ಈ ದೃಶ್ಯದಲ್ಲಿ ನಟಿಸಲು ಕಷ್ಟವಾಗಿದ್ದಕ್ಕೆ ಸಿನಿಮಾ ಸೆಟ್’ನಲ್ಲಿ ಕಿರುಚಿಕೊಂಡರಂತೆ ಊರ್ವಶಿ !

in ಸಿನಿಮಾ 68 views

ನಟಿ ಊರ್ವಶಿ ರೌಟೇಲಾ ಸಿನಿಮಾಗಳಲ್ಲದೆ, ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡುವ ಫೋಟೋ, ವಿಡಿಯೋಗಳಿಂದಾಗಿ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಆಗಾಗ್ಗೆ ಊರ್ವಶಿ ತಮ್ಮ ಅಭಿಮಾನಿಗಳಿಗಾಗಿ ತಮಾಷೆಯಾಗಿರುವ ವಿಡಿಯೋಗಳು ಮತ್ತು ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಈ ಬಾರಿಯೂ ಊರ್ವಶಿ ಅಂತಹ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಈ ವಿಡಿಯೋದಲ್ಲಿ ಊರ್ವಶಿ ಸ್ವಲ್ಪ ವಿಭಿನ್ನ ಶೈಲಿಯಲ್ಲಿ ಕಾಣಿಸಿಕೊಂಡಿದ್ದಾರೆ. ಊರ್ವಶಿ ಈ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋದಲ್ಲಿ, ಆಕೆ ಸಿಗರೇಟ್ ಸೇದುತ್ತಾ, ಕುಡಿಯುತ್ತಿರುವುದು ಕಂಡುಬರುತ್ತದೆ. ವಿಡಿಯೋವನ್ನು ನೋಡಿದಾಗ ಊರ್ವಶಿ ಅವರ ಈ ವಿಡಿಯೋ ಸಿನಿಮಾ ಅಥವಾ ಹಾಡಿನ ಚಿತ್ರೀಕರಣದ ಸಮಯದಲ್ಲಿ ಕ್ಲಿಕ್ ಮಾಡಿರುವುದಾಗಿ ಕಂಡುಬರುತ್ತದೆ. ಅಷ್ಟೇ ಅಲ್ಲ, ತನಗೆ ಸಿಗರೇಟ್ ಸೇದಲು ಬಾರದ ಕಾರಣ ಸೆಟ್’ನಲ್ಲಿ ಕಿರುಚಲು ಪ್ರಾರಂಭಿಸಿದ್ದಾಗಿ ತನ್ನ ವಿಡಿಯೋ ಮೂಲಕ ತಿಳಿಸಿದ್ದಾರೆ ಊರ್ವಶಿ.

Advertisement

 

Advertisement

Advertisement

ಒಟ್ಟಾರೆ ವಿಡಿಯೋದಲ್ಲಿ ಊರ್ವಶಿ ಬೋಲ್ಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಊರ್ವಶಿ ಹೇಳಿದ ಹಾಗೆ ಸಿಗರೇಟ್ ಸೇದುತ್ತಾ ಕುಡಿಯುಲು ಪ್ರಯತ್ನಿಸಿದರೂ ಅವರಿಗೆ ಸರಿಯಾಗಿ ಸೇದಲು ಸಾಧ್ಯವಾಗುತ್ತಿಲ್ಲ. ಅಷ್ಟೇ ಏಕೆ, ಸಿಗರೇಟ್ ಸೇದುತ್ತಿರುವಾಗ ಅದು ಕೊನೆಗೆ ಕೈಯ್ಯಿಂದ ಜಾರಿ ಬಿದ್ದು ಹೋಗಿರುವುದುನ್ನು ನೀವು ನೋಡಬಹುದು. ಆ ನಂತರ ಊರ್ವಶಿ ಸ್ವಲ್ಪ ನರ್ವಸ್ ಆಗಿದ್ದಾರೆ. ಈ ವಿಡಿಯೋದೊಂದಿಗೆ ಊರ್ವಶಿ ಶೀರ್ಷಿಕೆಯನ್ನು ಸಹ ಬರೆದಿದ್ದು, ‘ನನಗೆ ಸಿಗರೇಟ್ ಸೇದುವುದು ಹೇಗೆ, ಕುಡಿಯಬೇಕು ಹೇಗೆ ಎಂದು ಗೊತ್ತಿಲ್ಲ. ಆದ್ದರಿಂದ ನಾನು ಸೆಟ್’ನಲ್ಲಿ ಕಿರುಚುತ್ತಿದ್ದೆ. ಧೂಮಪಾನ ಮಾಡದವರು ಇಂತಹ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವುದು ಸ್ವಲ್ಪ ಕಷ್ಟವಾಗುತ್ತದೆ. ಅದರಿಂದ ಬರುವ ಹೊಗೆ ಆರೋಗ್ಯಕ್ಕೆ ಹಾನಿಕಾರ’ ಎಂದು ಬರೆದುಕೊಂಡಿದ್ದಾರೆ.

Advertisement

 


ಸದ್ಯ ಊರ್ವಶಿಯ ಈ ಸಿಗರೇಟ್ ಸೇದುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಅವರ ಅನೇಕ ಅಭಿಮಾನಿಗಳು ಮತ್ತು ಸಾಮಾಜಿಕ ಮಾಧ್ಯಮ ಬಳಕೆದಾರರು ಈ ವಿಡಿಯೋಗೆ ಕಾಮೆಂಟ್ ಮಾಡುವ ಮೂಲಕ ತಮ್ಮ ಪ್ರತಿಕ್ರಿಯೆಯನ್ನು ತಿಳಿಸುತ್ತಿದ್ದಾರೆ. ಊರ್ವಶಿ ಕನ್ನಡದಲ್ಲಿ ದರ್ಶನ್ ಜೊತೆ ಐರಾವತ ಚಿತ್ರದಲ್ಲಿ ಅಭಿನಯಿಸಿದ್ದು ನಿಮಗೆ ತಿಳಿದಿರಬಹುದು. ಇನ್ನು ಹಿಂದಿಯಲ್ಲಿ ಊರ್ವಶಿ ಪಾಗಲ್ಪಂತಿ ಚಿತ್ರದಲ್ಲಿ ಕಾಣಿಸಿಕೊಂಡರೂ ಆ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ಕಾಣಲಿಲ್ಲ. ಪ್ರಸ್ತುತ ಊರ್ವಶಿ ಅವರ ಮುಂದಿನ ಚಿತ್ರ ವರ್ಜಿನ್ ಭಾನುಪ್ರಿಯ ಬಿಡುಗಡೆಗೆ ಸಿದ್ಧವಾಗಿದೆ. ಆದರೆ ಕೊರೊನಾ ವೈರಸ್ ಕಾರಣದಿಂದ ಲಾಕ್ಡೌನ್ ಆದ ಕಾರಣ, ಈ ಚಿತ್ರವನ್ನು ಮುಂದೂಡಲಾಗಿದೆ.

Advertisement
Share this on...