ದೇಹಕ್ಕಷ್ಟೇ ವೈಕಲ್ಯ ಮನಸ್ಸಿಗಲ್ಲ…ಕ್ರೀಡೆಯಲ್ಲಿ ಸಾಧನೆ ಮಾಡಲು ಹೊರಟ ಛಲಗಾರ..!

in ಕ್ರೀಡೆ 73 views

ಜನರು ಸಾಮಾನ್ಯವಾಗಿ ಕ್ರಿಕೆಟ್, ಫುಟ್ಬಾಲ್​​​​​​​​​, ಬ್ಯಾಡ್ಮಿಂಟನ್​​​​​​​​​​ ಕ್ರೀಡೆಗಳು ಹಾಗೂ ಆ ಆಟಗಾರರನ್ನು ಹೆಚ್ಚಾಗಿ ನೆನಪಿನಲ್ಲಿಟ್ಟುಕೊಳ್ಳುತ್ತಾರೆ. ಆದರೆ ನಮ್ಮಲ್ಲಿ ಎಷ್ಟೊಂದು ಕ್ರೀಡೆಗಳಿವೆ ಹಾಗೂ ಆ ಕ್ರೀಡೆಯಲ್ಲಿ ಸಾಧನೆ ಮಾಡಿರುವವರು ಎಷ್ಟೊಂದು ಮಂದಿ ಇದ್ದಾರೆ. ಆದರೆ ಅಂತವರನ್ನು ಮಾತ್ರ ಮರೆಯುತ್ತಾರೆ. ಇನ್ನು ವಿಶೇಷ ಚೇತನ ಕ್ರೀಡಾಪಟುಗಳು ಮಾತ್ರ ಬಹಳಷ್ಟು ಜನರ ಕಣ್ಣಿಗೆ ಬೀಳುವುದೇ ಇಲ್ಲ. ಇಂತವರನ್ನು ಗುರುತಿಸಿ, ಪ್ರೋತ್ಸಾಹಿಸಿದರೆ ಅವರೂ ಕೂಡಾ ಇನ್ನೂ ಹೆಚ್ಚಿನ ಸಾಧನೆ ಮಾಡುತ್ತಾರೆ.ಬೆಂಗಳೂರಿನ ಜಲಮಂಡಳಿಯಲ್ಲಿ ಸೇವೆ ಸಲ್ಲಿಸುತ್ತಿರುವ ವಾಟಾಳ್ ಎನ್. ಬಸವರಾಜು ಎಂಬುವವರು ಜಾವೆಲಿನ್ ಥ್ರೋನಲ್ಲಿ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಬೇಸರದ ಸಂಗತಿಯೆಂದರೆ ಬಸವರಾಜು ತಾವು 5 ವರ್ಷದವರಿರುವಾಗ ಪೊಲಿಯೋ ಕಾಯಿಲೆಗೆ ತುತ್ತಾಗಿ ಬಲಗಾಲಿನ ಸ್ವಾಧೀನ ಕಳೆದುಕೊಂಡರು. ಕಾಲಿಗೆ ಊನವಾಗಿದ್ದರೂ ಮನಸ್ಸಿನಲ್ಲಿ ಏನಾದರೂ ಸಾಧಿಸಬೇಕೆಂಬ ಛಲ ಬಸವರಾಜು ಅವರಿಗೆ ಇತ್ತು. ಮೊದಲಿನಿಂದಲೂ ಅವರಿಗೆ ಕ್ರೀಡೆಯಲ್ಲಿ ಬಹಳ ಆಸಕ್ತಿ ಇದ್ದರಿಂದ ಕ್ರೀಡೆಯಲ್ಲೇ ಮುಂದುವರೆದರು. ಛಲ ಬಿಡದೆ ಜಾವೆಲಿನ್ ಥ್ರೋ ಹಾಗೂ ಡಿಸ್ಕಸ್ ಥ್ರೋ ಕ್ರೀಡೆಯನ್ನು ಕಠಿಣವಾಗಿ ಶ್ರಮ ಪಟ್ಟು ಅಭ್ಯಾಸ ಮಾಡಿದರು.

Advertisement

 

Advertisement

 

Advertisement

Advertisement

ಅಂತರ್​ಶಾಲಾ, ಅಂತರ್ ಕಾಲೇಜು, ತಾಲೂಕು ಮಟ್ಟ, ಜಿಲ್ಲಾ ಮಟ್ಟ ಹಾಗೂ ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಹಂತಹಂತವಾಗಿ ಭಾಗವಹಿಸುತ್ತಾ 2018 ರಲ್ಲಿ ನೇಪಾಳದ ಕಠ್ಮಂಡುವಿನಲ್ಲಿ ನಡೆದ ಪ್ಯಾರಾ ಒಲಿಂಪಿಕ್ಸ್​​​​​​​​ ಕ್ರೀಡೆಯಲ್ಲಿ ಜಾವೆಲಿನ್ ಹಾಗೂ ಡಿಸ್ಕಸ್ ಥ್ರೋನಲ್ಲಿ ಚಿನ್ನ ಹಾಗೂ ಬೆಳ್ಳಿ ಪದಕಗಳನ್ನು ಗೆದ್ದಿದ್ದಾರೆ ಬಸವರಾಜು. ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಮಾರ್ಚ್ 6 ರಿಂದ 8ವರೆಗೂ ನಡೆದ ಕರ್ನಾಟಕ ಸ್ಟೇಟ್ ಪ್ಯಾರಾ ಒಲಿಂಪಿಕ್ಸ್​ 2020 ಕ್ರೀಡಾಕೂಟದಲ್ಲಿ ಪುರುಷರ ವಿಭಾಗದ ಜಾವೆಲಿನ್​ ಥ್ರೋನಲ್ಲಿ ಸ್ಪರ್ಧಿಸಿದ್ದ ಬಸವರಾಜು ಬಂಗಾರದ ಪದಕ ಪಡೆದು ಪ್ರಥಮ ಸ್ಥಾನದೊಂದಿಗೆ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

 

 

ಮಾರ್ಚ್ 26 ರಿಂದ 28 ವರೆಗೆ ಮೈಸೂರಿಲ್ಲಿ ಪ್ಯಾರಾ ಒಲಿಂಪಿಕ್ ಕಮಿಟಿ ಆಫ್ ಇಂಡಿಯಾ ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ ಸ್ಫರ್ಧೆಯಲ್ಲಿ ಭಾಗವಹಿಸಲು ಬಸವರಾಜು ಆಯ್ಕೆಯಾಗಿದ್ದರು. ಆದರೆ ಅಷ್ಟರಲ್ಲಿ ಲಾಕ್​​​ಡೌನ್ ಘೋಷಣೆಯಾದ ಕಾರಣ ಸ್ಪರ್ಧೆಯನ್ನು ಸದ್ಯಕ್ಕೆ ಮುಂದೂಡಲಾಗಿದೆ. ಬಸವರಾಜ್ ಅವರಿಗೆ ಸದ್ಯಕ್ಕೆ ಪ್ರೋತ್ಸಾಹದ ಅಗತ್ಯವಿದೆ. ಅವರು ಬಯಸಿದ ಪ್ರೋತ್ಸಾಹ ದೊರೆತು ಇನ್ನೂ ಹೆಚ್ಚಿನ ಸಾಧನೆ ಮಾಡಲಿ ಎಂದು ಹಾರೈಸೋಣ.

Advertisement
Share this on...