳೆ ಯುದಿಷ್ಠಿರ, ಉಡುಪಿ ರಾಜನ ಬಳಿ ತೆರಳಿ ಯುದ್ಧದ ವೇಳೆ ಹೇಗೆ ಸೈನಿಕರಿಗೆ ಒಂದು ಅನ್ನದ ಅಗುಳು ಕೂಡಾ ವ್ಯತ್ಯಾಸವಾಗದೆ ಊಟದ ವ್ಯವಸ್ಥೆ ಮಾಡಿದಿರಿ ಎಂದು ಪ್ರಶ್ನಿಸುತ್ತಾರೆ. ಇದಕ್ಕೆ ಉತ್ತರಿಸಿದ ಉಡುಪಿ ರಾಜ, ನೀವು ಯುದ್ಧ ಗೆಲ್ಲಲು ಶ್ರೀಕೃಷ್ಣ ಹೇಗೆ ಕಾರಣವೋ ನಾನು ಸೈನಿಕರಿಗೆ ಹೆಚ್ಚು ಕಡಿಮೆ ಆಗದೆ ಊಟ ತಯಾರಿಸುತ್ತಿದ್ದರ ಹಿಂದೆ ಕೂಡಾ ಶ್ರೀಕೃಷ್ಣನ ಪವಾಡವಿದೆ.

 

ಪ್ರತಿದಿನ ರಾತ್ರಿ ನಾವು ಶ್ರೀಕೃಷ್ಣನಿಗೆ ತಿನ್ನಲು ಕಡಲೆ ಬೀಜ ನೀಡುತ್ತಿದ್ದೆವು. ಕಡಲೆಬೀಜ ನೀಡುವ ಮುನ್ನ ಹಾಗೂ ಅದನ್ನು ಕೃಷ್ಣ ತಿಂದ ನಂತರ ನಾವು ಅದನ್ನು ಲೆಕ್ಕ ಮಾಡುತ್ತಿದ್ದೆವು. ಪ್ರತಿದಿನ ಕೃಷ್ಣ ತಿಂದ ಕಡಲೆ ಬೀಜದ ಸಾವಿರ ಪಟ್ಟು ಹೆಚ್ಚು ಸೈನಿಕರು ಯುದ್ಧದಲ್ಲಿ ಸಾಯುತ್ತಿದ್ದರು. ಅಂದರೆ ಕೃಷ್ಣ 50 ಕಡಲೆಬೀಜ ತಿಂದರೆ ಮರುದಿನ ಯುದ್ಧದಲ್ಲಿ 50 ಸಾವಿರ ಸೈನಿಕರು ಸಾವನ್ನಪ್ಪುತ್ತಿದ್ದರು. ಇದಕ್ಕೆ ತಕ್ಕಂತೆ ನಾವು ಊಟದ ವ್ಯವಸ್ಥೆ ಮಾಡುತ್ತಿದ್ದೆವು. ಎಂದು ಉಡುಪಿ ರಾಜ ಯುಧಿಷ್ಠಿರನಿಗೆ ಉತ್ತರಿಸಿದ್ದಾರೆ. ಈ ಉತ್ತರ ಕೇಳಿ ನಿಜಕ್ಕೂ ಎಲ್ಲರೂ ದಂಗಾಗುತ್ತಾರೆ. ಉಡುಪಿ ರಾಜನ ಬುದ್ಧಿಮತೆ, ಚಾಕಚಕ್ಯತೆ ಹಾಗೂ ಸೈನಿಕರಿಗೆ ಊಟ ತಯಾರಿಸುವ ಸಹೃದಯಕ್ಕೆ ಕರಗುತ್ತಾರೆ.

 

ಈ ಮೂಲಕ ಉಡುಪಿ ಊಟಕ್ಕೆ ತನ್ನದೇ ವಿಶೇಷ ಸ್ಥಾನಮಾನವಿದೆ. ಪ್ರತಿದಿನ ಇಲ್ಲಿ ಬರುವ ಭಕ್ತರಿಗೆ ಊಟದಲ್ಲಿ ಸ್ವಲ್ಪವೂ ಹೆಚ್ಚು ಕಡಿಮೆ ಆಗದಂತೆ ರುಚಿಯಾಗಿ ಊಟ ತಯಾರಿಸಲಾಗುತ್ತಿದೆ. ಶ್ರೀಕೃಷ್ಣ, ಉಡುಪಿ ರಾಜನ ಆಶೀರ್ವಾದ ಇಲ್ಲಿನ ಪ್ರತಿ ಅನ್ನದ ಅಗುಳಿನ ಮೇಲೆ ಇರುವುದು ಮಾತ್ರ ನಿಜ. ನೀವು ಉಡುಪಿಗೆ ಹೋದಲ್ಲಿ ಇಲ್ಲಿ ಊಟ ಮಾಡುವುದನ್ನು ಮಾತ್ರ ಮರೆಯಬೇಡಿ.

Advertisement