ನಟ ವಿಜಯ್ ಕಾಶಿ ಹೆಂಡತಿ ಹಾಗೂ ಮಗಳು ಕೂಡ ಸಿಕ್ಕಾಪಟ್ಟೆ ಫೇಮಸ್ ಕಲಾವಿದರು ಎಂಬುದು ನಿಮ್ಮಗೆ ಗೊತ್ತಾ…?

in Uncategorized/ಮನರಂಜನೆ 328 views

ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟರಲ್ಲಿ ವಿಜಯ್ ಕಾಶಿ ಅವರು ಕೂಡ ಒಬ್ಬರು. ಕನ್ನಡದ ಹಲವಾರು ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿ ಅನೇಕ ಪ್ರಶಸ್ತಿಗಳನ್ನು ಸಹ ಪಡೆದುಕೊಂಡಿದ್ದಾರೆ. ಇನ್ನು ನಟ ವಿಜಯ್ ಕಾಶಿ ಅವರ ಹೆಂಡತಿ ಮತ್ತು ಮಗಳು ಕೂಡ ಕನ್ನಡ ಚಿತ್ರರಂಗದ ಫೇಮಸ್ ಕಲಾವಿದರು ಅಂತ ತುಂಬಾ ಜನಕ್ಕೆ ಗೊತ್ತಿಲ್ಲ..! ನಟ ವಿಜಯ್ ಕಾಶಿ ಅವರ ಹೆಂಡತಿ ಮತ್ತು ಮಗಳು ಯಾರು ಗೊತ್ತಾ..?ವಿಜಯ್ ಕಾಶಿ ಅವರ ಹುಟ್ಟೂರು ಸಾಗರ. ಈಗ ಇವರಿಗೆ 60 ವರ್ಷ.1982 ರಲ್ಲಿ ಬಿಡುಗಡೆಯಾದ ‘ಉಂಡು ಹೋದ ಕೊಂಡು ಹೋದ’ ಚಿತ್ರದ ಮೂಲಕ ವಿಜಯ್ ಕಾಶಿಯವರು ಚಿತ್ರರಂಗ ಪ್ರವೇಶಿಸಿದರು. ಹಲವಾರು ಸಿನಿಮಾಗಳಲ್ಲಿ ನಟಿಸಿರುವ ವಿಜಯ್ ಕಾಶಿ ಅವರಿಗೆ ಸೂರ್ಯವಂಶ, ಕೃಷ್ಣ-ರುಕ್ಮಿಣಿ, ಮಾಂಗಲ್ಯಂ ತಂತುನಾನೇನ ಸಿನಿಮಾಗಳು ಬಹುದೊಡ್ಡ ಹೆಸರು ತಂದುಕೊಟ್ಟವು. ಶ್ರೀ ಸತ್ಯನಾರಾಯಣ ಪೂಜಾಫಲ(1990), ಶಬರಿಮಲೆ ಸ್ವಾಮಿ ಅಯ್ಯಪ್ಪ(1990), ಭಾಗ್ಯದ ಲಕ್ಷ್ಮಿ ಬಾರಮ್ಮ(1986) ಸುಪ್ರಭಾತ(1988), ಶಾಂತಿನಿವಾಸ(1988), ಕೃಷ್ಣ-ರುಕ್ಮಿಣಿ(1988) ಸೇರಿದಂತೆ 65 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ವಿಜಯ್ ಕಾಶಿಯವರು ನಟಿಸಿದ್ದಾರೆ.

Advertisement

 

Advertisement

Advertisement

ಅವರ ಹೆಂಡತಿಯ ಹೆಸರು ವೈಜಯಂತಿ ಕಾಶಿ ಅಂತ. ಇವರು ಕೂಡ ಕನ್ನಡ ಚಿತ್ರರಂಗದಲ್ಲಿ ತುಂಬಾ ಪ್ರಸಿದ್ಧಿ ಪಡೆದ ಕಲಾವಿದರು. ವೈಜಯಂತಿ ಕಾಶಿ ಅವರು ಕೂಡ ಡ್ಯಾನ್ಸರ್. ಕೂಚುಪುಡಿ, ಭರತನಾಟ್ಯ ಹೀಗೆ ನಾನಾ ರೀತಿಯ ಕಲೆಗಳನ್ನು ಕರಗತ ಮಾಡಿಕೊಂಡಿದ್ದಾರೆ. ಹಲವಾರು ವಿದ್ಯಾರ್ಥಿಗಳಿಗೆ ಇವರು ಡ್ಯಾನ್ಸ್ ಅನ್ನು ಸಹ ಹೇಳಿಕೊಡುತ್ತಾರೆ. ರಂಗಭೂಮಿಯಲ್ಲಿ ಅಭಿನಯಿಸುವಾಗ ಅವರು ವಿಜಯ್ ಕಾಶಿ ಅವರನ್ನು ವಿವಾಹವಾದರು.ವಿಜಯ್ ಕಾಶಿ ಮತ್ತು ವೈಜಯಂತಿ ದಂಪತಿಗೆ ಪ್ರತ್ಯಕ್ಷ ಕಾಶಿ ಎಂಬ ಮಗಳಿದ್ದಾಳೆ. ಪ್ರತ್ಯಕ್ಷ ಕಾಶಿ ಕೂಡ ಕೂಚುಪುಡಿ ನರ್ತಕಿಯಾಗಿದ್ದಾರೆ. ವೈಜಯಂತಿ ಕಾಶಿ ನಾಟಕ ರತ್ನ ಗುಬ್ಬಿ ವೀರಣ್ಣನವರ ಮೊಮ್ಮಗಳು ಎಂಬುದು ತುಂಬಾ ಜನಕ್ಕೆ ಗೊತ್ತಿಲ್ಲ.

Advertisement

5 ನೇ ವಯಸ್ಸಿನಲ್ಲಿಯೇ ನಾಟ್ಯದ ಮೇಲೆ ಆಸಕ್ತಿ ವ್ಯಕ್ತಪಡಿಸಿದ ಪ್ರತ್ಯಕ್ಷಾರವರಿಗೆ ಅವರ ತಾಯಿ ವೈಜಯಂತಿಯವರೇ ಮಾರ್ಗದರ್ಶಕರಾಗಿದ್ದರು. ತಮ್ಮ 13 ನೇ ವಯಸ್ಸಿನಲ್ಲಿ ಪ್ರತೀಕ್ಷಾರವರು ಕೂಚುಪುಡಿ ನೃತ್ಯ ಪರೀಕ್ಷೆಯಲ್ಲಿ ರಾಜ್ಯದಲ್ಲೇ ಅಗ್ರಸ್ಥಾನ ಪಡೆದುಕೊಂಡಿದ್ದರು. ಇಡೀ ಕುಟುಂಬವೇ ಕಲಾವಿದರ ಕುಟುಂಬವಾಗಿದ್ದು ಕಲೆಗಾಗಿ ಅವರ ಜೀವನವನ್ನೇ ಮೀಸಲಿಟ್ಟಿದ್ದಾರೆ.

– ಸುಷ್ಮಿತಾ

Advertisement
Share this on...