ರೈತನಾಗಿ ಸಾವಯವ ಬೆಳೆ ಬೆಳೆದ ಬುದ್ಧಿವಂತ…ರಿಯಲ್ ಸ್ಟಾರ್ ಬೆಳೆದ ಬೆಳೆಗಳೇನು ನೋಡಿ…?

in Uncategorized 139 views

ಉಪೇಂದ್ರ, ರಿಯಲ್ ಸ್ಟಾರ್ ಎಂದೇ ಅಭಿಮಾನಿಗಳಿಂದ ಪ್ರೀತಿಯಿಂದ ಕರೆಸಿಕೊಳ್ಳುವ ನಟ. ಸಾಮಾನ್ಯವಾಗಿ ಸ್ಟಾರ್​​​​​​ಗಳು ಅಷ್ಟು ಸುಲಭವಾಗಿ ಜನರೊಂದಿಗೆ ಬೆರೆಯುವುದಿಲ್ಲ. ಅಲ್ಲದೆ ತಮ್ಮ ಇಮೇಜ್ ಕೆಡಿಸಿಕೊಳ್ಳಲು ಬಯಸುವುದಿಲ್ಲ. ಹೆಚ್ಚಿನ ಸ್ಟಾರ್​​​​​ಗಳು ಜನರಿಗೆ ಕಾಣಿಸಿಕೊಳ್ಳದೆ ಸ್ಟಾರ್ ಹೋಟೆಲ್​​​​ಗಳಲ್ಲಿ ಪಾರ್ಟಿ, ಊಟ ಎಂದು ಕಾಲ ಕಳೆಯುತ್ತಾರೆ. ಅದರೆ ಕೆಲವೇ ಕೆಲವರು ಮಾತ್ರ ತಮ್ಮ ಮನಸ್ಸಿನಲ್ಲಿ ಏನು ಅಂದುಕೊಳ್ಳುತ್ತಾರೋ ಅದೇ ಕೆಲಸ ಮಾಡುತ್ತಾರೆ. ಯಾವ ಇಮೇಜ್ ಬಗ್ಗೆಯೂ ಅವರು ತಲೆ ಕೆಡಿಸಿಕೊಳ್ಳುವುದಿಲ್ಲ.ಉಪೇಂದ್ರ ಕೂಡಾ ಅದೇ ರೀತಿ. ಏಕೆಂದರೆ ಅವರಿಗೆ ಕಷ್ಟ ಏನೆಂಬುದು ಗೊತ್ತು. ಚಿಕ್ಕ ವಯಸ್ಸಿನಿಂದ ಬಹಳ ಕಷ್ಟಪಟ್ಟು ಮುಂದೆ ಬಂದವರು. ಬಿಡುವಿನ ಸಮಯದಲ್ಲಿ ಮನೆಯಲ್ಲಿ ಸುಮ್ಮನೆ ಕೂರದೆ ತಮ್ಮ ಜಮೀನಿಗೆ ತೆರಳಿ ಸಾಮಾನ್ಯ ರೈತನಂತೆ ವ್ಯವಸಾಯ ಮಾಡುತ್ತಾರೆ. ಕೊರೊನಾ ಲಾಕ್​​​​ಡೌನ್​ ಸಮಯದಲ್ಲಿ ಕೂಡಾ ಜಮೀನಿನ ಬಳಿ ತೆರಳಿ ಕೆಲಸ ಮಾಡಿದ್ದರು. ಇದೀಗ ಉಪ್ಪಿ ತಮ್ಮ ಜಮೀನಿನಲ್ಲಿ ಬೆಳೆದ ಬೆಳೆ ಫಲ ನೀಡಿದೆ. ಬದನೆಕಾಯಿ, ಸೌತೆಕಾಯಿ, ಚೆಂಡು ಹೂ, ಗುಂಡುಬದನೆ, ಹಸಿಮೆಣಸಿನಕಾಯಿ ಹಾಗೂ ಇನ್ನಿತರ ಬೆಳೆಗಳನ್ನು ಬೆಳೆದಿದ್ದಾರೆ.

Advertisement

Advertisement

ತಮ್ಮ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರುವ ಉಪೇಂದ್ರ, ‘ಎರಡೂವರೆ ತಿಂಗಳ ಹಿಂದೆ ನಾನು ಇಲ್ಲಿ ಬಂದು ಗಿಡಗಳನ್ನು ನೆಟ್ಟಿದ್ದೆ, ಇದು ಈಗ ಫಲ ನೀಡಿದೆ. ನಾನು ಇದಕ್ಕೆ ಸ್ವಲ್ಪವೂ ಕ್ರಿಮಿನಾಶಕ ಸಿಂಪಡಿಸಿಲ್ಲ. ಹೆಚ್ಚು ಇಳುವರಿಗಾಗಿ ಕ್ರಿಮಿನಾಶಕ ಸಿಂಪಡಿಸಿ ಭೂಮಿಯ ಫಲವತ್ತತೆಯನ್ನು ಹಾಳು ಮಾಡುವುದು ಸರಿಯಲ್ಲ. ನಾನು ಇದನ್ನೆಲ್ಲಾ ಹಸುವಿನ ಗೊಬ್ಬರ ಹಾಕಿ ಬೆಳೆದಿದ್ದೇನೆ, ಇದು ಆರೋಗ್ಯಕ್ಕೂ ಒಳ್ಳೆಯದು’ ಎಂದು ತಾವು ಬೆಳೆದ ಹೂವು. ತರಕಾರಿ ಹಾಗೂ ತಮ್ಮ ಜಮೀನನ್ನು ಅಭಿಮಾನಿಗಳಿಗೆ ತೋರಿಸುವ ಮೂಲಕ ಸಂತೋಷ ವ್ಯಕ್ತಪಡಿಸಿದ್ದಾರೆ.

Advertisement

 

Advertisement
View this post on Instagram

 

ಅತಿ ಕಡಿಮೆ ವೆಚ್ಚದಲ್ಲಿ ಮಾಡಬಹುದಾದ ನೈಸರ್ಗಿಕ ಕೃಷಿ.. This is low cost natural farming…., #natural_farming #upendra #lockdown #farmar #farmer_upendra #upp #prajaakeeya #upp

A post shared by Upendra (@nimmaupendra) on

ಒಟ್ಟಿನಲ್ಲಿ ತಾನೊಬ್ಬ ಸ್ಟಾರ್ ಎಂದು ಸ್ವಲ್ಪವೂ ಅಹಂ ಇಲ್ಲದೆ, ಭೂಮಿಗೆ ಇಳಿದು ಸಾವಯವ ಬೆಳೆ ತೆಗೆದ ಉಪೇಂದ್ರ ಸಿನಿಮಾದಲ್ಲಿ ಮಾತ್ರವಲ್ಲ, ನಿಜಜೀವನದಲ್ಲಿ ಕೂಡಾ ಬುದ್ಧಿವಂತ ಎಂಬುದನ್ನು ಸಾಬೀತು ಮಾಡಿದ್ದಾರೆ. ವ್ಯವಸಾಯ ಎಂದರೆ ಮೂಗು ಮುರಿಯುವ ಯುವಜನತೆಗೆ ರಿಯಲ್ ಸ್ಟಾರ್ ನಿಜಕ್ಕೂ ಮಾದರಿಯಾಗಿದ್ದಾರೆ

Advertisement
Share this on...