ವನಿತಾ ವಾಸು ಚಿತ್ರರಂಗಕ್ಕೆ ಬಂದದ್ದು ಹೇಗೆ ಗೊತ್ತಾ…?

in ಮನರಂಜನೆ 606 views

‘ಆಗಂತುಕ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದ ನಟಿ ವನಿತಾ ವಾಸು ಎಂದರೆ ಈಗಲೂ ಎಲ್ಲರೂ ಇಷ್ಟಪಡುತ್ತಾರೆ. 90 ರ ದಶಕದ ಸ್ಯಾಂಡಲ್​​ವುಡ್​ ಸುಂದರ ನಟಿಯರಲ್ಲಿ ವನಿತಾ ವಾಸು ಕೂಡಾ ಒಬ್ಬರು. ವನಿತಾ ಇಂದಿಗೂ ಅದೇ ಗ್ಲ್ಯಾಮರ್ ಉಳಿಸಿಕೊಂಡಿದ್ದಾರೆ. ತಮ್ಮ ಸೌಂದರ್ಯದಿಂದಲೇ ಹುಡುಗರ ಮನಸ್ಸು ಕದ್ದ ವನಿತಾ ವಾಸು ಇಂದಿಗೂ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ.ಬೆಂಗಳೂರಿನಲ್ಲೇ ಹುಟ್ಟಿ ಬೆಳೆದು, ವಿದ್ಯಾಭ್ಯಾಸ ಮಾಡಿದ ವನಿತಾ ವಾಸು ಇಂದಿಗೂ ಹುಟ್ಟಿದ ಊರಿನಲ್ಲೆ ನೆಲೆಸಿದ್ದಾರೆ. ಅವರದ್ದು ಮೂಲತ: ಮಲಯಾಳಿ ಕುಟುಂಬ. ಬಿ.ಕಾಂ ಪದವೀಧರೆಯಾದ ವನಿತಾ ವಾಸು ಕಾಲೇಜಿನಲ್ಲಿ ಇರುವಾಗಲೇ ರೂಪದರ್ಶಿಯಾಗಿ ಕೆಲಸ ಮಾಡಿದವರು. ಆ ವೇಳೆ ‘ಆಗಂತುಕ’ ಚಿತ್ರಕ್ಕಾಗಿ ಸುರೇಶ್​​​​​​​​​​​​​​​ ಹೆಬ್ಳೀಕರ್​ ನಾಯಕಿಯ ಹುಡುಕಾಟದಲ್ಲಿದ್ದರು. ಆಗ ಅವರ ಕಣ್ಣಿಗೆ ಬಿದ್ದದ್ದೇ ವನಿತಾ ವಾಸು. ಚಿತ್ರರಂಗದ ಬಗ್ಗೆ ಏನೂ ಅರಿವಿಲ್ಲದ ವನಿತಾ ವಾಸು ಪೋಷಕರನ್ನು ಒಪ್ಪಿಸಿದ ಸುರೇಶ್ ಹೆಬ್ಳೀಕರ್ ಕೊನೆಗೂ ಅವರನ್ನು ತಮ್ಮ ಚಿತ್ರದ ನಾಯಕಿಯನ್ನಾಗಿ ಮಾಡಿದರು.

Advertisement

 

Advertisement

Advertisement

 

Advertisement

ಇದಾದ ನಂತರ ವನಿತಾ ಕಾಡಿನ ಬೆಂಕಿ, ತರ್ಕ, ಶಕ್ತಿ, ನಿಗೂಢ ರಹಸ್ಯ, ಪುಂಡ ಪ್ರಚಂಡ, ಗೋಲ್​ಮಾಲ್ ರಾಧಾಕೃಷ್ಣ, ಮಣ್ಣಿನ ದೋಣಿ, ಎಂಟೆದೆ ಭಂಟ, ವೈಶಾಖದ ದಿನಗಳು, ನಾಗಮಂಡಲ ಸೇರಿ ಬಹಳಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ತಂದೆ-ತಾಯಿ ನೋಡಿದ ವ್ಯಕ್ತಿಯನ್ನು ಮದುವೆಯಾದ ವನಿತಾ ಮದುವೆ ನಂತರ ಸಿನಿಮಾಗಳಿಂದ ದೂರವಾದರು. ಅನೇಕ ವರ್ಷಗಳ ನಂತರ ಕಿರುತೆರೆಗೆ ಕಾಲಿಟ್ಟ ಅವರು ಮನೆಯೊಂದು ಮೂರು ಬಾಗಿಲು, ಸರಸ್ವತಿ, ಬ್ರಹ್ಮಗಂಟು, ಕ್ಷಣ ಕ್ಷಣ ಸೇರಿ ಬಹಳಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

 

ಇಂದಿಗೂ ಯುವತಿಯರನ್ನು ನಾಚಿಸುವಂತ ಸೌಂದರ್ಯ ಕಾಪಾಡಿಕೊಂಡು ಬಂದಿರುವ ವನಿತಾವಾಸು ಅವರಿಗೆ ಕಶಿಶ್ ಎಂಬ ಮಗನಿದ್ದಾರೆ. ಮಗ ಕಶಿಶ್ ಎಂದರೆ ವನಿತಾ ಅವರಿಗೆ ಪ್ರಾಣ. ನನ್ನ ಶಕ್ತಿ ಹಾಗೂ ನನ್ನ ವೀಕ್​​ನೆಸ್ ಎರಡೂ ಮಗನೇ ಎನ್ನುತ್ತಾರೆ ವನಿತಾ ವಾಸು. ಕಶಿಶ್ ನೋಡಲು ಥೇಟ್ ಅಮ್ಮನ ಹಾಗೇ ಇದ್ದಾರೆ. ವನಿತಾ ವಾಸು ಪುತ್ರ ಹೀರೋ ಆಗುವ ಎಲ್ಲಾ ಲಕ್ಷಣಗಳನ್ನು ಹೊಂದಿದ್ದಾರೆ. ಆದರೆ ಅವರು ಚಿತ್ರರಂಗಕ್ಕೆ ಬರುತ್ತಾರೋ ಇಲ್ಲವೋ ಎಂಬುದರ ಬಗ್ಗೆ ಮಾಹಿತಿ ಇಲ್ಲ.

 

ವನಿತಾ ವಾಸು ಅವರು ದೊಡ್ಡ ನಟಿ ಆದರೂ ಸ್ವಲ್ಪವೂ ಅಹಂ ಇಲ್ಲ. ಶೂಟಿಂಗ್ ಸೆಟ್​​​ನಲ್ಲಿ ಇವರು ಲೈಟ್​​​ಬಾಯ್​​ನಿಂದ ಹಿಡಿದು ಸಣ್ಣಪುಟ್ಟ ಕೆಲಸ ಮಾಡುವ ಎಲ್ಲರನ್ನೂ ಬಹಳ ಆತ್ಮೀಯತೆಯಿಂದ ಮಾತನಾಡುತ್ತಾರೆ. ಸಿನಿಮಾದಲ್ಲಿ, ಧಾರಾವಾಹಿಯಲ್ಲಿ ಎಷ್ಟು ಜೋರು ಪಾತ್ರ ಮಾಡುತ್ತಾರೋ ನಿಜ ಜೀವನದಲ್ಲಿ ಅದಕ್ಕೆ ವಿರುದ್ಧ. ಒಟ್ಟಿನಲ್ಲಿ ವನಿತಾ ವಾಸು ಹೃದಯವಂತಿಕೆಯ ಹೆಣ್ಣುಮಗಳು ಎಂಬುದಂತೂ ನಿಜ.

Advertisement
Share this on...