ಈ ನಟಿಯ ಮೂರನೇ ಮದುವೆಗೂ ಬಂತು ಸಂಚಕಾರ…ಕಾರಣ ಏನು ನೋಡಿ…!

in ಮನರಂಜನೆ/ಸಿನಿಮಾ 163 views

ಖ್ಯಾತ ತಮಿಳು ಹಿರಿಯ ನಟ ವಿಜಯ್ ಕುಮಾರ್ ಪುತ್ರಿ ವನಿತಾ ವಿಜಯ್ ಕುಮಾರ್ ಹಾಗು ವಿಶ್ಯುವಲ್ ಎಫೆಕ್ಟ್ ನಿರ್ದೇಶಕರಾಗಿ ಕೆಲಸ ಮಾಡುತ್ತಿರುವ ಪೀಟರ್ ಪೌಲ್ ಜೂನ್ 27 ರಂದು ಚೆನ್ನೈನಲ್ಲಿ ವಿವಾಹವಾಗಿದ್ದರು. ವನಿತಾ ಅವರಿಗೆ ಇದು ಮೂರನೇ ಮದುವೆ. ಆದರೆ ಮದುವೆಯಾಗುತ್ತಿದ್ದಂತೆ ವನಿತಾ ಅವರಿಗೆ ದೊಡ್ಡ ಆಘಾತ ಕಾದಿತ್ತು.ಅಸಲಿಗೆ ಪೀಟರ್​​​ ಪೌಲ್​​ಗೆ ಇದು ಎರಡನೇ ಮದುವೆಯಾಗಿದ್ದು ಮೊದಲ ಪತ್ನಿಗೆ ವಿಚ್ಛೇದನ ನೀಡದೆ ವನಿತಾ ಜೊತೆ ಮದುವೆಯಾಗಿದ್ಧಾರೆ ಎನ್ನಲಾಗಿದೆ. ಪೀಟರ್ ಮೊದಲ ಪತ್ನಿ ಎಲಿಜಬೆತ್ ಹೆಲನ್​ ಈಗ ಕೋರ್ಟ್ ಮೆಟ್ಟಿಲೇರಿದ್ಧಾರೆ. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಈ ದಂಪತಿ ನಡುವೆ ಮನಸ್ತಾಪವಿದ್ದು ಬಹಳ ವರ್ಷಗಳಿಂದ ಇಬ್ಬರೂ ಬೇರೆ ವಾಸಿಸುತ್ತಿದ್ದಾರೆ ಎನ್ನಲಾಗಿದೆ. ತನಗೆ ವಿಚ್ಛೇದನ ನೀಡದೆ ನನ್ನ ಪತಿ ಎರಡನೇ ಮದುವೆಯಾಗಿರುವುದು ಎಷ್ಟು ಸರಿ ಎಂದು ಎಲಿಜಬೆತ್ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾರೆ.

Advertisement

Advertisement

ಇದಕ್ಕೆ ಪ್ರತಿಕ್ರಿಯಿಸಿರುವ ವನಿತಾ ವಿಜಯ್ ಕುಮಾರ್, ಪೀಟರ್​​​ ಅವರ ಎಲ್ಲಾ ವಿಚಾರ ನನಗೆ ಗೊತ್ತು. ಅವರು ಮೊದಲ ಪತ್ನಿ ಹಾಗೂ ಮಕ್ಕಳಿಗೆ ಜೀವನಾಂಶ ನೀಡುವುದಾಗಿ ನನ್ನಲ್ಲಿ ಎಲ್ಲಾ ವಿಚಾರವನ್ನು ಹೇಳಿಕೊಂಡಿದ್ದರು. ನಾವು ಮದುವೆಯಾಗುವ ವಿಚಾರವನ್ನು ಬಹಳ ದಿನಗಳ ಮುನ್ನವೇ ಘೋಷಿಸಿದ್ದೆವು. ಆದರೆ ಆಗ ಬಾರದೆ, ಮದುವೆ ಆದ ನಂತರ ಬಂದು ಗಲಾಟೆ ಮಾಡುವುದು ಸರಿಯಲ್ಲ ಎಂದು ವನಿತಾ ಎಲೆಜಬೆತ್ ಮೇಲೆ ಕಿಡಿ ಕಾರಿದ್ದಾರೆ.

Advertisement

Advertisement

ವನಿತಾ ಖ್ಯಾತ ತಮಿಳು ನಟ ವಿಜಯ್ ಕುಮಾರ್ ಪುತ್ರಿ. 2000 ದಲ್ಲಿ ತಮ್ಮ 20ನೇ ವಯಸ್ಸಿಗೆ ಆಕಾಶ್ ಎಂಬುವವರನ್ನು ಈ ನಟಿ ಮದುವೆಯಾಗಿದ್ದರು. ಈ ದಂಪತಿಗೆ ಒಬ್ಬ ಮಗ, ಮಗಳು ಇದ್ದಾರೆ. ಕೆಲವು ವರ್ಷಗಳ ನಂತರ ಆಕಾಶ್ ಅವರಿಂದ ದೂರವಾದ ವನಿತಾ ನಂತರ 2007 ರಲ್ಲಿ ಆನಂದ್ ಎಂಬುವವರ ಕೈ ಹಿಡಿದರು. ಈ ದಂಪತಿಗೆ ಕೂಡಾ ಒಬ್ಬಳು ಮಗಳಿದ್ದಾಳೆ. ಆದರೆ ಕೆಲವು ವರ್ಷಗಳ ನಂತರ ಆನಂದ್​​ನಿಂದ ಕೂಡಾ ದೂರಾದ ವನಿತಾ 7 ತಿಂಗಳ ಹಿಂದಷ್ಟೇ ಪರಿಚಯವಾದ ಪೀಟರ್ ಪೌಲ್ ಅವರನ್ನು ಕ್ರೈಸ್ತ ಸಂಪ್ರದಾಯದ ಪ್ರಕಾರ ಮದುವೆಯಾಗಿದ್ದರು.

 

ವನಿತಾ ಅವರಿಗೆ ಈಗ 40 ವರ್ಷ. ಇದೀಗ ಪೀಟರ್ ಮೊದಲ ಪತ್ನಿ ನ್ಯಾಯಾಲಯದ ಮೊರೆ ಹೋಗಿದ್ದು ವನಿತಾ ಅವರ ಮೂರನೇ ಮದುವೆಗೂ ಸಂಚಕಾರ ತಂದೊಡ್ಡಿದೆ. ಇದು ಎಲ್ಲಿಗೆ ಹೋಗಿ ನಿಲ್ಲವುದೋ ಕಾದು ನೋಡಬೇಕು.

Advertisement
Share this on...