ವಾಸುಕಿ ಕೋರೋನಾ ಹಾಡಿಗೆ ಚಂದನವನದ ತಾರೆಯರ ಸಮಾಗಮ..!

in ಮನರಂಜನೆ 51 views

ಕೋರೋನಾ ಎಲ್ಲಾ ಕಡೆ ತನ್ನ ಅಟ್ಟಹಾಸವನ್ನು ಮೆರೆಯುತ್ತಿದೆ. ಈ ಕೋರೋನಾ ವಿರುದ್ಧ ಬಿಗ್ ಬಾಸ್ ಖ್ಯಾತಿಯ ಗಾಯಕ ವಾಸುಕಿ ವೈಭವ್ ರವರು ಸುಂದರವಾದ ಹಾಡೊಂದನ್ನು ತಮ್ಮ ಅದ್ಭುತ ಕಂಠ ಸಿರಿಯಲ್ಲಿ ಹಾಡಿದ್ದು ಇದಕ್ಕೆ ಸ್ಯಾಂಡಲ್ ವುಡ್ ಸ್ಟಾರ್ಸ್ ಸಾತ್ ನೀಡಿದ್ದಾರೆ. ಗಾಯಕ ವಾಸುಕಿ ವೈಭವ್ ರವರು ಕೋರೊನಾ ಲಾಕ್ ಡೌನ್ ನಡುವೆಯೂ ಕೂಡ ಕೋರೋನಾ ವಿರುದ್ಧ ನಗುತಲಿರೋಣ ಎಂಬ ಹೊಸ ಹಾಡನ್ನು ಹಾಡಿದ್ದಾರೆ.

Advertisement

 

Advertisement

Advertisement

 

Advertisement

ಈ ಹಾಡಿಗೆ ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ಸೇರಿದಂತೆ ಎಲ್ಲಾ ನಟ-ನಟಿಯರು ಧನಿಯಾಗಿದ್ದಾರೆ. ಈ ಮೂಲಕ ಮನೆಯಲ್ಲಿ ನಗುತಲಿರೋಣ ಎಂಬ ಹೊಸ ಸಂದೇಶವನ್ನು ಜನರಿಗೆ ರವಾನಿಸಿದ್ದಾರೆ. ಕೋರೋನಾ ದೇಶದ ತುಂಬಾ ತಾಂಡವವಾಡುತ್ತಿರುವ ಹೋತ್ತಿನಲ್ಲಿ ನಟ-ನಟಿಯರು ಸೇರಿ ಲಾಕ್ ಡೌನ್ ನಲ್ಲಿ ಬಂದಿಯಾಗಿರುವ ಜನರ ಆತಂಕವನ್ನು ದೂರ ಮಾಡಿ ಹಾಡಿನ ಮೂಲಕ ಬದುಕಿಗೆ ಚೈತನ್ಯ ತುಂಬುವ ಕೆಲಸ ಮಾಡಿದ್ದಾರೆ.

 

 

ಚಿಂತೆ ದೂರ ಮಾಡಿ ಭರವಸೆ ಮೂಡಿಸುವ ಈ ಹಾಡನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ತಮ್ಮ ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ. ಈ ಹಾಡಿಗೆ ರಮೇಶ್ ಅರವಿಂದ್, ಶ್ರೀಮುರುಳಿ, ವಿಜಯ್ ರಾಘವೇಂದ್ರ ಸೇರಿದಂತೆ ಅನೇಕ ಸ್ಟಾರ್ ನಟ-ನಟಿಯರು ಸಾತ್ ಕೊಟ್ಟಿದ್ದಾರೆ.

 

 

View this post on Instagram

 

A post shared by Puneeth Rajkumar (@puneethrajkumar.official) on

 

ದೇಶಾದ್ಯಂತ ಎಲ್ಲೆಡೆ ಆತಂಕ ಸೃಷ್ಟಿಸಿರುವ ಕಿಲ್ಲರ್ ಕೋರೋನಾ ಭಯವನ್ನು ದೂರ ಮಾಡಲು ಹಾಡಿನ ಮೂಲಕ ಸ್ಟಾರ್ಸ್ ಒಂದಾಗಿದ್ದಾರೆ. ಪುನೀತ್ ರಾಜ್ ಕುಮಾರ್ ನೀನೆ ತಾಯಿ, ನೀನೆ ತಂದೆ, ಭೂಮಿ ತಾಯಿ ಎಲ್ಲಾ ನಿಂದೆ ಎಂದು ಡಾ.ರಾಜ್ ಮತ್ತು ಪಾರ್ವತಮ್ಮನವರ ಫೋಟೋ ಮುಂದೆ ನಿಂತು ಹಾಡಿನ ಆರಂಭದಲ್ಲಿ ಕಾಣಿಸಿಕೊಂಡಿದ್ದಾರೆ. ವಾಸುಕಿ ವೈಭವ್ ಕಂಠ ಸಿರಿಯಲ್ಲಿ ಹಾಡು ಮೂಡಿ ಬಂದಿದ್ದು ಪನ್ನಗಾಭರಣ ನಿರ್ದೇಶನದ, ರಾಮ ರಾಮ ರೇ ಖ್ಯಾತಿಯ ಸತ್ಯಪ್ರಕಾಶ್ ಸಾಹಿತ್ಯ, ನವೀಲ್ ಫೌಲ್ ಸಂಗೀತ ಸಂಯೋಜನೆ, ರವಿ ಆರಾಧ್ಯ ಸಂಕಲನದಿಂದ ಈ ಹಾಡು ಮನಮುಟ್ಟುವಂತಿದೆ.

 

 

ಇದರಲ್ಲಿ ನಟಿ ರಕ್ಷಿತಾ, ಡಾಲಿ ಧನಂಜಯ್, ಪ್ರಣಿತಾ, ಶ್ರದ್ಧಾ, ಐಂದ್ರಿತಾ ರೈ, ದಿಗಂತ್, ಪ್ರಜ್ವಲ್, ಚಿರಂಜೀವಿ ಸರ್ಜಾ, ಮೇಘನಾ, ಅನುಪಮಾ, ಶಾನ್ವಿ ಶ್ರೀವಾತ್ಸವ್ ಸೇರಿದಂತೆ ಅನೇಕರು ಈ ಹಾಡಿಗೆ ಜೀವ ತುಂಬಿದ್ದಾರೆ. ಲಾಕ್ ಡೌನ್ ನಲ್ಲಿದ್ದರೂ ನಾವೆಲ್ಲರೂ ಎಂದೆಂದಿಗೂ ಒಂದೇ ಎನ್ನುತ್ತ ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ. ಜೊತೆಗೆ ಕೋರೊನಾ ವಾರಿಯರ್ಸ್ ಹಾಗೂ ಸೈನಿಕರಿಗೆ ಎದ್ದು ನಿಂತು ಚಪ್ಪಾಳೆ ಹೊಡೆದಿದ್ದಾರೆ. ನಗುತ್ತಾ ಮನೆಯಲ್ಲೇ ಸುರಕ್ಷಿತವಾಗಿರೋಣ ಎಂಬ ಸಂದೇಶ ಸಾರಿದ್ದಾರೆ.

– ಸುಷ್ಮಿತಾ

Advertisement
Share this on...