ಬಿಸಿಲಿನ ಬೇಗೆಯಿಂದ ತ್ವಚೆಯನ್ನು ಕಾಪಾಡಿಕೊಳ್ಳಲು ಈ ರೀತಿ ಮಾಡಿ.. ಚರ್ಮ ನುಣುಪಾಗುತ್ತದೆ.!

in ಕನ್ನಡ ಆರೋಗ್ಯ 17 views

ಕಡಲೆಹಿಟ್ಟಿನ ಬಳಕೆ ನಿನ್ನೆ ಮೊನ್ನೆಯದಲ್ಲ, ನಮ್ಮ ಪೂರ್ವಿಕರ ಕಾಲದಿಂದಲೂ ಇದೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕಡಲೆಹಿಟ್ಟನ್ನು ಅಡುಗೆಗೆ ಮಾತ್ರವಲ್ಲ, ತ್ವಚೆಯ ಸೌಂದರ್ಯ ವೃದ್ಧಿಸಲೂ ಬಳಸುತ್ತೇವೆ. ಅದರಲ್ಲೂ ಕಡಲೆಹಿಟ್ಟಿನ ಜೊತೆಗೆ ಹಾಲು, ಮೊಸರು, ಅರಿಶಿನ, ಹಾಲಿನಕೆನೆ, ಬೇವಿನ ರಸ ಬಳಸುವುದು ರೂಢಿ. ಅಂದಹಾಗೆ ಇಲ್ಲಿ ಕಡಲೆಹಿಟ್ಟಿನ ಜೊತೆಗೆ ಮೊಸರು ಬೆರೆಸಿ ಹಚ್ಚುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬ ಮಾಹಿತಿ ಕೊಡಲಾಗಿದೆ ಓದಿ.
ಮೊಸರಿನಲ್ಲಿ ಲ್ಯಾಕ್ಟಿಕ್ ಆಮ್ಲವಿದ್ದು, ಚರ್ಮ ಹೊಳೆಯುವಂತೆ ಮಾಡಲು ಇದು ಪ್ರಮುಖ ಪಾತ್ರವಹಿಸುತ್ತದೆ. ಕಡಲೆಹಿಟ್ಟಿಗೆ ಮೊಸರನ್ನು ಸೇರಿಸಿ ಮುಖದ ಮೇಲೆ ಹಚ್ಚುವುದರಿಂದ ಮೊಸರು ಚರ್ಮದ ಮೇಲಿನ ಕಲೆಗಳನ್ನು ತೆಗೆಯಲು ಸಹಾಯ ಮಾಡುತ್ತದೆ ಮತ್ತು ಬಿಸಿಲಿನ ಬೇಗೆಯಿಂದ ರಕ್ಷಿಸುತ್ತದೆ. ಅಷ್ಟೇ ಅಲ್ಲ, ತ್ವಚೆಯ ಮೇಲಿನ ಸುಕ್ಕುಗಳನ್ನು ಕಡಿಮೆ ಮಾಡಿ, ಚರ್ಮವನ್ನು ಬಿಗಿಗೊಳಿಸುತ್ತದೆ. ಹಾಗಾದರೆ ಬನ್ನಿ ಕಡಲೆಹಿಟ್ಟು ಮತ್ತು ಮೊಸರಿನ ಫೇಸ್ ಪ್ಯಾಕ್ ಮಾಡುವುದು ಹೇಗೆಂದು ನೋಡೋಣ…
ನಿಮಗೆ ಬೇಕಾಗಿರುವುದು
1 ಟೇಬಲ್ ಸ್ಪೂನ್ ಕಡಲೆಹಿಟ್ಟು
1 ಟೇಬಲ್ ಸ್ಪೂನ್ ಮೊಸರು

Advertisement

 

Advertisement

Advertisement

ಹಚ್ಚುವುದು ಹೇಗೆ?
ಮೊದಲಿಗೆ ಒಂದು ಬಟ್ಟಲಿನಲ್ಲಿ ಕಡಲೆಹಿಟ್ಟು ಮತ್ತು ಮೊಸರನ್ನು ತೆಗೆದುಕೊಂಡು ಚೆನ್ನಾಗಿ ಮಿಶ್ರಣ ಮಾಡಿ.
ಮುಖವನ್ನು ಸ್ವಚ್ಛವಾಗಿ ತೊಳೆದು, ಕ್ಲೀನ್ ಆಗಿರುವ ಬ್ರಷ್ ತೆಗೆದುಕೊಂಡು ಕಡಲೆಹಿಟ್ಟಿನ ಮಿಶ್ರಣವನ್ನು ಮುಖದಾದ್ಯಂತ ಸಮವಾಗಿ ಹಚ್ಚಿ.
ಕಣ್ಣುಗಳ ಸುತ್ತಲು ಹಚ್ಚುವಾಗ ಕಣ್ಣಿನ ಒಳಗೆ ಹೋಗಂತೆ ನೋಡಿಕೊಳ್ಳಿ.
ಪ್ಯಾಕ್ ಒಣಗಲು 20 ನಿಮಿಷಗಳ ಕಾಲ ಬಿಡಿ.
ನಂತರ ಮುಖವನ್ನು ಶುದ್ಧ ನೀರಿನಿಂದ ತೊಳೆಯಿರಿ.
ಟವೆಲ್’ನಿಂದ ಮುಖವನ್ನು ಒರೆಸಿಕೊಂಡು, ನಂತರ ಮುಖದ ಮೇಲೆ ಮೊಯಿಶ್ಚರೈಸರ್ ಹಚ್ಚಿ.

Advertisement

 

ಫೇಸ್ ಪ್ಯಾಕ್’ನ ಪ್ರಯೋಜನಗಳೇನು?
*ಮೊಡವೆಗಳು ಮತ್ತು ಮೊಡವೆಗಳ ಕಲೆ ತೆಗೆಯಲು ಸಹಾಯ ಮಾಡುತ್ತದೆ. ಕಡಲೆಹಿಟ್ಟಿನಲ್ಲಿರುವ ಸತುವು ಮೊಡವೆಗಳಿಗೆ ಕಾರಣವಾಗುವ ಸೋಂಕುಗಳ ವಿರುದ್ಧ ಹೋರಾಡುತ್ತದೆ.
*ಟ್ಯಾನ್ ಅನ್ನು ತೆಗೆದುಹಾಕುತ್ತದೆ.
*ಡೆಡ್ ಸ್ಕಿನ್ ಅನ್ನು ಎಫ್ಫೋಲಿಯೇಟ್ ಮಾಡುತ್ತದೆ.
* ಮುಖದ ಮೇಲಿರುವ ಬೇಡವಾದ ಕೂದಲನ್ನು ತೆಗೆದುಹಾಕುತ್ತದೆ.
*ಎಲ್ಲಕ್ಕಿಂತ ಹೆಚ್ಚಾಗಿ ಚರ್ಮವು ಕಾಂತಿಯುತವಾಗಿ ಹೊಳೆಯುವಂತೆ ನೋಡಿಕೊಳ್ಳುತ್ತದೆ.
*ಚರ್ಮ ನುಣುಪಾಗಿ ಮೃದುವಾಗಲು ಸಹಾಯ ಮಾಡುತ್ತದೆ.

Advertisement
Share this on...