ಕೆಲವೇ ದಿನಗಳಲ್ಲಿ ಚರ್ಮದ ಕಾಂತಿ ಹೆಚ್ಚಿಸಿಕೊಳ್ಳಲು ಈ ಮನೆಮದ್ದುಗಳನ್ನು ಬಳಸಿ ಸಾಕು …

in ಕನ್ನಡ ಆರೋಗ್ಯ 64 views

ಕೆಲವು ಹೆಣ್ಣುಮಕ್ಕಳಿಗೆ ಮಾರುಕಟ್ಟೆಯಲ್ಲಿ ಸಿಗುವ ಕ್ರೀಮ್, ಫೇಸ್ ಪ್ಯಾಕ್’ಗಳಿಗಿಂತ ಮನೆಮದ್ದುಗಳ ಬಗ್ಗೆಯೇ ಒಲವು ಜಾಸ್ತಿ. ಆದ್ದರಿಂದ ಇಂದಿಲ್ಲಿ ನಾವು ನಿಮಗಾಗಿ 3 ಆಯುರ್ವೇದದ ಫೇಸ್ ಪ್ಯಾಕ್’ಗಳನ್ನು ಕೊಡುತ್ತಿದ್ದೇವೆ. ಇದನ್ನು ಉಪಯೋಗಿಸುವುದರಿಂದ ನಿಮ್ಮ ಮುಖಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳು ಕೆಲವೇ ದಿನಗಳಲ್ಲಿ ನಿವಾರಣೆಯಾಗುತ್ತವೆ. ಬನ್ನಿ, ಹಾಗಾದರೆ ಈ ಫೇಸ್ ಪ್ಯಾಕ್ ತಯಾರಿಸುವುದು ಹೇಗೆ? ಹಚ್ಚುವುದು ಹೇಗೆ? ನೋಡೋಣ…

Advertisement


ಪಪ್ಪಾಯಿ-ಕಡಲೆಹಿಟ್ಟು
ಸೌಂದರ್ಯ ಮತ್ತು ಇತರ ಚಿಕಿತ್ಸೆಗಾಗಿ ಆಯುರ್ವೇದದಲ್ಲಿ ಬಳಸುವ ಅತ್ಯಂತ ಪೌಷ್ಟಿಕ ಹಣ್ಣುಗಳಲ್ಲಿ ಪಪ್ಪಾಯಿಯೂ ಒಂದು. ಪಪ್ಪಾಯಿಯನ್ನು ನಿಯಮಿತವಾಗಿ ಬಳಸುವುದರಿಂದ ಚರ್ಮದಲ್ಲಿ ಮೆಲನಿನ್ ಅನ್ನು ಕಡಿಮೆ ಮಾಡುತ್ತದೆ. ಇದು ಚರ್ಮವನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ. ಈ ಪ್ಯಾಕ್ ತಯಾರಿಸಲು, ನೀವು ಪಪ್ಪಾಯಿಯ ಹಣ್ಣನ್ನು ಮ್ಯಾಶ್ ಮಾಡಿ ಮತ್ತು ಅದರಲ್ಲಿ 1 ಟೀ ಸ್ಪೂನ್ ಕಡಲೆ ಹಿಟ್ಟನ್ನು ಬೆರೆಸಬೇಕು. ನಂತರ ಈ ಪೇಸ್ಟ್ ಅನ್ನು ನಿಮ್ಮ ಮುಖದ ಮೇಲೆ ಹಚ್ಚಿ, ಒಣಗಲು ಬಿಡಿ. ಒಣಗಿದ ನಂತರ ನಿಧಾನವಾಗಿ ಪ್ಯಾಕ್ ತೆಗೆದುಹಾಕಿ. ಸ್ವಚ್ಛವಾದ ನೀರಿನಲ್ಲಿ ಮುಖ ತೊಳೆಯಿರಿ.

Advertisement


ಅರಿಶಿನ ಮತ್ತು ಜೇನುತುಪ್ಪ
ಅರಿಶಿನವನ್ನು ಅನೇಕ ಸೌಂದರ್ಯ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ. ಅರಿಶಿನ ಆಯುರ್ವೇದ ಸಸ್ಯವಾಗಿದ್ದು, ಇದು ನಿಮ್ಮ ಆರೋಗ್ಯಕ್ಕೆ ಮಾತ್ರವಲ್ಲದೆ, ಸೌಂದರ್ಯಕ್ಕೂ ಪ್ರಯೋಜನಕಾರಿಯಾಗಿದೆ. ಅರಿಶಿನದ ಫೇಸ್ ಪ್ಯಾಕ್ ಮಾಡಲು, ಅರಿಶಿನ ಪುಡಿ ಮತ್ತು ಜೇನುತುಪ್ಪವನ್ನು ಬೆರೆಸಿ ಪೇಸ್ಟ್ ತಯಾರಿಸಿ, ಬೇಕಾದರೆ ನೀವು 2 ಟೀ ಚಮಚ ಹಾಲನ್ನು ಕೂಡ ಸೇರಿಸಬಹುದು. ಈ ಪೇಸ್ಟ್ ಅನ್ನು ನಿಮ್ಮ ಮುಖಕ್ಕೆ 20 ನಿಮಿಷಗಳ ಕಾಲ ಹಚ್ಚಿ, ತದನಂತರ ಮುಖವನ್ನು ತಣ್ಣೀರಿನಿಂದ ತೊಳೆಯಿರಿ. ಉತ್ತಮ ಫಲಿತಾಂಶಕ್ಕಾಗಿ, ಈ ಪ್ಯಾಕ್ ಅನ್ನು ವಾರಕ್ಕೆ ಎರಡು ಬಾರಿ ಮುಖಕ್ಕೆ ಹಚ್ಚಿ.

Advertisement


ಹಾಲು ಮತ್ತು ಕೇಸರಿ
ಕೇಸರಿ ಸ್ವಲ್ಪ ದುಬಾರಿ. ಆದರೆ ಇದು ತ್ವಚೆಯ ಸೌಂದರ್ಯವನ್ನು ಹೆಚ್ಚಿಸಲು ಹೆಚ್ಚು ಸಹಾಯ ಮಾಡುತ್ತದೆ. ಈ ಪ್ಯಾಕ್ ತಯಾರಿಸಲು ನೀವು ಹಾಲಿನಲ್ಲಿ ಪ್ರತಿದಿನ 1-2 ಕೇಸರಿಯನ್ನು 15-20 ನಿಮಿಷಗಳ ಕಾಲ ನೆನೆಸಬೇಕು. ನಂತರ ಈ ಹಾಲನ್ನು ಪ್ರತಿ ದಿನ ಹತ್ತಿಯ ಸಹಾಯದಿಂದ ಮುಖಕ್ಕೆ ಹಚ್ಚಿಕೊಳ್ಳಿ. ವಿಶೇಷವಾಗಿ ಮುಖದ ಮೇಲೆ ಮೊಡವೆ ಇರುವ ಜನರು ಈ ಆಯುರ್ವೇದ ವಿಧಾನವನ್ನು ಬಳಸುತ್ತಾರೆ.
All Rights Reserved Namma Kannada Entertainment.

Advertisement

Advertisement
Share this on...