ಮತ್ತೆ ನಿರ್ದೇಶನದ ಕ್ಯಾಪ್ ತೊಟ್ಟಿದ್ದಾರೆ ರಿಯಲ್ ಸ್ಟಾರ್ ಉಪೇಂದ್ರ : ಚಿತ್ರದ ಹೆಸರೇನು ಗೊತ್ತಾ?

in ಮನರಂಜನೆ/ಸಿನಿಮಾ 178 views

ಅದೊಂದು ಕಾಲವಿತ್ತು ಕನ್ನಡ ಚಿತ್ರಗಳು ಕರ್ನಾಟಕದ ಗಡಿ ದಾಟುವುದಿಲ್ಲ, ಕೇವಲ ಕರ್ನಾಟಕಕ್ಕೆ ಮಾತ್ರ ಸೀಮತ ಎಂದು ಹಲವರು ಮಾತನಾಡಿ ಕೊಳ್ಳುತ್ತಿದ್ದರು. ಆದರೆ ಆ ಮಾತನ್ನು ಸುಳ್ಳು ಮಾಡಿ ವಿಶ್ವದ ಶ್ರೇಷ್ಠ ನಿರ್ದೇಶಕರ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡು ಕನ್ನಡ ಚಿತ್ರವನ್ನು ದೇಶ ವಿದೇಶದವರೆಗೂ ತಲುಪುವಂತೆ ಮಾಡಿದವರು ರಿಯಲ್ ಸ್ಟಾರ್ ಸೂಪರ್ ಸ್ಟಾರ್ ಉಪೇಂದ್ರ ಅವರು. ಆ ಕಾಲದಲ್ಲಿ ಕನ್ನಡದಲ್ಲಿ ಅದಾಗಲೇ ಶಿವರಾಜ್‌ಕುಮಾರ್, ರಮೇಶ ಅರವಿಂದ್ , ಶಶಿಕುಮಾರ್  ಅಂತ ನಟರು ಚಿತ್ರರಂಗವನ್ನು ಆಳುತ್ತಿದ್ದರು. ಆ ಸಮಯದಲ್ಲಿ ನಿರ್ದೇಶಕ ಹಾಗೂ ನಾಯಕನಟನಾಗಿ ತಮ್ಮನ್ನು ತಾವು ಸ್ಥಾಪಿಸಿಕೊಂಡವರು ಇದೇ ಉಪೇಂದ್ರ ಅವರು. ಹುಟ್ಟಿದ್ದು ಕಡು ಬಡತನದಲ್ಲಿ, ಅಪ್ಪಟ ಶಂಕರ್ ನಾಗ್ ಅವರ ಅಭಿಮಾನಿ. ಕಡು ಬಡತನ ವಿದ್ದರು, ಜೀವನದಲ್ಲಿ ಸಿನಿಮಾ ಮಾಡಬೇಕೆಂಬ ಛಲ ತೊಟ್ಟಿದ್ದರು. ಅವರ ಕನಸಿಗೆ ಸಾಥ್ ನೀಡಿದವರು ಹೆಸರಾಂತ ನಿರ್ದೇಶಕ ಮತ್ತು ನಟ ಕಾಶಿನಾಥ್ ಅವರು. ಕಾಶಿನಾಥ್ ಅವರ ಗರಡಿಯಲ್ಲಿ ಬೆಳೆದ ಉಪೇಂದ್ರ ಅವರು ಸಹ ನಿರ್ದೇಶಕ, ಗೀತ ರಚನಕಾರ ಹಾಗೂ ಸಣ್ಣ ಪುಟ್ಟ ಪಾತ್ರಗಳನ್ನು ಮಾಡುತ್ತ ಸಾಗುತ್ತಿದ್ದರು. ನಂತರ ವರ್ಷಗಳು ಕಳೆದ ಮೇಲೆ ತಾವೇ ಒಂದು ಕಥೆ ಬರೆದು ನಿರ್ದೇಶನ ಮಾಡಲು ಮುಂದಾದರು. ಆ ಕಥೆಯ ಹೆಸರೇ ತರ್ಲೆ ನನ್ ಮಗ.

Advertisement

Advertisement

ಈ ಸಿನಿಮಾವನ್ನು ನವರಸ ನಾಯಕ ಜಗ್ಗೇಶ್ ಅವರೇ ಸ್ವತಃ ಬಂಡವಾಳ ಹೂಡಿ ನಟಿಸಿದ್ದರು. ಹಾಸ್ಯ ಪ್ರಧಾನವಾದ ಈ ಚಿತ್ರವೂ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತು. ಇದರಂದ ಅಂದು ಉಪ್ಪಿ ಅವರ ಹೆಸರು ನಿರ್ದೇಶಕರ ಪಟ್ಟಯಲ್ಲಿ ಸ್ಥಾನ ಪಡೆದುಕೊಳ್ಳುವಂತ್ತಾಯಿತು. ನಂತರ ಭಯನಾಕವಾದ ನಿಗೂಢ  ರೋಮಾಂಚಕವಾದ ಕಥೆಯನ್ನು ಹೆಣದ ಉಪ್ಪಿ, ಈ ಕಥೆಗೆ ಶ್ ಎಂಬ ಶೀರ್ಷಿಕೆಯನ್ನು ಅಳವಡಿಸಿದರು. ಈ ಚಿತ್ರಕೂಡ ಗಲ್ಲಾಪೆಟ್ಟಿಗೆಯಲ್ಲಿ ದೊಡ್ಡ ಮಟ್ಟದ ಯಶಸ್ಸನ್ನು ಕಂಡಿದ್ದು, ಚಿತ್ರದಲ್ಲಿ ಕಾಶಿಮಾಥ್ ಹಾಗೂ ಕುಮಾರ್ ಗೋವಿಂದ್ ಅಭಿನಯಿಸಿದ್ದರು. ಇನ್ನು ಈ ಚಿತ್ರ ಕನ್ನಡ ಚಿತ್ರರಂಗದ ಅತ್ಯುತ್ತಮ ಭಯಾನಕ ಥ್ರಿಲ್ಲರ್ ಚಿತ್ರದಲ್ಲಿ ಒಂದಾಗಿದೆ.

Advertisement

ಇವೆರೆಡು ಚಿತ್ರಗಳ ನಂತರ ಅದಾಗಲೇ ಉಪೇಂದ್ರ ಅವರು ಕನ್ನಡ ಚಿತ್ರರಂಗದ ಭರವಸೆಯ ನಿರ್ದೇಶಕರಾಗಿ ಹೊರಹೊಮ್ಮಿದ್ದರು. ನಂತರ ಬಂದಿದ್ದೇ ಓಂ. ಈ ಸಿನಿಮಾ ಭಾರತದ ಚಿತ್ರರಂಗದಲ್ಲೇ ದಂತಕತೆಯಾಗಿ ಬಿಟ್ಟಿದೆ. ಪ್ರೇಮಕಥೆ ಹಾಗೂ ರೌಡಿಸಂ ಕಥಾಹಂದರವನ್ನು ಹೊಂದಿದ್ದ ಈ ಸಿನಿಮಾ ಇಡೀ ಭಾರತದಲ್ಲಿ ದೊಡ್ಡ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. ಅಲ್ಲದೆ ಭಾರತ ಚಿತ್ರರಂಗದ ರೌಡಿಸಂ ಚಿತ್ರಗಳಿಗೆ    ಮೊದಲು ನಾಂದಿ ಹಾಡಿದ ಸಿನಿಮಾ ಈ ಓಂ. ಕನ್ನಡ ಚಿತ್ರರಂಗದಲ್ಲಿ ಈ ಸಿನಿಮಾ ಮಾಡಿರುವ ದಾಖಲೆ ಮತ್ಯಾವ ಸಿನಿಮಾ ಮಾಡಲು ಸಾಧ್ಯವೇ ಇಲ್ಲ. ಈ ಸಿನಿಮಾದಿಂದ ಉಪೇಂದ್ರ ಅವರು ದೊಡ್ಡ ನಿರ್ದೇಶಕರಾಗಿ ಹೊರಹೊಮ್ಮಿದರೆ, ಶಿವರಾಜ್ ಕುಮಾರ್ ಅವರಿಗೆ ದೊಡ್ಡ ಖ್ಯಾತಿಯನ್ನು ತಂದುಕೊಟ್ಟಿತ್ತು. ಈ ಸಿನಿಮಾ ದಾಖಲೆಗಳ ಸರೆಮಾಲೆಯನ್ನೇ ಹರಿಸಿದ್ದು, ಅತೀ ಹೆಚ್ಚು ಬಾರಿ ರೀ ರಿಲೀಸ್ ಆಗಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಜೊತೆಗೆ ಸಿನಿಮಾ ಬಿಡುಗಡೆಯಾಗಿ ದಶಕಗಳ ನಂತರವೂ ಕೋಟಿ ಕೋಟಿ ಮೊತ್ತದಲ್ಲಿ ಸೆಟಲೈಟ್ ರೈಟ್ಸ್ ಗೆ ಕೂಡ ಮಾರಾಟವಾಗಿತ್ತು. ಈ ಸಿನಿಮಾದ ದಾಖಲೆಗಳನ್ನು ಹೇಳುತ್ತಾ ಹೋದರೆ ಮುಗಿಯುವುದೇ ಇಲ್ಲ. ನಂತರ ಅಪರೇಷನ್ ಅಂತ ಎಂಬ ಹೆಸರಿನಲ್ಲಿ ಅಂಬರೀಶ್ ಅವರನ್ನು ಹಾಕಿಕೊಂಡು ಸಿನಿಮಾ ಮಾಡಿದರು. ಈ ಸಿನಿಮಾವೂ ತಕ್ಕ ಮಟ್ಟಿಗೆ ಯಶಸ್ಸು ಕಂಡುತು. ಅದಾಗಲೇ ಉಪ್ಪಿ ಟಾಪ್ ನಿರ್ದೇಶಕರಾಗಿ ಬಿಟ್ಟಿದ್ದರು.

Advertisement

ನಂತರ ನಿರ್ದೇಶನ ಪಟ್ಟದಿಂದ ನಟನೆಯತ್ತ ಒಲವು ಮಾಡಿದ ಉಪ್ಪಿ, ಸ್ವತಃ ತಾವೇ ನಿರ್ದೇಶಿಸಿ ನಟಿಸಿ ಎ ಮತ್ತು ಉಪೇಂದ್ರ ಎಂಬ ಸಿನಿಮಾ ಮಾಡಿದರು. ಈ ಸಿನಿಮಾಗಳು ಕೂಡ ಭಾರತ ಚಿತ್ರರಂಗದಲ್ಲಿ ಹಾಗೂ ವಿದೇಶದಲ್ಲೂ ಸದ್ದು ಮಾಡಿತ್ತು.  ಈ ಸಿನಿಮಾಗಳಿಂದ ಉಪೇಂದ್ರ ಅವರಿಗೆ ಡಿಫರೇಂಟ್ ನಿರ್ದೇಶಕ ಎಂಬ ಖ್ಯಾತಿ ತಂದುಕೊಟ್ಟಿತು. ನೋಡು ನೋಡುತ್ತಲೆ ಉಪ್ಪಿ ಇಡೀ ಭಾರತ ಚಿತ್ರರಂಗದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿ ಬಿಟ್ಟರು. ಕನ್ನಡ ಚಿತ್ರರಂಗದಲ್ಲಿ ನಾಯಕ ಹಾಗೂ ನಿರ್ದೇಶಕರಾಗಿ ತನ್ನದೇ ಆದ ಛಾಪು ಮೂಡಿಸಿದರು. ನಂತರ ಲಾಂಗ್ ಗ್ಯಾಪ್ ನ ನಂತರ ರಾಫವೇಂದ್ರ ರಾಜ್ ಕುಮಾತ್ ಅವರ ಜೊತೆ ಸ್ವಸ್ತಿಕ್ ಎಂಬ ಸಿನಿಮಾ ಮಾಡಿದರು. ಈ ಸಿನಿಮಾ ದೊಡ್ಡ ವಿವಾದವನ್ನೆ ಮಾಡಿತ್ತು. ನಂತರ ಅದೇನಾಯ್ತೋ ಏನೋ ಉಪ್ಪಿ ನಿರ್ದೇಶನ ಮಾಡುವುದನ್ನೆ ನಿಲ್ಲಿಸಿ ಬಿಟ್ಟರು. ಅವರ ನಿರ್ದೇಶನಕ್ಕಾಗಿ ಅಭಿಮಾನಿಗಳು ಹಂಬಲಿಸುತ್ತಿದ್ದರು. ಉಪ್ಪಿ ಅವರ ನಿರ್ದೇಶನದಲ್ಲಿ ಸಿನಿಮಾ ನೋಡಲು  ೧೦ ವರುಷಗಳು ಕಾಯ ಬೇಕಾಯಿತು.

೧೦ ವರುಷಗಳ ನಂತರ ಉಪ್ಪಿ ಸೂಪರ್ ಎಂಬ ಸಿನಿಮಾವನ್ನು ನಿರ್ದೇಶಿಸಿ ನಟಿಸಿದರು.  ಈ ಚಿತ್ರವು ಡಿಸೆಂಬರ್ 3, 2010 ರಂದು ಕನ್ನಡ ಆವೃತ್ತಿಯಲ್ಲಿ ಮತ್ತು 11 ಮಾರ್ಚ್ 2011 ರಂದು ತೆಲುಗು ಆವೃತ್ತಿಯಲ್ಲಿ ಬಿಡುಗಡೆಯಾಯಿತು. ಈ ಚಿತ್ರವೂ ಭಾರತದ ಪರಿಕಲ್ಪನೆಯ ಚಿತ್ರವಾಗಿದ್ದು, ಭಾರತದ ಸಮಕಾಲೀನ ಚಿತ್ರಣವನ್ನು ಹೊಂದಿದೆ. ವರ್ಷಗಳ ಅಂತರದ ನಂತರ ಉಪೇಂದ್ರ ನಿರ್ದೇಶಕರಾಗಿ ಪುನರಾಗಮನವನ್ನು ಗುರುತಿಸಿದ್ದರಿಂದ ಈ ಚಿತ್ರವು ಮಾಧ್ಯಮಗಳಲ್ಲಿ ಭಾರಿ ಪ್ರಚೋದನೆಯನ್ನು ಉಂಟುಮಾಡಿತು. ಈ ಚಿತ್ರವು ವಿಮರ್ಶಕರ ಪರಿಕಲ್ಪನೆ ಮತ್ತು ಚಿತ್ರಕಥೆಯನ್ನು ಶ್ಲಾಘಿಸುವುದರೊಂದಿಗೆ ಸಕಾರಾತ್ಮಕ ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆಯಿತು. ಬಿಡುಗಡೆಗೆ ಮುಂಚೆಯೇ ಉಪಗ್ರಹ ದೂರದರ್ಶನ ಮತ್ತು ಆಡಿಯೊ ಹಕ್ಕುಗಳ ಮೂಲಕ  100 ದಶಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಗಳಿಸಿತು, ಕನ್ನಡದಲ್ಲಿ ಇದು ಆರಂಭಿಕ ವಾರಾಂತ್ಯದ ಮೊದಲ ಮೂರು ದಿನಗಳಲ್ಲಿ 25 ದಶಲಕ್ಷವನ್ನು ಗಳಿಸಿತು. ಮತ್ತು ಗಲ್ಲಾಪೆಟ್ಟಿಗೆಯಲ್ಲಿ  500 ಮಿಲಿಯನ್ ಗಳಿಸಿತು ಎಂದು ಹೇಳವಾಗುತ್ತಿದೆ. ನಂತರ ಉಪ್ಪಿ-೨ ಎಂಬ ಸಿನಿಮಾವನ್ನು ನಿರ್ದೇಶಸಿ ನಟಿಸಿದರು. ಈ ಸಿನಿಮಾ ಕೂಡ ಸೂಪರ್ ಹಿಟ್ ಆಯಿತು.  ಉಪ್ಪಿ ಇನ್ನೇನು ಮಾಹಿತಿ ಹೊರ ಹಾಕಿದ್ದಾರೆ ಎಂದು ತಿಳಿದು ಕೊಳ್ಳಲು ಈ ವಿಡಿಯೋ ನೋಡಿ !

ಇದೀಗ ೫ ವರುಷಗಳ ಬಳಿಕ ಮತ್ತೆ ಉಪ್ಪಿ ಅವರು ನಿರ್ದೇಶನ ಕ್ಯಾಪ್ ತೊಟ್ಟಿದ್ದು, ಸ್ವತಃ ಈ ವಿಚಾರವನ್ನು ಅವರೇ ಹಂಚಿಕೊಂಡಿದ್ದಾರೆ. ಈ ಕುರಿತು ಮಾತನಾಡಿರುವ ಅವರು ” ನಿಮ್ಮಲ್ಲರ ಆಸೆ ತರ ಕಂಡಿತವಾಗಿ ನಿರ್ದೇಶನ ದ ಸಿನಿಮಾವನ್ನು ಮಾಡುತ್ತೇನೆ.ಈಗಾಗಲೇ ಕಥೆ ತಯಾರಾಗಿದೆ. ಆದರೆ ಚಿತ್ರದ ಶಿರ್ಷಿಕೆಗೆ ಸ್ವಲ್ಪ ಸಮಯ ಬೇಕಿದೆ. ಯಾಕೆಂದರೆ ಹಲವಾರು ಸಿನಿಮಾ ಚಿತ್ರೀಕರಣ ನಡೆಯ ಬೇಕಾಗಿರುವುದಂರಿಂದ ಸ್ವಲ್ಪ ಸಮಯ ಬೇಕಾಗಿದೆ” ಎಂದು ತಿಳಿಸಿದ್ದಾರೆ.

ಮೋಡಿ ಮಾಂತ್ರಿಕರು ಪ್ರಸಿದ್ಧಜ್ಯೊತಿಷಿಗಳಾದ ಶ್ರೀ ಮಂಜುನಾಥ್ ಭಟ್ ಅವರು ಗಂಡ ಹೆಂಡತಿ ಕಲಹ, ಡೈವರ್ಸ ಪ್ರಾಬ್ಲಮ್, ಆಸ್ತಿಯಲ್ಲಿ ಕದನ, ಕೋರ್ಟ್ ಕೇಸ್, ಆರೋಗ್ಯದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಂತಾನ ಫಲ, ಸಾಲ ಭಾದೆ, ಮದುವೆ ವಿಚಾರದಲ್ಲಿ ವಿಘ್ನ , ಅತ್ತೆ ಸೊಸೆ ಕಲಹ, ನಿಮ್ಮ ಮನದಾಳದ ಯಾವುದೇ ಗುಪ್ತ ಸಮಸ್ಯೆ  ಇದ್ದರೆ ಜೀವನದಲ್ಲಿ ಜಿಗುಪ್ಸೆ ಹೊಂದ್ದಿದರೆ ನಿಮ್ಮ ಒಂದೇ ಒಂದು ಫೋನ್ ಕರೆ 9591706765 ನಿಮ್ಮ ಜೀವನವನ್ನೇ ಬದಲಾಯಿಸಿ ಬಿಡುತ್ತದೆ.
ವಿಶೇಷ  ಸೂಚನೆ : ಕೊಳ್ಳೆಗಾಲದ ಮಂತ್ರ ಶಕ್ತಿಯಿಂದ ಸ್ತ್ರೀ- ಪುರುಷ ವಶೀಕರಣ 3 ದಿನಗಳಲ್ಲಿ 100% ಪರಿಹಾರ ಶತಸಿದ್ಧ. ಅಸಾದ್ಯವಾದದ್ದು ಇಲ್ಲಿ ಸಾದ್ಯ.

Advertisement
Share this on...