ವರಲಕ್ಷ್ಮಿ ಶರತ್ ಕುಮಾರ್ ಮಂಗಳಮುಖಿಯರಿಗಾಗಿ ಪ್ರತಿಜ್ಙೆ ಮಾಡಿಸಿದ್ದೇನು ? !

in ಕನ್ನಡ ಮಾಹಿತಿ/ಮನರಂಜನೆ 177 views

ಕೆಲವು ಸೆಲೆಬ್ರಿಟಿಗಳು ದಾನ ಮಾಡುವಾಗ ಪ್ರಚಾರ ಬಯಸುತ್ತಾರೆ. ಆದರೆ ಇವರಿಗೆಲ್ಲಾ ಹೋಲಿಸಿದರೆ ನಟಿ ವರಲಕ್ಷ್ಮಿ ಶರತ್ ಕುಮಾರ್ ವಿಶಿಷ್ಟರ ಸಾಲಿನಲ್ಲಿ ನಿಲ್ಲುತ್ತಾರೆ. ಹೌದು, ವರಲಕ್ಷ್ಮಿ ಅವರು ಮಾಡಿರುವ ಎಷ್ಟೋ ಸಾಮಾಜಿಕ ಕೆಲಸಗಳು ಜನರ ಗಮನಕ್ಕೆ ಬಂದಿಲ್ಲ. ಆದರೆ ಫಲಾನುಭವಿಗಳು ಇವರಿಗೆ ಧನ್ಯವಾದಗಳನ್ನು ತಿಳಿಸಿದ ಮೇಲೆಯೇ ಅವರು ಮಾಡಿರುವ ಅನೇಕ ಸೇವೆಗಳು ಬೆಳಕಿಗೆ ಬಂದಿವೆ!. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕೊರೊನಾ ವೈರಸ್ ಸಾಂಕ್ರಾಮಿಕದಿಂದ ಲಾಕ್ ಡೌನ್ ಆದ ಹಿನ್ನೆಲೆಯಲ್ಲಿ ಅನೇಕರು ತಮ್ಮ ಕೆಲಸವನ್ನು ಕಳೆದುಕೊಂಡಿದ್ದಾರೆ. ಇದಕ್ಕೆ ಮಂಗಳಮುಖಿಯರು ಹೊರತಾಗಿಲ್ಲ. ಈ ಸಮಯದಲ್ಲಿ ವರಲಕ್ಷ್ಮಿ ಕೆಲಸವನ್ನು ಕಳೆದುಕೊಂಡಿರುವ ಮಂಗಳಮುಖಿ ಸಮುದಾಯದ ಜನರನ್ನು ಗುರುತಿಸಿ, ಕ್ರೌಡ್ ಫಂಡಿಂಗ್ ಮೂಲಕ ಅವರಿಗೆ ಮೂಲಭೂತ ವಸ್ತುಗಳು ಮತ್ತು ದಿನಸಿ ಸಾಮಗ್ರಿಗಳಿಗೆ ಸಹಾಯ ಮಾಡಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಅವರ ಅಭಿಮಾನಿಗಳು ಹಂಚಿಕೊಂಡಿದ್ದಾರೆ.

Advertisement

 

Advertisement

Advertisement

“ಅವರು ನಮ್ಮಂತೆಯೇ ಮನುಷ್ಯರು. ದಯವಿಟ್ಟು ಅವರಿಗೆ ಸಹಾಯ ಮಾಡುವುದಕ್ಕೆ ಕೈ ಜೋಡಿಸಿ. ದೇಣಿಗೆಯನ್ನು ನೀಡಲು ಪ್ರತಿಜ್ಞೆ ಮಾಡಿ” ಎಂದು ವರಲಕ್ಷ್ಮಿ ಸಹ ತಿಳಿಸಿದ್ದಾರೆ  ಇದೀಗ ಜನರು ವರಲಕ್ಷ್ಮಿ ಶರತ್ ಕುಮಾರ್ ಅವರ ಕಾರ್ಯವನ್ನು ಶ್ಲಾಘಿಸುತ್ತಿದ್ದು, ಖ್ಯಾತನಾಮರು ಈ ಯುವ ನಟಿಯಿಂದ ಕಲಿಯಬೇಕಾದದ್ದು ತುಂಬಾ ಇದೆ ಎಂದು ಪ್ರಶಂಸಿಸಿದ್ದಾರೆ. ಕನ್ನಡದ ಮಾಣಿಕ್ಯ, ವಿಸ್ಮಯ ಚಿತ್ರಗಳಲ್ಲಿ ಅಭಿನಯಿಸಿರುವ ವರಲಕ್ಷ್ಮಿ ಶರತ್ ಕುಮಾರ್ ಬೋಲ್ಡ್ ಹೇಳಿಕೆಗಳ ಮೂಲಕ ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ.

Advertisement

ಇತ್ತೀಚೆಗೆ ನೀಡಿದ್ದ ಸಂದರ್ಶನವೊಂದರಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆಯೂ ವರಲಕ್ಷ್ಮಿ ಮಾತನಾಡಿದ್ದರು. “ನಾನು ಖ್ಯಾತ ನಟ ಹಾಗೂ ರಾಜಕಾರಣಿಯ ಪುತ್ರಿ ಎಂದು ಗೊತ್ತಿದ್ದೂ ಹಲವಾರು ಮಂದಿ ನಿರ್ಮಾಪಕರು ಹಾಗೂ ಚಿತ್ರರಂಗಕ್ಕೆ ಸಂಬಂಧಿಸಿದವರು ಬೇರೆಯದೇ ಉದ್ದೇಶಕ್ಕಾಗಿ ಅವಕಾಶ ನೀಡುವುದಾಗಿ ನನ್ನನ್ನು ಸಂಪರ್ಕಿಸಿದ್ದರು” ಎಂದು ಹೇಳಿಕೆ ಕೊಟ್ಟಿದ್ದರು ವರಲಕ್ಷ್ಮೀ ಶರತ್ ಕುಮಾರ್.

“ಸ್ಟಾರ್ ಕಿಡ್ ಆದರೂ ನನಗೂ ಕಾಸ್ಟಿಂಗ್ ಕೌಚ್ ಸಮಸ್ಯೆ ಇತ್ತು. ಅಂತಹ ಆಫರ್ಗಳಿಗೆ ನೋ ಹೇಳಿದೆ. ಇದೇ ಕಾರಣಕ್ಕಾಗಿ ಬಹಳಷ್ಟು ಮಂದಿ ನನ್ನನ್ನು ಬ್ಯಾನ್ ಮಾಡಿದರು. ಆದರೆ ಇಂದು ನಾನು ನನ್ನ ಕಾಲ ಮೇಲೆ ನಿಲ್ಲುವಂತಾಯಿತು. ಇಪ್ಪತ್ತೈದು ಸಿನಿಮಾಗಳಲ್ಲಿ ಅಭಿನಯಿಸಿದ್ದೇನೆ. 25 ಮಂದಿ ನಿರ್ಮಾಪಕರು, ನಿರ್ದೇಶಕರೊಂದಿಗೆ ಕೆಲಸ ಮಾಡಿರುವೆ ಎಂದು ಹೇಳಿಕೊಂಡಿದ್ದರು ವರಲಕ್ಷ್ಮಿ.

Advertisement
Share this on...