ನಟಿ ಊರ್ವಶಿ ಅವರು ಎಷ್ಟು ಬಾರಿ ವಿವಾಹವಾಗಿದ್ದಾರೆ ಗೊತ್ತಾ? ಅಸಲಿಗೆ ಅವರ ಗಂಡ ಯಾರು ಗೊತ್ತಾ ?

in ಮನರಂಜನೆ 103 views

ದಕ್ಷಿಣ ಭಾರತ ಕಂಡ ಜನಪ್ರಿಯ ನಟಿಯರಲ್ಲಿ ಅಭಿನೇತ್ರಿ ಊರ್ವಶಿ ಅವರು ಕೂಡ ಒಬ್ಬರು. ಕನ್ನಡ ಸೇರಿದಂತೆ ಮಲಯಾಳಂ, ತೆಲುಗು, ತಮಿಳು ಭಾಷೆಯ ಚಿತ್ರರಂಗದಲ್ಲಿ ಅಭಿನಯಿಸಿ ತನ್ನದೆ ಆದ ಛಾಪು ಮೂಡಿಸಿದ್ದಾರೆ. ಹೆಸರಾಂತ ನಟರಾದ ಡಾ. ರಾಜ್ , ವಿಷ್ಣುವರ್ಧನ್ , ಅಂಬರೀಶ್ , ರವಿಚಂದ್ರನ್, ರಜನಿಕಾಂತ್ , ಕಮಲ್ ಹಾಸನ್, ಮೊಮ್ಮಟ್ಟಿ ಸೇರಿದಂತೆ ಹಲವಾರು ನಟರ ಜೊತೆ ತೆರೆಯ ಮೇಲೆ ಮಿಂಚಿದ್ದಾರೆ. ಮೂಲತಃ ಕೇರಳದವರಾದ ಊರ್ವಶಿ ೧೯೮೪ ರಲ್ಲಿ ವರನಟ ಡಾ ರಾಜ್ ಕುಮಾರ್ ಅವರ ಶ್ರಾವಣಬಂತು ಸಿನಿಮಾದ ಮೂಲಕ ಚಂದನವನಕ್ಕೆ ಪಾದಾರ್ಪಣೆ ಮಾಡಿದ ಅವರು ನಂತರ ಕನ್ನಡ ಚಿತ್ರರಂಗದಲ್ಲಿ ನೆಲೆಯೂರಿ ಅಪೂರ್ವ ಯಶಸ್ಸು ಕಂಡಿದ್ದಾರೆ. ೧೯೮೦ ರಲ್ಲಿ ಬಾಲ ನಟಿಯಾಗಿ ಮಲಯಾಳಂ ಚಿತ್ರಕ್ಕೆ ಪಾದಾರ್ಪಣೆ ಮಾಡಿದ ಅವರು ನಂತರ ಶ್ರಾವಣಬಂತು ಚಿತ್ರದ ಮೂಲಕ ಕನ್ನಡ ಸಿನಿ ಪ್ರೇಕ್ಷಕರಿಗೆ ಪರಿಚಯವಾಗುತ್ತಾರೆ. ನಂತರ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ನಾನು ನನ್ನ ಹೆಂಡ್ತಿ ಚಿತ್ರದಲ್ಲಿ ಬಹಳ ಚೂಟಿಯಾಗಿ ಅಭಿನಯಿಸಿ ಪಾತ್ರದ ಮೂಲಕ ಕನ್ನಡಿಗ ಹಾಗೂ ಚಿತ್ರರಂಗದ ಪ್ರಶಂಸೆ ಗಿಟ್ಟಿಸಿಕೊಳ್ಳುತ್ತಾರೆ.

Advertisement

 

Advertisement

Advertisement

ಮುದ್ದು ಮುಖ ಹಾಗು ದುಂಡು ದುಂಡಾಗಿದ್ದ ಊರ್ವಶಿಯನ್ನು ಅಂದು ಸಿನಿರಸಿಕರು ಬಹಳ ಇಷ್ಟಪಟ್ಟಿದ್ದರು.ಇನ್ನು ನಟಿ ಊರ್ವಶಿ ೧೯೬೭ ಜನವರಿ ೨೫ ರಂದು ಕೇರಳದ ತಿರುವಂತಪುರಂ ನಲ್ಲಿ ಜನಿಸುತ್ತಾರೆ. ಬಹಳ ಚೂಟಿಯಾಗಿದ್ದ ಊರ್ವಶಿ ೧೦ನೇ ವಯ್ಯಸ್ಸಿನಲ್ಲಿ ಮಲಯಾಳಂ ಚಿತ್ರದಲ್ಲಿ ಬಾಲ ನಟಿಯಾಗಿ ಅಭಿನಯಿಸುತ್ತಾರೆ. ನಂತರ ೧೯೮೦ರಲ್ಲಿ ಮಲಯಾಳಂ ಚಿತ್ರರಂಗದಲ್ಲಿ ಪರಿಪೂರ್ಣ ನಾಯಕಿಯಾದ ಅವರು ನಂತರ ತೆಲುಗು, ತಮಿಳು, ಕನ್ನಡ ಚಿತ್ರರಂಗದಲ್ಲಿ ನಾಯಕಿಯಾಗಿ ಮತ್ತು ಪೋಷಕ ಪಾತ್ರದಲ್ಲಿ ಅಭಿನಯಿಸುವ ಮೂಲಕ ತನ್ನದೇ ಆದ ಛಾಪು ಮೂಡಿಸಿದ್ದಾರೆ.ಇನ್ನೂ ನಾಯಾಕಿಯಾಗಿ ಹಾಗು ಪೋಷಕ ಪಾತ್ರಧಾರಿಯಾಗಿ ಮೂನ್ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ಅವರು ದಕ್ಷಿಣ ಭಾರತದ ಟಾಪ್ ನಟಿಯರ ಸಾಲಿನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

Advertisement

ಕನ್ನಡದಲ್ಲಿ ಹಬ್ಬ, ಕೋತಿಗಳು ಸಾರ್ ಕೋತಿಗಳು, ಕತ್ತೆಗಳು ಸಾರ್ ಕತ್ತೆಗಳು, ಯಾರಿಗೆ ಸಾಲುತ್ತೆ ಸಂಬಳ, ರಾಮ ಶಾಮ ಭಾಮ ಚಿತ್ರಗಳಲ್ಲಿನ ಕಾಮಿಡಿ ನಟನೆಗೆ ಎಷ್ಟು ಬಾರಿ ಚಪ್ಪಾಳೆ ತಟ್ಟಿದರು ಸಾಲದು ಅಲ್ಲವೇ? ಇನ್ನು ಕಾಮಿಡಿ ನಾಯಕಿಯಾಗಿ ಇಡೀ ದಕ್ಷಿಣ ಭಾರತ ಚಿತ್ರರಂಗವನ್ನು ನಕ್ಕು ನಲಿಸಿದ ಏಕೈಕ ನಾಯಕಿ ಎಂದರೆ ಅದು ಊರ್ವಶಿ.ತಾವು ಅಭಿನಯಿಸಿದ ಬಹುತೇಕ ಕನ್ನಡ ಸಿನಿಮಾಗಳಲ್ಲಿ ಕಾಮಿಡಿ ಪಾತ್ರವನ್ನು ಅಭಿನಯಿಸಿ ಕಮಾಲ್ ಮಾಡಿದ್ದಾರೆ.

 

ಇನ್ನು ಊರ್ವಶಿ ಅವರ ದಾಪಂತ್ಯ ಜೀವನ ನೋಡುವುದಾದರೆ 2000 ರಲ್ಲಿ ಮನೋಜ್ ಎಂಬುವ ಮಲಯಾಳಿ ನಟರನ್ನು ವಿವಾಹವಾಗುತ್ತಾರೆ.ಈ ದಂಪತಿಗೆ ಗೀತಲಕ್ಷ್ಮಿ ಎಂಬ ಮಗಳು ಕೂಡ ಜನಿಸಿದ್ದರು.ನಂತರ ಕೆಲವು ವಿರಸಗಳು ಉಂಟಾಗಿ ಮನೋಜ್ ಅವರಿಗೆ 2008ರಲ್ಲಿ ವಿಚ್ಛೇದನ ನೀಡುತ್ತಾರೆ. ನಂತರ ಮತ್ತೆ 2016ರಲ್ಲಿ ಚೆನ್ನೈ ಉದ್ಯಮಿ ಶಿವಪ್ರಸಾದ್ ಅವರನ್ನು ವಿವಾಹವಾಗುತ್ತಾರೆ. ತಮ್ಮ ಎರಡನೇ ಪತಿಯಿಂದ ಊರ್ವಶಿ ಅವರಿಗೆ ಗಂಡು ಮಗು ಜನಿಸಿತು. ಆ ಮಗುವಿನ ಹೆಸರು ಇಹಾನ್ ಪ್ರಜಾಪತಿ. ಇದೀಗ ತಮ್ಮ ಮಗ ಹಾಗೂ ಪತಿಯೊಂದಿಗೆ ಸುಖ ದಾಂಪತ್ಯ ಜೀವನ ನಡೆಸುತ್ತಿದ್ದಾರೆ

Advertisement
Share this on...