2 ಮದುವೆಯಿಂದ 3 ಮಕ್ಕಳಿದ್ದರೂ ಮೂರನೇ ಮದುವೆಯಾಗುತ್ತಿರುವ ಖ್ಯಾತ ನಟನ ಪುತ್ರಿ….!

in ಕನ್ನಡ ಮಾಹಿತಿ/ಮನರಂಜನೆ 181 views

ಮದುವೆ ಎನ್ನುವುದು ಜೀವನದ ಪ್ರಮುಖ ಘಟ್ಟ. ಒಳ್ಳೆ ಜೀವನ ಸಂಗಾತಿ ದೊರೆಯಬೇಕೆಂದರೂ ಕೇಳಿಕೊಂಡು ಬಂದಿರಬೇಕು ಎಂಬ ಮಾತಿದೆ. ಕೆಲವೊಮ್ಮೆ ಲೈಪ್ ಪಾಟ್ನರ್​​​​​ ಸರಿ ಇಲ್ಲದಿದ್ದರೂ ಕೆಲವರು ಹೊಂದಿಕೊಂಡು ಹೋಗುತ್ತಾರೆ. ಕೆಲವರು ಆ ಸಂಬಂಧದಿಂದ ಹೊರಬರುತ್ತಾರೆ. ಮತ್ತೆ ಕೆಲವರು ಅನಾವಶ್ಯಕವಾಗಿ ಇಲ್ಲಸಲ್ಲದ ಕಿರಿಕ್ ಮಾಡಿಕೊಂಡು ತಾವೇ ಸಂಬಂಧ ಕಡಿದುಕೊಳ್ಳುತ್ತಾರೆ.ಈ ನಟಿಯ ವಿಚಾರದಲ್ಲಿ ಆಗಿರುವುದು ಏನು ಎಂಬುದು ಯಾರಿಗೂ ತಿಳಿದಿಲ್ಲ. ಅಂದಹಾಗೆ ಇವರು ಖ್ಯಾತ ತಮಿಳು ನಟ ವಿಜಯ್ ಕುಮಾರ್ ಪುತ್ರಿ . ವಿಜಯ್ ಕುಮಾರ್ ಅವರನ್ನು ನೀವು ಕನ್ನಡದ ‘ನಂದಿನಿ’ ಧಾರಾವಾಹಿಯ ರಾಜಶೇಖರ್ ಪಾತ್ರದಲ್ಲಿ ನೋಡಿರುತ್ತೀರಿ. ನೆನಪಿರಲಿ ಪ್ರೇಮ್ ಹಾಗೂ ಶ್ರಿಯಾ ನಟಿಸಿರುವ ‘ಚಂದ್ರ’ ಚಿತ್ರದಲ್ಲೂ ನಟಿಸಿದ್ದಾರೆ. ವಿಜಯ್ ಕುಮಾರ್ ಅವರ ಪುತ್ರಿಯೇ ಈ ನಟಿ. ಇವರ ಹೆಸರು ವನಿತಾ. ತೆಲುಗು, ತಮಿಳಿನ ಅನೇಕ ಸಿನಿಮಾಗಳಲ್ಲಿ ವನಿತಾ ನಟಿಸಿದ್ದಾರೆ.

Advertisement

Advertisement

ವನಿತಾ ಸದಾ ಒಂದಲ್ಲಾ ಒಂದು ವಿವಾದದಲ್ಲಿ ಸಿಲುಕುತ್ತಾರೆ. ಕೆಲವೊಂದು ವಿಚಾರಗಳಲ್ಲಿ ಆಗ್ಗಾಗ್ಗೆ ಸುದ್ದಿಯಲ್ಲಿರುತ್ತಾರೆ. ಒಮ್ಮೆ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ತಂದೆಯೊಂದಿಗೆ ಗಲಾಟೆ ಮಾಡಿಕೊಂಡು ವಿಜಯ್ ಸ್ವಂತ ಮಗಳ ಮೇಲೆ ಕೇಸ್ ದಾಖಲಿಸಿದ್ದರು . ಅಷ್ಟರ ಮಟ್ಟಿಗೆ ಅಪ್ಪನೊಂದಿಗೆ ಕಿರಿಕ್ ಮಾಡಿಕೊಂಡಿದ್ದರು ವನಿತಾ. ವಿಜಯ್ ಅವರಿಗೆ ಚಿತ್ರರಂಗದಲ್ಲಿ ಒಳ್ಳೆ ಹೆಸರಿದೆ. ಆದರೆ ವನಿತಾ ಅವರಿಂದ ತಂದೆ ಹೆಸರು ಹಾಳಾಗುತ್ತಿದೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ಇನ್ನು ಬಿಗ್​ಬಾಸ್​​​​​​​ನಲ್ಲಿ ಕೂಡಾ ಸ್ಪರ್ಧಿಯಾಗಿ ಭಾಗವಹಿಸಿದ್ದ ವನಿತಾ ಅಲ್ಲೂ ಕಿರಿಕ್ ಮಾಡಿಕೊಂಡಿದ್ದರು.

Advertisement

Advertisement

ಇದೀಗ ವನಿತಾ ಮದುವೆಯಾಗಲು ಹೊರಟಿದ್ದಾರೆ. ಅದರಲ್ಲೇನು ವಿಶೇಷ ಅಂತೀರಾ…? ವನಿತಾಗೆ ಇದು ಮೂರನೇ ಮದುವೆ.
2000 ಇಸವಿಯಲ್ಲಿ ಅವರು ಆಕಾಶ್ ಎಂಬುವವರನ್ನು ಮದುವೆಯಾದರು. ಈ ದಂಪತಿಗೆ ಒಬ್ಬ ಮಗ, ಮಗಳು ಇದ್ದಾರೆ. ಕೆಲವು ವರ್ಷಗಳ ನಂತರ ದಂಪತಿ ನಡುವೆ ಮನಸ್ತಾಪ ಉಂಟಾಗಿದ್ದರಿಂದ ವಿಚ್ಛೇದನ ಪಡೆದರು. ನಂತರ 2007 ರಲ್ಲಿ ಆನಂದ್ ಜಯರಾಜನ್ ಎಂಬುವವರನ್ನು ವನಿತಾ ಮದುವೆಯಾದರು. ಎರಡನೇ ಪತಿಯಿಂದ ಕೂಡಾ ವನಿತಾ ಅವರಿಗೆ ಒಬ್ಬಳು ಮಗಳಿದ್ದಾಳೆ. ನಂತರ ಇವರಿಂದಲೂ ದೂರವಾದ ವನಿತಾ ಇದೀಗ ಮೂರನೇ ಮದುವೆಗೆ ರೆಡಿಯಾಗುತ್ತಿದ್ದಾರೆ ಎನ್ನಲಾಗಿದೆ.

 

ವನಿತಾ ಅವರಿಗೆ ಈಗ 40 ವರ್ಷ ವಯಸ್ಸು. ವನಿತಾ ಮದುವೆ ಆಮಂತ್ರಣ ಪತ್ರಿಕೆಯನ್ನು ಸ್ವತ: ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಷೇರ್ ಮಾಡಿಕೊಂಡಿದ್ದಾರೆ. ಜೂನ್ 27 ರಂದು ಈ ಮದುವೆ ನಡೆಯುತ್ತಿದ್ದು ಬಾಲಿವುಡ್, ಕಾಲಿವುಡ್, ಹಾಲಿವುಡ್​​​​​​​​​​ ಸಿನಿಮಾಗಳಿಗೆ ವಿಜ್ಯುವಲ್ ಎಫೆಕ್ಟ್ ನಿರ್ದೇಶಕರಾಗಿ ಕೆಲಸ ಮಾಡುತ್ತಿರುವ ಪೀಟರ್ ಪೌಲ್ ಎಂಬುವವರನ್ನು ವನಿತಾ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ. ಈ ಮದುವೆಯಾದರೂ ಶಾಶ್ವತವಾಗಿರಲಿ ಎಂಬುದೇ ಎಲ್ಲರ ಹಾರೈಕೆ

Advertisement
Share this on...