ಬಿಗ್ ಬಿ ಅಮಿತಾಬ್ ಬಚ್ಚನ್ ಮನಗೆದ್ದ ಬಿರಾದಾರ

in ಮನರಂಜನೆ/ಸಿನಿಮಾ 111 views

ಕನ್ನಡ ಚಿತ್ರರಂಗದ ಹಿರಿಯನಟ, ಹಾಸ್ಯ ಕಲಾವಿದ, ವೈಜನಾಥ್ ಬಿರಾದಾರ್ ಇದೀಗ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಮನಗೆದ್ದಿದ್ದಾರೆ. ಸಿನಿಮಾಗಳಲ್ಲಿ ಕುಡುಕ, ಭಿಕ್ಷುಕ ನಂತಹ ಪಾತ್ರಗಳಲ್ಲಿ ಸಹಜ ನಟನೆ ನೀಡುವ ,ಹರಿದ ಮಾಸಿದ ಬಟ್ಟೆಯಲ್ಲಿಯೇ ಪಾತ್ರಕ್ಕೆ ಮೆರಗು ನೀಡುವ ಕಲಾವಿದ ಬಿರಾದಾರ. ಬಿರಾದಾರ್ ಈಗ ಬಾಲಿವುಡ್ ಬಿಗ್ ಬಿ ಗಮನ ಸೆಳೆದಿದ್ದಾರೆ. ಅಚ್ಚರಿ ಈನಿಸಿದರೂ ಇದು ನಿಜ. ಗಿರೀಶ್ ಕಾಸರವಳ್ಳಿ ಅವರ ನಿರ್ದೇಶನದ‌‌ ಕನಸೆಂಬ ಕುದುರೆಯೇರಿ ಸಿನಿಮಾದಲ್ಲಿನ ನಟನೆಗಾಗಿ ಬಿರಾದಾರ ಅವರಿಗೆ ಸ್ಪೇನ್ ನ ಮ್ಯಾಡ್ರಿಟ್ ನಲ್ಲಿ ನಡೆದ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ದೊರಕಿದೆ. ಇದು ನಮ್ಮಲ್ಲಿ ಅಷ್ಟಾಗಿ ಸುದ್ದಿಯೂ ಆಗಿಲ್ಲ, ಯಾರಿಗೂ ಗೊತ್ತಾಗಲೂ ಇಲ್ಲ. ಆದರೆ ಬಾಲಿವುಡ್ ಬಿಗ್ ಬಿ ಅಮಿತಾಬ್ ಅವರಿಗೆ ಈ ಸುದ್ದಿ ತಲುಪಿತು. ಕೂಡಲೇ ವೈಜನಾಥ ಬಿರಾದಾರ ಅವರಿಗೆ ಕರೆ ಮಾಡಿ ಭಾರತೀಯರೊಬ್ಬರಿಗೆ ಈ ಪ್ರಶಸ್ತಿ ದೊರಕಿದ್ದು ನಮಗೆ ಹೆಮ್ಮೆ ಎನಿಸಿದೆ ಎಂದು ಅಭಿನಂದಿಸಿದ್ದಾರೆ.

Advertisement

Advertisement

ವೈಜನಾಥ ಬಿರಾದಾರ ಅವರು ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನವರು. ಓದಿದ್ದು ನಾಲ್ಕನೇ ತರಗಿಯಾದರೂ ನಾಟಕ ಹಾಗೂ ಕನ್ನಡ ಚಿತ್ರರಂಗದಲ್ಲಿ ಬಿರಾದಾರ್ ಎಂದೇ ಗುರುತಿಸಿಕೊಂಡವರು. ಎಂ.ಎಸ್. ಸತ್ಯು ನಿರ್ದೇಶನದ ‘ಬರ’ ಚಿತ್ರದಲ್ಲಿ ಅನಂತನಾಗ್ ಅವರ ಸಹಾಯದಿಂದ ಸಣ್ಣ ಪಾತ್ರವೊಂದನ್ನು ಗಿಟ್ಟಿಸಿಕೊಂಡ ಬಿರಾದಾರ, ಅನಂತನಾಗ್ ಅವರ ಸಲಹೆಯಂತೆ ಬೆಂಗಳೂರಿಗೆ ಬಂದರು. ‘ಓ ಮಲ್ಲಿಗೆ’, ‘ಅಕ್ಕ’, ‘ಹುಲಿಯಾ’, ‘ಮಠ’, ‘ಲವ್ ಟ್ರೈನಿಂಗ್ ಸ್ಕೂಲ್’ ಸೇರಿದಂತೆ 360ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.

Advertisement

ನಾಲ್ಕು ಲಂಬಾಣಿ, ತುಳು ಹಾಗೂ ಹಿಂದಿಯ ‘ಹ್ಯಾಂಗ್ ಟು ಡೆತ್’ ಸಿನಿಮಾದಲ್ಲೂ ನಟಿಸಿದ್ದಾರೆ. ಕುಡುಕ, ಭಿಕ್ಷುಕ ಹೀಗೆ ಸಣ್ಣಪುಟ್ಟ ಪಾತ್ರಗಳಿಗೆ ಸೀಮಿತವಾಗಿದ್ದ ಬಿರಾದಾರ್ ಅವರಿಗೆ ಅಂತಾರಾಷ್ಟ್ರೀಯ ಖ್ಯಾತಿ ತಂದುಕೊಟ್ಟದ್ದು ಗಿರೀಶ್ ಕಾಸರವಳ್ಳಿಯವರ ‘ಕನಸೆಂಬೋ ಕುದುರೆಯನೇರಿ’ ಸಿನಿಮಾ. ಈ ಸಿನಿಮಾಗೆ ಸ್ಪೇನ್‍ನ ಮ್ಯಾಡ್ರಿಡ್‌ನಲ್ಲಿ ನಡೆದ 2011ರ ಸಾಲಿನ “ಇಮ್ಯಾಜಿನ್ ಇಂಡಿಯಾ” ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ. ಅಲ್ಲದೇ 2014ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಕೂಡ ದೊರೆತಿದೆ.

Advertisement

Advertisement
Share this on...