ಲಾಕ್ ಡೌನ್ ನಲ್ಲಿ ಹೊರಬಂದು ಪೊಲೀಸ್ ಠಾಣೆ ಸೇರಿದ್ರು ವಿಜಯ್ ದೇವರಕೊಂಡ…!

in Kannada News 53 views

ತೆಲುಗು ಖ್ಯಾತ ನಟ ವಿಜಯ್ ದೇವರಕೊಂಡ ಲಾಕ್ ಡೌನ್ ಸಮಯದಲ್ಲಿ ಮನೆಯಿಂದ ಹೊರಬಂದು ಪೊಲೀಸ್ ಠಾಣೆ ಸೇರಿದ್ದಾರೆ. ಲಾಕ್ ಡೌನ್ ನಿಂದ ಯಾಕಪ್ಪ ಹೊರಬಂದರು ಅಂತೀರಾ..? ಪೊಲೀಸ್ ಠಾಣೆಗೆ ಹೋದರು ಅಂದಾಕ್ಷಣ ಅಭಿಮಾನಿಗಳು ಆತಂಕ ಪಡಬೇಕಾಗಿಲ್ಲ ವಿಜಯ್ ದೇವರಕೊಂಡ ಮನೆಯಿಂದ ಹೊರಬಂದು ಪೊಲೀಸ್ ಠಾಣೆಗೆ ಹೋಗಿರುವುದು ನಿಜ ಆದರೆ ಅವರ ಉದ್ದೇಶ ಬೇರೆ.

Advertisement

 

Advertisement

Advertisement

 

Advertisement

ಕೋರೋನಾ ವೈರಸ್ ಹರಡುತ್ತಿರುವ ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಬಿಡುವಿಲ್ಲದೆ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಗೆ ಆತ್ಮಸ್ಥೈರ್ಯ ತುಂಬಲು ವಿಜಯ್ ದೇವರಕೊಂಡರವರು ಹೈದರಾಬಾದಿನ ಪೊಲೀಸರೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದರು. ಹೀಗಾಗಿ ಲಾಕ್ ಡೌನ್ ಅವಧಿಯಲ್ಲಿ ವಿಜಯ್ ಪೊಲೀಸ್ ಠಾಣೆಗೆ ಹೋಗಿ ಪೊಲೀಸರಿಗೆ ಆತ್ಮಸ್ಥೈರ್ಯ ತುಂಬಿ ಪೊಲೀಸರಿಗೆ ಸಲಾಂ ಎಂದಿದ್ದಾರೆ.

 

 

ಹೈದರಾಬಾದ್ ಪೊಲೀಸ್ ಕಂಟ್ರೋಲ್ ರೂಂ ಗೆ ಭೇಟಿ ನೀಡಿದ ವಿಜಯ್ ಮೊದಲಿಗೆ ಸ್ಥಳದಲ್ಲಿದ್ದ ಸಿಬ್ಬಂದಿಗೆ ಉಚಿತ ಮಾಸ್ಕ್ ನೀಡಿದರು ಬಳಿಕ ವಿಡಿಯೋ ಕಾಲ್ ಮೂಲಕ ಹಲವರು ಪೋಲಿಸರನ್ನು ಉದ್ದೇಶಿಸಿ ಮಾತನಾಡಿದರು. ದೇಶಕ್ಕಾಗಿ ಸಾರ್ವಜನಿಕರ ಜೀವ ಉಳಿಸಲು ಪೋಲಿಸರು ಮಾಡುತ್ತಿರುವ ಕೆಲಸವನ್ನ ಶ್ಲಾಘಿಸಿ ಸಿನಿಮಾ ವಿಷಯ ಸೇರಿದಂತೆ ತಮಾಷೆಯಾಗಿ ಮಾತನಾಡುತ್ತ ದುಡಿದು ದಣಿದ ಪೊಲೀಸರಿಗೆ ಉತ್ಸಾಹಿಸಿದರು.

 

 

ವಿಜಯ್ ದೇವರಕೊಂಡ ಕಂಟ್ರೋಲ್ ರೂಮ್ ಗೆ ಭೇಟಿ ನೀಡಿದ ಫೋಟೋಗಳನ್ನ ಹೈದರಾಬಾದ್ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆದರೆ ಲಾಕ್ ಡೌನ್ ಅವಧಿಯಲ್ಲಿ ವಿಜಯ್ ಹೊರಗೆ ತೆರಳಿದಕ್ಕೆ ಹಲವರು ನೆಗೆಟಿವ್ ಕಮೆಂಟ್ ಗಳನ್ನ ಸಹ ಹಾಕಿದ್ದಾರೆ. ಸದ್ಯ ಪೂರಿ ಜಗನ್ನಾಥ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಸಿನಿಮಾದಲ್ಲಿ ವಿಜಯ್ ಅಭಿನಯಿಸುತ್ತಿದ್ದು ಈ ಚಿತ್ರದಲ್ಲಿ ಬಾಲಿವುಡ್ ನಟಿ ಅನನ್ಯ ಪಾಂಡೆ ವಿಜಯ್ ಗೆ ಸಾಥ್ ನೀಡುತ್ತಿದ್ದಾರೆ. ಆದರೆ ಕೋರೋನಾ ವೈರಸ್ ಹಾವಳಿಯಿಂದ ಸಿನಿಮಾ ಶೂಟಿಂಗ್ ಸ್ಥಗಿತಗೊಂಡಿದೆ. ಇತ್ತ ಬಾಲಿವುಡ್ ಅಂಗಳಕ್ಕೂ ಎಂಟ್ರಿ ಕೊಡಲು ವಿಜಯ್ ತಯಾರಿ ನಡೆಸುತ್ತಿದ್ದು ಕರನ್ ಜೋಹರ್ ನಿರ್ಮಾಣದಲ್ಲಿ ತಯಾರಾಗುವ ಸಿನಿಮಾದಲ್ಲಿ ನಾಯಕನಾಗಿ ವಿಜಯ್ ಮಿಂಚಲಿದ್ದಾರೆ.

– ಸುಷ್ಮಿತಾ

Advertisement
Share this on...