ನಟಿ ವೀಣಾ ಸುಂದರ್ ಬಗ್ಗೆ ನಿಮಗೆಷ್ಟು ಗೊತ್ತು…?

in ಕನ್ನಡ ಮಾಹಿತಿ/ಮನರಂಜನೆ 428 views

ಧಾರಾವಾಹಿ ಮತ್ತು  ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ  ಅಭಿನಯಿಸಿ ಖ್ಯಾತಿಯನ್ನು ಪಡೆದಿರುವವರು ವೀಣಾ ಸುಂದರ್. ಕಿರುತೆರೆ ಮತ್ತು ಸಿನಿಮಾಗಳಲ್ಲಿ ಪೋಷಕ ಪಾತ್ರಗಳನ್ನು ಮಾಡುವ ಮೂಲಕ ಬೆಸ್ಟ್ ಅತ್ತೆ, ಅಮ್ಮ, ಅತ್ತಿಗೆ ಎನಿಸಿಕೊಂಡಿದ್ದಾರೆ. ತುಂಬಾ ನೈಜವಾಗಿ ನಟಿಸುವ ನಟಿಯರಲ್ಲಿ ವೀಣಾ ಸುಂದರ್ ಕೂಡ ಒಬ್ಬರು. ಅವರ ಜೊತೆ ಕಿರುತೆರೆಯಲ್ಲಿ ಮತ್ತು ಸಿನಿಮಾಗಳಲ್ಲಿ ಪೋಷಕ ಪಾತ್ರಗಳನ್ನು ಅಭಿನಯಿಸುವ ಸುಂದರ್ ಎಂಬುವವರನ್ನು ವೀಣಾರವರು  ಮದುವೆಯಾಗಿದ್ದಾರೆ. ಇಬ್ಬರು ಪರಸ್ಪರ ಪ್ರೀತಿಸಿ ಮನೆಯವರ ಒಪ್ಪಿಗೆಯನ್ನೂ ಪಡೆದು ಮದುವೆಯಾಗಿದ್ದರು . ಮದುವೆಯಾದ ನಂತರ ತಮ್ಮ ಹೆಸರಿನ ಜೊತೆ ಅವರ ಪತಿಯ ಹೆಸರನ್ನು ಸೇರಿಸಿಕೊಂಡರು. ನಂತರ ಕಿರುತೆರೆ ಮತ್ತು ಸಿನಿಮಾಗಳಲ್ಲಿ ವೀಣಾ ಸುಂದರ್ ಎಂದೇ  ಫೇಮಸ್ ಆದರು. ಟಿ ಎನ್ ಸೀತಾರಾಮ್ ಅವರ ಧಾರಾವಾಹಿಗಳಲ್ಲಿ ಇಬ್ಬರು ಒಟ್ಟಿಗೆ ನಟಿಸಿದ್ದಾರೆ. ಹಲವಾರು ಧಾರಾವಾಹಿಗಳಲ್ಲಿ ಈ ದಂಪತಿಗಳು ಒಟ್ಟಿಗೆ ಅಭಿನಯಿಸಿದ್ದಾರೆ.  ಅಲ್ಲದೇ ಸುಮಾರು ಹತ್ತು ಸಿನಿಮಾಗಳಲ್ಲಿ ಕೂಡ ಇವರು ಒಟ್ಟಿಗೆ   ದಂಪತಿಗಳಾಗಿ ಅಭಿನಯಿಸಿದ್ದಾರೆ.ಸುಂದರ್ ಅವರು ಅಭಿನಯಕ್ಕೆ ಬರುವ ಮುಂಚೆ ಲೆಕ್ಚರರ್ ಆಗಿದ್ದರು. ಸುಂದರ್ ಅವರು ಧಾರಾವಾಹಿಗಳಿಗೆ ಸಂಭಾಷಣೆಯನ್ನು ಕೂಡ ಬರೆದಿದ್ದಾರೆ.

Advertisement

Advertisement

ವೀಣಾ ಸುಂದರ್ ಕಿರುತೆರೆಯಲ್ಲಿ ಮತ್ತು ಸಿನಿಮಾಗಳಲ್ಲಿ ಪತ್ನಿಯಾಗಿ,  ಅತ್ತಿಗೆಯಾಗಿ,  ಅಮ್ಮನಾಗಿ,  ಅಕ್ಕನಾಗಿ,  ಖಳನಾಯಕಿಯಾಗಿ, ಹೀಗೆ  ಎಲ್ಲಾ ರೀತಿಯ ಪಾತ್ರಗಳನ್ನು ಕೂಡ ನಿರ್ವಹಿಸಿದ್ದಾರೆ. ಯಾವುದೇ ಪಾತ್ರವನ್ನು ಕೊಟ್ಟರೂ ಅಚ್ಚುಕಟ್ಟಾಗಿ ಪಾತ್ರ ನಿರ್ವಹಿಸುವ ಪ್ರತಿಭಾನ್ವಿತ ನಟಿ . ಕೆಲವು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಿ ಕೂಡ  ಪ್ರೇಕ್ಷಕರ ಆಕರ್ಷಣೆಯಾಗಿ ಅವರ ಮನಸ್ಸಿನಲ್ಲಿ ಇನ್ನೂ  ಉಳಿದಿದ್ದಾರೆ. ವೀಣಾ ಅವರ ಪತಿ ಸುಂದರ್ ಅವರು ಅನೇಕ ನಾಟಕಗಳನ್ನು ಆಯೋಜಿಸಿ ನಟಿಸಿದ್ದಾರೆ. ಇತ್ತೀಚೆಗೆ ರಾಧಿಕಾ ಕುಮಾರಸ್ವಾಮಿ ಅಭಿನಯದ ದಮಯಂತಿ ಸಿನಿಮಾದಲ್ಲಿ ವೀಣಾ  ನಟಿಸಿದ್ದಾರೆ. ವೀಣಾ ಸುಂದರ್ ಅವರು ಒಂದೆರಡು  ಜಾಹೀರಾತುಗಳಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ಮಹಿಳೆಯರ ಅತ್ಯಾಚಾರದ ಕುರಿತು ಯಾವ ಅಶ್ಲೀಲ ಸಂಭಾಷಣೆಗಳಿಲ್ಲದ ಮತ್ತು ಮುಜುಗರ ಪಡುವ ಸನ್ನಿವೇಶವಿಲ್ಲದ ಕಿರುಚಿತ್ರ  “ಏನ್ ಬರ್ತೀಯಾ”  ಎಂಬ ಕಿರುಚಿತ್ರದಲ್ಲಿ ಅಭಿನಯಿಸಿದ್ದಾರೆ.

Advertisement

Advertisement

ಕೋಟಿಗೊಬ್ಬ 2 , ಸಂತು ಸ್ಟ್ರೈಟ್ ಫಾರ್ವರ್ಡ್,  ಟ್ರೈಗರ್,  ಆಯುಷ್ಮಾನ್ ಭವ,  ರಿಕ್ಕಿ, ನಾನು ನನ್ನ ಕನಸು ಇನ್ನು ಮುಂತಾದ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇಂತಹ ಪ್ರತಿಭಾನ್ವಿತ ಕಲಾ ದಂಪತಿಗಳಿಗೆ ಒಂದು ಮುದ್ದಾದ  ಹೆಣ್ಣು ಮಗಳು  ಮತ್ತು  ಒಬ್ಬ ಮಗನಿದ್ದಾನೆ.  ಈ ಮುದ್ದಾದ ಕಲಾ ಕುಟುಂಬ ನೂರು ಕಾಲ ಸುಖವಾಗಿ ಬಾಳಲಿ ಮತ್ತು  ಹೀಗೆ ಸದಾಕಾಲ ಕನ್ನಡ ಸಿನಿ ರಸಿಕರನ್ನು ರಂಜಿಸಲಿ  ಎಂದು ಹಾರೈಸೋಣ.  ವೀಣಾ ಮತ್ತು ಸುಂದರ್ ಅವರ ಅಭಿನಯ ನಮಗೆ ಇಷ್ಟ ಆಗಿದ್ದಲ್ಲಿ ಅದನ್ನು ಕಮೆಂಟ್ ಮಾಡುವ ಮೂಲಕ ತಿಳಿಸಿ.

Advertisement
Share this on...