ಓಂ ಗಾಗಿ ನಿಜವಾದ ರೌಡಿಗಳನ್ನ ಕರೆತಂದಿದ್ದ ಉಪೇಂದ್ರ ಅವರು ಅನುಭವಿಸಿದ ಕಷ್ಟವೇನು !? ಬೆಚ್ಚಿಬೀಳ್ಳುತ್ತೀರಾ..

in ಮನರಂಜನೆ/ಸಿನಿಮಾ 28 views

ಕನ್ನಡ ಚಿತ್ರರಂಗವನ್ನು ಉನ್ನತ ಸ್ಥಾನಕ್ಕೆ ತೆಗೆದುಕೊಂಡು ಹೋದ ನಿರ್ದೇಶಕರಲ್ಲಿ ಉಪೇಂದ್ರ ಅವರ ಹೆಸರು ಹೆಚ್ಚಾಗಿ ಕೇಳಿ ಬರುತ್ತದೆ. ತಮ್ಮ ವಿಶಿಷ್ಟ ನಿರ್ದೇಶನ, ವಿಶೇಷವಾದ ಚಿತ್ರಕಥೆ , ಎದೆಗೆ ನಾಟುವಂತಹ ಸಂಭಾಷಣೆ, ತಮ್ಮನ್ನು ತಾವು ಕಂಡುಕೊಳ್ಳುವಂತಹ ಪಾತ್ರ, ಇದೆಲ್ಲವೂ ಪ್ರೇಕ್ಷಕರಿಗೆ ಬಹಳ ಇಷ್ಟವಾಗುತ್ತದೆ. ಉಪೇಂದ್ರ ಅವರು ಚಿತ್ರರಂಗವನ್ನು ವೃತ್ತಿ ಜೀವನಕ್ಕಾಗಿ ಆಯ್ಕೆ ಮಾಡಿಕೊಂಡಾಗ ಕಡು ಬಡತನದಲ್ಲಿದ್ದರು. ಅವರು ನಡೆದು ಬಂದ ದಾರಿ ಅಷ್ಟು ಸುಗಮವಾಗಿರಲಿಲ್ಲ. ಬಡತನವನ್ನು ದೌರ್ಬಲ್ಯ ಎಂದುಕೊಳ್ಳದೇ ತಮ್ಮ ಗುರಿಯನ್ನು ಬೆನ್ನತ್ತಿದ ಉಪೇಂದ್ರ ಅವರು  ಇದೀಗ ವಿಶ್ವದ ಟಾಪ್ ೨೦ ನಿರ್ದೇಶಕರಲ್ಲಿ ಒಬ್ಬರಾಗಿದ್ದಾರೆ.ನಾವು ಜೀವನದಲ್ಲಿ ಎಷ್ಟೇ ಎತ್ತರಕ್ಕೆ ಏರಿದರೂ ಅನ್ನ ಹಾಕಿದ ಪೋಷಕರು, ವಿದ್ಯೆ ನೀಡಿದ ಗುರುಗಳನ್ನು ಮಾತ್ರ ಮರೆಯಬಾರದು. ಉಪೇಂದ್ರ ಅವರು ಮೊದಲು ಮಣ್ಣು ಮುಚ್ಚಿದ ಕಲ್ಲಿನಂತಿದ್ದರು. ಮಣ್ಣನ್ನು ತೆಗೆದು  ಆ ಕಲ್ಲನ್ನು ಕೆತ್ತಿ ಒಂದು ಶಿಲ್ಪವನ್ನಾಗಿ ಮಾಡಿದ್ದು ನಿರ್ದೇಶಕ ಕಾಶಿನಾಥ್ ಅವರು. ಹೌದು ಕಾಶಿನಾಥ್ ಅವರ ಗರಡಿಯಲ್ಲಿ ಬೆಳೆದ ಉಪೇಂದ್ರ ಅನೇಕ ವಿಚಾರಗಳು ವಿಷಯಗಳನ್ನು ಅವರಿಂದ ಕಲಿತಿದ್ದಾರೆ.. ಉಪೇಂದ್ರ  ಇಷ್ಟು ಎತ್ತರಕ್ಕೆ ಬೆಳೆಯಲು ಕಾರಣ ಕಾಶಿನಾಥ್ ರವರು ಕೂಡ ಎಂದರೆ ತಪ್ಪಾಗಲಾರದು.

Advertisement

Advertisement

ಮೊದಮೊದಲು ಕಾಶಿನಾಥ್ ಅವರ ಚಿತ್ರದಲ್ಲಿ ಸಹಾಯಕ ನಿರ್ದೇಶಕನಾಗಿ, ಸಣ್ಣ ಸಣ್ಣ ಪಾತ್ರಗಳಲ್ಲಿ ಅಭಿನಯಿಸಿ ಚಿತ್ರಕ್ಕೆ ಸಂಭಾಷಣೆ ಮತ್ತು  ಸಾಹಿತ್ಯವನ್ನು ಬರೆಯುತ್ತಿದ್ದ ಉಪೇಂದ್ರ, ಜಗ್ಗೇಶ್ ಅವರಿಗೆ ತರ್ಲೆ ನನ್ನ ಮಗ ಎಂಬ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತ ಕನ್ನಡ ಚಿತ್ರರಂಗಕ್ಕೆ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದರು. ಸಿಕ್ಕಾಪಟ್ಟೆ ಕಾಮಿಡಿ ಕತೆಯನ್ನು ಮುಂದಿಟ್ಟ ಈ ಸಿನಿಮಾ ಕನ್ನಡ ಚಿತ್ರದಲ್ಲಿ ತುಂಬ ಯಶಸ್ಸನ್ನು ಕಂಡಿತ್ತು.. ನಂತರ ಕಾಮಿಡಿ ಜಾನರ್ ನಿಂದ ಹಾರರ್ ಸಿನಿಮಾಗಳ ಕಡೆ ಮುಖ ಮಾಡಿದ ಉಪೇಂದ್ರ “ಶ್” ಎಂಬ ಚಿತ್ರವನ್ನು ನಿರ್ದೇಶಿಸಿದರು. ಹಾರರ್ ಮತ್ತು ಸಸ್ಪೆನ್ಸ್ ,ಥ್ರಿಲ್ಲರ್ ಕಥೆಯನ್ನು ಹೊಂದಿದ್ದ ಈ ಸಿನಿಮಾ ಚಿತ್ರರಂಗದಲ್ಲಿ ದೊಡ್ಡ ಬ್ಲಾಕ್ ಬಸ್ಟರ್ ಹಿಟ್ ಆಯ್ತು. ಅಲ್ಲದೇ ಉಪೇಂದ್ರ ಅವರಿಗೆ ದೊಡ್ಡ ಮಟ್ಟದ ಖ್ಯಾತಿಯನ್ನು ಕೂಡ ತಂದುಕೊಟ್ಟಿತು. ನಂತರ ಇವರ ನಿರ್ದೇಶನದಲ್ಲಿ ಮೂಡಿ ಬಂದಿದ್ದು ಓಂ. ಈ ಸಿನಿಮಾ ಭಾರತದ ಚಿತ್ರರಂಗದಲ್ಲಿ ದಂತಕತೆಯಾಗಿ  ಬಿಟ್ಟಿದೆ. ಪ್ರೇಮಕಥೆ ಹಾಗೂ ರೌಡಿಸಂ ಕಥಾಹಂದರವನ್ನು ಹೊಂದಿದ್ದ ಈ ಸಿನಿಮಾ ಇಡೀ ಭಾರತದಲ್ಲಿ ದೊಡ್ಡ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. ಅಲ್ಲದೆ ಭಾರತ ಚಿತ್ರರಂಗದ ರೌಡಿಸಂ ಚಿತ್ರಗಳಿಗೆ  ಮೊದಲು ನಾಂದಿ ಹಾಡಿದ ಸಿನಿಮಾ ಈ ಓಂ.

Advertisement

Advertisement

ಕನ್ನಡ ಚಿತ್ರರಂಗದಲ್ಲಿ ಈ ಸಿನಿಮಾ ಮಾಡಿರುವ ದಾಖಲೆ ಮತ್ಯಾವ ಸಿನಿಮಾ ಮಾಡಲು ಸಾಧ್ಯವೇ ಇಲ್ಲ .. ಈ ಸಿನಿಮಾದಿಂದ ಉಪೇಂದ್ರ ಅವರು ದೊಡ್ಡ ನಿರ್ದೇಶಕರಾಗಿ ಹೊರಹೊಮ್ಮಿದರೆ, ಶಿವರಾಜ್ ಕುಮಾರ್ ಅವರಿಗೆ ದೊಡ್ಡ ಖ್ಯಾತಿಯನ್ನು ತಂದುಕೊಟ್ಟಿತ್ತು.. ಈ ಸಿನಿಮಾ ದಾಖಲೆಗಳ ಸರಮಾಲೆಯನ್ನೇ ನಿರ್ಮಿಸಿದ್ದು, ಅತೀ ಹೆಚ್ಚು ಬಾರಿ ರೀ ರಿಲೀಸ್ ಆಗಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಜೊತೆಗೆ ಸಿನಿಮಾ ಬಿಡುಗಡೆಯಾಗಿ ದಶಕಗಳ ನಂತರವೂ ಕೋಟಿ ಕೋಟಿ ಮೊತ್ತದಲ್ಲಿ ಸ್ಯಾಟ್ಲೈಟ್ ರೈಟ್ಸ್  ಮಾರಾಟವಾಗಿತ್ತು. ಈ ಸಿನಿಮಾದ ದಾಖಲೆಗಳನ್ನು ಹೇಳುತ್ತಾ ಹೋದರೆ ಮುಗಿಯುವುದೇ ಇಲ್ಲ ಬಿಡಿ. ಇನ್ನು ಈ ಸಿನಿಮಾದ ಚಿತ್ರೀಕರಣದ ವೇಳೆ ನಡೆದ ಕೆಲವು ಇಂಟ್ರೇಸ್ಟಿಂಗ್ ವಿಚಾರವನ್ನು ನಾವು ತಿಳಿಸಿಕೊಡುತ್ತೇವೆ. ಅನೇಕ ವಿಶೇಷತೆಗಳನ್ನು ಹೊಂದಿದ್ದ ಓಂ ಸಿನಿಮಾದ ಚಿತ್ರೀಕರಣಕ್ಕೆ ನಿರ್ದೇಶಕ ಉಪೇಂದ್ರ ಅವರು ನಿಜವಾದ ರೌಡಿಗಳನ್ನೇ ಕರೆತಂದಿದ್ದರು.

ಈ ರೀತಿಯಾದ ಹೊಸ ಪ್ರಯತ್ನ ಮಾಡಿ ದೇಶದಲ್ಲೇ ಗಮನ ಸೆಳೆದಿದ್ದರು. ಸಿನಿಮಾದ ಸನ್ನಿವೇಶಗಳು ನೈಜವಾಗಿ ಬರಲೆಂದು ಉಪೇಂದ್ರ ಅವರು ಈ ರೀತಿಯಾದ ಹೊಸ ಸಾಹಸಕ್ಕೆ ಕೈ ಹಾಕಿದ್ದರು. ಆದರೆ  ಅದು ಅಷ್ಟು ಸುಲಭವಾಗಿರಲಿಲ್ಲ. ಕೆಲ ದಿನಗಳಲ್ಲಿ ಅವರಿಗೇ, ತಾವು ತುಂಬಾ  ದೊಡ್ಡದಾದ ರಿಸ್ಕ್ ಗಳನ್ನು ಮೈಮೇಲೆ ಎಳೆದುಕೊಂಡಿದ್ದೇವೆ ಅನಿಸುತ್ತಿದೆ ಅಂದುಕೊಂಡರಂತೆ. ನಿಜವಾದ ರೌಡಿಗಳಾದ ಜೇಡರಹಳ್ಳಿ ಕೃಷ್ಣ, ತನ್ವೀರ್, ಕೊರಂಗು ಕೃಷ್ಣ, ಬೆಕ್ಕಿನ ಕಣ್ಣು ರಾಜೇಂದ್ರ ಸೇರಿದಂತೆ ಇನ್ನೂ ಹಲವು ಖ್ಯಾತ ರೌಡಿಗಳನ್ನು ಉಪೇಂದ್ರ ಅವರು ಚಿತ್ರೀಕರಣದ ಜಾಗಕ್ಕೆ ಕರೆಸಿ ಅವರಿಂದಲೇ ಅಭಿನಯ ಮಾಡಿಸಿದ್ದರು. ನಿರ್ದೇಶಕ ಉಪೇಂದ್ರ ಅವರ ಈ ರೀತಿಯಾದ ಯೋಚನೆಯೇನೋ ಹೊಸದಾಗಿತ್ತು. ಯೋಚನೆ ಮಾಡಿದಷ್ಟು ಸಲುಭವಾಗಿ ಈ ಕಾರ್ಯ ಅಷ್ಟು ಆರಾಮ್ ಇರಲಿಲ್ಲ.


ಸಿನಿಮಾದಲ್ಲಿ ನಟಿಸಲು ಉತ್ಸುಕತೆಯಿಂದ ರೌಡಿಗಳೇನೋ ಬಂದರು. ಆದರೆ ಅವರ ನಡುವೆ ಇದ್ದ ವೈಷಮ್ಯ ಸೆಟ್‌ನಲ್ಲೂ ಮುಂದುವರೆಯಿತು. ಇದನ್ನು ಸೂಕ್ಷ್ಮವಾಗಿ ವೀಕ್ಷಿಸುತ್ತಿದ್ದ ಉಪ್ಪಿ, ಒಂದು ಗ್ಯಾಂಗ್‌ನವರು ಇನ್ನೊಂದು ಗ್ಯಾಂಗ್‌ನ ಮೇಲೆ ಯಾವಾಗ ಮಚ್ಚುಗಳನ್ನು ಹಿಡಿದು ಹೊಡೆದಾಟಕ್ಕೆ ನಿಲ್ಲುತ್ತಾರೋ ಎಂಬ ಆತಂಕ  ಉಪೇಂದ್ರ ಅವರನ್ನು ಕಾಡ ತೊಡಗಿತ್ತು. ಚಿತ್ರೀಕರಣಕ್ಕೆ ಇವರುಗಳು ಬರುವಾಗ ದೊಡ್ಡ ಗ್ಯಾಂಗ್ ನ ಬೆನ್ನತ್ತೇ ಬರುತ್ತಿದ್ದರು. ಇದರಿಂದ ಉಪ್ಪಿ ಅವರನ್ನೂ ಸೇರಿ ಸೆಟ್ ನಲ್ಲಿದ್ದ ಪ್ರತಿಯೊಬ್ಬರಲ್ಲೂ ಕೂಡ ಆತಂಕ ಮನೆಮಾಡಿತ್ತು.ಆದರೆ ಸೆಟ್‌ನಲ್ಲಿ ಯಾವ ರೀತಿಯೂ ಅಪಾಯಕಾರಿ ಘಟನೆಗಳು ನಡೆಯದಂತೆ ಕಾಪಾಡಿದ್ದು ಆ ಒಂದು ಹೆಸರು ಎಂದು ಉಪೇಂದ್ರ ಹೇಳಿಕೊಂಡಿದ್ದಾರೆ.

ಕನ್ನಡದ ಹೆಸರಾಂತ ಬ್ಯಾನರ್ ವಜ್ರೇಶ್ವರಿ ಕಂಬೈನ್ಸ್‌ನಲ್ಲಿ ತಯಾರಾದಂತಹ  ಸಿನಿಮಾ. ವಜ್ರೇಶ್ವರಿ ಕಂಬೈನ್ಸ್ ಹಿಂದೆ ಇದ್ದದ್ದು ವರನಟ ಡಾ.ರಾಜ್‌ಕುಮಾರ್ ಅವರ ಹೆಸರು. ಅದೊಂದು ಹೆಸರು ಆ ರೌಡಿಗಳಲ್ಲಿ ಗೌರವ ಮೂಡಿಸಿ, ತಾವು ಶಿಸ್ತಿನಿಂದ ವರ್ತಿಸಬೇಕು ಎಂಬ ಜಾಗೃತಿ ಮೂಡಿಸಿತ್ತಂತೆ. ಅಪ್ಪಾಜಿ ಅವರು ಒಮ್ಮೆ ಸಿನಿಮಾದ  ಚಿತ್ರೀಕರಣ ವೀಕ್ಷಿಸಲು ಸೆಟ್‌ಗೆ ಬರುವ ಸುದ್ದಿ ಕೇಳಿದ ರೌಡಿಗಳು ಸಹ ಸಂಭಾಷಣೆಗಳನ್ನು ತಾಲೀಮು ಮಾಡುವುದರಲ್ಲಿ ನಿರತರಾಗಿದ್ದರು. ನಮ್ಮ ಅಭಿನಯ ನೋಡಿ ರಾಜ್‌ ಅವರು ಹೊಗಳಲಿ ಎಂಬುದು ಅವರ ಆಸೆಯಾಗಿತ್ತಂತೆ. ಬೇಲ್ ಕೊಟ್ಟು ನಿಜವಾದ ರೌಡಿಗಳು ಅಭಿನಯಿಸಿದ ಮೊದಲ ಚಿತ್ರ ಓಂ.

Advertisement
Share this on...