ಭಾರತದ ರೀಯಲ್ ಹೀರೋ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ ವಿಜಯ್ ದೇವರಕೊಂಡ

in ಮನರಂಜನೆ/ಸಿನಿಮಾ 100 views

ಭಾರತದ ರಿಯಲ್ ಹೀರೋ ಅಂದರೆ ತಕ್ಷಣ ನೆನಪಾಗುವುದೇ ವಿಂಗ್ ಕಮಾಂಡರ್ ಅಬಿನಂದನ್ ವರ್ಧಮಾನ್. ಹೌದು. ಕಳೆದ ವರ್ಷ ನಡೆದ ಬಾಲಾಕೋಟ್ ಏರ್ ಸ್ಟ್ರೈಕ್ ಯಾರಿಗೆ ತಾನೇ ಗೊತ್ತಿಲ್ಲ. ಪಾಕಿಸ್ತಾನ ಎಫ್-16 ಯುದ್ಧ ವಿಮಾನದ ಮೂಲಕ ಭಾರತವನ್ನು ಗುರಿಯಾಗಿಸಿಕೊಂಡು ವಾಯು ದಾಳಿ ನಡೆಸಿದ ಸಂದರ್ಭದಲ್ಲಿ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಮಿಗ್-21 ವಿಮಾನದ ಮೂಲಕ ಪಾಕ್ ವಿಮಾನದ ಬೆನ್ನಟ್ಟಿ ಹೋಗಿ, ಪಾಕ್ ವಿಮಾನವನ್ನು ಹೊಡೆದುರುಳಿಸಿದ್ದರು. ಭಾರತದ ರಿಯಲ್ ಹೀರೋ ಆಗಿರುವ ಅಭಿನಂದನ್ ಕುರಿತು ಇದೀಗ ಸಿನಿಮಾ ತೆರೆಗೆ ಬರಲಿದೆ. ಇನ್ನೊಂದು ವಿಶೇಷವೆಂದರೆ ದಕ್ಷಿಣದ ಸಿನಿಪ್ರಿಯರ ನೆಚ್ಚಿನ ನಟ ಅಭಿನಂದನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.ಈಗಗಾಲೇ ಬಾಲಿವುಡ್ ನಲ್ಲಿ ಯುದ್ಧ ಸನ್ನಿವೇಶ ಆಧರಿಸಿದ ಹಲವು ಚಿತ್ರಗಳು ತೆರೆಗೆ ಬಂದಿವೆ. ಇದೀಗ ಬಾಲಾಕೋಟ್ ಏರ್ ಸ್ಟ್ರೈಕ್ ಕೂಡ ಸಿನಿಮಾ ಕುರಿತ ಸಿನಿಮಾ ಕೂಡ ಸೆಟ್ಟೇರುತ್ತಿದೆ. ಎಲ್ಲಕ್ಕಿಂತ ವಿಶೇಷವೆಂದರೆ ತೆಲುಗು ಸ್ಟಾರ್ ನಟ ವಿಜಯ್ ದೇವರಕೊಂಡ ಈ ಚಿತ್ರದಲ್ಲಿ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಪಾತ್ರದಲ್ಲಿ ಮಿಂಚಲಿದ್ದಾರೆ ಎಂಬುದು.

Advertisement

Advertisement

2019ರಲ್ಲೇ ಬಾಲಾಕೋಟ್ ಏರ್ ಸ್ಟ್ರೈಕ್ ಸಿನಿಮಾ ಮಾಡುವುದಾಗಿ ಬಾಲಿವುಡ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಘೋಷಿಸಿದ್ದರು. ಆದರೆ ಕಾರಣಾಂತರಗಳಿಂದ ಸಿನಿಮಾ ವಿಳಂಬವಾಗುತ್ತಲೇ ಇತ್ತು. ಇದೀಗ ಸಂಜಯ್ ಲೀಲಾ ಬನ್ಸಾಲಿ ಮತ್ತು ಭೂಷನ್ ಕುಮಾರ್ ಅವರೊಂದಿಗೆ ಸೇರಿ ಅಭಿಷೇಕ್ ಕಪೂರ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇದಕ್ಕೆ ತೆಲುಗು ನಟ ವಿಜಯ್ ದೇವರಕೊಂಡ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಲಾಗಿದ್ದು, ಈ ಮೂಲಕ ಬಾಲಾಕೋಟ್ ಏರ್ ಸ್ಟ್ರೈಕ್ ಮತ್ತೆ ಸದ್ದು ಮಾಡುತ್ತಿದೆ.
ಈಗಾಗಲೇ ಈ ಬಗ್ಗೆ ವಿಜಯ್ ದೇವರಕೊಂಡ ಜೊತೆ ಮಾತುಕತೆ ನಡೆಸಿದ್ದಾರಂತೆ. ಅಲ್ಲದೇ ಸ್ಕ್ರಿಪ್ಟ್ ಓದಿ ಈ ಸಿನಿಮಾ ಮಾಡಲು ವಿಜಯ್ ತುಂಬಾ ಉತ್ಸುಕರಾಗಿದ್ದಾರೆ ಎನ್ನಲಾಗಿದೆ. ನಿರ್ದೇಶಕ ಅಭಿಷೇಕ್ ಈಗಾಗಲೇ ಬೇರೊಂದು ಸಿನಿಮಾದಲ್ಲಿ ತೊಡಗಿಸಿಕೊಂಡಿರುವುದರಿಂದ ಹಾಗೂ ಕೊರೊನಾ ಹಾವಳಿ ಕೊಂಚ ತಣ್ನಗಾದ ಬಳಿಕ ಸಿನಿಮಾ ಸೆಟ್ಟೇರಲಿದೆಯಂತೆ. ಇನ್ನು ಈ ಸಿನಿಮಾದಲ್ಲಿ ಬಾಲಕೋಟ್ ದಾಳಿ, ವಿಂಗ್ ಕಮಾಂಡರ್ ಅಭಿನಂದನ್ ಅವರ ಸಾಹಸ, 58 ಗಂಟೆಗಳ ಕಾಲ ಅವರು ಪಾಕಿಸ್ತಾನದ ನೆಲದಲ್ಲಿದ್ದ ಸಮಯ ಮತ್ತು ಅಭಿನಂದನ್ ಭಾರತಕ್ಕೆ ವಾಪಸ್ ಆಗುವ ಸಂದರ್ಭದ ಕುರಿತಾಗಿ ಸಂಪೂರ್ಣ ಮಾಹಿತಿಗಳು ಚಿತ್ರದಲ್ಲಿರಲಿದೆಯಂತೆ

Advertisement

.

Advertisement

ತೆಲುಗಿನ ಅರ್ಜುನ್ ರೆಡ್ಡಿ, ಗೀತ ಗೋವಿಂದಂ ಸಿನಿಮಾ ಮೂಲಕ ಬಾಲಿವುಡ್ ನಲ್ಲೂ ಸಿಕ್ಕಾಪಟ್ಟೆ ಅಭಿಮಾನಿಗಳನ್ನು ಹೊಂದಿರುವ ವಿಜಯ್ ದೇವರಕೊಂಡ ಇದೀಗ ಸಿದ್ಧವಾಗುತ್ತಿರುವ ’ಫೈಟರ್’ ಸಿನಿಮಾ ಮೂಲಕ ಬಾಲಿವುಡ್ ಜನರ ಗಮನ ಸೆಳೆದಿದ್ದರು. ಪುರಿ ಜಗನ್ನಾಥ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಫೈಟರ್ ಸಿನಿಮಾ ಚಿತ್ರೀಕರಣದ ಹಂತದಲ್ಲಿರುವಾಗಲೇ ಬಾಲಿವುಡ್ ನಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿದೆ. ಇದೀಗ ಬಾಲಾಕೋಟ್ ಏರ್ ಸ್ಟ್ರೈಕ್ ಮೂಲಕ ವಿಜಯ್ ಪೂರ್ಣ ಪ್ರಮಾದಲ್ಲಿ ಬಾಲಿವುಡ್ ಗೆ ಎಂಟ್ರಿ ಕೊಡಲಿದ್ದಾರೆ ಎನ್ನಲಾಗುತ್ತಿದೆ.

 

ಮೋಡಿ ಮಾಂತ್ರಿಕರು ಪ್ರಸಿದ್ಧಜ್ಯೊತಿಷಿಗಳಾದ ಶ್ರೀ ಮಂಜುನಾಥ್ ಭಟ್ ಅವರು ಗಂಡ ಹೆಂಡತಿ ಕಲಹ, ಡೈವರ್ಸ ಪ್ರಾಬ್ಲಮ್, ಆಸ್ತಿಯಲ್ಲಿ ಕದನ, ಕೋರ್ಟ್ ಕೇಸ್, ಆರೋಗ್ಯದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಂತಾನ ಫಲ, ಸಾಲ ಭಾದೆ, ಮದುವೆ ವಿಚಾರದಲ್ಲಿ ವಿಘ್ನ , ಅತ್ತೆ ಸೊಸೆ ಕಲಹ, ನಿಮ್ಮ ಮನದಾಳದ ಯಾವುದೇ ಗುಪ್ತ ಸಮಸ್ಯೆ  ಇದ್ದರೆ ಜೀವನದಲ್ಲಿ ಜಿಗುಪ್ಸೆ ಹೊಂದ್ದಿದರೆ ನಿಮ್ಮ ಒಂದೇ ಒಂದು ಫೋನ್ ಕರೆ 9591706765 ನಿಮ್ಮ ಜೀವನವನ್ನೇ ಬದಲಾಯಿಸಿ ಬಿಡುತ್ತದೆ.
ವಿಶೇಷ  ಸೂಚನೆ : ಕೊಳ್ಳೆಗಾಲದ ಮಂತ್ರ ಶಕ್ತಿಯಿಂದ ಸ್ತ್ರೀ- ಪುರುಷ ವಶೀಕರಣ 3 ದಿನಗಳಲ್ಲಿ 100% ಪರಿಹಾರ ಶತಸಿದ್ಧ. ಅಸಾದ್ಯವಾದದ್ದು ಇಲ್ಲಿ ಸಾದ್ಯ.

Advertisement
Share this on...