ನಟಿ ವನಿತ ವಾಸುರವರ ಎನರ್ಜಿ ಹಾಗೂ ವೀಕ್ನೆಸ್ ನಿಮಗೆ ಗೊತ್ತಾ….?

in ಮನರಂಜನೆ/ಸಿನಿಮಾ 151 views

ಕನ್ನಡ ಚಿತ್ರರಂಗ ಕಂಡ ಸುಂದರ ನಟಿಯರಲ್ಲಿ ನಟಿ ವನಿತ ವಾಸುರವರು ಕೂಡ ಒಬ್ಬರು. 90 ರ ಈ ನಟಿಯ ಕಣ್ಣಿನ ನೋಟ ನೋಡಿ ಬೋಲ್ಡ್ ಆದ ಅದೆಷ್ಟೋ ಹುಡುಗರು ಸ್ಟಾರ್ ನಟರು ನನ್ನ ಡ್ರೀಮ್ ಗರ್ಲ್ ಇವರ ಹಾಗೆ ಇರಬೇಕು ಎಂದು ಕನಸನ್ನು ಕಂಡರು. ಸಿನಿಮಾ ಲೋಕದಲ್ಲಿ ಉತ್ತುಂಗ ಸ್ಥಾನವನ್ನು ಕಂಡ ನಟಿ ವನಿತವಾಸು ಒಂದು ಕಾಲದಲ್ಲಿ ಬಿಡುವಿಲ್ಲದ ನಟಿ ನಂತರ ಕಿರುತೆರೆಗೆ ಎಂಟ್ರಿ ಕೊಟ್ಟು ಮನೆಯೊಂದು ಮೂರು ಬಾಗಿಲು ಸೀರಿಯಲ್ ಮೂಲಕ ಸೆನ್ಸೇಷನ್ ಕ್ರಿಯೇಟ್ ಮಾಡಿದ ಇವರು ನಂತರ ಸೀರಿಯಲ್ ಲೋಕವನ್ನು ಆಳಿದರು. ನಟಿ ವನಿತವಾಸು ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿ. ಚಿಕ್ಕಂದಿನಲ್ಲಿ ಸಕ್ಕತ್ ಇಂಟಲಿಜೆಂಟ್ ಸ್ಟೂಡೆಂಟ್ ಆಗಿದ್ದ ಇವರು ಒಂದನೇ ಕ್ಲಾಸಿನಿಂದ ನಾಲ್ಕನೇ ಕ್ಲಾಸಿನವರೆಗೂ ಇವರೆ ಕ್ಲಾಸ್ ಮಾನಿಟರ್ ಆಗಿದ್ದರು. ಕಾಲೇಜ್ ಡೇಸ್ ನಲ್ಲಿ ಮಾಡೆಲಿಂಗ್ ಮಾಡುತ್ತಿದ್ದ ವನಿತಾವಾಸುರವರ ಸ್ಟೈಲ್ ಹಾಗೂ ಫ್ಯಾಷನ್ ನೋಡಿ ನಮ್ಮ ಬ್ರ್ಯಾಂಡ್ ಗೆ ಮಾಡೆಲಿಂಗ್ ಮಾಡುವಂತೆ ಹಲವಾರು ಕಂಪನಿಗಳು ಕೇಳಿಕೊಂಡವು.

Advertisement

Advertisement

ಹೀಗೆ ಮಾಡೆಲಿಂಗ್ ಲೋಕದಲ್ಲಿ ಮಿನುಗುತ್ತಿದ್ದ ವನಿತಾವಾಸುರವರಿಗೆ ಸುಲಭವಾಗಿ ಸಿನಿಮಾಗಳಲ್ಲಿ ಅವಕಾಶ ಸಿಕ್ಕಿತು. ನಟಿ ವನಿತವಾಸುರವರ ನೋಟ ಕೋಪಿಷ್ಟೆ ತರ ಇದ್ದರು. ಅವರು ಮಾತ್ರ ತುಂಬಾನೇ ಫ್ರೆಂಡ್ಲಿ ನೇಚರ್ ಇರುವ ನಟಿ. ಸಿನಿಮಾ ಸೆಟ್ ನಲ್ಲಿ ಅವರು ಹೀರೋ ಇವರು ವಿಲನ್ ಅವರು ಲೈಟ್ ಬಾಯ್ ಎನ್ನುವ ಮನೋಭಾವವಿಲ್ಲದೆ ಎಲ್ಲರೊಂದಿಗೂ ಆತ್ಮೀಯವಾಗಿ ಬೆರೆಯುತ್ತಿದ್ದರು. ಎಲ್ಲರನ್ನು ಮಾತನಾಡಿಸುತ್ತಿದ್ದರು. ನಟಿ ವನಿತಾವಾಸುರವರಿಗೆ ಹಬ್ಬಗಳು ಆಚರಿಸುವುದು ಅಂದರೆ ತುಂಬಾನೇ ಇಷ್ಟ. ಹಾಗಾಗಿ ಭಾರತದಲ್ಲಿರುವ ಎಲ್ಲಾ ರೀತಿಯ ಹಬ್ಬಗಳನ್ನು ಆಚರಿಸುವ ಈ ನಟಿ ಎಲ್ಲರನ್ನೂ ಕರೆದು ಹಬ್ಬದ ಊಟ ಬಡಿಸುತ್ತಾರೆ.

Advertisement

Advertisement

ವನಿತಾವಾಸುರವರಿಗೆ ಒಬ್ಬ ಮಗ ಇದ್ದು ಅವರ ಹೆಸರು ಕಶಿಶ್. ವನಿತಾರವರ ಎನರ್ಜಿ ಹಾಗೂ ವೀಕ್ನೆಸ್ ಕೂಡ ಮಗ ಆಗಿದ್ದು. ಅವರು ಮಗನನ್ನು ಎಷ್ಟು ಪ್ರೀತಿ ಮಾಡುತ್ತಾರೆ ಅನ್ನುವುದನ್ನು ತೋರಿಸುತ್ತದೆ. ಒಂದಂತೂ ನಿಜ ಕನ್ನಡ ಚಿತ್ರರಂಗ ಕಂಡ ನಿಷ್ಕಲ್ಮಶ ಹಾಗೂ ಹೃದಯವಂತ ನಟಿಯರಲ್ಲಿ ವನಿತ ವಾಸುರವರು ಕೂಡ ಒಬ್ಬರು ಅನ್ನುವುದು ಅವರ ಹೃದಯವಂತಿಕೆಯ ಕನ್ನಡಿಯಾಗಿದೆ. ಕಲಾಲೋಕದಲ್ಲಿ ಕನಸಿನ ರಾಣಿಯಂತೆ ಮೀನುಗಿದ್ದರು ವನಿತವಾಸುರವರು.

– ಸುಷ್ಮಿತಾ

Advertisement
Share this on...