ಮತ್ತೊಂದು ತೆಲುಗು ಚಿತ್ರದಲ್ಲಿ ನಟಿಸಲಿರುವ ಉಪ್ಪಿ…ಚಿತ್ರದಲ್ಲಿ ರಿಯಲ್ ಸ್ಟಾರ್ ಪಾತ್ರ ಏನು…?

in ಸಿನಿಮಾ 93 views

ಉಪ್ಪಿ, ಬುದ್ಧಿವಂತ, ರಿಯಲ್ ಸ್ಟಾರ್ ಎಂದೆಲ್ಲಾ ಅಭಿಮಾನಿಗಳ ಬಳಿ ಕರೆಸಿಕೊಳ್ಳುವ ರಿಯಲ್ ಸ್ಟಾರ್ ಉಪೇಂದ್ರ ಸಿನಿಮಾ ಮಾತ್ರವಲ್ಲ ಪ್ರಜಾಕೀಯ ಎಂಬ ಪಕ್ಷ ಸ್ಥಾಪಿಸುವ ಮೂಲಕ ರಾಜಕೀಯದಲ್ಲೂ ಬ್ಯುಸಿಯಾಗಿದ್ದಾರೆ. ಇನ್ನು ಕನ್ನಡ ಸಿನಿಮಾ ಮಾತ್ರವಲ್ಲ ತೆಲುಗು ಚಿತ್ರರಂಗದಲ್ಲಿ ಕೂಡಾ ಉಪೇಂದ್ರ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಏಕೆಂದರೆ ಬಹಳಷ್ಟು ತೆಲುಗು ಸಿನಿಮಾಗಳಲ್ಲಿ ಉಪೇಂದ್ರ ನಟಿಸಿದ್ದಾರೆ.ತೆಲುಗಿನ ಓಂಕಾರಂ, ಕನ್ಯಾದಾನಂ, ಒಕೇ ಮಾಟ, ರಾ, ನೀತೋನೆ ಉಂಟಾನು, ಟಾಸ್, ಸೆಲ್ಯೂಟ್ ಹಾಗೂ ಸನ್ ಆಫ್ ಸತ್ಯಮೂರ್ತಿ ಚಿತ್ರಗಳಲ್ಲಿ ಉಪೇಂದ್ರ ನಟಿಸಿದ್ದಾರೆ. ಅಷ್ಟೇ ಅಲ್ಲಅವರ ಬಹಳಷ್ಟು ಕನ್ನಡ ಸಿನಿಮಾಗಳು ತೆಲುಗಿಗೆ ಡಬ್ ಆಗಿರುವುದರಿಂದ ತೆಲುಗು ಜನರಿಗೆ ಉಪೇಂದ್ರ ಬಹಳ ಚಿರಪರಿಚಿತ. ಅಲ್ಲು ಅರ್ಜುನ್ ಎದುರು ಸನ್ ಆಫ್ ಸತ್ಯಮೂರ್ತಿ ಚಿತ್ರ ಉಪೇಂದ್ರ ಕೊನೆಯ ಬಾರಿಗೆ ನಟಿಸಿದ ತೆಲುಗು ಸಿನಿಮಾ. ತ್ರಿವಿಕ್ರಮ್​ ಶ್ರೀನಿವಾಸ್ ನಿರ್ದೇಶನದ ಈ ಸಿನಿಮಾ 2015 ರಲ್ಲಿ ಬಿಡುಗಡೆಯಾಗಿತ್ತು. ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಕೂಡಾ ದೊರೆತು ಬಾಕ್ಸ್ ಆಫೀಸಿನಲ್ಲಿ 100 ಕೋಟಿ ರೂಪಾಯಿ ಲಾಭ ಮಾಡಿತ್ತು. ಆದರೆ ಈ ಚಿತ್ರದ ನಂತರ ಉಪೇಂದ್ರ ಯಾವ ತೆಲುಗು ಸಿನಿಮಾದಲ್ಲಿ ಕೂಡಾ ನಟಿಸಿರಲಿಲ್ಲ.

Advertisement

 

Advertisement

Advertisement

 

Advertisement

ಇದೀಗ ಮತ್ತೆ ಉಪೇಂದ್ರ ತೆಲುಗು ಚಿತ್ರವೊಂದರಲ್ಲಿ ನಟಿಸಲು ಒಪ್ಪಿದ್ದಾರೆ ಎನ್ನಲಾಗಿದೆ. ನಾಗಬಾಬು ಪುತ್ರ, ಫಿದಾ ಖ್ಯಾತಿಯ ವರುಣ್ ತೇಜ್ ನಾಯಕನಾಗಿ ನಟಿಸುತ್ತಿರುವ ಬಾಕ್ಸರ್ ಎಂಬ ಚಿತ್ರದಲ್ಲಿ ಚಿತ್ರದಲ್ಲಿ ಉಪ್ಪಿ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರಂತೆ. ಸನ್ ಆಫ್ ಸತ್ಯಮೂರ್ತಿ ಚಿತ್ರದ ನಂತರ ಕೂಡಾ ಉಪ್ಪಿಗೆ ಬಹಳಷ್ಟು ತೆಲುಗು ಸಿನಿಮಾಗಳಲ್ಲಿ ನಟಿಸಲು ಆಫರ್ ಬಂದಿತ್ತಂತೆ. ಆದರೆ ಅವೆಲ್ಲವೂ ನೆಗೆಟಿವ್ ರೋಲ್ ಆದ್ದರಿಂದ ಉಪೇಂದ್ರ ಅದಕ್ಕೆ ಒಪ್ಪಲಿಲ್ಲವಂತೆ. ಈ ನಟಿಸುತ್ತಿರುವ ಚಿತ್ರದಲ್ಲಿ ಕೂಡಾ ಉಪ್ಪಿ ನೆಗೆಟಿವ್ ರೋಲ್​​ನಲ್ಲಿ ನಟಿಸುತ್ತಿದ್ದಾರೆ. ಆದರೆ ಈ ಪಾತ್ರಕ್ಕೆ ಬಹಳ ಮಹತ್ವ ಹಾಗೂ ಉಪೇಂದ್ರ ಅವರ ಇಮೇಜ್​​ಗೆ ಹೊಂದುವ ಪಾತ್ರವಂತೆ. ಲಾಕ್​​ಡೌನ್ ನಂತರ ಸಿನಿಮಾ ಕೆಲಸಗಳು ಆರಂಭವಾಗಲಿದೆ.

 

ಇನ್ನು ಕನ್ನಡದಲ್ಲಿ ಉಪೇಂದ್ರ ಹೋಂ ಮಿನಿಸ್ಟರ್, ರವಿಚಂದ್ರ, ಬುದ್ಧಿವಂತ 2, ಕಬ್ಜ 2, ಹಾಗೂ ಮತ್ತೊಂದು ಹೆಸರಿಡದ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯಕ್ಕೆ ಲಾಕ್​ಡೌನ್ ಇರುವುದರಿಂದ ಉಪ್ಪಿ ತಮ್ಮ ಜಮೀನಿನಲ್ಲಿ ವ್ಯವಸಾಯ ಮಾಡುತ್ತಾ, ಕುಟುಂಬದವರೊಂದಿಗೆ ಕಾಲ ಕಳೆಯುತ್ತಿದ್ದಾರೆ.

Advertisement
Share this on...