ಕೇರಳ ಕುಟ್ಟಿ ಚೆನ್ನಾಗಿ ಅಭಿನಯಿಸಿದ್ದಾಳೆ ಎಂದು ಪ್ರಶಂಸೆ ಪಡೆದುಕೊಂಡ ನಟಿ ಊರ್ವಶಿ ಬಗ್ಗೆ ನಿಮಗೆ ಗೊತ್ತಾ…?

in ಮನರಂಜನೆ 148 views

ಶ್ರಾವಣ ಬಂತು ಸಿನಿಮಾದಲ್ಲಿ ನಮ್ಮ ಅಣ್ಣಾವ್ರು ಡಾ‌. ರಾಜ್ ಕುಮಾರ್ ಅವರ ಜೊತೆಯಲ್ಲಿ ನಾಯಕ ನಟಿಯಾಗಿ ಕನ್ನಡ ಸಿನಿಮಾದಲ್ಲಿ ಮೊದಲ ಬಾರಿಗೆ ನಟಿಸಿದ ನಟಿ ಊರ್ವಶಿ. 1980 ರಲ್ಲಿಯೇ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಈ ನಟಿ 1984 ರಲ್ಲಿ ತೆರೆಕಂಡ ಶ್ರಾವಣ ಬಂತು ಸಿನಿಮಾದಿಂದ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.
ನಂತರ ಕ್ರೇಜಿ಼ಸ್ಟಾರ್ ರವಿಚಂದ್ರನ್ ರವರ ನಾನು ನನ್ನ ಹೆಂಡತಿ ಸಿನಿಮಾದಲ್ಲಿ ತುಂಬಾ ಚೂಟಿಯಾಗಿದ್ದ ಸ್ವಲ್ಪ ಘಾಟಿಯಾಗಿದ್ದ ನಾಯಕಿಯ ಪಾತ್ರಕ್ಕೆ ಜೀವ ತುಂಬಿ ನಟಿಸಿ ಕನ್ನಡ ಪ್ರೇಕ್ಷಕರು ಹಾಗೂ ಕನ್ನಡ ಸಿನಿಮಾರಂಗದಿಂದ ಯಾರೊ ಈ ಕೇರಳ ಕುಟ್ಟಿ ಪರವಾಗಿಲ್ಲ ಚೆನ್ನಾಗಿ ಅಭಿನಯಿಸಿದ್ದಾಳೆ ಎಂದು ಎಲ್ಲರಿಂದಲೂ ಪ್ರಶಂಸೆ ಪಡೆದುಕೊಂಡಿದ್ದರು.

Advertisement

 

Advertisement


ಮುದ್ದು ಮುದ್ದಾಗಿದ್ದ ದುಂಡು ದುಂಡಾಗಿದ್ದ ಊರ್ವಶಿ ಅವರನ್ನು ಅಂದಿನ ಸಿನಿಮಾ ಪ್ರೇಕ್ಷಕರು ತುಂಬಾ ಇಷ್ಟ ಪಟ್ಟರು. 25 ಜನವರಿ  1967 ರಲ್ಲಿ ಕೇರಳದ ತಿರುವನಂತಪುರಂ ನಲ್ಲಿ ನಟಿ ಊರ್ವಶಿ ಜನಿಸಿದ್ದರು. ಕೇವಲ 10 ನೇ ವಯಸ್ಸಿನಲ್ಲಿಯೇ ಮಲೆಯಾಳಂ ಚಿತ್ರಗಳಲ್ಲಿ ಬಾಲ ನಟಿಯಾಗಿ ನಟಿಸಿದ್ದರು.
ನಟಿ ಊರ್ವಶಿ 1984 ರಲ್ಲಿ ಮಲೆಯಾಳಂ ಸಿನಿಮಾವೊಂದರ ಮೂಲಕ ಪರಿಪೂರ್ಣ ನಾಯಕ ನಟಿಯಾಗಿ ಅಭಿನಯಿಸಿದರು. ಕನ್ನಡದಲ್ಲಿ ನಾಯಕಿಯಾಗಿ, ಪೋಷಕ ನಟಿಯಾಗಿ ಸುಮಾರು ಮೂವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಮಲೆಯಾಳಂ, ತಮಿಳು, ತೆಲುಗು ಹಾಗೂ ಕನ್ನಡವೂ ಸೇರಿದಂತೆ ಸುಮಾರು 300 ಕ್ಕೂ ಅಧಿಕ ಸಿನಿಮಾಗಳಲ್ಲಿ ನಾಯಕ ನಟಿ ಮತ್ತು ಪೋಷಕ ನಟಿಯಾಗಿ ಅಭಿನಯಿಸಿದ್ದಾರೆ.

Advertisement

 

Advertisement


ಹಬ್ಬ, ಕೋತಿಗಳು ಸಾರ್ ಕೋತಿಗಳು, ಕತ್ತೆಗಳು ಸಾರ್ ಕತ್ತೆಗಳು, ಯಾರಿಗೆ ಸಾಲುತ್ತೆ ಸಂಬಳ, ರಾಮ-ಶಾಮ-ಭಾಮ ಚಿತ್ರಗಳಲ್ಲಿ ಊರ್ವಶಿ ಅವರ ಕಾಮಿಡಿ ನಟನೆಗೆ ನೂರು ಸಾರಿ ಚಪ್ಪಾಳೆ ತಟ್ಟಿದರು ಸಾಲದು. ಕಾಮಿಡಿ ನಾಯಕ ನಟಿಯಾಗಿ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಜನರನ್ನು ನಕ್ಕು ನಲಿಸುವ ನಟಿ ಅಂತ ಒಬ್ಬರಿದ್ದರೆ ಅದು ನಟಿ ಊರ್ವಶಿ ಮಾತ್ರ.

 

ತಾನು ನಟಿಸಿದ ಹಲವಾರು ಕನ್ನಡ ಚಿತ್ರಗಳಲ್ಲಿ ಕಾಮಿಡಿ ಕಮಾಲ್ ಮಾಡಿದ್ದಾರೆ ನಟಿ ಊರ್ವಶಿ. ಇನ್ನೂ ನಟಿ ಊರ್ವಶಿಯವರು 2000 ನೇ ಇಸವಿಯಲ್ಲಿ ಮನೋಜ್ ಕೆ. ಜೈನ್ ಎಂಬ ಮಲೆಯಾಳಂ ನಟನ ಜೊತೆ ಮದುವೆಯಾದರು. ಈ ದಂಪತಿಗೆ 2001 ರಲ್ಲಿ ತೇಜಲಕ್ಷ್ಮಿ ಎಂಬ ಮಗಳು ಹುಟ್ಟಿದಳು. ನಂತರ ಮನೋಜ್ ರವರಿಗೆ 2008 ರಲ್ಲಿ ವಿಚ್ಛೇದನ ನೀಡಿದರೂ ನಟಿ ಊರ್ವಶಿ. ಮತ್ತೇ 2013 ರಲ್ಲಿ ಚೆನ್ನೈನ ಉದ್ಯಮಿ ಶಿವಪ್ರಸಾದ್ ಎಂಬುವವರನ್ನು ಮದುವೆಯಾದರು. ತಮ್ಮ ಎರಡನೇ ಪತಿಯಿಂದ ಊರ್ವಶಿ ಅವರಿಗೆ 2014 ರಲ್ಲಿ ಇಶಾನ್ ಪ್ರಜಾಪತಿ ಎಂಬ ಗಂಡು ಮಗು ಹುಟ್ಟಿತು. ಊರ್ವಶಿಯವರ ನಟನೆಗೆ ಅವರಿಗೆ ಹಲವಾರು ರಾಷ್ಟ್ರಪ್ರಶಸ್ತಿಗಳು, ರಾಜ್ಯ ಪ್ರಶಸ್ತಿಗಳು ಕೂಡ ದೊರೆತಿವೆ.

– ಸುಷ್ಮಿತಾ

Advertisement
Share this on...