ಇಂಜಿನಿಯರ್ ಕೆಲಸ ಬಿಟ್ಟು ಹೊಸ ಟೆಕ್ನಿಕ್ ಬಳಸಿ ತರಕಾರಿ ಬೆಳೆದ ಹುಡುಗಿ.. ವಿದೇಶದಲ್ಲಿ ಭಾರಿ ಬೇಡಿಕೆ..!

in ಕನ್ನಡ ಮಾಹಿತಿ 429 views

ಸುಮಾರು 80% ರೈತರು ತಮ್ಮ ಮಕ್ಕಳು ತಮ್ಮಂತೆ ರೈತರು ಆಗಲಿ ಎಂದು ಬಯಸುವುದಿಲ್ಲ. ಅದಕ್ಕೆ ಕಾರಣ ವ್ಯವಸಾಯ ಅಂದರೆ ನಷ್ಟ. ಹಗಲಿರುಳು ಕಷ್ಟಪಟ್ಟರು ಕೈಗೆ ಬಿಡಿಗಾಸು ಸಿಗುವುದಿಲ್ಲ. ಜೀವನ ಉತ್ತಮವಾಗಿರುವುದಿಲ್ಲ ಅನ್ನುವುದು. ಆದರೆ ಪಂಜಾಬ್ ಹಾಗೂ ಹರಿಯಾಣ ರೈತರು ವ್ಯವಸಾಯ ಮಾಡಿ ಐಶಾರಾಮಿ ಜೀವನ ನಡೆಸುತ್ತಿದ್ದಾರೆ. ಹೇಗೆ ಇಸ್ರೈಲ್, ಅಮೆರಿಕಾ, ನ್ಯೂಜಿ಼ಲೆಂಡ್, ಥೈಲ್ಯಾಂಡ್ ರೈತರು ಕೋಟಿ-ಕೋಟಿ ಗಳಿಸಿ ಬಿಜಿ಼ನೆಸ್ ಮ್ಯಾನ್ ಗಳಂತೆ ಬದುಕುತ್ತಿದ್ದಾರೆ. ಅದು ಹೇಗೆ..?
ಯಾಕೆಂದರೆ ಅವರು ಮುಂದೆ ಹೋಗಿದ್ದಾರೆ. ನಾವು 70 ವರ್ಷದ ಹಿಂದೆ ಮಾಡುತ್ತಿದ್ದ ಪದ್ಧತಿಯನ್ನೇ ಮಾಡುತ್ತ ಅದೇ ವಿಧಾನ ಬಳಸುತ್ತ ಅಲ್ಲೇ ಉಳಿದುಕೊಂಡು ಬಿಟ್ಟಿದ್ದೇವೆ. ಹಿಂದಿನ ಕಾಲದಲ್ಲಿ ಕುದುರೆ, ಎತ್ತಿನಗಾಡಿಯಲ್ಲಿ ಪ್ರಯಾಣ ಮಾಡುತ್ತಿದ್ವಿ. ಈಗ ಬಸ್ಸು, ಕಾರು, ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದಿವಿ. ಹಾಗಾಗಿ ಹೊಸ ಪದ್ಧತಿಗಳಿಗೆ ಹೊಂದಿಕೊಳ್ಳಬೇಕು ಅಲ್ಲವೇ? ಲಕ್ಷ-ಲಕ್ಷ ಬರುತ್ತಿದ್ದ ಕೆಲಸವನ್ನು ಬಿಟ್ಟು ಈ ಹುಡುಗಿ ವ್ಯವಸಾಯವನ್ನು ಮಾಡುತ್ತಾ ಹೇಗೆ ಯಶಸ್ಸು ಕಂಡಿದ್ದಾಳೆ ಗೊತ್ತಾ..?

Advertisement

Advertisement

ಅವರ ಹೆಸರು ವಲ್ಲಾರಿ ಚಂದ್ರಕರ್. ಛತಿಸ್ಗಡ್ ರಾಜ್ಯದವರು. ಕಂಪ್ಯೂಟರ್ ಸೈನ್ಸ್ ನಲ್ಲಿ ಎಂ.ಟೆಕ್. ಮಾಡಿದ ವಲ್ಲಾರಿ ಚಂದ್ರಕರ್ ಗೆ ಲಕ್ಷ-ಲಕ್ಷ ಸಂಬಳ ಕೊಡುವ ಕೆಲಸ ಸಿಕ್ಕಿತು. ಆದರೆ ಅದು ಇಷ್ಟ ಇಲ್ಲದೆ ಒಂದಷ್ಟು ತಿಂಗಳು ಕಾಲೇಜ್ ಪ್ರೊಫೆಸರ್ ಆಗಿ ಕೆಲಸ ಮಾಡಿದರು. ರಾಯ್ಪುರ್ ನಿಂದ ಆಗಾಗ ತಮ್ಮ ಹಳ್ಳಿಗೆ ಬರುತ್ತಿದ್ದ ವಲ್ಲಾರಿಗೆ ವ್ಯವಸಾಯದ ಮೇಲೆ ಹೆಚ್ಚು ಆಸಕ್ತಿ ಬೆಳೆಯಿತು. ಆಗ ತಂದೆಯ ಬಳಿ ನನಗೆ ಒಂದಷ್ಟು ಜಮೀನು ಖರೀದಿ ಮಾಡಿಕೊಡಿ ನಾನು ವ್ಯವಸಾಯ ಮಾಡುತ್ತೇನೆ ಎಂದು ಹೇಳಿದರು ವಲ್ಲಾರಿ. ಆಗ ಅಲ್ಲಿನ ಜನ ಈ ಹುಡುಗಿ ಓದಿರುವ ಅನಕ್ಷರಸ್ತೆ ಎಂದು ಗೇಲಿ ಮಾಡಿದರು‌. ಆದರೆ ಮಗಳ ಆಸೆಯಂತೆ 15 ಎಕರೆ ಜಮೀನನ್ನು ಖರೀದಿ ಮಾಡಿಕೊಟ್ಟರು ವಲ್ಲಾರಿ ತಂದೆ.
ಆಗ ಒಂದಷ್ಟು ವ್ಯವಸ್ಥಿತ ಸ್ಕೆಚ್ ಹಾಕಿದ ಈ ಹುಡುಗಿ ರೈತರು ನಷ್ಟ ಅನುಭವಿಸುತ್ತಿರುವ ಸಾಂಪ್ರದಾಯಿಕ ಪದ್ಧತಿಯಿಂದ ಹೊರಗೆ ಬಂದು ಹೊಸ ಪದ್ಧತಿಯಲ್ಲಿ ವ್ಯವಸಾಯ ಮಾಡಬೇಕೆಂದು ನಿರ್ಧರಿಸಿದಳು.

Advertisement

Advertisement

ಆಗ ಆಧುನಿಕ ವ್ಯವಸಾಯದ ಪದ್ಧತಿಯ ಬಗ್ಗೆ ಒಂದಷ್ಟು ರಿಸರ್ಚ್ ಮಾಡಿದ ವಲ್ಲಾರಿ ಇಸ್ರೇಲ್, ಥೈಲ್ಯಾಂಡ್ ನಲ್ಲಿ ಮಾಡುತ್ತಿದ್ದ ಅಡ್ವಾನ್ಸ್ ಕೃಷಿ ಪದ್ಧತಿಯ ಬಗ್ಗೆ ಇಂಟರ್ನೆಟ್ ನಲ್ಲಿ ನೋಡಿ ಅದೇ ಪದ್ಧತಿಯಲ್ಲಿ ವ್ಯವಸಾಯ ಮಾಡಲು ಪ್ರಾರಂಭ ಮಾಡಿದರು. ಎಲ್ಲಿ ಪ್ರಯತ್ನವಿರುತ್ತದೆ ಅಲ್ಲಿ ಫಲವಿರುತ್ತದೆ ಅಲ್ಲವೇ? ಮೊದಲು ಒಂದೆರಡು ತಿಂಗಳು ಕಷ್ಟ ಆಯಿತು. ನಂತರ ಅದರ ಲಯ ಕಂಡುಕೊಂಡರು. ನಂತರ ಅಡ್ವಾನ್ಸ್ ಪದ್ಧತಿಯಲ್ಲಿ ಬಿನಿಸ್, ಟೊಮೆಟೊ, ಹಾಗಲಕಾಯಿ, ಕ್ಯಾಪ್ಸಿಕಂ, ಮೆಣಸಿನಕಾಯಿ ಬೆಳೆಯಲು ಮುಂದಾಗಿ ಅದರಲ್ಲಿ ಸಕ್ಕತ್ ಸಕ್ಸಸ್ ಕಂಡರು.

ಈಗ ಬಂಪರ್ ಇಳುವರಿಯನ್ನು ತೆಗೆಯುತ್ತಿರುವ ವಲ್ಲಾರಿ ಅವುಗಳನ್ನು ಡೆಲ್ಲಿ, ಬೆಂಗಳೂರು, ನಾಗಪುರ, ಭೂಪಾಲ್ ನಗರಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ವಲ್ಲಾರಿ ಬೆಳೆಯುತ್ತಿರುವ ತರಕಾರಿ ನೋಟದಲ್ಲಿ, ಗುಣಮಟ್ಟದಲ್ಲಿ ಸೂಪರ್ ಆಗಿರುವುದರಿಂದ ದುಬೈ, ಇಸ್ರೈಲ್ ನಿಂದ ಬಾರಿ ಆರ್ಡರ್ಸ್ ಬರುತ್ತಿದ್ದು ಅಲ್ಲಿಗೂ ರಫ್ತು ಮಾಡುತ್ತಿದ್ದಾರೆ. ಹಾಗೆ ತಿಂಗಳಿಗೆ ಲಕ್ಷ-ಲಕ್ಷ ಹಣ ಗಳಿಸುತ್ತಿದ್ದಾರೆ.

 

ಹಾಗಾಗಿ ಅಡ್ವಾನ್ಸ್ ಪದ್ಧತಿಯನ್ನು ಬೇಗ ಅರ್ಥಮಾಡಿಕೊಳ್ಳಬಲ್ಲ ಇಂದಿನ ಯುವ ಪೀಳಿಗೆ ವ್ಯವಸಾಯದ ಕಡೆ ಹೆಚ್ಚು ಒಲವು ತೋರಿದರೆ ಆರೋಗ್ಯ ಜೀವನದ ಜೊತೆ ಐಷಾರಾಮಿ ಜೀವನ ಕೂಡ ನಡೆಸಬಹುದು.

– ಸುಷ್ಮಿತಾ

Advertisement
Share this on...